ಲಂಡನ್: ಕೋವಿಡ್ ಸೋಂಕಿನ 51 ಹೊಸ ತಳಿಗಳನ್ನು ಜರ್ಮನ್ ವಿಜ್ಞಾನಿಗಳ ತಂಡ ಪತ್ತೆ ಮಾಡಿದ್ದು, ಇದರಲ್ಲಿ 28 ತಳಿಗಳು ಹೆಚ್ಚಿನ ಅಪಾಯದ ಮಟ್ಟ ಹೊಂದಿವೆ ಎಂದಿದ್ದಾರೆ.
ಕೋವಿಡ್ 19 ಸೋಂಕಿನಿಂದ ಗಂಭೀರ ಅಪಾಯಕ್ಕೆ ಒಳಗಾಗುವುದು ಅಥವಾ ಬಿಡುವುದಕ್ಕೆ ಸಂಬಂಧಿಸಿದಂತೆ ಅನೇಕ ಅಂಶಗಳು ನಿರ್ಣಾಯಕವಾಗಿದೆ. ವಯಸ್ಸು ಮತ್ತು ಈ ಹಿಂದಿನ ಪರಿಸ್ಥಿತಿ ಅಥವಾ ಈಗಿನ ಪರಿಸ್ಥಿತಿಗಳು ಕೂಡ ಅನುವಂಶಿಕ ಅಂಶದಲ್ಲಿ ಸೇರಿದೆ. ಸಾಂಕ್ರಾಮಿಕತೆ ಆರಂಭದಿಂದಲೂ ವಿಜ್ಞಾನಿಗಳು ಅನುವಂಶಿಕತೆ ಅಂಶ ಮತ್ತು ಕೋವಿಡ್ ಅಪಾಯದ ನಡುವಿನ ಸಂಬಂಧ ಕುರಿತು ತನಿಖೆ ನಡೆಸುತ್ತಿದ್ದಾರೆ.
ಅನುವಂಶಿಕತೆ ಅಪಾಯದ ಅಂಶದ ಬಗ್ಗೆ ತಿಳಿಯುವುದರಿಂದ ವಿಜ್ಞಾನಿಗಳಿಗೆ ಯಶಸ್ವಿ ಔಷಧಗಳ ಅಭಿವೃದ್ಧಿ ಮಾಡಲು ಮತ್ತು ಅಪಾಯದ ಅಂಶ ಅಂದಾಜಿಸಲು ಸಹಾಯ ಮಾಡುತ್ತದೆ ಎಂದು ಯುನಿವರ್ಸಿಟಿ ಹಾಸ್ಪಿಟಲ್ ಬೊನ್ನ್ನ ಇನ್ಸುಟಿಟ್ಯೂಟ್ ಆಫ್ ಹ್ಯೂಮನ್ ಜೆನೆಟಿಕ್ಸ್ನ ಡಾ. ಲುಡ್ವಿಗ್ ತಿಳಿಸಿದ್ದಾರೆ.
ಜರ್ನಲ್ ನೇಚರ್ನಲ್ಲಿ ಪ್ರಕಟವಾದ ಈ ಅಧ್ಯಯನದ ಫಲಿತಾಂಶಗಳು ಹೇಳುವಂತೆ, ಗಂಭೀರ ಅನಾರೋಗ್ಯ, ಆಸ್ಪತ್ರೆಗೆ ದಾಖಲೀಕರಣ ಮತ್ತು ಪ್ರತಿಯೊಬ್ಬರ ಸೋಂಕಿತರ ಸೋಂಕಿನ ದರದಲ್ಲಿ ಜೀನ್ಸ್ ಸಂಪರ್ಕ ಹೊಂದಿದೆ. ಜೀನ್ಸ್ಗಳ ಸಂಖ್ಯೆಗಳನ್ನು ಏರಿಕೆ ಮಾಡುವುದರೊಂದ ಸೋಂಕು ಪ್ರವೇಶದಲ್ಲಿನ ಜೀನ್ಸ್ಗಳ ಮಾರ್ಗವನ್ನು , ರೋಗ ನಿರೋಧಕ ವ್ಯವಸ್ಥೆ ಕುರಿತು ತಿಳಿಯಲು ವಿಜ್ಞಾನಿಗಳಿಗೆ ಸಹಾಯ ಆಗುತ್ತದೆ.
