ETV Bharat / sukhibhava

ನೀರಿನಿಂದ ಹರಡುವ ರೋಗದಿಂದ ತಪ್ಪಿಸಿಕೊಳ್ಳಲು ಈ 7 ಸೂತ್ರ ಅನುಸರಿಸಿ - ಹಾನಿಕಾರಕ ರೋಗಗಳನ್ನು

ನೀರಿನಿಂದ ಹರಡುವ ರೋಗಗಳು ಕೆಲವು ವೇಳೆ ಮಾರಾಣಾಂತಿಕವಾಗಿರುತ್ತದೆ. ಈ ಹಿನ್ನೆಯಲ್ಲಿ ಈ ಕುರಿತಂತೆ ಜಾಗೃತಿವಹಿಸುವುದು ತುಂಬಾ ಅವಶ್ಯಕವಾಗಿದೆ.

http://10.10.50.85:6060/reg-lowres/21-August-2023/water-fast_2108newsroom_1692590928_849.jpg

author img

By

Published : Aug 21, 2023, 10:39 AM IST

ಹೈದರಾಬಾದ್: ಕಲುಷಿತ ನೀರನ್ನು ಸೇವಿಸಿದಾಗ ಅಥವಾ ಇದರ ಸಂಪರ್ಕಕ್ಕೆ ಒಳಗಾದಾಗ ನೀರಿನಿಂದ ಹರಡುವ ರೋಗಗಳಿಗೆ ತುತ್ತಾಗುತ್ತೇವೆ. ಇದು ಹಾನಿಕಾರಕ ರೋಗಗಳನ್ನು ಹರಡುತ್ತದೆ. ಕಲುಷಿತ ನೀರಿನ ಸೇವನೆ ಅಥವಾ ಇಂತಹ ನೀರಿನಿಂದ ಅಡುಗೆ ತಯಾರಿಸುವುದು, ಶುಚಿಗೊಳಿಸುವುದು ಅಥವಾ ಇನ್ನಿತರ ಚಟುವಟಿಕೆಯಲ್ಲಿ ಬಳಕೆ ಮಾಡಿದಾಗ ಈ ನೀರಿನಿಂದ ಹರಡುವ ರೋಗಗಳಿಗೆ ತುತ್ತಾಗುತ್ತೇವೆ. ನೀರಿನಿಂದ ಹರಡುವ ಪ್ರಮುಖ ರೋಗಗಳು ಎಂದರೆ ಕಲಾರ, ಅತಿಸಾರ, ಹೆಪಟೈಟಿಸ್​ ಎ, ಗಿಯಾರ್ಡಿಯಾಸಿಸ್​​.

ನೀರಿನಿಂದ ಹರಡುವ ರೋಗಗಳು ವಿವಿಧ ರೀತಿಯಲ್ಲಿದೆ. ಕೆಲವು ಸೌಮ್ಯ ಸ್ವಭಾವದಿಂದ ಕೂಡಿದ್ದು, ಕೆಲವು ಅಂಗಾಂಗಗಳ ಹಾನಿಯವರೆಗೆ ಪರಿಣಾಮವನ್ನು ಬೀರುತ್ತದೆ. ಇಂತಹ ನೀರಿನ ಮೂಲಗಳ ರೋಗಗಳಿಂದ ತಪ್ಪಿಸಿಕೊಳ್ಳಬೇಕು ಎಂದರೆ ಅದಕ್ಕೆ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ. ಇದರಿಂದ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.

ಶುದ್ದೀಕರಿಸಿದ ನೀರು: ನೀರಿನ ಸೇವನೆ ವಿಚಾರದಲ್ಲಿ ಸದಾ ಜಾಗ್ರತೆ ಅವಶ್ಯ. ಯಾವಾಗರೂ ಸುರಕ್ಷಿತ ನೀರಿನ ಸೇವನೆ ಮಾಡಬೇಕು. ಅದರಲ್ಲೂ ಶುದ್ಧೀಕರಿಸಿದ ಅಥವಾ ಕುದಿಸಿದ ನೀರಿನ ಸೇವನೆ ಉತ್ತಮ.

ಕೈ ಶುದ್ದತೆ ಕಾಯ್ದುಕೊಳ್ಳಿ: ನೀರಿನ ಶುದ್ದತೆ ಜೊತೆಗೆ ಕೈಗಳ ಶುದ್ದತೆಯೂ ಅತಿ ಮುಖ್ಯ. ಕೈಗಳನ್ನು ಕನಿಷ್ಠ 30 ಸೆಕೆಂಡ್​ ಕಾಲ ಸೋಪ್​ ಮತ್ತು ಶುದ್ದ ನೀರಿನಿಂದ ಸ್ವಚ್ಛ ಮಾಡಬೇಕು. ವಿಶೇಷವಾಗಿ ಏನಾದರೂ ಸೇವನೆ ಮಾಡುವಾಗ, ಕುಡಿಯುವ ಮುನ್ನ, ಹಾಗೆಯೇ ಶೌಚಾಲಯ ಬಳಕೆ ಮಾಡಿದ ನಂತರ ಕೈ ತೊಳೆಯುವುದನ್ನು ಮರೆಯಬಾರದು.

