ETV Bharat / sukhibhava

ಗರ್ಭಿಣಿಯರಲ್ಲಿರುವ ವಿಟಮಿನ್ ಡಿ ಪ್ರಮಾಣಕ್ಕೂ ಮಕ್ಕಳ ಬುದ್ಧಿಮತ್ತೆಗೂ ಸಂಬಂಧವಿದೆ - ಗರ್ಭಿಣಿಯರಲ್ಲಿರುವ ವಿಟಮಿನ್ ಡಿ ಬಗ್ಗೆ ಸಂಶೋಧನೆ

ಗರ್ಭಾವಸ್ಥೆಯಲ್ಲಿನ ಹೆಚ್ಚಿನ ವಿಟಮಿನ್ ಡಿ ಮಟ್ಟವು 4 ರಿಂದ 6 ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚಿನ ಐಕ್ಯೂಗೆ ಸಂಬಂಧಿಸಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಅಧ್ಯಯನಗಳು ಕಾರಣ ಸಾಬೀತುಪಡಿಸಲು ಸಾಧ್ಯವಿಲ್ಲವಾದರೂ, ಸಂಶೋಧನೆಯ ಅಂಶಗಳು ಮುಂದಿನ ಸಂಶೋಧನೆಗೆ ಸಮರ್ಥವಾಗಿದೆ ಎಂದು ತಿಳಿದು ಬಂದಿದೆ.

High vitamin D pregnancy linked to greater child IQ
ಗರ್ಭಿಣಿಯರಲ್ಲಿರುವ ವಿಟಮಿನ್ ಡಿ ಮತ್ತು ಮಕ್ಕಳ ಐಕ್ಯೂ
author img

By

Published : Nov 4, 2020, 8:01 PM IST

ಗರ್ಭಿಣಿಯರಲ್ಲಿರುವ ವಿಟಮಿನ್ ಡಿ ಪ್ರಮಾಣವೂ ಹುಟ್ಟುವ ಮಕ್ಕಳ ಬುದ್ಧಿಮತ್ತೆ (ಐಕ್ಯೂ) ಗೂ ಸಂಬಂಧವಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಗರ್ಭಾವಸ್ಥೆಯಲ್ಲಿನ ಹೆಚ್ಚಿನ ವಿಟಮಿನ್ ಡಿ ಮಟ್ಟವು ಮಕ್ಕಳ ಬಾಲ್ಯದ ಐಕ್ಯೂ ಸ್ಕೋರ್​ಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ತಾಯಿಯ ವಿಟಮಿನ್ ಡಿ ಪೂರೈಕೆಯು ಗರ್ಭದಲ್ಲಿರುವ ಮಗುವಿಗೂ ರವಾನೆಯಾಗುತ್ತದೆ ಮತ್ತು ಮೆದುಳಿನ ಬೆಳವಣಿಗೆ ಸೇರಿದಂತೆ ಇತರ ಪ್ರಕ್ರಿಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯು ತಿಳಿಸಿದೆ.

ಸಂಶೋಧಕರ ಪ್ರಕಾರ, ಸಾಮಾನ್ಯ ಜನರಲ್ಲಿ ಮತ್ತು ಗರ್ಭಿಣಿಯರಲ್ಲಿ ವಿಟಮಿನ್ ಡಿ ಕೊರತೆ ಇರುತ್ತದೆ. ಕಪ್ಪುವರ್ಣದ ಮಹಿಳೆಯರಿಗೆ ಇದರಿಂದ ಹೆಚ್ಚಿನ ಅಪಾಯವಿದೆ. ಮೆಲನಿನ್ ವರ್ಣದ್ರವ್ಯವು ಚರ್ಮವನ್ನು ಸೂರ್ಯ ಕಿರಣಗಳ ಹಾನಿಯಿಂದ ರಕ್ಷಿಸುತ್ತದೆ. ಆದರೆ, ಯುವಿ ಕಿರಣಗಳನ್ನು ತಡೆಯುವ ಮೂಲಕ, ಮೆಲನಿನ್ ಚರ್ಮದಲ್ಲಿ ವಿಟಮಿನ್ ಡಿ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕಿ, ಯುಎಸ್​ನ ಸಿಯಾಟಲ್ ಮಕ್ಕಳ ಸಂಶೋಧನಾ ಸಂಸ್ಥೆಯ ಮೆಲಿಸ್ಸಾ ಮೆಲೋಗ್ ಹೇಳಿದ್ದಾರೆ.

