ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 573 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ ದೇಶದಲ್ಲಿ ಸಕ್ರಿಯವಾಗಿರುವ ಕೋವಿಡ್ ಪ್ರಕರಣಗಳ ಸಂಖ್ಯೆ 4,565 ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೋವಿಡ್ನಿಂದ ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಎರಡು ಸಾವು ಸಂಭವಿಸಿವೆ. ಕರ್ನಾಟಕ ಮತ್ತು ಹರಿಯಾಣದಲ್ಲಿ ಈ ಸಾವು ದಾಖಲಾಗಿದೆ ಎಂದು ಸಚಿವಾಲಯದ ದತ್ತಾಂಶ ಇಂದು ಬೆಳಗ್ಗೆ ಬಿಡುಗಡೆ ಮಾಡಿದ ಮಾಹಿತಿ ನೀಡಿದೆ. ಡಿಸೆಂಬರ್ 5ಕ್ಕೆ ಮುಂಚೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಎರಡು ಅಂಕಿಗಳಿದ್ದು, ಆದರೆ, ಹೊಸ ಸೋಂಕಿನ ಉಗಮದ ಬಳಿಕ ಈ ಸಂಖ್ಯೆ ಹೆಚ್ಚಳ ಕಂಡಿದೆ.
2020ರ ಕೋವಿಡ್ ಪತ್ತೆಯಾದ ಬಳಿಕ ಅಂದರೆ ಕಳೆದ ನಾಲ್ಕು ವರ್ಷದಿಂದ ಇಲ್ಲಿಯವರೆಗೆ 4.5 ಕೋಟಿ ಪ್ರಕರಣಗಳು ಕಂಡು ಬಂದಿದ್ದು, 5.3 ಲಕ್ಷ ಸಾವುಗಳ ಬಗ್ಗೆ ವರದಿಯಾಗಿದೆ. ಕೋವಿಡ್ ಲಸಿಕೆಯನ್ನು ದೇಶದಲ್ಲಿ 220.67 ಕೋಟಿ ಡೋಸೇಜ್ ನೀಡಲಾಗಿದೆ ಎಂದು ಇದೇ ವೇಳೆ ಸಚಿವಾಲಯ ಮಾಹಿತಿ ನೀಡಿದ.
ಕೋವಿಡ್ 19 ಉಪ ತಳಿ ಜೆಎನ್.1 ಪ್ರಕರಣಗಳು ಇಲ್ಲಿಯವರೆಗೆ 263 ಪ್ರಕರಣಗಳು ಕಂಡು ಬಂದಿದ್ದು, ಇದರಲ್ಲಿ ಅರ್ಧದಷ್ಟು ಪ್ರಕರಣ ಕೇರಳದಲ್ಲಿ ದಾಖಲಾಗಿದೆ ಎಂದು ಇನ್ಸಾಕೊಗ್ ದತ್ತಾಂಶ ತಿಳಿಸಿದೆ. ಇನ್ನು ಈ ಜೆಎನ್.1 ಉಪ ತಳಿ ದೇಶದ 10 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಕಂಡು ಬಂದಿದೆ.
ಭಾರತದ ಸಾರ್ಸ್-ಕೋವ್-2 ಜೆನೊಮಿಕ್ಸ್ ಕಾನ್ಸೊರ್ಟಿಯಮ್ (ಐಎನ್ಎಸ್ಸಿಇಜಿ) ಪ್ರಕಾರ, ಕೇರಳದಲ್ಲಿ 133, ಗೋವಾದಲ್ಲಿ 51, ಗುಜರಾತ್ನಲ್ಲಿ 34, ದೆಹಲಿಯಲ್ಲಿ 16, ಕರ್ನಾಟಕದಲ್ಲಿ 8, ಮಹಾರಾಷ್ಟ್ರದಲ್ಲಿ 9, ರಾಜಸ್ಥಾನದಲ್ಲಿ 5, ತಮಿಳುನಾಡಿನಲ್ಲಿ 4, ತೆಲಂಗಾಣದಲ್ಲಿ 2 ಮತ್ತು ಒಡಿಶಾದಲ್ಲಿ 1, ಜೆಎನ್.1 ಪ್ರಕರಣಗಳು ದಾಖಲಾಗಿವೆ. ಕೋವಿಡ್ 19 ಉಪ ತಳಿ ಆಗಿರುವ ಜೆಎನ್.1 ಭಾರತದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಡಿಸೆಂಬರ್ 8ರಂದು ಪತ್ತೆಯಾಗಿತ್ತು.
ಜೆಎನ್1 ಎಂಬುದು ಬಿಎ.2.68 ಓಮಿಕ್ರಾನ್ ತಳಿಯ ವಂಶಾವಳಿಯಾಗಿದ್ದು, ಮೊದಲ ಬಾರಿಗೆ ಕಳೆದ ವರ್ಷದ ಆಗಸ್ಟ್ನಲ್ಲಿ ಲಕ್ಸಂಬರ್ಗ್ನಲ್ಲಿ ಕಂಡು ಬಂದಿತ್ತು. ಬಿಎ.2.86 ಎಂಬುದನ್ನು ಪಿರೋಲಾ ತಳಿಯಿಂದಲೂ ಪರಿಚಿತವಾಗಿದ್ದು, ಇದು ಮೊದಲಿಗೆ ಜುಲೈನಲ್ಲಿ ಡೆನ್ಮಾರ್ಕ್ನಲ್ಲಿ ಪತ್ತೆಯಾಗಿತ್ತು. (ಐಎಎನ್ಎಸ್)
ಇದನ್ನೂ ಓದಿ: ದೇಶದಲ್ಲಿ ಹರಡುತ್ತಿರುವ ಜೆಎನ್.1 ತಳಿ; ಬೂಸ್ಟರ್ ಲಸಿಕೆ ಅಗತ್ಯವಿಲ್ಲ ಎಂದ ತಜ್ಞರು