ETV Bharat / sukhibhava

ಬಿಸಿಲಿನ ಹೊಡೆತ ಮಾರಣಾಂತಿಕವಾಗಬಹುದು.. ಸೆಕೆ ನಿಯಂತ್ರಿಸಲು ಹೀಗೆ ಮಾಡಿ! - ಅತಿಯಾದ ತಾಪಮಾನದಿಂದಾಗುವ ಪರಿಣಾಮಗಳು

ಬೇಸಿಗೆ ಕಾಲದಲ್ಲಿ ಸೂರ್ಯನ ಕಿರಣಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಶಾಖದ ಹೊಡೆತವು ಸಾಮಾನ್ಯವಾಗಿ ಸಂಭವಿಸುತ್ತದೆ ಎಂದು ಇಂದೋರ್ ಮೂಲದ ವೈದ್ಯ ಡಾ. ಸುಭಾಷ್ ಬಾತ್ರಾ ಹೇಳಿದ್ದಾರೆ. ನಿರ್ಜಲೀಕರಣದಿಂದ ಬಳಲುತ್ತಿರುವ ಜನರಲ್ಲಿ ಈ ಸಮಸ್ಯೆಯು ಹೆಚ್ಚು ಎದ್ದು ಕಾಣುತ್ತದೆ.

Heat Stroke can be fatal too; follow these tips to prevent it
ಬಿಸಿಲಿನ ಹೊಡೆತ ಮಾರಣಾಂತಿಕವಾಗಬಹುದು... ಸೆಕೆ ನಿಯಂತ್ರಿಸಲು ಹೀಗೆ ಮಾಡಿ!
author img

By

Published : May 3, 2022, 3:30 PM IST

ಬೇಸಿಗೆಯಲ್ಲಿ ಅತಿಯಾದ ಸೂರ್ಯನ ಕಿರಣಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು. ಅತಿಯಾದ ಶಾಖದಿಂದ ಬಳಲಿಕೆ ಉಂಟಾಗಿ ತೀರಾ ಸುಸ್ತು ಮಾಡಬಹುದು. ಹೀಗಾಗಿ ಮನೆಯಿಂದ ಹೊರಬರುವ ಮೊದಲು ನೀವೆಲ್ಲ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಏಕೆಂದರೆ ಕೆಲವೊಮ್ಮೆ ಭಾರಿ ಬಿಸಿಲು ಜೀವಕ್ಕೂ ಕುತ್ತು ತರಬಹುದು.

ಬಿಸಿಲಿನ ಪ್ರಖರತೆಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?: ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (CDC) ಹೇಳುವ ಪ್ರಕಾರ, ಹೀಟ್ ಸ್ಟ್ರೋಕ್ ಅತ್ಯಂತ ಗಂಭೀರವಾದ ಶಾಖ - ಸಂಬಂಧಿತ ಕಾಯಿಲೆಯಾಗಿದೆ. ದೇಹವು ತನ್ನ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಹೀಟ್​ ಸ್ಟ್ರೋಕ್​ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ. ದೇಹದ ಉಷ್ಣತೆಯು ವೇಗವಾಗಿ ಏರುತ್ತದೆ, ಬೆವರಿನ ಕಾರ್ಯವಿಧಾನವು ವಿಫಲಗೊಳ್ಳುತ್ತದೆ ಮತ್ತು ದೇಹವು ತಣ್ಣಗಾಗಲು ಸಾಧ್ಯವಾಗುವುದೇ ಇಲ್ಲ. ದೇಹದ ಉಷ್ಣತೆಯು 10 ರಿಂದ 15 ನಿಮಿಷಗಳಲ್ಲಿ 106 ° F ಅಥವಾ ಹೆಚ್ಚಿನ ಮಟ್ಟಕ್ಕೂ ಏರಬಹುದು. ತುರ್ತು ಚಿಕಿತ್ಸೆಯನ್ನು ಒದಗಿಸದಿದ್ದರೆ ಶಾಖದ ಹೊಡೆತವು ಸಾವು ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಲೂಬಹುದು.

ಈ ಬಗ್ಗೆ ತಜ್ಞರು ಹೇಳುವುದೇನು?: ಡಾ. ಹೈದರಾಬಾದ್‌ನ ವಿಐಎನ್‌ಎನ್ ಆಸ್ಪತ್ರೆಯ ಕನ್ಸಲ್ಟೆಂಟ್ ವೈದ್ಯ ರಾಜೇಶ್ ವುಕ್ಕಲಾ ಹೇಳುವುದೇನೆಂದರೆ, ಒಬ್ಬರು ದೀರ್ಘಕಾಲದವರೆಗೆ ಹೆಚ್ಚಿನ ಶಾಖದೊಂದಿಗೆ ಇದ್ದರೆ, ಅವನು ಅಥವಾ ಅವಳು 'ಉಷ್ಣ ಬಳಲಿಕೆ'ಯನ್ನು ಎದುರಿಸಬಹುದು. ದೇಹವು ತನ್ನ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದಿದ್ದಾಗ ದೇಹದ ತಾಪ ಹೆಚ್ಚಾಗುತ್ತಾ ಸಾಗುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಮತ್ತು ಸುತ್ತಮುತ್ತಲಿನ ತಾಪಮಾನವು 40ºC ಗಿಂತ ಹೆಚ್ಚಿರುವಾಗ ಇಂತಹ ಸ್ಥಿತಿ ಎದುರಾಗುತ್ತದೆ ಎಂದು ಹೇಳ್ತಾರೆ ರಾಜೇಶ್​.

