ನ್ಯೂಯಾರ್ಕ್: ಕರುಳಿನಲ್ಲಿ ಬಹುಜಾತಿಯ ಬ್ಯಾಕ್ಟೀರಿಯಾಗಳು ಮನುಷ್ಯ ಮತ್ತು ಇಲಿಗಳಲ್ಲಿ ಗಂಭೀರ ಮಲೇರಿಯಾ ಅಭಿವೃದ್ಧಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಜರ್ನಲ್ ನೇಚರ್ ಕಮ್ಯೂನಿಕೇಷನ್ನಲ್ಲಿ ಪ್ರಕಟವಾದ ಅಧ್ಯಯನ ಫಲಿತಾಂಶದಲ್ಲಿ ಇಲಿಯ ಕರುಳನ್ನು ಆಶ್ರಯಿಸುವ ನಿರ್ದಿಷ್ಟ ಜಾತಿಯ ಬ್ಯಾಕ್ಟೀರಾಯ್ಡ್ಗಳು ಮಲೇರಿಯಾದ ಹೆಚ್ಚಿನ ಅಪಾಯ ಹೊಂದಿದೆ ಎಂದು ತಿಳಿಸಿದೆ. ಇದೇ ರೀತಿಯ ಅಂಶವನ್ನು ಮಲೇರಿಯಗೆ ಒಳಗಾದ ಮಕ್ಕಳ ಕರುಳನ್ನು ಗಮನಿಸಿದಾಗ ಪತ್ತೆಯಾಗಿದೆ.
ಬ್ಯಾಕ್ಟೀರಾಯ್ಡ್ ಜಾತಿಯ ಸೂಕ್ಷ್ಮಾಣುಗಳು ಕರುಳಿನಲ್ಲಿ ಮೈಕ್ರೋಬಯೋಟಾ ಜೊತೆಗೆ ಸಂಪರ್ಕಿಸಿದಾಗ ಅದು ಮಲೇರಿಯಾ ಉಲ್ಬಣಕ್ಕೆ ಕಾರಣವಾಗುತ್ತದೆ. ಈ ಅಧ್ಯಯನವೂ ಗಂಭೀರ ಮಲೇರಿಯದಿಂದ ಆಗುವ ಸಾವಿನ ಅಪಾಯ ತಡೆಯಲು ಕರುಳಿನ ಬ್ಯಾಕ್ಟೀರಿಯಾ ಗುರಿಯಾಗಿಸಿ ಹೊಸ ಚಿಕಿತ್ಸಾ ವಿಧಾನವನ್ನು ಅಭಿವೃದ್ಧಿ ಪಡಿಸುವಿಕೆಯನ್ನು ತಿಳಿಸುತ್ತದೆ ಎಂದು ಅಮೆರಿಕದ ಇಂಡಿಯನಾ ಯುನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ.
ಮಲೇರಿಯಾ ಜೀವಕ್ಕೆ ಹಾನಿ ಮಾಡುವ ಸೊಳ್ಳೆಗಳ ಕಡಿತದಿಂದ ಹರಡುವ ಮಾರಣಾಂತಿಕ ಸೋಂಕು ಆಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿ ಅನುಸಾರ 2021ರಲ್ಲಿ ಜಾಗತಿಕವಾಗಿ ಮಲೇರಿಯಾದಿಂದ 6,19,000 ಮಂದಿ ಸಾವನ್ನಪ್ಪಿದ್ದು, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಶೇ 76ರಷ್ಟಿದೆ ಎಂದು ಹೇಳಿದೆ.
ಈ ಹಿಂದೆಗೆ ಹೋಲಿಕೆ ಮಾಡಿದಾಗ ಇದೀಗ ಮಲೇರಿಯಾ ರೋಗದ ಚಿಕಿತ್ಸೆ ಮತ್ತು ತಡೆಗಟ್ಟುವಿಕೆ ಸಾಕಷ್ಟು ಪ್ರಗತಿ ಕಂಡಿದೆ. ಹೊಸ ಲಸಿಕೆಗಳು ಮತ್ತು ಆ್ಯಂಟಿಮಲೇರಿಯಾ ಔಷಧಗಳು, ಸೊಳ್ಳೆಗಳ ನಿರ್ವಹಣೆ ಮತ್ತು ಸುಧಾರಿತ ಆರೋಗ್ಯ ಪ್ರಗತಿಯೂ ಕಾರಣವಾಗಿದೆ.
ಇದೆಲ್ಲದರೂ ನಡುವೆ ಕೂಡ ಮಲೇರಿಯಾ ಸಾವಿನ ಸಂಖ್ಯೆ ಕಡಿಮೆ ಮಾಡುವುದು ಅಗತ್ಯ. 2,000 ದಿಂದ 2010ರವರೆಗೆ ಮಲೇರಿಯಾ ಸಂಬಂಧಿತ ಸಾವನ್ನು ಕಡಿಮೆ ಮಾಡುವಲ್ಲಿ ನಡೆಸಿರುವ ಪ್ರಯೋಜನವು ಕಳೆದ ಐದು ವರ್ಷಗಳಲ್ಲಿ ಹೆಚ್ಚುತ್ತಿರುವ ಸೋಂಕಿನ ಬೆಳವಣಿಗೆ ಕಡಿಮೆ ಮಾಡುವಲ್ಲಿ ತೀರಾ ಅಗತ್ಯ ಕ್ರಮದ ಅವಶ್ಯಕತೆ ತೋರಿಸಿದೆ.
ಮಲೇರಿಯಾ- ಸಂಬಂಧಿತ ಸಾವು ನೋವುಗಳನ್ನ ತಡೆಗಟ್ಟಲು ಹೊಸ ವಿಧಾನವನ್ನು ಅಳವಡಿಸುವ ಅಗತ್ಯವನ್ನು ಸಂಶೋಧನೆ ತೋರಿಸುತ್ತದೆ ಎಂದು ಸಹಾಯಕ ಪ್ರದ್ಯಾಪಲರಾಗಿರುವ ನಾಥನ್ ಸ್ಮಿತ್ ತಿಳಿಸಿದ್ದಾರೆ. ಪ್ರಸ್ತುತ ಚಿಕಿತ್ಸಯಲ್ಲಿ ಕರುಳಿನ ಸೂಕ್ಷ್ಮಾಣುಗಳನ್ನು ಗುರಿಯಾಗಿಸುವ ಯಾವುದೇ ವಿಧಾನಗಳಿಲ್ಲ. ಈ ಹಿನ್ನೆಲೆಯಲ್ಲಿ ಈ ವಿಧಾನವೂ ಒಂದು ಹೊಸ ಅವಕಾಶವನ್ನು ಪ್ರತಿನಿಧಿಸುತ್ತದೆ ಎಂದು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಝಿಕಾ ವೈರಸ್ ಪತ್ತೆ: ಗರ್ಭಿಣಿಯರ ಆರೋಗ್ಯದ ಮೇಲೆ ಹೆಚ್ಚು ನಿಗಾ