ಸ್ನಾನದ ಶುಚಿತ್ವ: ಹಾನಿಕಾರಕ ಜೀವಜಂತುಗಳಿರುವ ನೀರುಗಳಿಂದ ಸ್ನಾನ ಮಾಡುವುದರಿಂದಲೂ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಲುಷಿತ ನೀರಿನಿಂದ ಸ್ನಾನ ಮಾಡಿದಾಗ ಸೂಕ್ಷ್ಮಣು ಜೀವಿಗಳು ಬಾಯಿ, ಮೂಗು ಅಥವಾ ಕಣ್ಣಿನ ಮೂಲಕ ದೇಹವನ್ನು ಸೇರುವ ಸಾಧ್ಯತೆ ಇದೆ.

ಆಹಾರ ನಿರ್ವಹಣೆ: ತರಕಾರಿ, ಹಣ್ಣು ಅಥವಾ ಇನ್ನಿತರ ತಿನ್ನುವ ವಸ್ತುಗಳನ್ನು ಬಿಸಿ ನೀರಿನಿಂದ ತೊಳೆಯುವುದರಿಂದಲೂ ಶುಚಿತ್ವ ಕಾಪಾಡಬಹುದು. ಜೊತೆ ಆಹಾರವನ್ನು ಸದಾ ಶುದ್ದ ನೀರಿನಲ್ಲಿ ಬೇಯಿಸಬೆಕು.

ನೈರ್ಮಲ್ಯಕ್ಕೆ ಆದ್ಯತೆ: ತ್ಯಾಜ್ಯದ ಸರಿಯಾದ ವಿಲೇವಾರಿ ಮತ್ತು ನೈರ್ಮಲ್ಯದ ಅಭ್ಯಾಸಗಳು ನೀರಿನ ಮಾಲಿನ್ಯವನ್ನು ತಡೆಯುತ್ತದೆ.

ಜಾಗೃತೆ: ಸುತ್ತಮುತ್ತಲ ನೀರಿನ ಗುಣಮಟ್ಟ ತಿಳಿಯುವುದು . ಈ ಬಗ್ಗೆ ಕಾಳಜಿವಹಿಸುವುದರಿಂದಲೂ ನೀರಿನ ರೋಗಗಳಿಂದ ದೂರ ಇರಬಹುದು.

ಕುದಿಸಿದ ನೀರಿನ ಸೇವನೆ: ಕೊಳಾಯಿ ಅಥವಾ ಇನ್ನಿತರ ಮೂಲಗಳಿಂದ ನೀರನ್ನು ಪಡೆಯುತ್ತಿದ್ದರೆ, ಇದನ್ನು ಸೇವಿಸುವ ಮುನ್ನ ಅದರ ಹಾನಿಕಾರಕಗಳು ಯಾವುದೆ ಸಮಸ್ಯೆ ಆಗದಂತೆ ತಡೆಯಲು ಅಂತ ನೀರನ್ನು ಕುದಿಸಿ ಸೇವಿಸುವುದು ಉತ್ತಮ.

ಕಚ್ಚಾ ಆಹಾರ ಮತ್ತು ಐಸ್​ ತಪ್ಪಿಸಿ: ಪ್ರಯಾಣದ ವೇಳೆ ಅಥವಾ ಹೊರಗಡೆ ಸಂದರ್ಭದಲ್ಲಿ ಐಸ್​​ ಸೇವನೆ, ಬೇಯಿಸದ ಸಲಾಡ್​, ಸಿಪ್ಪೆ ತೆಗೆದ ಹಣ್ಣುಗಳನ್ನು ಸೇವಿಸುವುದನ್ನು ತಪ್ಪಿಸಬೇಕು.

ನೀರಿನಿಂದ ಹರಡುವ ರೋಗಗಳಿಂದ ತಪ್ಪಿಸಿಕೊಳ್ಳಲು ಅದಕ್ಕೆ ಪೂರ್ವಭಾವಿಯಾಗಿ ಮುನ್ನೆಚ್ಚರಿಕೆಯನ್ನು ವಹಿಸುವುದು ಅಗತ್ಯವಾಗಿದೆ. ಈ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನೀರಿನಿಂದ ಹರಡುವ ರೋಗಗಳನ್ನು ತಡೆಯುವಲ್ಲಿ ಸರ್ಕಾರ, ಸಂಸ್ಥೆಗಳು ಮತ್ತು ಸಂಘಟನೆಗಳು ಕೂಡ ನೀರಿನ ಸಂಸ್ಕರಣೆ ಮತ್ತು ವಿತರಣಾ ವ್ಯವಸ್ಥೆಗೆ ಸಹಕರಿಸಬೇಕಿದೆ. ಜನರಲ್ಲಿ ನೈರ್ಮಲ್ಯ ಜಾಗೃತಿ ಜೊತೆಗೆ ಅದರ ಮೂಲ ಸೌಕರ್ಯವನ್ನು ಹೆಚ್ಚಿಸಬೇಕಿದೆ.

ಸೂಚನೆ( ