ಹೈದರಾಬಾದ್: ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಿತೀಯ ತಿಥಿಯಂದು ದೇಶದಾದ್ಯಂತ ಭಾಯಿ ದೂಜ್ ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ತಮ್ಮ ಸಹೋದರರ ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರೆ, ಸಹೋದರರು ಜೀವನದುದ್ದಕ್ಕೂ ತಮ್ಮ ಸಹೋದರಿಯರನ್ನು ರಕ್ಷಿಸುವ ಭರವಸೆ ನೀಡುತ್ತಾರೆ.
ಹಿಂದಿನ ಕಾಲದಿಂದಲೂ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಇತ್ತೀಚೆಗೆ ಭಾಯಿ ದೂಜ್ ಆಚರಿಸಿಕೊಳ್ಳುತ್ತಿರುವ ಸಹೋದರ ಸಹೋದರಿಯರು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಹಳೇ ಕಾಲದ ಆಚರಣೆಗೆ ಆಧುನಿಕ ಟಚ್ ದೊರೆತಿದೆ. ಸಹೋದರ ಸಹೋದರಿಯರು ವಿಭಿನ್ನವಾಗಿ ತಮ್ಮ ಒಡಹುಟ್ಟಿದವರಿಗೆ ಉಡುಗೊರೆ ನೀಡಿ ಖುಷಿ ಪಡಿಸಬೇಕು ಎಂದು ಕೊಳ್ಳುತ್ತಾರೆ. ನೀವೂ ಭಾಯಿ ದೂಜ್ ಸಂದರ್ಭದಲ್ಲಿ ನಿಮ್ಮ ಒಡಹುಟ್ಟಿದವರನ್ನು ಅಚ್ಚರಿಗೊಳಿಸಲು ಯಾವ ರೀತಿಯ ಉಡುಗೊರೆಗಳನ್ನು ನೀಡಬಹುದು ಎನ್ನುವುದಕ್ಕೆ ನಮ್ಮಲ್ಲಿವೆ ಸಲಹೆಗಳು...
![Gift suggestions for Bhai Dooj](https://etvbharatimages.akamaized.net/etvbharat/prod-images/16718396_dcc.jpg)
ಆಭರಣ: ನಿಮ್ಮ ಸಹೋದರಿಗೆ ನೀವು ಆಭರಣಗಳನ್ನು ಉಡುಗೊರೆಯಾಗಿ ನೀಡಬಹುದು. ಭಾಯಿ ದೂಜ್ಗೆ ಮಾತ್ರವಲ್ಲ ಯಾವುದೇ ಹಬ್ಬಗಳ ಸಂದರ್ಭದಲ್ಲಿ ಆಭರಣವನ್ನು ಉಡುಗೊರೆಯಾಗಿ ನೀಡಬಹುದು. ಯಾಕೆಂದರೆ ಮಹಿಳೆಯರು ಆಭರಣಪ್ರಿಯರು. ಅದರಲ್ಲೂ ತಮ್ಮ ಸಹೋದರರು ನೀಡುವ ಆಭರಣ ಅವರಿಗೆ ಇನ್ನೂ ವಿಶೇಷವಾಗಿರುತ್ತದೆ. ಕಿವಿಯೋಲೆಗಳು, ನೆಕ್ಲೇಸ್ ಅಥವಾ ಉಂಗುರಗಳು ಸಹೋದರು ತಮ್ಮ ಸಹೋದರಿಯರಿಗೆ ಉಡುಗೊರೆಯಾಗಿ ನೀಡಲು ಉತ್ತಮ ಆಯ್ಕೆಗಳಾಗಿವೆ.
![Gift suggestions for Bhai Dooj](https://etvbharatimages.akamaized.net/etvbharat/prod-images/16718396_dccy.jpg)
ಬಟ್ಟೆ: ಸಹೋದರರು ಮತ್ತು ಸಹೋದರಿಯರು ಪರಸ್ಪರ ಉಡುಗೊರೆಯಾಗಿ ನೀಡಲು ಬಟ್ಟೆಗಳು ಕೂಡ ಉತ್ತಮ ಆಯ್ಕೆಯಾಗಿವೆ. ಏಕೆಂದರೆ ಬಟ್ಟೆಗಳಲ್ಲಿ ಆಯ್ಕೆಗೆ ಉತ್ತಮ ಅವಕಾಶವಿದೆ. ರಿಟರ್ನ್ ಉಡುಗೊರೆಯಾಗಿ ನೀಡಲು ಬಟ್ಟೆ ಕೂಡ ಉತ್ತಮ ಆಯ್ಕೆಯಾಗಿದೆ.
![Gift suggestions for Bhai Dooj](https://etvbharatimages.akamaized.net/etvbharat/prod-images/16718396_dcck.jpg)
ಕೈಗಡಿಯಾರಗಳು: ನಿಮ್ಮ ಸಹೋದರ ಅಥವಾ ಸಹೋದರಿಗೆ ನೀವು ಗಡಿಯಾರವನ್ನು ಉಡುಗೊರೆಯಾಗಿ ನೀಡಬಹುದು. ಈ ದಿನಗಳಲ್ಲಿ ಆಯ್ಕೆ ಮಾಡಲು ಅನೇಕ ಸೊಗಸಾದ ಮತ್ತು ವಿನ್ಯಾಸಕ, ಡಿಜಿಟಲ್ ಮತ್ತು ಸ್ಮಾರ್ಟ್ ವಾಚ್‌ಗಳು ಲಭ್ಯ ಇವೆ.
