ಹೈದರಾಬಾದ್: ಕರ್ವಾ ಚೌತ್‌ನ ಉಪವಾಸ ಅತ್ಯಂತ ಕಷ್ಟಕರವಾದ ಉಪವಾಸ ಎಂದು ಪರಿಗಣಿಸಲಾಗಿದೆ. ಏಕೆಂದರೆ ಅನೇಕ ಮಹಿಳೆಯರು ಇದನ್ನು ಒಂದು ದಿನದವರೆಗೆ ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಕೆಲವರು ದಿನದ ಆರಂಭದಿಂದ ಈ ಉಪವಾಸ ಪ್ರಾರಂಭಿಸುತ್ತಾರೆ. ಇನ್ನೂ ಕೆಲವರು ಸೂರ್ಯೋದಯ ಅಂದರೆ "ಬ್ರಾಹ್ಮಿಮುಹೂರ್ತ"ದಿಂದ ಆರಂಭಿಸುತ್ತಾರೆ.
ಕೆಲವು ಸಮುದಾಯಗಳಲ್ಲಿ ಸೂರ್ಯೋದಯಕ್ಕೂ ಮುನ್ನ ‘ಸರ್ಗಿ’ ತಿನ್ನುವ ಸಂಪ್ರದಾಯವೂ ಇದೆ. ಅದರಲ್ಲಿ ಮಹಿಳೆಯರು ಕೆಲವು ರೀತಿಯ ಆಹಾರವನ್ನು ಸೇವಿಸುತ್ತಾರೆ. ನಂತರ ಅವರು ಇಡೀ ದಿನ ಆಹಾರ ಮತ್ತು ನೀರನ್ನು ಸೇವಿಸುವುದಿಲ್ಲ. ಚಂದ್ರನ ಪೂಜೆಯ ನಂತರವೇ ಉಪವಾಸವನ್ನು ಪೂರ್ಣಗೊಳಿಸಲಾಗುತ್ತದೆ.
ಉಪವಾಸದ ನಂತರ ಹಲವು ಸಮಸ್ಯೆ: ಸಾಮಾನ್ಯವಾಗಿ ಈ ಉಪವಾಸದ ಸಮಯದಲ್ಲಿ ಅಥವಾ ನಂತರ ಅನೇಕ ಮಹಿಳೆಯರು ಸುಸ್ತು, ತಲೆನೋವು, ದೇಹದಲ್ಲಿ ಶಕ್ತಿಯ ಕೊರತೆ, ಗ್ಯಾಸ್ ಸಮಸ್ಯೆ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ಕೆಲವೊಮ್ಮೆ ಉಪವಾಸದ ದಿನದ ನಂತರವೂ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭಗಳನ್ನು ತಪ್ಪಿಸಲು, ಕೆಲವು ಮುನ್ನೆಚ್ಚರಿಕೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ತುಂಬಾ ಪ್ರಯೋಜನಕಾರಿಯಾಗಿದೆ.
ಉಪವಾಸದ ಸಮಯದಲ್ಲಿ ಮಾತ್ರವಲ್ಲದೇ, ಮೂರ್ನಾಲ್ಕು ದಿನಗಳ ಮೊದಲು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಮಹಿಳೆಯರಿಗೆ ಹೆಚ್ಚಿನ ಸಹಾಯವಾಗುತ್ತದೆ ಎಂದು ದೆಹಲಿಯ ಹೋಮಿಯೋಪತಿ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗದ ವೈದ್ಯೆ ಡಾ. ಸಾಧನಾ ಅಗರ್ವಾಲ್ ಮಾಹಿತಿ ಹೇಳಿದ್ದಾರೆ.
ಈ ಮಹಿಳೆಯರು ಉಪವಾಸ ಮಾಡದಿದ್ರೆ ಒಳಿತು: ವಿಶೇಷವಾಗಿ ಅಸಿಡಿಟಿ, ಮಧುಮೇಹ, ರಕ್ತದೊತ್ತಡ ಅಥವಾ ಯಾವುದೇ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯರು, ಗರ್ಭಿಣಿಯರು ಉಪವಾಸದ ಮೊದಲು ಒಮ್ಮೆ ವೈದ್ಯರನ್ನು ಸಂಪರ್ಕಿಸಬೇಕು. ಸಾಧ್ಯವಾದರೆ ಉಪವಾಸ ಆಚರಿಸದಿರುವುದು ಉತ್ತಮ. ಆದರೆ, ಅವರು ಇನ್ನೂ ವ್ರತವನ್ನು ಪಾಲಿಸುವುದರ ಬಗ್ಗೆ ಹಠ ಮಾಡುತ್ತಿದ್ದರೆ, ಅವರು ತಮ್ಮ ದೈನಂದಿನ ದಿನಚರಿ, ಆಹಾರ ಪದ್ಧತಿ ಮತ್ತು ವೈದ್ಯರು ಸೂಚಿಸುವ ಮುನ್ನೆಚ್ಚರಿಕೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಸರ್ಗಿ ಸಂಪ್ರದಾಯ ಪಾಲಿಸುವವರು ಹೀಗೆ ಮಾಡಿ: ಮತ್ತೊಂದೆಡೆ, ಮಹಿಳೆಯರು ಉಪವಾಸ ಕೊನೆಗೊಳಿಸುವ ಮೊದಲು, ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸರ್ಗಿ ಸಂಪ್ರದಾಯವನ್ನು ಅನುಸರಿಸುವ ಮಹಿಳೆಯರು ಸರ್ಗಿಯ ರೂಪದಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸುತ್ತಿದ್ದಾರೆ ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಡಾ. ಸಾಧನಾ ಹೇಳುತ್ತಾರೆ. ಏಕೆಂದರೆ ಹಲವಾರು ಬಾರಿ, ಮಸಾಲೆಯುಕ್ತ ಅಥವಾ ತುಂಬಾ ಸಿಹಿಯಾದ ಆಹಾರ ಸೇವಿಸುವುದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದು ಗ್ಯಾಸ್, ತಲೆನೋವು, ಆಲಸ್ಯ ಮತ್ತು ದೇಹದಲ್ಲಿ ಶಕ್ತಿಯ ಕೊರತೆ ಉಂಟುಮಾಡುತ್ತದೆ.
ಈ ಆಹಾರಗಳನ್ನು ಸೇವಿಸಿ: ಸಾಧ್ಯವಾದರೆ, ಹಾಲು, ಮೊಸರು, ಪನೀರ್ ಅಥವಾ ಚೆನ್ನಾವನ್ನು ಒಳಗೊಂಡಿರುವ ಆಹಾರ ಸೇವಿಸಿ. ಇದು ಸರ್ಗಿಯ ರೂಪದಲ್ಲಿ ಹೆಚ್ಚಿನ ಪ್ರೋಟೀನ್ನನ್ನು ಹೊಂದಿರುತ್ತದೆ. ಕಲಸಿದ ಹಿಟ್ಟು, ಒಣ ಹಣ್ಣುಗಳು, ಹಣ್ಣಿನ ರಸ ಅಥವಾ ಹಣ್ಣುಗಳಿಂದ ತಯಾರಿಸಿದ ಭಕ್ಷ್ಯಗಳು. ಸ್ಮೂಥಿಗಳು ಮತ್ತು ತೆಂಗಿನ ನೀರನ್ನು ಸೇವಿಸಬೇಕು.
ಇದು ದೇಹವನ್ನು ಹೈಡ್ರೇಟ್ ಮತ್ತು ಚೈತನ್ಯದಿಂದ ಇಡುತ್ತದೆ. ಅಲ್ಲದೇ ಹಸಿವನ್ನು ಕಡಿಮೆ ಮಾಡುತ್ತದೆ. ಮಧ್ಯರಾತ್ರಿ 12.00 ಗಂಟೆಯಿಂದ ಉಪವಾಸ ಮಾಡುವ ಮಹಿಳೆಯರು ತಮ್ಮ ಉಪವಾಸದ ಮೊದಲ ಊಟದಲ್ಲಿ ಪ್ರೋಟೀನ್-ಭರಿತ ಆಹಾರಗಳಾದ ಚೀಸ್, ಮಿಶ್ರಿತ ಹಿಟ್ಟಿನ ರೊಟ್ಟಿ ಅಥವಾ ಪರಾಠ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು.
