ETV Bharat / sukhibhava

ಉತ್ತಮ ಕೈಬರಹವು ಮೆದುಳಿನ ಆರೋಗ್ಯ ವೃದ್ಧಿಸುತ್ತದೆ.. ಹೇಗೆ ಗೊತ್ತಾ? - ಸಂತೋಷವನ್ನು ಹೆಚ್ಚಿಸುವ ಮಾರ್ಗಗಳು

ಬರವಣಿಗೆ, ಇದು ಅಭಿವ್ಯಕ್ತಿಯ ಒಂದು ರೂಪ. ಕಾಗದದ ಮೇಲೆ ಜನರು ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಬರೆಯುವುದರಿಂದ ತಮ್ಮನ್ನು ತಾವು ಉತ್ತಮವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ.

handwriting
ಉತ್ತಮ ಕೈಬರಹವು ಮೆದುಳಿನ ಆರೋಗ್ಯ ವೃದ್ಧಿಸುತ್ತದೆ
author img

By

Published : Jan 20, 2022, 4:31 PM IST

ಬದಲಾಗುತ್ತಿರುವ ಸಮಯದ ವೇಳೆ ನಾವು 'ತಂತ್ರಜ್ಞಾನ'ವೇ ಸಂವಹನಕ್ಕಾಗಿ ಅತ್ಯುತ್ತಮವಾದ ಆವಿಷ್ಕಾರವೆಂದು ಭಾವಿಸಿದ್ದೇವೆ. ಆದರೆ ಕೋವಿಡ್​ ಲಾಕ್‌ಡೌನ್ ದಿನಗಳಲ್ಲಿ ಪೆನ್​ ಹಿಡಿದು ಪೇಪರ್​ ಮೇಲೆ ಏನಾದರೂ ಬರೆದವರು ಮಾತ್ರ 'ಕೈಬರಹ'ದ ಪ್ರಾಮುಖ್ಯತೆ, ಅದು ಅವರಲ್ಲಿ ಹೆಚ್ಚಿಸಿದ ಸೃಜನಶೀಲತೆಯನ್ನು ಗಮನಿಸಿರುತ್ತಾರೆ.

ಲಾಕ್​ಡೌನ್​ ವೇಳೆ ಜನರು ತಂತ್ರಜ್ಞಾನದಿಂದ ದೂರವಿರುವ ಅಭಿವ್ಯಕ್ತಿ ಮಾರ್ಗಗಳನ್ನು ಹುಡುಕುತ್ತಿದ್ದರು ಮತ್ತು ಇದಕ್ಕಾಗಿ ಸೃಜನಶೀಲ ಚಟುವಟಿಕೆಗಳತ್ತ ತಿರುಗಿದ್ದರು. ಬರವಣಿಗೆ, ಇದು ಅಭಿವ್ಯಕ್ತಿಯ ಒಂದು ರೂಪ. ಭಾವನಾತ್ಮಕ ಒತ್ತಡವನ್ನು ಕಡಿಮೆಗೊಳಿಸಲು ಮತ್ತು ಪರೀಕ್ಷಾ ಸಮಯದಲ್ಲಿ ಅವರ ಭಾವನೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವೇದಿಕೆಯನ್ನು ಒದಗಿಸುತ್ತದೆ. ಪೆನ್​​ ತಯಾರಿಕಾ ಕಂಪನಿ ಬಿಕ್​ (BIC)ನ ಹಿರಿಯ ಬಳಕೆದಾರ ಸಂಶೋಧನಾ ನಿರ್ವಾಹಕರಾದ ಐರಿನಿ ಪೆಟ್ರಾಟೌ ಅವರು ಕೈಬರಹದ ಪ್ರಯೋಜನಗಳನ್ನು ಪಟ್ಟಿ ಮಾಡಿದ್ದಾರೆ.

ಅರಿವಿನ ಪ್ರಕ್ರಿಯೆಗಳನ್ನು ಹೆಚ್ಚಿಸುತ್ತದೆ..

