ETV Bharat / sukhibhava

ಯುವಕರಲ್ಲಿ ಹೆಚ್ಚುತ್ತಿವೆ ಹೃದಯಾಘಾತ ಪ್ರಕರಣಗಳು.. ಕಾರಣ ಇಷ್ಟೇ! - ಹಾರ್ಟ್​ ಅಟ್ಯಾಕ್​​ಗೆ ಪ್ರಮುಖ ಕಾರಣಗಳು

ಒಂದು ಅಂಕಿ ಅಂಶದ ಪ್ರಕಾರ ಹೈದರಾಬಾದ್​​​ನಲ್ಲಿರುವ ಮಾದಾಪುರದ ಕಾರ್ಪೋರೇಟ್​​ ಆಸ್ಪತ್ರೆಗೆ ಈ ವರ್ಷ 6,731 ಜನರು ಹೃದಯ ಸಂಬಂಧಿ ಕಾಯಿಲೆಗಳಿಗಾಗಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರಲ್ಲಿ 22 ಪ್ರತಿಶತ 30 ಮತ್ತು 45 ರ ನಡುವಿನ ವಯಸ್ಸಿನವರು ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಯುವಕರಲ್ಲಿ ಹೆಚ್ಚುತ್ತಿವೆ ಹೃದಯಾಘಾತ.. ಕಾರಣ ಇಷ್ಟೇ!

author img

By

Published : Feb 22, 2022, 3:53 PM IST

ಹೈದರಾಬಾದ್​: ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಈಗೀಗ ಅನಾರೋಗ್ಯಕರ ಪರಿಸರವೂ ವೃದ್ದಿ ಆಗುತ್ತಿದೆ. ಜೀವನಶೈಲಿಯಲ್ಲಾದ ಬದಲಾವಣೆಯಿಂದಾಗಿ ಪ್ರಸ್ತುತ ಪೀಳಿಗೆ ಹೃದಯರೋಗದಂತಹ ಅನೇಕ ಅಪಾಯಕಾರಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಹಿಂದೆ 65ಕ್ಕಿಂತ ಹೆಚ್ಚಿನ ವಯೋಮಾನದ ಮೇಲ್ಪಟ್ಟ ಜನರಲ್ಲಿ ಹೃದಯ ರೋಗದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು.

ಆದರೆ, ಈಗೀಗ ಹೃದಯರೋಗ 25 ರಿಂದ 30 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದಕ್ಕೆಲ್ಲ ಕಾರಣ ಆಹಾರ ಪದ್ಧತಿಯಲ್ಲಾದ ಬದಲಾವಣೆ, ಪಾಶ್ಚಿಮಾತ್ಯ ಶೈಲಿಯ ಅನುಕರಣೆ, ಹೊತ್ತಲ್ಲದ ಹೊತ್ತಲ್ಲಿ ಊಟ ಮಾಡುವುದು. ಆಹಾರಕ್ಕೆ ಬಳಕೆ ಮಾಡುವ ಪದಾರ್ಥಗಳು ಹೀಗೆ ನಾನಾ ಕಾರಣಗಳಿಂದ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ ಎನ್ನುತ್ತಿದ್ದಾರೆ ವೈದ್ಯರು.

ಹಾರ್ಟ್​ ಅಟ್ಯಾಕ್​​ಗೆ ಪ್ರಮುಖ ಕಾರಣಗಳು: ಇತ್ತೀಚೆಗಷ್ಟೇ ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ (46) ಹೃದಯಾಘಾತದಿಂದ ನಿಧನರಾದರು. ದಿವಂಗತ ನಟ ಸಾಕಷ್ಟು ಆರೋಗ್ಯ ಪ್ರಜ್ಞೆ ಸಹ ಹೊಂದಿದ್ದರು. ನಿತ್ಯವೂ ವ್ಯಾಯಾಮ ಮಾಡಲು ಸಮಯ ತೆಗೆದುಕೊಳ್ಳುತ್ತಿದ್ದರು. ಇಂತಹ ಫಿಟ್ನೆಸ್ ಇದ್ದ ಜನಪ್ರಿಯ ನಟ ಹೃದಯ ಕಾಯಿಲೆಗೆ ತುತ್ತಾಗಿ ಇಹ ಲೋಕ ತ್ಯಜಿಸಿದರು. ಅವರ ಅಭಿಮಾನಿ ಬಳಗಕ್ಕೆ ಇದು ಭಾರಿ ಆಘಾತ ತಂದಿತ್ತು.