ನಮ್ಮ ಕೆಲಸವು ಈ ಸಮಸ್ಯೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುತ್ತದೆ, ಮಗುವಿಗೆ ಪ್ರಸವಪೂರ್ವ ವಿಟಮಿನ್ ಡಿ ಯ ದೀರ್ಘಕಾಲೀನ ಪರಿಣಾಮಗಳು ಮತ್ತು ನ್ಯೂರೋಕಾಗ್ನಿಟಿವ್ ಬೆಳವಣಿಗೆಯನ್ನು ತೋರಿಸುತ್ತದೆ ಎಂದು ಮೆಲೋಗ್ ತಿಳಿಸಿದ್ದಾರೆ. ಅಧ್ಯಯನದ ಪ್ರಕಾರ, ಯುಎಸ್​ನಲ್ಲಿ ಕಪ್ಪು ವರ್ಣದ ಶೇ. 80 ರಷ್ಟು ಗರ್ಭಿಣಿಯರಲ್ಲಿ ವಿಟಮಿನ್ ಡಿ ಕೊರತೆಯಿರಬಹುದು.

ಅಧ್ಯಯನದಲ್ಲಿ ಭಾಗವಹಿಸಿದ ಮಹಿಳೆಯರಲ್ಲಿ, ಸರಿಸುಮಾರು 46 ಶೇಕಡಾ ತಾಯಂದಿರು ತಮ್ಮ ಗರ್ಭಾವಸ್ಥೆಯಲ್ಲಿ ವಿಟಮಿನ್ ಡಿ ಕೊರತೆಯನ್ನು ಹೊಂದಿದ್ದರು ಮತ್ತು ಬಿಳಿ ಮಹಿಳೆಯರಿಗೆ ಹೋಲಿಸಿದರೆ ಕಪ್ಪು ಮಹಿಳೆಯರಲ್ಲಿ ವಿಟಮಿನ್ ಡಿ ಮಟ್ಟವು ಕಡಿಮೆಯಾಗಿದೆ. ಸಂಶೋಧಕರು 2006 ರಿಂದ ಗರ್ಭಿಣಿಯರು ಮತ್ತು ಅವರಿಂದ ಹುಟ್ಟಿದ ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಐಕ್ಯೂಗೆ ಸಂಬಂಧಿಸಿದ ಇತರ ಹಲವು ಅಂಶಗಳ ಬಗ್ಗೆ ಅಧ್ಯಯನ ಮಾಡಿದಾಗ, ಗರ್ಭಾವಸ್ಥೆಯಲ್ಲಿನ ಹೆಚ್ಚಿನ ವಿಟಮಿನ್ ಡಿ ಮಟ್ಟವು 4 ರಿಂದ 6 ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚಿನ ಐಕ್ಯೂಗೆ ಸಂಬಂಧಿಸಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಅಧ್ಯಯನಗಳು ಕಾರಣ ಸಾಬೀತುಪಡಿಸಲು ಸಾಧ್ಯವಿಲ್ಲವಾದರೂ, ಸಂಶೋಧನೆಯ ಅಂಶಗಳು ಮುಂದಿನ ಸಂಶೋಧನೆಗೆ ಸಮರ್ಥವಾಗಿದೆ ಎಂದು ತಿಳಿದು ಬಂದಿದೆ.

ಕೊಬ್ಬಿನಾಂಶವಿರುವ ಮೀನು, ಮೊಟ್ಟೆ ಮತ್ತು ಹಸುವಿನ ಹಾಲು ಮತ್ತು ಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಇದೆ. ಗರ್ಭಾವಸ್ಥೆಯಲ್ಲಿ ವಿಟಮಿನ್ ಡಿ ಯ ಅತ್ಯುತ್ತಮ ಮಟ್ಟವನ್ನು ನಿರ್ಧರಿಸಲು ಹೆಚ್ಚುವರಿ ಸಂಶೋಧನೆಗಳ ಅಗತ್ಯವಿದೆ, ಆದರೆ ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕಾಂಶದ ಬಗ್ಗೆ ತಿಳಿಸಲು ಈ ಅಧ್ಯಯನವು ಸಹಾಯ ಮಾಡುತ್ತದೆ ಎಂದು ಮೆಲೋಫ್ ಅಭಿಪ್ರಾಯಪಟ್ಟಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.