ETV Bharat / sukhibhava

ಅಂಟಾರ್ಟಿಕಾದಲ್ಲಿ ಶಾಖದ ಅಲೆ; ಸಮುದ್ರದ ಮಟ್ಟ ಏರಿಕೆ.. ವಿಶ್ವದ ಮೇಲೆ ಪರಿಣಾಮ ಬೀರುವ ಆತಂಕ

ಈ ಧ್ರುವ ಪ್ರದೇಶದಲ್ಲಿ ಸೂಕ್ಷ್ಮತೆ ಮತ್ತು ಸಂಕೀರ್ಣತೆಗಳನ್ನು ಸಾರ್ವಜನಿಕರು ನೋಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಸಂಶೋಧನ ಸಹಾಯಕರಾಗಿರುವ ರಾಜಶ್ರೀ ದತ್ತ್​​ ತಿಳಿಸಿದ್ದಾರೆ

author img

By ETV Bharat Karnataka Team

Published : Sep 9, 2023, 3:23 PM IST

Heat wave in Antarctica The effect is sea level rise

ನ್ಯೂಯಾರ್ಕ್​: ಭೂಮಿಯ ಅತ್ಯಂತ ಶೀತ ಮತ್ತು ಶುಷ್ಕ ಖಂಡವಾಗಿರುವ ಅಂಟಾರ್ಟಿಕ ಇದೀಗ ಶಾಖದ ಅಲೆ ಮತ್ತು 2022ರಲ್ಲಿ ತೀವ್ರ ಮಳೆ ಕಂಡಿದೆ ಎಂದು ಭಾರತೀಯ ಮೂಲದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ.

33ನೇ ವಾರ್ಷಿಕ ಹವಾಮಾನ ವರದಿಯಲ್ಲಿ ಜಾಗತಿಕ ಹವಾಮಾನ ಬದಲಾವಣೆ ವಿಶ್ಲೇಷಣೆ ಕುರಿತು ಅಮೆರಿಕನ್​ ಮೆಟ್ರೋಲಾಜಿಕಲ್​ ಸೊಸೈಟಿಯಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ 2022ರಲ್ಲಿ ವಿಶ್ವವೂ ಕಾಣುತ್ತಿರುವ ವಿಪರೀತ ಹವಾಮಾನ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ ಎಂದು ವರದಿ ಮಾಡಿದೆ. ಈ ತಾಪಮಾನ ಏರಿಕೆ ಮತ್ತು ಸಮುದ್ರ ಮಟ್ಟದ ಏರಿಕೆಯಿಂದ ಅಂಟಾರ್ಟಿಕಾ ಕೂಡ ಹೊರತಾಗಿಲ್ಲ ಎಂದಿದೆ.

ಈ ಧ್ರುವ ಪ್ರದೇಶದಲ್ಲಿ ಸೂಕ್ಷ್ಮತೆ ಮತ್ತು ಸಂಕೀರ್ಣತೆಗಳನ್ನು ಸಾರ್ವಜನಿಕರು ನೋಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಸಂಶೋಧನಾ ಸಹಾಯಕರಾಗಿರುವ ರಾಜಶ್ರೀ ತ್ರಿ ದತ್ತ್​​ ತಿಳಿಸಿದ್ದಾರೆ. ಅಂಟಾರ್ಟಿಕಾ ಜಗತ್ತಿನಿಂದ ಪ್ರತ್ಯೇಕವಾಗಿದೆ ಎಂದು ಕಾಣಿಸುತ್ತದೆ. ಆದರೆ, ಹಿಮದ ಖಂಡದಲ್ಲಿ ಗಮನಾರ್ಹ ಬದಲಾವಣೆ ಆಗಿರುವುದರಿಂದ ಇದರ ಪರಿಣಾಮ ಜಗತ್ತಿನ ಮೇಲೆ ಆಗುತ್ತಿದೆ.

ನಮ್ಮ ಗ್ರಹದ ಬಹುತೇಕ ಶುದ್ದ ನೀರು ಅಂಟಾರ್ಟಿಕದ ಹಿಮಗಳು ಹಿಡಿದಿಟ್ಟುಕೊಂಡಿರುತ್ತದೆ. ಇಲ್ಲಿ ಆಗುವ ಪರಿಣಾಮ ಜಗತ್ತಿನ ಎಲ್ಲ ಕರಾವಳಿಗಳ ಮೇಲೆ ಬೀರುತ್ತದೆ. ಇದು ಕೃಷಿ ಸೇರಿದಂತೆ ಎಲ್ಲದರ ಮೇಲೆ ಪರಿಣಾಮವನ್ನು ಹೊಂದಿದೆ.

ಇತ್ತೀದಿನ ವರ್ಷಗಳಲ್ಲಿ ಸಮುದ್ರ ಮಟ್ಟದ ಏರಿಕೆ ಮತ್ತು ಹಿಮ ಕರಗುವಿಕೆಯನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಇದು ತಾಪಮಾನದ ಪರಿಣಾ, ಪಶ್ಚಿಮ ಅಂಟಾರ್ಟಿಕಾದಂತಹ ಅಂಟಾರ್ಟಿಕಾ ಪ್ರದೇಶದ ಹಿಮಗಳು ಶೀಘ್ರದಲ್ಲಿ ಕರಗುತ್ತಿದ್ದು, ಸಮುದ್ರ ಮಟ್ಟ ಏರಿಕೆಗೆ ಕೊಡುಗೆ ನೀಡುತ್ತಿದೆ.

ದತ್ತಾ ಮತ್ತು ಅವರ ತಂಡ ನೀಡಿರುವ ವರದಿ ಅನುಸಾರ, ಕಳೆದ ಮಾರ್ಚ್​ನಲ್ಲಿ ಆರು ದಿನಗಳ ಕಾಲ ಪೂರ್ಣ ಅಂಟಾರ್ಟಿಕಾದ ದೊಡ್ಡ ಪ್ರದೇಶಗಳು ತಾಮಾನದ ಏರಿಕೆಯನ್ನು ಅನುಭವಿಸಿದ್ದು, ಇಲ್ಲಿ 18 ಫಾರೆನ್​ಹಿಟ್​ ದಾಖಲಾಗಿತ್ತು. ಕಳೆದ 2022ರಲ್ಲಿ ಮಾರ್ಚ್​ 16ರಂದು ಪೂರ್ವ ಅಂಟಾರ್ಟಿಕದಲ್ಲಿನ ಹವಾಮಾನ ಕೇಂದ್ರ ದಾಖಲಿಸಿರುವ 14.7ಗೆ ತಲುಪಿದೆ ಈ ಸ್ಥಳದಲ್ಲಿ ಸರಾಸರಿ ಮಾರ್ಚ್​ ತಾಪಮಾನಕ್ಕಿಂತ 79 ಫ್ಯಾರನ್​ಹಿಟ್​ಗಿಂತ್​ ಹೆಚ್ಚು.

ಸಾಮಾನ್ಯವಾಗಿ ಅಂಟಾರ್ಟಿಕದಲ್ಲಿ ಮಾರ್ಚ್​ನಲ್ಲಿ ಬೇಸಿಗೆಯಿಂದ ಚಳಿಗಾಲಕ್ಕೆ ಪರಿವರ್ತನೆ ಆಗುವಾಗ ತಾಪಮಾನವೂ ದಿಢೀರ್​ ಕುಸಿಯುತ್ತದೆ. ಪರಿಣಾಮ ಪೂರ್ವ ಅಂಟಾರ್ಟಿಕಾದಲ್ಲಿ ಶಾಖದ ಅಲೆ, ಕಾಂಗೋರೆ ಐಸ್​ ಶೆಲ್ಫ್​​, ಫ್ಲೋಟಿಂಗ್​ ಟಂಗ್​​ ಆಫ್​ ಐಸ್​ನ ಗಾತ್ರವೂ ನಾಶವಾಗುತ್ತದೆ. ವರ್ಷಗಳ ಬಳಿಕ ಐಶ್​ ಶೆಲ್ಫ್​​ಗಳು ದುರ್ಬಲವಾಗುತ್ತದೆ.

ಮಂಜುಗಡ್ಡೆಯ ಪದರಗಳು ಕುಸಿತದಿಂದ ಹಿಮ ನದಿ ಕರಗುವಿಕೆಗೆ ಆಗಿ ಪರಿಣಾಮವಾಗಿ ಸಮುದ್ರದ ಮಟ್ಟ ಹೆಚ್ಚುತ್ತದೆ. ವಿಶ್ವದ ಎಲ್ಲೆಡೆ ಜನರು 2022ರಲ್ಲಿ ತೀವ್ರತರದ ಶಾಖದ ಅಲೆಯನ್ನು ಅನುಭವಿಸಿದ್ದಾರೆ. ಇದೀಗ ಅಂಟಾರ್ಟಿಕದಲ್ಲಿ ಹವಾಮಾನ ಬದಲಾವಣೆ ಕುರಿತು ಜನರೊಂದಿಗೆ ಸಂವಹನ ನಡೆಸುವ ಅವಕಾಶ ಬಂದಿದೆ ಎಂದು ದತ್ತಾ ತಿಳಿಸಿದ್ದಾರೆ

ಅವರಿಗೆ ಶಾಖದ ಅಲೆ ಅರ್ಥವಾಗಿದೆ. ತಮ್ಮ ದೈನಂದಿನ ಜೀವನದಲ್ಲಿ ಇದನ್ನು ಎದುರಿಸುತ್ತಿದ್ದಾರೆ. ಇದು ಅಂಟಾರ್ಟಿಕ ಮೇಲೂ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತಿದೆ ಎಂದು ದತ್ತಾ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೂ 1 ಕೋಟಿ ಜನರ ಸಾವಿಗೆ ಕಾರಣವಾಗಬಹುದು; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.