ಕೋವಿಡ್ 19 ಹೊಸ್ಟ್ ಜಿನೆಟಿಕ್ಸ್ ಇನ್ಷಿಯೇಟಿವ್ 3 ಮಿಲಿಯನ್ ನಿಯಂತ್ರಣ ಮತ್ತು 2,19,692 ಪ್ರಕರಣಗಳ ದೊಡ್ಡ ವಿಶ್ಲೇಷಣೆಯಲ್ಲಿ ಹೊಸ 51 ತಳಿಯ ಅಪಾಯದ ಅಂಶವನ್ನು ಪತ್ತೆ ಮಾಡಿದ್ದಾರೆ.
ಕೋವಿಡ್ 19 ಎಚ್ಜಿವಿ ದೊಡ್ಡ ಮಟ್ಟದಲ್ಲಿ ಕೋವಿಡ್ ಆರಂಭದ ಸಮುದಾಯದಲ್ಲಿ ಅಂತರಾಷ್ಟ್ರೀಯ ಪ್ರಾಜೆಕ್ಟ್ ಅನ್ನು ಪ್ರಾರಂಭ ಮಾಡಿತು. ಇದರ ಗುರಿ ಎಲ್ಲವನ್ನು ಒಟ್ಟಾರೆಯಾಗಿ ಅಧ್ಯಯನ ಮಾಡುವ ಬದಲಾಗಿ ವಿಶ್ವದೆಲ್ಲೆಡೆ ಪ್ರತ್ಯೇಕ ಅಧ್ಯಯನ ನಡೆಸುವ ಮೂಲಕ ದತ್ತಾಂಶವನ್ನು ಸಂಗ್ರಹ ಮಾಡುವುದಾಗಿದೆ. ಈ ಒಕ್ಕೂಟವು ಯಶಸ್ವಿಯಾಗಿ 51 ಅಪಾಯದ ಅಂಶವನ್ನು ಪತ್ತೆ ಮಾಡಿದೆ. ಇವುಗಳಲ್ಲಿ 28 ಹೊಸವು ಆಗಿದೆ ಎಂದು ಡಾ ಆಕ್ಸೆಲ್ ಸ್ಮಿತ್ ತಿಳಿಸಿದ್ದಾರೆ.
ಮುಂದಿನ ಹಂತದಲ್ಲಿ ವಿಜ್ಞಾನಿಗಳು ಸೂಕ್ಷ್ಮತೆ ಮತ್ತು ತೀವ್ರತೆಯ ಜೀನ್ಗಳ ವಿವಿಧ ಮಾರ್ಗಗಳ ತನಿಖೆ ನಡೆಸುವ ಮೂಲಕ ಕೋವಿಡ್ ಮೇಲೆ ಮಾನವ ಜಿನೆಟಿಕ್ ಅಂಶ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಒಳ ನೋಡ ನೀಡಿದೆ.
ಜರ್ನಲ್ ನೇಚರ್ನಲ್ಲಿ ಪ್ರಕಟವಾದ ಪ್ರತ್ಯೇಕ ಅಧ್ಯಯನದಲ್ಲಿ ಕ್ಯಾಲಿಫೋರ್ನಿಯಾ- ಸ್ಯಾನ್ ಪ್ರಾನ್ಸಿಸ್ಕೋ ಸಂಶೋಧಕರು ಪತ್ತೆ ಮಾಡಿದಂತೆ ಹ್ಯೂಮನ್ ಲ್ಯುಕೋಸೈಟ್ ಆ್ಯಂಟಿಜೆನ್ ರೂಪಾಂತರವನ್ನು ಪತ್ತೆ ಮಾಡಿದ್ದಾರೆ. ಇದು ಸಾರ್ಸ್ ಕೋವ್ -2ನಲ್ಲಿ ವೈರಸ್ ಕೊಲ್ಲುವ ಟಿ ಕೋಶವನ್ನು ಗುರುತಿಸಿದೆ.
ಇನ್ನು ಅನೇಕ ಮಂದಿಗೆ ಮಾರಾಣಾಂತಿಕ ವೈರಸ್ಗಳು ಹೊಂದಿರುವ ಬಗ್ಗೆ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಪತ್ತೆಯಾದರೂ ಅವರು ಕೋವಿಡ್ ಸಾಮಾನ್ಯ ಲಕ್ಷಣ ಹೊಂದಿಲ್ಲ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಕೋವಿಡ್ ಸೋಂಕು ಏರಿಕೆ; ಹೊಸ ಲಸಿಕೆಗೆ ಎಫ್ಡಿಎ ಅನುಮತಿ