ETV Bharat / sukhibhava

ದೃಷ್ಟಿ ಹೀನತೆಗೆ ಕಾರಣವಾಗುವ ಗ್ಲುಕೋಮ; ಈ ಬಗ್ಗೆ ಇರಲಿ ಕಾಳಜಿ

author img

By

Published : Mar 11, 2023, 3:18 PM IST

ಮಾರ್ಚ್​ 12 ವರ್ಲ್ಡ್​ ಗುಕ್ಲೋಮ ಡೇ. ಕಣ್ಣಿನ ದೃಷ್ಟಿಗೆ ಹಾನಿ ಮಾಡುವ ಈ ಗ್ಲುಕೋಮ ಸಮಸ್ಯೆ ಬಗ್ಗೆ ಅರಿವು ಮೂಡಿಸಲು ಈ ಬಾರಿ ಸಾಪ್ತಾಹಿಕ ಯೋಜನೆ ರೂಪಿಸಲಾಗಿದೆ.

Glaucoma causing vision impairment; Be concerned about this

ಹೈದರಾಬಾದ್​: ಕಣ್ಣಿನ ಸಮಸ್ಯೆಯಲ್ಲಿ ಗ್ಲುಕೋಮ ಪ್ರಮುಖವಾಗಿದೆ. ಇದನ್ನು ಸರಿಯಾದ ಸಮಯಕ್ಕೆ ಚಿಕಿತ್ಸೆ ಮಾಡದಿದ್ದರೆ, ರೋಗಿಗಳು ದೃಷ್ಟಿಯನ್ನೇ ಕಳೆದುಕೊಳ್ಳು ಅಪಾಯವನ್ನು ಹೊಂದಿರುತ್ತಾರೆ. ಪ್ರತಿ ವರ್ಷ ಮಾರ್ಚ್​ 12ರಂದು ವಿಶ್ವ ಗ್ಲುಕೋಮ ದಿನವನ್ನಾಗಿ ಆಚರಿಸಲಾಗುತ್ತದೆ. ಗ್ಲುಕೋಮ ಕುರಿತು ಜಾಗತಿಕವಾಗಿ ಅರಿವು ಮೂಡಿಸುವ ಉದ್ದೇಶದಿಂದ ವರ್ಲ್ಡ್​​ ಗ್ಲುಕೋಮಾ ಅಸೋಸಿಯೇಷನ್​ ಮತ್ತು ವರ್ಲ್ಡ್​​ ಗ್ಲುಕೋಮಾ ಪೇಷಂಟ್​ ಅಸೋಸಿಯೇಷನ್​ ಜಂಟಿಯಾಗಿ ಈ ದಿನದ ಆಚರಣೆಗೆ ಮುಂದಾಯಿತು. ಇದರ ಜೊತೆಗೆ ಈ ವರ್ಷ ಅಂದರೆ 2023ರಲ್ಲಿ ಜಾಗತಿಕ ಗ್ಲುಕೋಮಾ ಸಪ್ತಾಹಿಕವನ್ನು ಮಾರ್ಚ್​ 12ರಿಂದ 18ರವರೆಗೆ ಆಚರಿಸಲಾಗುತ್ತಿದೆ. ಈ ಬಾರಿಯೂ ಈ ದಿನದ ಘೋಷ ವಾಕ್ಯ. ದ ವರ್ಲ್ಡ್​ ಇಸ್​ ಬ್ರೈಟ್​, ಸೇವ್​ ಯೂವರ್​ ಸೈಟ್​​.

ಗ್ಲುಕೋಮಾ ಸಾಮಾನ್ಯವಾಗಿ ಕಪ್ಪು ಕ್ಯಾಟ್ರಕ್ಟ್​​ನಿಂದಲೇ ಪರಿಚಿತ. ಆದರೆ, ಇದು ತಪ್ಪು ಕಲ್ಪನೆ. ಗ್ಲಕೋಮಾ ಎಂಬುದು ಒಂದು ರೋಗ ಅಥವಾ ಕಣ್ಣಿನ ಅಪ್ಟಿಕ್​ ನರಕ್ಕೆ ಹಾನಿಯೊಂದಿಗೆ ಸಂಬಂಧ ಹೊಂದಿದೆ. ಸರಿಯಾದ ಸಮಯಕ್ಕೆ ಇದನ್ನು ಪತ್ತೆ ಮಾತುಡುವುದು, ಚಿಕಿತ್ಸೆ ನೀಡುವುದು ಅವಶ್ಯವಾಗಿದೆ. ಅನೇಕ ಬಾರಿ ಈ ಸಮಸ್ಯೆ ದೃಷ್ಟಿ ಕಳೆದುಕೊಳ್ಳುವುದಕ್ಕೆ ಕಾರಣವಾಗುತ್ತದೆ. ಇದರಲ್ಲಿ ಮೂರು ರೀತಿಯ ಗ್ಲುಕೋಮ ಕಾಣಬಹುದು. ಒಪಲ್​ ಆ್ಯಂಗಲ್​ ಗ್ಲುಕೋಮ, ಆ್ಯಂಗಲ್​ ಕ್ಲೋಸರ್​ ಗ್ಲುಕೋಮ ಮತ್ತು ನಾರ್ಮಲ್​ ಟೆನ್ಷನ್​ ಗ್ಲುಕೋಮ.

60 ವರ್ಷ ಮೇಲ್ಪಟ್ಟವರಲ್ಲಿ ಈ ಗ್ಲುಕೋಮದ ಅಪಾಯ ಹೆಚ್ಚು. ಆದರೆ, ಯುವ ಜನರಲ್ಲೂ ಈ ಸಮಸ್ಯೆ ಕಾಡದೇ ಇರಲಾರದು. ಆದಾಗ್ಯೈ, ಯುವ ಜನರಲ್ಲಿ ಈ ಸಮಸ್ಯೆ ಕಡಿಮೆ. ಡಯಾಬೀಟಿಸ್​​, ಹೆಚ್ಚಿನ ರಕ್ತದೊತ್ತಡ ಕೂಡ ಈ ಗ್ಲುಕೋಮಗೆ ಕಾರಣವಾಗಬಹುದು. ಇದರ ಹೊರತಾಗಿ, ವಂಶವಾಹಿನಿ ಅಥವಾ ಕುಟುಂಬದ ಇತಿಹಾಸ, ಕಣ್ಣಿನ ಅಪಘಾತ ಅಥವಾ ಸಮಸ್ಯೆ, ದೀರ್ಘವಾಧಿ ಸ್ಟಿರಿಯಡ್​ ಅಥವಾ ಔಷಧವೂ ಈ ಗ್ಲುಕೋಮಕ್ಕೆ ಕಾರಣವಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರಣ, ಜಗತ್ತಿನಲ್ಲಿ ಅಂಧತ್ವಕ್ಕೆ ಕಾರಣವಾಗುತ್ತಿರುವ ಎರಡನೇ ಪ್ರಮುಖ ಕಾರಣ ಈ ಗ್ಲುಕೋಮವಾಗಿದೆ. ಭಾರತದಲ್ಲಿ 12 ಮಿಲಿಯನ್​ ಜನರು ಈ ಗ್ಲುಕೋಮದಿಂದ ಬಳಲುತ್ತಿದ್ದು, 1.2 ಮಿಲಿಯನ್​​ ಮಂದಿ ಇದರಿಂದ ದೃಷ್ಟಿ ಕಳೆದುಕೊಂಡಿದ್ದಾರೆ. ಜಾಗತಿಕವಾಗಿ 4.5 ಮಿಲಿಯನ್​ ಜನರು ಇದರಿಂದಾಗಿ ಅಂಧತ್ವಕ್ಕೆ ಗುರಿಯಾಗಿದ್ದಾರೆ.

ಶೇ 50ರಷ್ಟು ಜನರಿಗೆ ಗ್ಲುಕೋಮ ಸಮಸ್ಯೆಯಿಂದ ಬಳಲುತ್ತಿದ್ದರೂ ಅದು ಅವರ ಮೇಲೆ ಪರಿಣಾಮ ಬೀರುವವರೆಗೂ ಅರಿವಿಗೆ ಬರುವುದಿಲ್ಲ. ಅವರು ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದೇ, ಕ್ರಮೇಣ ದೃಷ್ಟಿ ಕಳೆದಯಕೊಳ್ಳುತ್ತಾರೆ. ವೈದ್ಯರ ಪ್ರಕಾರ ಕಳೆದ 10 ವರ್ಷದಲ್ಲಿ ಈ ಪ್ರಕರಣದಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಈ ಪ್ರಕರಣ ಏರಿಕೆಯಲ್ಲಿ ಮೊದಲ ಕಾರಣ ಜೀವನ ಶೈಲಿ. ಡಯಾಬೀಟಿಸ್​ ಮತ್ತು ಅಧಿಕ ರಕ್ತದೊತ್ತಡ ಕೂರ ಗ್ಲುಕೋಮದ ಅಪಾಯ ಹೊಂದಿದೆ. ಇದರ ಹೊರತಾಗಿ, ಎಲ್ಲಾ ವಯೋಮಾನದವರು ಮೊಬೈಲ್​, ಟಿವಿ ಮತ್ತು ಲ್ಯಾಪ್​ಟಾಪ್​ ಬಳಕೆ ಹೆಚ್ಚು ಮಾಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಮಾರ್ಚ್​ 12ರಿಂದ ಜಾಗತಿಕ ಗ್ಲುಕೋಮ ಸಪ್ತಾಹಿಕ ಆರಂಭವಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಇದರ ಕುರಿತು ಅರಿವು ಮೂಡಿಸುವ ಪ್ರಯತ್ನಕ್ಕೆ ಮುಂದಾಗಲಾಗಿದೆ. ಅನೇಕ ಸರ್ಕಾರ, ಸರ್ಕಾರೇತರ, ಸ್ವಯಂ ಸಂಘಟನೆಗಳು, ಆಸ್ಪತ್ರೆಗಳು ಅನೇಕ ಚೆಕ್​ ಅಪ್​, ಟ್ರಿಟ್​ಮೆಂಟ್​ ಹೆಲ್ತ್​​ ಕ್ಯಾಂಪ್​, ಜಾಗೃತಿ ಕಾರ್ಯಕ್ರಮ, ಪ್ರಚಾರ, ರ್ಯಾಲಿ ಮತ್ತು ಸೆಮಿನಾರ್​ ನಡೆಸಲಿದೆ.