ಇನ್ನು ಆಂಧ್ರಪ್ರದೇಶದ ಐಟಿ ಸಚಿವ ಮೇಕಪತಿ ಗೌತಮ್ ರೆಡ್ಡಿ(50) ಹೃದಯಾಘಾತದಿಂದ ನಿಧನರಾಗಿದ್ದರು. ಅವರೂ ನಿತ್ಯ ಜಿಮ್‌ಗೆ ಹೋಗುತ್ತಿದ್ದರು ಎಂಬುದನ್ನು ಗಮನಿಸಬಹುದಾದ ಅಂಶವಾಗಿದೆ. ಇನ್ನು ಇಂದಷ್ಟೇ ರೇಡಿಯೋ ಜಾಕಿ ರಚನಾ ಹೃದಯಾಘಾತದಿಂದ ಜೀವ ಕಳೆದುಕೊಂಡಿದ್ದಾರೆ. ಅವರಿಗೆ 39 ವರ್ಷವಷ್ಟೇ.

ಒಂದು ಅಂಕಿ ಅಂಶದ ಪ್ರಕಾರ ಮಾದಾಪುರದ ಕಾರ್ಪೋರೇಟ್​​ ಆಸ್ಪತ್ರೆಗೆ ಈ ವರ್ಷ 6,731 ಜನರು ಹೃದಯ ಸಂಬಂಧಿ ಕಾಯಿಲೆಗಳಿಗಾಗಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರಲ್ಲಿ 22 ಪ್ರತಿಶತ 30 ಮತ್ತು 45 ರ ನಡುವಿನ ವಯಸ್ಸಿನವರು ಎಂಬುದು ಆಘಾತಕಾರಿ ವಿಷಯವಾಗಿದೆ.

ಇನ್ನು ಶೇ 48 ರಷ್ಟು ರೋಗಿಗಳು 46 ಮತ್ತು 60ರ ವಯಸ್ಸಿನವರಾಗಿದ್ದಾರೆ. ಉಳಿದ ಶೇ 30 ರಷ್ಟು ಜನ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಪ್ರತಿ ವರ್ಷ, ಹೈದರಾಬಾದ್‌ನಲ್ಲಿ 10,000 ಬೈಪಾಸ್ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತದೆ. ಹೆಚ್ಚಿನ ರೋಗಿಗಳು 40 ರಿಂದ 50 ವರ್ಷ ವಯಸ್ಸಿನವರು ಎಂಬುದು ಗಮನಾರ್ಹ ವಿಷಯವಾಗಿದೆ

ಹೃದಯಾಘಾತದ ಗಮನಿಸಬೇಕಾದ ಅಂಶಗಳೇನು ಎಂದರೆ?: ಆಧುನಿಕ ಜೀವನಶೈಲಿಯು ಅನೇಕರಿಗೆ ಒತ್ತಡ, ಚಡಪಡಿಕೆಯನ್ನುಂಟು ಮಾಡುತ್ತದೆ. ಇನ್ನು ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಒತ್ತಡಕ್ಕೆ ಒಳಗಾಗುವ ವ್ಯಕ್ತಿ, ಬಳಲಿಕೆಯಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ. ದಿನನಿತ್ಯದ ಉದ್ವಿಗ್ನತೆಗಳನ್ನು ನಿಭಾಯಿಸಲು ಜನ ಮದ್ಯ ಮತ್ತು ಸಿಗರೇಟ್‌ಗಳ ಮೊರೆ ಹೋಗ್ತಾರೆ. ಅಷ್ಟೇ ಏಕೆ ವಿರಾಮಕ್ಕಾಗಿ ಇಂತಹ ಅನಾರೋಗ್ಯಕರ ಹವ್ಯಾಸಗಳ ದಾಸರಾಗುತ್ತಾರೆ.

