ಪ್ರತಿನಿತ್ಯ ಸ್ಟ್ರಾಬೆರಿ ಹಣ್ಣು ಸೇವನೆ ಮಾಡುವುದರಿಂದ ಅರಿವಿನ ಕಾರ್ಯವನ್ನು ಅಭಿವೃದ್ಧಿಪಡಿಸಬಹುದು. ಇದರ ಜೊತೆಗೆ ರಕ್ತದೊತ್ತಡವನ್ನೂ ಇದು ಕಡಿಮೆ ಮಾಡುತ್ತದೆ. ಈ ಹಣ್ಣಿನಲ್ಲಿ ಹೆಚ್ಚು ಆ್ಯಂಟಿಆಕ್ಸಿಡೆಂಟ್ ಇದೆ ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ. ಈ ಹಿಂದಿನ ಅಧ್ಯಯನಗಳು ಸ್ಟ್ರಾಬೆರಿ ಹೃದಯ ರಕ್ತನಾಳ, ಚಯಾಪಚಯನ ಮತ್ತು ಅರಿವಿನ ಆರೋಗ್ಯದ ಪ್ರಯೋಜನ ಹೊಂದಿದೆ ಎಂದು ತೋರಿಸಿವೆ. ಇದರ ಆಧಾರದಡಿ ಇದೀಗ ಲೇಟೆಸ್ಟ್ ಅಧ್ಯಯನ ನಡೆದಿದೆ.
ಈ ಅಧ್ಯಯನದಲ್ಲಿ 35 ಮಂದಿ ಆರೋಗ್ಯಯುತ ಪುರುಷ ಮತ್ತು ಮಹಿಳೆಯರು ಭಾಗಿಯಾಗಿದ್ದರು. 66ರಿಂದ 78 ವರ್ಷ ವಯೋಮಿತಿಯ ಇವರು ಪ್ರತಿನಿತ್ಯ 26 ಗ್ರಾಂನ ಶೀತಲೀಕರಿಸಿ ಒಣಗಿಸಿದ ಸ್ಟ್ರಾಬೆರಿ ಪೌಡರ್ ಸೇವಿಸಿದರು. ಇದು ಪ್ರತಿನಿತ್ಯ ಎರಡು ಸ್ಟ್ರಾಬೆರಿ ಸೇವನೆಗೆ ಸಮ. ಈ ರೀತಿ ಎಂಟು ವಾರಗಳ ಕಾಲ ನಿಯಂತ್ರಣ ನಡೆಸಲಾಗಿದೆ.
ಹಲವು ಪ್ರಯೋಜನಗಳು..: ಸ್ಟ್ರಾಬೆರಿ ಸೇವನೆಯು ಮನುಷ್ಯನ ಅರಿವಿನ ಪ್ರಕ್ರಿಯೆಯ ವೇಗವನ್ನು ಶೇ 5.2ರಷ್ಟು ಹೆಚ್ಚಿಸಿದೆ. ಸಿಸ್ಟೊಲಿಕ್ ರಕ್ತದೊತ್ತಡ ಕೂಡ ಶೇ 3.6ರಷ್ಟು ಕಡಿಮೆಯಾಗಿದೆ. ಒಟ್ಟಾರೆ ಆ್ಯಂಟಿ ಆಕ್ಸಿಡೆಂಟ್ ಸಾಮರ್ಥ್ಯ ಗಮನಾರ್ಹವಾಗಿ ಶೇ 10.2ರಷ್ಟು ಹೆಚ್ಚಾಗಿದೆ. ಸೊಂಟದ ಸುತ್ತಳತೆ ಕೂಡ ಶೇ 1.1 ರಷ್ಟು ಕಡಿಮೆಯಾಗಿದೆ. ನಿಯಂತ್ರಣ ಮಟ್ಟದ ಪುಡಿ ಸೇವಿಸುವಾಗ ಭಾಗವಹಿಸುವವರು ಹೆಚ್ಚಿದ ಸೀರಮ್ ಟ್ರೈಗ್ಲಿಸರೈಡ್‌ಗಳನ್ನು ಅನುಭವಿಸಿದರು.