ಆರಂಭಿಕ ಹಂತದಕಲ್ಲಿ ಗ್ಲುಕೋಮ ಸಮಸ್ಯೆ ಪತ್ತೆಯಾಗುವುದಿಲ್ಲ. ಈ ಹಿನ್ನೆಲೆ ಜನರಿಗೆ ಚಿಕಿತ್ಸೆ ಕೂಡ ವಿಳಂಬವಾಗುತ್ತದೆ. ವೈದ್ಯರು ಮತ್ತು ತಜ್ಞರು ಸಲಹೆಯಂತೆ ಕುಟುಂಬದ ಇತಿಹಾಸ ಹೊಂದಿರುವುವರು ರೆಗ್ಯೂಲರ್​ ಚೆಕ್​ಅಪ್​ಗಳಿಗೆ ಒಳಗಾಗಬೇಕು. ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವ ಮೂಲಕ ಈ ಗ್ಲುಕೋಮವನ್ನು ತಡೆಯಬಹುದು ಆಗಿದೆ.

ನಿಮ್ಮ ಜೀವನ ಶೈಲಿ ಮತ್ತು ಡಯಟ್​ ಬಗ್ಗೆ ಕಾಳಜಿವಹಿಸಿ. ಹೆಚ್ಚಿನ ಹಸಿರು ತರಕಾರಿ ಸೇವಿಸಿ

- ಹೆಚ್ಚುಕಾಲ ಮೊಬೈಲ್​, ಕಂಪ್ಯೂಟರ್​, ಟಿವಿ ಮುಂದೆ ಕೂರ ಬೇಡಿ

- 40ರಬಳಿಕ ಪ್ರತಿ ಎರಡು ವರ್ಷಕ್ಕೆ ಒಮ್ಮೆ ಕಣ್ಣಿನ ನಿಯಮಿತ ತಪಾಸಣೆಗೆ ಒಳಗಾಗಿ

- ಆರೋಗ್ಯ ಮತ್ತು ತೂಕದ ನಿಯಂತ್ರಣಕ್ಕೆ ನಿಯಮಿತ ವ್ಯಾಯಾಮ ಇರಲಿ.

- ಸೂರ್ಯನ ಪ್ರಕರತೆ ತಡೆಯಲು ಹೊರ ಹೋಗುವ ಮುನ್ನ ಸುರಕ್ಷತೆಗೆ ಸನ್​ಗ್ಲಾಸ್​ ಬಳಸಿ

- ಶುದ್ದ ನೀರಿನಲ್ಲಿ ಪ್ರತಿನಿತ್ಯ ಕಣ್ಣನ್ನು ತೊಳೆಯಿರಿ

- ಪದೇ ಪದೇ ತಲೆ ನೋವು, ಕಣ್ಣಿನಲ್ಲಿ ನೋವು, ಉರಿ ಕಾಣಿಸಿಕೊಂಡರೆ ವೈದ್ಯರ ಸಂಪರ್ಕಿಸಿ.

ಇದನ್ನೂ ಓದಿ: ಸ್ವತಂತ್ರ ಚಟುವಟಿಕೆಗಳ ಕೊರತೆಯೇ ಮಕ್ಕಳ ಖಿನ್ನತೆಗೆ ಕಾರಣ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.