ಮತ್ತೊಂದೆಡೆ ಈಗಿ ಕೆಲಸದ ಒತ್ತಡ, ರಾತ್ರಿ ಪಾಳೆಯ ಕೆಲಸಗಳಿಂದಾಗಿ ಮನುಷ್ಯನ ನಿದ್ರಾ ಚಕ್ರವೂ ಬದಲಾಗಿದೆ. ಇದು ನಾನಾ ತೊಂದರೆಗಳಿಗೆ ಕಾರಣವಾಗಿದೆ. ಅದಕ್ಕೆ ಇಂಬು ನೀಡುವಂತೆ ಹೆಚ್ಚೆಚ್ಚು ಮೊಬೈಲ್​ ಬಳಕೆಯೂ ನಿದ್ರಾ ಹೀನತೆಗೆ ಕಾರಣವಾಗಿದೆ. ಇದು ನಿದ್ರೆಯ ಕೊರತೆಯನ್ನುಂಟು ಮಾಡಿ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಮತ್ತೊಂದು ಪ್ರಮುಖ ಅಂಶ ಎಂದರೆ, ಧೂಮಪಾನವು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಯುವಕರು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಪ್ರವೃತ್ತಿಯೂ ಹೆಚ್ಚುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ಒತ್ತಡ, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಧೂಮಪಾನ ಮತ್ತು ಮದ್ಯಪಾನವು ಹೃದಯರೋಗಕ್ಕೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ.

ಅನಾರೋಗ್ಯಕರ ಹವ್ಯಾಸಗಳಿಂದಾಗಿ ಜನರು, ರಾತ್ರಿಯಲ್ಲಿ ಉಸಿರಾಟದ ತೊಂದರೆಗೊಳಗಾಗುತ್ತಿದ್ದಾರೆ. ಪಲ್ಮನರಿ ಎಂಬಾಲಿಸಮ್ ಎಂಬ ಅಂಶ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಒಂದು ಅಂಶವಾಗಿ ಕಾಡಬಹುದು. ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಿಂದಾಗಿ ಹೃದಯಕ್ಕೆ ರಕ್ತ ಪರಿಚಲನೆ ಆಗದೇ ಹೃದಯ ಸ್ತಂಭನ ಸಂಭವಿಸುವ ಸಾಧ್ಯತೆ ಇದೆ.

ಉಸಿರುಗಟ್ಟುವಿಕೆಯಿಂದಾಗಿ ಗಂಟಲಿನ ಮೃದು ಅಂಗಾಂಶಗಳು ವಿಶ್ರಾಂತಿ ಪಡೆಯಲು ಆರಂಭಿಸುವುದರಿಂದ ವಾಯುಮಾರ್ಗಗಳು ಕಿರಿದಾಗುತ್ತಾ ಸಾಗುತ್ತವೆ ಇಲ್ಲವೇ ಮುಚ್ಚಲ್ಪಡುತ್ತವೆ. ಇದು ಉಸಿರಾಟವನ್ನೇ ನಿಲ್ಲಿಸಬಹುದು. ಇನ್ನು ಸ್ಥೂಲಕಾಯತೆಯಿಂದ ಬಳಲುತ್ತಿರುವವರು, ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಿಂದ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

ಇದು ನಿದ್ರೆಯ ಸಮಯದಲ್ಲಿ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ. ಗೊರಕೆ, ರಾತ್ರಿಯಲ್ಲಿ ಹಠಾತ್ ಉಸಿರಾಟದ ತೊಂದರೆ ಮತ್ತು ಅಧಿಕ ರಕ್ತದೊತ್ತಡ ಹೃದಯ ಕಾಯಿಲೆ ಬಗ್ಗೆ ಎಚ್ಚರಿಕೆಯಿಂದರಬೇಕು. ಹಾಗೂ ಈ ಲಕ್ಷಣಗಳನ್ನು ಹೊಂದಿದ್ದರೆ, ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು ಉತ್ತಮ.