ಗ್ಯಾಜೆಟ್‌ನಲ್ಲಿ ಟಿಪ್ಪಣಿಗಳನ್ನು ತೆಗೆದುಕೊಳ್ಳುವುದಕ್ಕೆ ವಿರುದ್ಧವಾಗಿ, ಪೆನ್ ಮತ್ತು ಪೇಪರ್ ಅನ್ನು ಬಳಸುವುದು ಅರಿವಿನ ಪ್ರಕ್ರಿಯೆಗಳನ್ನು ಉತ್ತಮವಾಗಿ ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಇದು ಜ್ಞಾನವನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುತ್ತದೆ, ಸತ್ಯಗಳು ಮತ್ತು ಪರಿಕಲ್ಪನೆಗಳನ್ನು ನೆನಪಿಸಿಕೊಳ್ಳುತ್ತದೆ ಮತ್ತು ಕೈಯಲ್ಲಿರುವ ವಿಷಯದ ಹೆಚ್ಚು ಆಳವಾದ ಗ್ರಹಿಕೆಯನ್ನು ಒದಗಿಸುತ್ತದೆ. ಕರ್ಸಿವ್ ಬರವಣಿಗೆ ನಿರ್ದಿಷ್ಟವಾಗಿ ಚಿಂತನೆ, ಭಾಷೆ ಮತ್ತು ತಾರ್ಕಿಕ ಕ್ಷೇತ್ರಗಳಲ್ಲಿ ಮೆದುಳಿನ ಬೆಳವಣಿಗೆಯನ್ನು ಹೆಚ್ಚಿಸಲು ಸಾಬೀತಾಗಿದೆ. ನ್ಯೂಯಾರ್ಕ್ ಟೈಮ್ಸ್ ಅಧ್ಯಯನದ ಪ್ರಕಾರ, ಕರ್ಸಿವ್ ಬರವಣಿಗೆ ಎಡ ಮತ್ತು ಬಲ ಅರ್ಧಗೋಳಗಳ ನಡುವೆ ಮೆದುಳಿನ ಸಿಂಕ್ರೊನೈಸೇಶನ್ ಅನ್ನು ಉತ್ತೇಜಿಸುತ್ತದೆ.

ಮೆದುಳಿನ ಆರೋಗ್ಯ ವೃದ್ಧಿಸುತ್ತದೆ..

ಧ್ಯಾನದಂತೆ, ಉತ್ತಮ ಕೈಬರಹ ಕೂಡ ಮೆದುಳಿನ ಕೆಲವು ಪ್ರದೇಶಗಳಲ್ಲಿ ಸೆರೆಬ್ರಲ್ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಇಂಡಿಯಾನಾ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಕೈಯಿಂದ ಬರೆಯುವ ಕ್ರಿಯೆಯು ಸೃಜನಾತ್ಮಕತೆಯನ್ನು ಉತ್ತೇಜಿಸುತ್ತದೆ. ಹೈಟೆಕ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ ಕಡಿಮೆ ತಂತ್ರಜ್ಞಾನದ ಕೈಬರಹವು ಮೆದುಳಿನ ಕೆಲವು ಪ್ರದೇಶಗಳಲ್ಲಿ ನರಕೋಶದ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಎಂದು ಸಾಬೀತುಪಡಿಸಿದೆ.

ಸೃಜನಶೀಲತೆ ಮತ್ತು ಚಿಂತನೆಯ ಪ್ರಕ್ರಿಯೆಗಳನ್ನು ಹೆಚ್ಚಿಸುತ್ತದೆ..

