ಬೆಂಗಳೂರು: ಭಾರತೀಯ ಆಹಾರ ಪದ್ಧತಿಯಲ್ಲಿ ಕೆಲವು ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದು ಹಾನಿಕಾರಕ ಪರಿಣಾಮ ಬೀರುತ್ತದೆ. ಇದೆ ಕಾರಣಕ್ಕೆ ಕೆಲವು ಆಹಾರಗಳನ್ನು ತಿಂದ ಬಳಿಕ ನೀರು ಕುಡಿಯಬಾರದು. ಇಂತಹ ಸಮಯದಲ್ಲಿ ಮೊಸರಿನಿಂದ ದೂರ ಇರಬೇಕು ಎಂಬ ಮಾತನ್ನು ಕೇಳಿರುತ್ತೇವೆ.
ಆಯುರ್ವೇದದ ಪ್ರಕಾರ, ನಿರ್ದಿಷ್ಟ ಆಹಾರವು ಅದರ ನಿಯಮಗಳ ಪ್ರಕಾರ ಮತ್ತು ಸರಿಯಾದ ಸಂಯೋಜನೆಯಲ್ಲಿ ಸೇವಿಸಿದಾಗ ಮಾತ್ರ ಅದು ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಆಯುರ್ವೇದ ಅನುಸಾರ ಕೆಲವು ಹೊಂದಾಣಿಕೆಯಾಗದ ಆಹಾರಗಳು ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆಹಾರಗಳ ಸ್ವಭಾವ, ಗುಣಮಟ್ಟ, ಋತುಮಾನ ಮತ್ತು ಇತರೆ ಅಂಶಗಳಿಂದಾಗಿ ಅವುಗಳನ್ನು ಜೊತೆಯಾಗಿ ಸೇವಿಸಬಾರದು ಎನ್ನಲಾಗುತ್ತದೆ.
ಈ ಕುರಿತು ತಿಳಿಸಿರುವ ಹರಿದ್ವಾರದ ನಾಟಿ ವೈದ್ಯ ಸುರೇಂದ್ರ ವೈದ್ಯ, ದೇಹದ ಸ್ವಭಾವ ಮತ್ತು ಹವಾಮಾನ, ಪರಿಸರಗಳು ಜೊತೆಗೆ ಆಹಾರದ ಪರಿಣಾಮದಿಂದಾಗಿ ಈ ರೀತಿಯ ಹಲವು ನಿಯಮಗಳಿವೆ. ಸರಿಯಾದ ಆಹಾರದ ಆಯ್ಕೆ ಪೋಷಣೆ ಮತ್ತು ಪ್ರಯೋಜನವನ್ನು ನೀಡುತ್ತದೆ. ಇವು ಆರೋಗ್ಯವಾಗಿದ್ದು, ಯಾವುದೇ ರೋಗಕ್ಕೆ ಕಾರಣವಾಗುವುದಿಲ್ಲ ಎಂಬ ಉದ್ದೇಶದಿಂದ ಈ ನಿಯಮ ಮಾಡಲಾಗಿದೆ.
ಆರೋಗ್ಯಕ್ಕೆ ಹಾನಿ: ಆಯುರ್ವೇದದ ಪ್ರಕಾರ. ಹೊಂದಾಣಿಕೆಯಾಗದ ಆಹಾರ ಸೇವಿಸುವುದರಿಂದ ದೇಹಕ್ಕೆ ಹೆಚ್ಚು ಹಾನಿ. ಆಯುರ್ವೇದದಲ್ಲಿ ಪ್ರತಿಯೊಂದು ಅಹಾರದ ಸ್ವರೂಪ, ಗುಣಗಳು, ದೋಷಗಳು ಮತ್ತು ಪರಿಣಾಮಗಳನ್ನು ವಿಭಿನ್ನವಾಗಿದೆ ಎಂದು ಸುರೇಂದ್ರ ತಿಳಿಸಿದ್ದಾರೆ. ಆಯಾ ಪ್ರದೇಶ, ಋತುಮಾನ ಮತ್ತು ದೇಹದ ಸ್ವಭಾವದ ಅನುಸಾರ ಆಹಾರ ಕ್ರಮ ಅನುಸರಿಸಲಾಗುವುದು.
ಕೆಲವು ಆಹಾರಗಳನ್ನು ಹಾಗೇಯೇ ಅಥವಾ ಇತರೆ ಪದಾರ್ಥಗಳೊಂದಿಗೆ ಸೇವಿಸಿದರೆ ಅದರ ಪ್ರಯೋಜನ ಪಡೆಯಬಹುದು. ಇವು ಪರಸ್ಪರ ಪೌಷ್ಠಿಕಾಂಶದ ಮೌಲ್ಯವನ್ನು ಹೆಚ್ಚಿಸುತ್ತದೆ. ದೇಹಕ್ಕೆ ಪ್ರಯೋಜನ ನೀಡುತ್ತದೆ. ಕೆಲವು ಆಹಾರಗಳ ಸಂಯೋಜನೆ ದೇಹಕ್ಕೆ ಅಡ್ಡ ಪರಿಣಾಮ ಬೀರುವ ಜೊತೆಗೆ ವಿಷಕಾರಿಯೂ ಆಗಬಹುದು. ಇದರಿಂದ ದೇಹದ ಚಯಪಚಯನಕ್ಕೂ ಅಡ್ಡಯಾಗಿ, ದೇಹದ ಶಕ್ತಿಯಲ್ಲಿ ಅಸಮತೋನಕ್ಕೆ ಕಾರಣವಾಗಬಹುದು.