![Gift suggestions for Bhai Dooj](https://etvbharatimages.akamaized.net/etvbharat/prod-images/16718396_dcch.jpg)
ಸುಗಂಧ ದ್ರವ್ಯ: ಸುಗಂಧ ದ್ರವ್ಯಗಳು ಬಹಳ ಚಿಂತನಶೀಲ ಉಡುಗೊರೆಯಾಗಿದೆ. ನಿಮ್ಮ ಸಹೋದರ ಅಥವಾ ಸಹೋದರಿಯ ಮೆಚ್ಚಿನ ಬ್ರ್ಯಾಂಡ್‌ಗಳು ಯಾವುವು ಎಂಬುದನ್ನು ಲೆಕ್ಕಾಚಾರ ಮಾಡಿ ಮತ್ತು ಅವರಿಗೆ ಉಡುಗೊರೆಯಾಗಿ ನೀಡಲು ಅವರ ಇಷ್ಟದ ಸುಗಂಧ ದ್ರವ್ಯ ಒಂದನ್ನು ಆಯ್ಕೆಮಾಡಿ.
![Gift suggestions for Bhai Dooj](https://etvbharatimages.akamaized.net/etvbharat/prod-images/16718396_dccr.jpg)
ಪುಸ್ತಕಗಳು: ನಿಮ್ಮ ಸಹೋದರ ಅಥವಾ ಸಹೋದರಿ ಪುಸ್ತಕಗಳನ್ನು ಓದಲು ಇಷ್ಟಪಟ್ಟರೆ, ಅವರು ಇಷ್ಟಪಡುವ ಲೇಖಕರ ಪುಸ್ತಕವನ್ನು ಅಥವಾ ಅವರು ಓದಲು ಆಸಕ್ತಿ ಹೊಂದಿರಬಹುದು ಎಂದು ನೀವು ಭಾವಿಸುವ ಪುಸ್ತಕಗಳನ್ನು ಖರೀದಿಸಿ, ಉಡುಗೊರೆಯಾಗಿ ನೀಡಿ.
![Gift suggestions for Bhai Dooj](https://etvbharatimages.akamaized.net/etvbharat/prod-images/16718396_dcce.jpg)
ಬ್ಯಾಗ್‌ಗಳು: ಟ್ರಾವೆಲ್ ಬ್ಯಾಗ್‌ಗಳು, ಸೈಡ್ ಬ್ಯಾಗ್‌ಗಳು, ಕೈ ಚೀಲಗಳು, ಪರ್ಸ್ ಅಥವಾ ವ್ಯಾಲೆಟ್ ನಿಮ್ಮ ಸಹೋದರರು ಅಥವಾ ಸಹೋದರಿಗೆ ಉಡುಗೊರೆಯಾಗಿ ನೀಡಲು ಆಸಕ್ತಿದಾಯಕ ಆಯ್ಕೆಯಾಗಿದೆ.
![Gift suggestions for Bhai Dooj](https://etvbharatimages.akamaized.net/etvbharat/prod-images/16718396_dcckd.jpg)
ಸೌಂದರ್ಯವರ್ಧಕ ಉತ್ಪನ್ನಗಳು: ಹೆಚ್ಚಿನ ಹುಡುಗಿಯರು ಸೌಂದರ್ಯಪ್ರಜ್ಞೆಯುಳ್ಳವರೇ ಆಗಿರುತ್ತಾರೆ. ಕಾಸ್ಮೆಟಿಕ್ಸ್ ಇಷ್ಟ ಪಡದ ಹುಡುಗಿಯರ ಸಂಖ್ಯೆ ಬಹಳ ಕಡಿಮೆ ಎಂದೇ ಹೇಳಬಹುದು. ಹಾಗಾಗಿ ನಿಮ್ಮ ಸಹೋದರಿಗೆ ಸೌಂದರ್ಯವರ್ಧಕ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡುವುದರಿಂದ ಅವರು ಖಂಡಿತವಾಗಿಯೂ ಸಂತೋಷಪಡುತ್ತಾರೆ. ಬೇರೆ ಬೇರೆ ಉತ್ಪನ್ನಗಳನ್ನು ಖರೀದಿಸಿ, ಅವುಗಳನ್ನು ಒಂದು ಸೆಟ್ ಆಗಿ ಅಲಂಕರಿಸಿ ನಿಮ್ಮ ಸಹೋದರಿಯನ್ನು ಉಡುಗೊರೆಯಾಗಿ ನೀಡಬಹುದು.
ಸನ್ ಗ್ಲಾಸ್: ಸನ್ ಗ್ಲಾಸ್ ಉತ್ತಮ ಕೊಡುಗೆಯಾಗಿದೆ. ವಿಭಿನ್ನ ಡಿಸೈನರ್ ಬ್ರ್ಯಾಂಡ್‌ಗಳ ಸ್ಟೈಲಿಶ್ ಸನ್‌ಗ್ಲಾಸ್‌ಗಳು ನಿಮ್ಮ ಸಹೋದರಿ ಅಥವಾ ಸಹೋದರನಿಗೆ ಉಡುಗೊರೆಯಾಗಿ ನೀಡಲು ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ: ಕರ್ವಾ ಚೌತ್ಗೆ ವಿಶೇಷವಾದ ಭಕ್ಷ್ಯಗಳು ಇಲ್ಲಿವೆ..!