ಬರವಣಿಗೆಯು ನಮ್ಮ ಸೃಜನಶೀಲ ಪ್ರಕ್ರಿಯೆ ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಆಲೋಚನಾ ಪ್ರಕ್ರಿಯೆಗಳನ್ನು ಸಂಘಟಿಸಲು ಬೆಂಬಲಿಸುತ್ತದೆ. ಖ್ಯಾತ ಲೇಖಕ ಪ್ಯಾಟ್ರಿಕ್ ಮೆಕ್‌ಕ್ಲೀನ್ ಅವರು ಬರೆದ ಲೇಖನವೊಂದರಲ್ಲಿ ಪೆನ್ ಮತ್ತು ಪೇಪರ್ ಅನ್ನು ಬಳಸುವುದು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ಉಂಟಾಗುವ ಗೊಂದಲಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಟೈಪ್ ಮಾಡುವಾಗ, ವ್ಯಕ್ತಿಗಳು ವಿಷಯವನ್ನು ಅಭಿವೃದ್ಧಿಪಡಿಸಿದಂತೆ ಎಡಿಟ್ ಮಾಡುವತ್ತ ಗಮನಹರಿಸುತ್ತಾರೆ. ಇದು ಸೃಜನಾತ್ಮಕ ಪ್ರಕ್ರಿಯೆಗೆ ವಿರುದ್ಧವಾಗಿದೆ. ಮತ್ತೊಂದೆಡೆ, ಪೆನ್ ಮತ್ತು ಪೇಪರ್ ಅನ್ನು ಬಳಸುವುದರಿಂದ ಜನರು ತಮ್ಮ ಸೃಜನಾತ್ಮಕ ಆಲೋಚನೆಗಳನ್ನು ಬರೆಯಲು, ಅವರ ಆಲೋಚನೆಗಳನ್ನು ಸಂಪೂರ್ಣವಾಗಿ ಸಂಗ್ರಹಿಸಲು ಮತ್ತು ನಂತರ ಸಂಪಾದಿಸಲು ಅನುಮತಿಸುತ್ತದೆ.

ಕೈಬರಹವು ಸಂತೋಷವನ್ನು ಹೆಚ್ಚಿಸುತ್ತದೆ..

ರೋಚೆಸ್ಟರ್ ವಿಶ್ವವಿದ್ಯಾನಿಲಯದ ಆರೋಗ್ಯ ವಿಶ್ವಕೋಶದ ಪ್ರಕಾರ, ಕೈಬರಹವು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಏಕೆಂದರೆ ಕಾಗದದ ಮೇಲೆ ಆಲೋಚನೆಗಳು, ಮತ್ತು ಭಾವನೆಗಳನ್ನು ಬರೆಯುವುದರಿಂದ ಜನರು ತಮ್ಮನ್ನು ತಾವು ಉತ್ತಮವಾಗಿ ವ್ಯಕ್ತಪಡಿಸಲು ಮತ್ತು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ವೇದಿಕೆಯನ್ನು ನೀಡುತ್ತದೆ. ಜನರು ತಮ್ಮ ಭಾವನೆಗಳನ್ನು ಗುರುತಿಸಲು ಮತ್ತು ಅರ್ಥಮಾಡಿಕೊಳ್ಳಲು ಇದು ಸಾಕಷ್ಟು ಸಮಯವನ್ನೂ ನೀಡುತ್ತದೆ. ಬರವಣಿಗೆಯು ಆಲೋಚನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ. ಕಾಗದದ ಮೇಲೆ ಭಾವನೆಗಳನ್ನು ಬರೆಯುವ ಪ್ರಕ್ರಿಯೆಯು ಚಿಕಿತ್ಸಕವೆಂದು ಸಾಬೀತಾಗಿದೆ ಮತ್ತು ಸಂತೋಷದ ಭಾವನೆಗಳನ್ನು ಹೆಚ್ಚಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಲೈಂಗಿಕ ಸಾಮರ್ಥ್ಯದ ಕೊರತೆಯ ಆತಂಕವೇ? ಹೀಗ್​ ಮಾಡಿದ್ರೆ ನಿಮ್ಮೆಲ್ಲಾ ಸಮಸ್ಯೆಗಳು ಮಾಯ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.