ಮಸಾಲೆಯುಕ್ತ ಆಹಾರ ಸೇವಿಸಬೇಡಿ: ಹೆಚ್ಚಿನ ಮನೆಗಳಲ್ಲಿ ಉಪವಾಸದ ನಂತರ ಪೂರಿ ಮತ್ತು ಮಸಾಲೆಯುಕ್ತ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಮಹಿಳೆಯರು ಇಡೀ ದಿನ ಏನನ್ನೂ ತಿನ್ನದೇ, ಈ ರೀತಿಯ ಆಹಾರ ಸೇವಿಸಿದಾಗ, ಅವರು ಗ್ಯಾಸ್ ಅಥವಾ ಅಸಿಡಿಟಿಯಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಜೊತೆಗೆ ಕೆಲವೊಮ್ಮೆ ಇದು ತೀವ್ರ ತಲೆನೋವನ್ನು ಉಂಟುಮಾಡುತ್ತದೆ.
ಅಂತಹ ಸಂದರ್ಭಗಳಲ್ಲಿ, ಉಪವಾಸದ ನಂತರ ಏನನ್ನಾದರೂ ತಿನ್ನುವ ಮೊದಲು, ಕನಿಷ್ಠ ಒಂದು ಲೋಟ ನೀರು, ನಿಂಬೆ ಪಾನಕ, ಲಸ್ಸಿ, ಎಳನೀರು ಅಥವಾ ಸಿಹಿ-ನಿಂಬೆ ರಸವನ್ನು ಸೇವಿಸಬೇಕು. ಇದಲ್ಲದೆ, ಸಾಧ್ಯವಾದರೆ, ಯಾವಾಗಲೂ ಲಘು ಮತ್ತು ಜೀರ್ಣವಾಗುವ ಆಹಾರದೊಂದಿಗೆ ಉಪವಾಸವನ್ನು ಕೊನೆಗೊಳಿಸಬೇಕು.
ಇದನ್ನೂ ಓದಿ: ತಾವು ಸೇವಿಸುವ ಹಾಲಿನ ಬಗ್ಗೆ ದೆಹಲಿ - ಎನ್ಸಿಆರ್ ಜನತೆ ಅಭಿಪ್ರಾಯವೇನು? ಇಲ್ಲಿದೆ ಸಮೀಕ್ಷಾ ವರದಿ
ಎಲ್ಲಾರು ತಮ್ಮ ಆಹಾರದ ಬಗ್ಗೆ ಯಾವಾಗಲೂ ಜಾಗೃತರಾಗಿರಬೇಕು. ವಿಶೇಷವಾಗಿ ಅಂತಹ ಉಪವಾಸದ ಮೊದಲು, ಎಲ್ಲಾ ಮಹಿಳೆಯರು ಅವರು ಉದ್ಯೋಗಸ್ಥರಾಗಲಿ ಅಥವಾ ಗೃಹಿಣಿಯರಾಗಿರಲಿ ತಮ್ಮ ಆಹಾರ ಮತ್ತು ದಿನಚರಿಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಹಿಳೆಯರು ಉಪವಾಸ ಮಾಡುತ್ತಿದ್ದರೆ, ದಿನವಿಡೀ ಖಾಲಿ ಹೊಟ್ಟೆಯಲ್ಲಿ ಉಳಿಯುವ ಬದಲು, ಹಣ್ಣುಗಳು, ಒಣ ಹಣ್ಣುಗಳು, ಹಾಲು, ತಾಜಾ ಹಣ್ಣಿನ ಸ್ಮೂಥಿಗಳು, ಜ್ಯೂಸ್,ಎಳನೀರು ಇತ್ಯಾದಿಗಳನ್ನು ಸೇವಿಸುವುದು ಉತ್ತಮ ಎಂದು ಡಾ. ಸಾಧನಾ ಅಗರ್ವಾಲ್ ಹೇಳುತ್ತಾರೆ.