ಇದು ಹಬ್ಬದ ಸಮಯ. ಅದರಲ್ಲೂ ನವರಾತ್ರಿಯಂತಹ ಒಂಬತ್ತು ದಿನವೂ ದೇವರಿಗೆ ಪ್ರಸಾದ ಅರ್ಪಿಸುವುದು ಸಾಮಾನ್ಯ. ದೇವರಿಗೆ ಮಾಡುವ ಸಿಹಿ ಭಕ್ಷ್ಯಗಳನ್ನು ತುಪ್ಪದಿಂದಲೇ ತಯಾರಿಸುತ್ತೇವೆ. ತುಪ್ಪದ ಅರ್ಪಣೆ ಇಲ್ಲದ ಆಹಾರವನ್ನು ಅಪೂರ್ಣ ಎಂಬ ಭಾವ ಭಾರತೀಯರಲ್ಲಿ ಇದೆ. ಈ ತುಪ್ಪವು ಕೇವಲ ಆಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಅನೇಕ ಪ್ರಯೋಜನವನ್ನು ಹೊಂದಿದ್ದು, ಆರೋಗ್ಯಕ್ಕೂ ಲಾಭ ನೀಡುತ್ತದೆ. ಅಷ್ಟೇ ಅಲ್ಲದೇ, ಈ ತುಪ್ಪ ನಿಮ್ಮ ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಈ ತುಪ್ಪವನ್ನು ಕೊಂಚ ನಿಮ್ಮ ಮುಖಕ್ಕೆ ಹಚ್ಚುವುದರಲ್ಲೂ ತಪ್ಪಿಲ್ಲ. ಇದರಿಂದ ನಿಮ್ಮ ಮುಖದ ಕಾಂತಿ ವೃದ್ಧಿ ಆಗುವುದರಲ್ಲಿ ಸಂಶಯವಿಲ್ಲ. ಅಂತಹ ಕೆಲವು ಬ್ಯೂಟಿ ಟಿಪ್ಸ್ಗಳು ಇಲ್ಲಿವೆ.
ಒಂದು ಟೇಬಲ್ಸ್ಪೂನ್ ಕಡಲೆ ಹಿಟ್ಟಿಗೆ ಎರಡು ಸ್ಪೂನ್ ತುಪ್ಪ, ಸ್ವಲ್ಪ ನೀರು ಬೆರಿಸಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಐದು ನಿಮಿಷ ಬಿಡಬೇಕು. ಬಳಿಕ ಒದ್ದೆ ಕೈಗಳಿಂದ ಚೆನ್ನಾಗಿ ಮುಖವನ್ನು ಮಸಾಜ್ ಮಾಡಿ. ಈ ರೀತಿ ಮಾಡುವುದರಿಂದ ಮುಖದಲ್ಲಿರುವ ಸತ್ತ ಕೋಶಗಳು ನಾಶವಾಗಿ ಹೊಸ ಚೈತನ್ಯ ಬರಲಿದೆ. ಅಷ್ಟೆ ಏಕೆ ಮುಖವೂ ಕಾಂತಿಯುತವಾಗುತ್ತದೆ.
ಒಂದು ಟೇಬಲ್ ಸ್ಪೂನ್ ತುಪ್ಪ ಮತ್ತು ಜೇನು ತುಪ್ಪವನ್ನು ಚೆನ್ನಾಗಿ ಬೆರಸಿ, ಅದನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ಚೆನ್ನಾಗಿ ತೊಳೆಯಿರಿ. ಜೇನು ತುಪ್ಪದಲ್ಲಿನ ಆ್ಯಂಟಿ -ಬ್ಯಾಕ್ಟೀರಿಯಲ್ ಗುಣಗಳು ಮುಖದ ಊರಿಯುತ ಮತ್ತು ಮೊಡವೆಯನ್ನು ಕಡಿಮೆ ಮಾಡುತ್ತದೆ. ತುಪ್ಪ ಮುಖಕ್ಕೆ ಮಾಶ್ಚರೈಸರ್ ಒದಗಿಸಿ, ತ್ವಚೆಯನ್ನು ಆರೋಗ್ಯವಾಗಿ ಇರಿಸುತ್ತದೆ.
ಒಂದು ಸ್ಪೂನ್ ತುಪ್ಪಕ್ಕೆ ಚಿಟಿಕೆ ಅರಿಶಿಣ ಹಾಕಿ ಕಲಸಿ ಮುಖಕ್ಕೆ ಹಚ್ಚಿ. ನಂತರ ಐದು ನಿಮಿಷ ಮೃದುವಾಗಿ ಮಸಾಜ್ ಮಾಡಿ ಬಳಿಕ ಮುಖ ತೊಳೆಯಿರಿ. ಅರಿಶಿಣದಲ್ಲಿನ ಊರಿಯೂತ ವಿರೋಧಿ ಗುಣವು ಚರ್ಮಕ್ಕೆ ಕಾಂತಿ ನೀಡುತ್ತದೆ. ತುಪ್ಪ ಅಗತ್ಯವಾದ ಪೋಷಕಾಂಶವನ್ನು ನೀಡಿ, ಚರ್ಮವನ್ನು ತಾಜಾತನದಿಂದ ಇಡುತ್ತದೆ.
ಸೂರ್ಯನಿಗೆ ಒಡ್ಡಿಕೊಡ್ಡು ನಿಮ್ಮ ಚರ್ಮ ಟ್ಯಾನ್ ಆಗಿದ್ದು, ಸುಟ್ಟ ಅನುಭವ ನಿಮಗೆ ಆಗಿದ್ದರೆ, ಆಲೋವೆರಾ ಮತ್ತು ತುಪ್ಪವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಹತ್ತು ನಿಮಿಷಗಳ ಬಳಿಕ ಮುಖವನ್ನು ಚೆನ್ನಾಗಿ ತೊಳೆಯಿರಿ.
ಒಂದು ಸ್ಪೂನ್ ತುಪ್ಪವನ್ನು ಅರ್ಧ ಸ್ಪೂನ್ ಗಂಧದ ಪುಡಿಯಲ್ಲಿ ಬೆರಿಸಿ ಹಚ್ಚುವುದರಿಂದಲೂ ಮುಖವೂ ಕಾಂತಿಯುತವಾಗುತ್ತದೆ.
ಇದನ್ನೂ ಓದಿ: ಭಾರತೀಯರ ಆರೋಗ್ಯ ಗುರಿಗಳ ಮೇಲೆ ಕುಟುಂಬ, ಸ್ನೇಹಿತರ ಪ್ರಭಾವ ಹೆಚ್ಚು, ಸಾಮಾಜಿಕ ಮಾಧ್ಯಮವಲ್ಲ: ಸಮೀಕ್ಷೆ