ಅತಿಯಾದ ತಾಪಮಾನದಿಂದಾಗುವ ಪರಿಣಾಮಗಳು: ಬೇಸಿಗೆ ಕಾಲದಲ್ಲಿ ನೇರ ಸೂರ್ಯನ ಬೆಳಕಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಶಾಖದ ಹೊಡೆತವು ಸಾಮಾನ್ಯವಾಗಿ ದೇಹದ ಮೇಲಾಗುತ್ತದೆ ಎಂದು ಇಂದೋರ್ ಮೂಲದ ವೈದ್ಯ ಡಾ. ಸುಭಾಷ್ ಬಾತ್ರಾ ಹೇಳಿದ್ದಾರೆ. ನಿರ್ಜಲೀಕರಣದಿಂದ ಬಳಲುತ್ತಿರುವ ಜನರಲ್ಲಿ ಈ ಸಮಸ್ಯೆಯು ಹೆಚ್ಚು ಎದ್ದು ಕಾಣುತ್ತದೆ. ಅತಿಯಾದ ಸೆಕೆಯಿಂದ ಬಳಲುವ ಸಂದರ್ಭದಲ್ಲಿ, ದೇಹದ ಉಷ್ಣತೆಯು 104 ಡಿಗ್ರಿ ಫ್ಯಾರನ್‌ಹೀಟ್ ಅಥವಾ ಅದಕ್ಕಿಂತ ಹೆಚ್ಚಿಗೆ ಏರಬಹುದು. ಆಗ ಇದು ಜೀವಕ್ಕೆ ಮಾರಕವಾಗಬಹುದು ಎಂದು ಬಾತ್ರಾ ವಿವರಿಸಿದ್ದಾರೆ.

ದೇಹದಲ್ಲಿ ತಾಪಮಾನ ಹೆಚ್ಚಾದಂತೆ ಗೊಂದಲ, ತಲೆತಿರುಗುವಿಕೆ, ಪ್ರಜ್ಞಾಹೀನತೆ ಅಥವಾ ಕೋಮಾ, ತ್ವರಿತ ಹೃದಯ ಬಡಿತ, ತ್ವರಿತ ಉಸಿರಾಟ, ಒಣ ಚರ್ಮ, ಚರ್ಮದ ಕೆಂಪು, ತಲೆನೋವು, ಇತ್ಯಾದಿಗಳು ಕಂಡು ಬರಬಹುದು ಅಂತಾರೆ ವೈದ್ಯ ಬಾತ್ರಾ

ಹೀಟ್ ಸ್ಟ್ರೋಕ್ ಸಂದರ್ಭದಲ್ಲಿ ನಾವೇನು ಮಾಡಬೇಕು?: ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಮತ್ತು ಹೀಟ್ ಸ್ಟ್ರೋಕ್‌ನ ಲಕ್ಷಣಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಡಾ ಸುಭಾಷ್ ಹೇಳಿದ್ದಾರೆ. ನೀವು ಅಥವಾ ನಿಮ್ಮ ಪಕ್ಕದಲ್ಲಿರುವ ವ್ಯಕ್ತಿಯು ಹೀಟ್ ಸ್ಟ್ರೋಕ್‌ನ ಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ.

ತೀರಾ ಬಿಸಿಲಿನಿಂದ ಬಳಲುತ್ತಿರುವವರನ್ನು ವೈದ್ಯಕೀಯ ಸಹಾಯ ಪಡೆಯುವವರೆಗೆ ಮಬ್ಬಾದ, ತಂಪಾದ ಮತ್ತು ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಇರಿಸಬೇಕು. ಅವನ / ಅವಳ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಪ್ರಯತ್ನ ಮಾಡಬೇಕು. ಇದಕ್ಕಾಗಿ, ವ್ಯಕ್ತಿಯನ್ನು ಟಬ್‌ನಲ್ಲಿ ಮಲಗಿಸಬಹುದು ಅಥವಾ ಶವರ್ ಅಡಿಯಲ್ಲಿ ನಿಲ್ಲುವಂತೆ ಮಾಡಬಹುದು.

ಸೆಕೆಯಿಂದ ಒದ್ದಾಡುವ ವ್ಯಕ್ತಿಗಳ ಹಣೆ, ಕುತ್ತಿಗೆ, ಆರ್ಮ್ಪಿಟ್​​​​ಗಳು ಮತ್ತು ಪಾದಗಳನ್ನು ತಂಪಾಗಿರಿಸಲು ಒದ್ದೆ ಟವೆಲ್​ಗಳು, ಸ್ಪಾಂಜ್, ಐಸ್ ಪ್ಯಾಕ್​ಗಳು ​​ಅಥವಾ ತಣ್ಣೀರಿನ ಸ್ಪ್ರೇ ಬಳಸಿ ಆರೈಕೆ ಮಾಡಬೇಕು. ವ್ಯಕ್ತಿಯು ಪ್ರಜ್ಞೆ ಹೊಂದಿದ್ದರೆ, ನಿರ್ಜಲೀಕರಣವನ್ನು ನಿವಾರಿಸಲು ಅವನಿಗೆ / ಅವಳಿಗೆ ಸಾಕಷ್ಟು ದ್ರವ ಪದರಾರ್ಥಗಳನ್ನು ನೀಡಿ ಉಪಚರಿಸಬೇಕು.

ಹೀಟ್​ ಸ್ಟ್ರೋಕ್​​ ತಡೆಯುವುದು ಹೇಗೆ?: ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗಿನ ಅವಧಿಯಲ್ಲಿ ಬಿಸಿಲಿನಲ್ಲಿ ಹೆಜ್ಜೆ ಹಾಕುವುದನ್ನು ತಪ್ಪಿಸಲು ಪ್ರಯತ್ನಿಸಿ, ವಿಶೇಷವಾಗಿ ಬೇಸಿಗೆಯಲ್ಲಿ ತಾಪಮಾನವು ಗರಿಷ್ಠ ಮಟ್ಟದಲ್ಲಿದ್ದಾಗ ಹೊರಗೆ ಬರಬೇಡಿ. ಏನೇ ಕೆಲಸವಿದ್ದರೂ ಬೆಳಗಿನ 11 ಗಂಟೆ ಒಳಗೆ ಹಾಗೂ ಮಧ್ಯಾಹ್ನ 4 ರ ನಂತರ ಮಾಡಿಕೊಳ್ಳಿ.

ನೀವು ಹೊರಗೆ ಹೆಜ್ಜೆ ಹಾಕಿದರೆ, ನೀವು ಸಡಿಲವಾದ, ತಿಳಿ - ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿದರೆ ಉತ್ತಮ. ಇದರಿಂದ ಗಾಳಿಯು ನಿಮ್ಮ ದೇಹದ ಸುತ್ತಲೂ ಹರಡುತ್ತದೆ. ಸೂರ್ಯನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕ್ಯಾಪ್ ಅಥವಾ ಟೋಪಿ ಧರಿಸಿ ಅಥವಾ ನೀವು ಛತ್ರಿಯನ್ನು ಸಹ ಒಯ್ಯಬಹುದು. ಯಾವಾಗಲೂ ನೀರಿನ ಬಾಟಲಿಯನ್ನು ಕೊಂಡೊಯ್ಯಿರಿ ಮತ್ತು ನೀರನ್ನು ಒಂದೇ ಬಾರಿಗೆ ಸೇವಿಸುವ ಬದಲು ಆಗಾಗ್ಗೆ ಕುಡಿಯುತ್ತಾ ಇರಿ.

ನಿಮ್ಮನ್ನು ಸಾರ್ವಕಾಲಿಕವಾಗಿ ಹೈಡ್ರೀಕರಿಸಿಟ್ಟುಕೊಳ್ಳಲು ಪ್ರಯತ್ನಿಸಿ ಮತ್ತು ಕಲ್ಲಂಗಡಿ ಅಥವಾ ಸೀಬೆಹಣ್ಣುಗಳಂತಹ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಹಣ್ಣುಗಳನ್ನು ಸೇವಿಸಿ. ನೀವು ಹೊರಗೆ ಕಾಲಿಟ್ಟಾಗಲೆಲ್ಲಾ ನೆರಳಿನಲ್ಲಿ ಉಳಿಯಲು ಪ್ರಯತ್ನಿಸಿ ಮತ್ತು ಸೂರ್ಯನ ಪ್ರಖರ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ದೂರವಿರಿ. ನಿರ್ಜಲೀಕರಣವನ್ನು ತಪ್ಪಿಸಲು ಆಲ್ಕೋಹಾಲ್, ತಂಪು ಪಾನೀಯಗಳು ಮತ್ತು ಕೆಫೀನ್ ಹೊಂದಿರುವ ಪಾನೀಯಗಳ ಸೇವನೆಯನ್ನು ಆದಷ್ಟು ಮಟ್ಟಿಗೆ ತಪ್ಪಿಸಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.