ಈ ಬಗ್ಗೆ ಹೆಚ್ಚಿನ ಗಮನ ಕೊಡಿ: ಮುಚ್ಚಿಹೋಗಿರುವ ಅಪಧಮನಿಗಳು ಹೃದಯಾಘಾತವನ್ನು ಪ್ರಚೋದಿಸುತ್ತವೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಹೊಂದಿರುವ ಹೆಚ್ಚಿನ ಜನರು ಆರಂಭದಲ್ಲಿ ಯಾವುದೇ ರೋಗಲಕ್ಷಣಗಳು ಕಾಣದೇ ಇರಬಹುದು. ಹೀಗಾಗಿ ವೈದ್ಯರ ಬಳಿ ಆಗಾಗ ಈ ಬಗ್ಗೆ ತೋರಿಸುವುದು ಉತ್ತಮ ಎಂದು ನಿಮ್ಸ್‌ನ ಕಾರ್ಡಿಯೋಥೊರಾಸಿಕ್ ಶಸ್ತ್ರಚಿಕಿತ್ಸಕ ಡಾ. ಎಂ ಅಮರೇಶ್ ರಾವ್ ಸಲಹೆ ನೀಡಿದ್ದಾರೆ.

ತೀವ್ರವಾದ ಉಸಿರಾಟ, ಎದೆ ನೋವು, ಅತಿಯಾದ ಬೆವರುವಿಕೆ ಮತ್ತು ಮೂರ್ಛೆ ಮುಂತಾದ ರೋಗಲಕ್ಷಣಗಳಿದ್ದರೆ ಅದು ಹೃದಯಾಘಾತಕ್ಕೆ ಕಾರಣವಾಗಬಹುದು. ಈ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಸುರಕ್ಷಿತ. ವೈದ್ಯರ ಸಲಹೆ ಪಡೆದು ಜೀವನಶೈಲಿಯ ಬದಲಾವಣೆಗಳನ್ನು ಮಾಡುವುದರಿಂದ ಹೃದಯಾಘಾತವನ್ನು ತಡೆಗಟ್ಟ ಬಹುದು ಎನ್ನುತ್ತಾರೆ ವೈದ್ಯ ಅಮರೇಶ್​ ರಾವ್​

CPRಯೊಂದಿಗೆ ಪ್ರಥಮ ಚಿಕಿತ್ಸೆ: ಯುವ ಜನತೆಯಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿರುವುದು ಆತಂಕವನ್ನುಂಟು ಮಾಡಿದೆ. ಶೇ 40 ರಷ್ಟು ಪ್ರಕರಣಗಳಲ್ಲಿ ತಕ್ಷಣಕ್ಕೆ ಯಾವುದೇ ಅಂಶಗಳು ಕಂಡು ಬರುವುದಿಲ್ಲ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಸಿಆರ್​​​ಪಿ ಕಿಟ್​​​ ಮೂಲಕ ಪರೀಕ್ಷೆ ಮಾಡಿಕೊಳ್ಳುವುದರಿಂದ ತಕ್ಷಣ ಜೀವ ಉಳಿಸಿಕೊಳ್ಳಬಹುದು.

ಸಿಪಿಆರ್​ ಟೆಸ್ಟ್​​​​​​ ಜೀವ ಉಳಿಸುವ ತಕ್ಷಣದ ತಂತ್ರವಾಗಿದೆ. ತಕ್ಷಣವೇ ವೈದ್ಯಕೀಯ ಸಹಾಯ ಪಡೆಯುವ ಮೂಲಕ ಹೃದಯದ ಲಯವನ್ನು ಪುನಃಸ್ಥಾಪಿಸುವವರೆಗೆ ಮೆದುಳು ಮತ್ತು ಇತರ ಅಂಗಗಳಿಗೆ ರಕ್ತವನ್ನು ಹರಿಯುವಂತೆ ಮಾಡಲು ಈ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬಹುದು. ತುರ್ತು ಸಿಪಿಆರ್‌ನಲ್ಲಿ ನಾಗರಿಕರು ಕಡ್ಡಾಯವಾಗಿ ತರಬೇತಿ ಪಡೆಯುವುದು ಅವಶ್ಯಕ ಎಂದು ಅಪೊಲೊ ಆಸ್ಪತ್ರೆಗಳ ಹೃದ್ರೋಗ ತಜ್ಞೆ ಡಾ.ವರ್ಷಾ ಕಿರಣ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ: ವ್ಯಾಯಾಮದಿಂದ ವಯಸ್ಸಾದವರಲ್ಲಿ ಜ್ಞಾಪಕ ಶಕ್ತಿ ಹೆಚ್ಚಳ: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.