ಸಂಪ್ರಾದಾಯಿಕವಾಗಿ ಹೆಚ್ಚಿನ ಆಹಾರ ಪದಾರ್ಥಗಳನ್ನು ಅವುಗಳ ಸರಿಯಾದ ಹೊಂದಾಣಿಒಕೆ ಆಧಾರದ ಮೇಲೆ ಬೇಯಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಪಾಕಪದ್ದತಿಯಲ್ಲಿ ಪ್ರಯೋಗ ಹೆಚ್ಚುತ್ತಿದ್ದುಮ ಬೇರೆ ಬೇರೆ ರುಚಿಯನ್ನು ಬೆರೆಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಆರೋಗ್ಯಕ್ಕಿಂತ ಹೆಚ್ಚಾಗಿ ರುಚಿಗೆ ಒತ್ತು ನೀಡಲಾಗಿದೆ. ಹಲವು ಬಾರಿ ಸಂಯೋಜನೆ ಆಹಾರದ ಹೆಸರಿನ್ಲ್ಲಿ ವಿರುದ್ಧ ಸ್ವಭಾವದ ಆಹಾರ ಬಳಕೆ ಮಾಡಲಾಗುತ್ತಿದೆ.
ಇನ್ನು ಯಾವ ಆಹಾರ ಪದಾರ್ಥಗಳನ್ನು ಯಾವುದರೊಂದಿಗೆ ಬೆರೆಸ ಬಾರದು ಎಂಬ ಮಾಹಿತಿ ಇಲ್ಲಿದೆ.
- ರೈತಾ ಮತ್ತು ಖೀರ್ ಒಟ್ಟಿಗೆ ಸೇವನೆ
- ಹಾಲಿನ ಜೊತೆಗೆ ಮೊಸರು, ಮೀನು, ಮೂಲಂಗಿ, ನಿಂಬೆ, ಹಸಿ ಸಲಾಡ್, ಹುಣಸೆಹಣ್ಣು, ಕಲ್ಲಂಗಡಿ, ಬಳ್ಳಿ ಹಣ್ಣು, ಹಣ್ಣುಗಳು, ದಾಳಿಂಬೆ ಅಥವಾ ಉರಾದ್ ಇತ್ಯಾದಿಗಳನ್ನು ತಿನ್ನುವುದು.
- ಮೊಸರಿನೊಂದಿಗೆ ಕಿತ್ತಳೆ, ಅನಾನಸ್ ಇತ್ಯಾದಿಗಳನ್ನು ತಿನ್ನುವುದು.
- ಹಲಸಿನ ಹಣ್ಣು, ಮೊಸರು, ನಿಂಬೆಹಣ್ಣು, ಹುಳಿ ಹಣ್ಣುಗಳು, ಸಾಟ್ಟು ಮತ್ತು ಮದ್ಯವನ್ನು ಖೀರ್ ಜೊತೆ ತಿನ್ನುವುದು.
- ಜೇನುತುಪ್ಪ, ದ್ರಾಕ್ಷಿ, ಮೂಲಂಗಿ ಮತ್ತು ಬಿಸಿನೀರಿನೊಂದಿಗೆ ಎಣ್ಣೆಯನ್ನು ಸೇವಿಸುವುದು.
- ತುಪ್ಪ, ಎಣ್ಣೆ, ಕಲ್ಲಂಗಡಿ, ನೆಲಗಡಲೆ, ಪೇರಲ, ಸೌತೆಕಾಯಿ, ಪೈನ್ ನಟ್ಸ್ ಇತ್ಯಾದಿಗಳನ್ನು ತಣ್ಣೀರಿನಿಂದ ಸೇವಿಸುವುದು.
- ಕಲ್ಲಂಗಡಿ ಜೊತೆಗೆ ಬೆಳ್ಳುಳ್ಳಿ, ಮೊಸರು, ಹಾಲು, ಮೂಲಂಗಿ ಎಲೆಗಳು, ನೀರು ಇತ್ಯಾದಿಗಳನ್ನು ಸೇವಿಸುವುದು.
- ಅನ್ನದೊಂದಿಗೆ ವಿನೆಗರ್.
- ಉರಡ್ ದಾಲ್ ಜೊತೆ ಮೂಲಂಗಿ
ಇಂತಹ ಮಿಶ್ರಣದ ಆಹಾರಗಳು ದುರ್ಬಲ ಆರೋಗ್ಯ ಹೊಂದಿರುವ ಜನರಲ್ಲಿ ವಾತ, ಪಿತ್ತ ಸಮಸ್ಯೆ ಕಾರಣವಾಗುತ್ತದೆ. ಈ ಹಿನ್ನಲೆ ಆಹಾರ ಸೇವನೆಗೂ ಮುನ್ನ ಈ ವಿಷಯ ಗಮನದಲ್ಲಿರಬೇಕು.
ಇದನ್ನೂ ಓದಿ: ನಿತ್ಯ ಹಿಡಿಯಷ್ಟು ವಾಲ್ನಟ್ ಸೇವನೆಯಿಂದ ಹದಿಹರೆಯದವರಲ್ಲಿ ಏಕಾಗ್ರತೆ ಹೆಚ್ಚಳ