ಸ್ಟ್ರಾಬೆರಿ ಸೇವನೆಯೂ ನಿಮ್ಮ ಅರಿವಿನ ಕಾರ್ಯಾಚರಣೆಯನ್ನು ಹೆಚ್ಚಿಸುವ ಜೊತೆಗೆ ರಕ್ತ ದೊತ್ತಡದಂತಹ ಹೃದಯ ರಕ್ತನಾಳದ ಅಪಾಯ ತಗ್ಗಿಸುತ್ತದೆ ಎಂದು ಅಧ್ಯಯನ ತೋರಿಸಿದೆ ಎಂದು ಸ್ಯಾನ್ ಡಿಯಾಗೊ ಸ್ಟೇಟ್ ಯುನಿವರ್ಸಿಟಿ ಪ್ರೋ ಶಿರಿನ್ ಹೂಶ್ಮಂಡ್ ತಿಳಿಸಿದ್ದಾರೆ. ನಾವು ಪ್ರತಿನಿತ್ಯ ಸ್ಟ್ರಾಬೆರಿ ಸೇವನೆಯಂತಹ ಸರಳ ಆಹಾರ ಪದ್ಧತಿ ಬದಲಾವಣೆಗೆ ಪ್ರೋತ್ಸಾಹ ನೀಡಿದೆವು. ಇದು ವಯಸ್ಕರಲ್ಲಿ ಆರೋಗ್ಯ ಅಭಿವೃದ್ಧಿಗೆ ಕಾರಣವಾಗಿದೆ.
ದೈನಂದಿನ ವಿಟಮಿನ್ಗೆ ಸಹಾಯಕ: ಸ್ಟ್ರಾಬೆರಿಗಳು ಸಮೃದ್ಧ ಬಯೋಆ್ಯಕ್ಟಿವ್ ಸಂಯೋಜನೆ ಹೊಂದಿದೆ. ನಮಗೆ ದಿನನಿತ್ಯ ಬೇಕಾಗುವ ಶೇ 100ರಷ್ಟು ವಿಟಮಿನ್ ಸಿ ನೀಡುತ್ತದೆ. ಇದರಲ್ಲಿ ಹೃದಯದ ಆರೋಗ್ಯಕ್ಕೆ ಸಹಾಯವಾಗುವ ಫೊಲಟ್, ಪೋಟಾಶಿಯಂ, ಫೈಬರ್, ಫೈಟೊಸ್ಟೆರಾಲ್ ಮತ್ತು ಪಾಲಿಫಿನಾಲ್ಗಳು ಇವೆ.
ಅಧ್ಯಯನವನ್ನು ನ್ಯೂಟ್ರಿಷಿಯನ್ 2023ರಲ್ಲಿ ಪ್ರಕಟಿಸಲಾಗಿದ್ದು, ಅಮೆರಿಕನ್ ಸೊಸೈಟಿ ಆಫ್ ನ್ಯೂಟ್ರಿಷಿಯನ್ (ಎಎಸ್ಎನ್)ನಲ್ಲಿ ವಾರ್ಷಿಕ ಸಭೆಯಲ್ಲಿ ಮಂಡಿಸಲಾಗಿದೆ. ಈ ಹಿಂದಿನ ಅಧ್ಯಯನಗಳು ಕೂಡ ಸ್ಟ್ರಾಬೇರಿ ಸೇವನೆಯು ಎಲ್ಎಲ್, ಕಡಿಮೆ ರಕ್ತದೊತ್ತಡದಂತಹ ಅನೇಕ ಹೃದಯ ರಕ್ತನಾಳ ಅಭವಿವೃದ್ಧಿಯಲ್ಲಿ ಸಹಕಾರಿಯಾಗಿದೆ ಎಂದು ತೋರಿಸಿದೆ.
ಸ್ಟ್ರಾಬೆರಿ ಸೇವನೆ ಮತ್ತು ಮಿದುಳಿನ ಆರೋಗ್ಯದ ನಡುವಿನ ಸಂಬಂಧವನ್ನು ಕ್ಲಿನಿಕಲ್ ಮತ್ತು ಜನಸಂಖ್ಯಾ ಆಧಾರಿತದ ಅಧ್ಯಯನದಲ್ಲೂ ತೋರಿಸಲಾಗಿದೆ. ಸ್ಟ್ರಾಬೆರಿಯಲ್ಲಿ ಕಂಡುಬರುವ ಜೀವ ರಾಸಾಯನಿಕಗೂ ಅಲ್ಝೈಮರ್ನಂತಹ ರೋಗದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ರಶ್ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಕಡಿಮೆ ಫೈಬರ್ ಆಹಾರ ಸೇವನೆ, ಮಗುವಿನ ಮೆದುಳಿನ ಬೆಳವಣಿಗೆಗೆ ಅಡ್ಡಿ: ವರದಿ