ಪ್ರತಿ ಹಣ್ಣುಗಳು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಇವುಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅತಿಮುಖ್ಯ. ಆದರೆ, ಅನೇಕ ಬಾರಿ ಬಳಸಿ ಬಿಸಾಡುವ ಹಣ್ಣುಗಳಲ್ಲಿನ ಸಿಪ್ಪೆಗಳು ಕೂಡ ಅದರಷ್ಟೇ ಪೋಷಕಾಂಶಗಳನ್ನು ಹೊಂದಿರುತ್ತದೆ ಎಂಬುದನ್ನು ನಾವು ಮರೆಯುತ್ತೇವೆ. ಅದರಲ್ಲೂ ತ್ವಚೆಯ ಆರೈಕೆಯಲ್ಲಿ ಇದು ಮಹತ್ವದ ಪಾತ್ರವನ್ನು ಹೊಂದಿದೆ. ಈ ಸಿಪ್ಪೆಗಳು ಚರ್ಮಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡಿ, ಸೌಂದರ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಎಂಬುದನ್ನು ಮರೆಯಬಾರದು. ಹಾಗಾದರೆ ಯಾವೆಲ್ಲ ಹಣ್ಣಿನ ಸಿ್ಪೆಯಿಂದ ಏನೆಲ್ಲ ಅನುಕೂಲ ಆಗಲಿದೆ ಎನ್ನುವುದನ್ನು ನೋಡುವುದಾದರೆ,
ಕಿತ್ತಳೆ: ಇದರಲ್ಲಿ ವಿಟಮಿನ್ ಸಿ ಮತ್ತು ನೈಸರ್ಗಿಕ ಎಣ್ಣೆ ಅಂಶ ಇದೆ. ಕಿತ್ತಳೆಯ ಸಿಪ್ಪೆ ಸೌಂದರ್ಯಕ್ಕೆ ಅತ್ಯುತ್ತಮ ಆಯ್ಕೆ ಆಗಿದೆ. ಇನ್ನು ಒಣ ಚರ್ಮದ ಸಮಸ್ಯೆಯನ್ನು ಎದುರಿಸುತ್ತಿರುವವರು ಕಿತ್ತಳೆಯ ಸಿಪ್ಪೆಯನ್ನು ಒಣಗಿಸಿ, ಚೆನ್ನಾಗಿ ಪುಡಿ ಮಾಡಿ, ಆ ಪೌಡರ್ ಅನ್ನು ಮೊಸರಿನೊಂದಿಗೆ ಬೆರಸಿ, ಫೇಸ್ ಮಾಸ್ಕ್ ಬಳಕೆ ಮಾಡುವುದರಿಂದ ತ್ವಚೆಯ ಆರೈಕೆ ಮಾಡುತ್ತದೆ. ಇದು ಮೊಡವೆಯನ್ನು ಕಡಿಮೆ ಮಾಡುತ್ತದೆ.
ನಿಂಬೆ: ಸಿಟ್ರಿಕ್ ಆಮ್ಲವು ಚರ್ಮದ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಕಿತ್ತಳೆ ಸಿಪ್ಪೆಯ ಪುಡಿಯನ್ನು ಜೇನು ತುಪ್ಪ ಬೆರಸಿ ಫೇಸ್ಪ್ಯಾಕ್ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚಿದೆ. ಇದರಿಂದ ಮೊಡವೆ ಕಡಿಮೆ ಮಾಡುತ್ತದೆ.
ಬಾಳೆಹಣ್ಣು: ಇದರಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಹಾಗೂ ಆ್ಯಂಟಿ ಆ್ಯಕ್ಸಿಡೆಂಟ್ ಅಂಶ ಇದೆ. ಬಾಳೆಹಣ್ಣಿನ ಸಿಪ್ಪೆಯನ್ನು ಚರ್ಮಕ್ಕೆ ಚೆನ್ನಾಗಿ ಹಚ್ಚುವುದರಿಂದ ಇದು ಮಾಶ್ಚರೈಸರ್ ನೀಡುತ್ತದೆ.
ಪಪ್ಪಾಯ: ಪಪ್ಪಾಯಿ ಹಣ್ಣಿನ ಸಿಪ್ಪೆಯ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮವೂ ಹೊಳೆಯುತ್ತದೆ.
ದ್ರಾಕ್ಷಿ: ಮುಖ ತಾಜಾತನದಿಂದ ಕೂಡಿರಲು ಒಣ ತ್ವಚೆಯ ಮಂದಿ ಇದನ್ನು ಬಳಕೆ ಮಾಡಬಹುದು. ದ್ರಾಕ್ಷಿ ರಸಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಬೆರಸುವುದರಿಂದ ಮುಖದ ಕಾಂತಿ ಪಡೆಯಬಹುದು. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ರ್ಯಾಂಡಿಕಲ್ಸ್ ವಿರುದ್ದ ಹೋರಾಡಿ, ಕೊಲೆಜನ್ ಉತ್ಪಾದನೆಗೆ ಪ್ರೋತ್ಸಾಹಿಸುತ್ತದೆ.
ಕಿವಿ: ವಿಟಮಿನ್ ಇ ಸಮೃದ್ಧವಾಗಿರುವ ಈ ಕಿವಿ ಹಣ್ಣನ್ನು ಮೊಸರಿನೊಂದಿಗೆ ಬೆರೆಸಿ ಫೇಸ್ಪ್ಯಾಜ್ ಹಾಕಿ ಇದರಿಂದ ವಯಸ್ಸಾಗುವಿಕೆಯನ್ನು ತಡೆಯಬಹುದು
ಅನಾನಸ್: ಅನಾನಸ್ನಲ್ಲಿ ಬ್ರೊಮೆಲೈನ್ ಅಂಶ ಇದ್ದು, ಇದರ ಸಿಪ್ಪೆಯ ಪುಡಿಯನ್ನು ಚರ್ಮಕ್ಕೆ ಹಚ್ಚುವುದರಿಂದ ಸತ್ತ ಚರ್ಮ ಕೋಶವನ್ನು ತೆಗೆದು ಹಾಕಬಹುದಾಗಿದೆ. ಇದರಿಂದ ತ್ವಚೆ ಆಳದಿಂದಲೇ ಹೊಳೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಚರ್ಮದ ಆರೈಕೆಯಲ್ಲಿ ಮೋಡಿ ಮಾಡುವ ಡ್ರ್ಯಾಗನ್ ಫ್ರುಟ್; ಒಮ್ಮೆ ಬಳಸಿ ಇದರ ಫೇಸ್ ಪ್ಯಾಕ್...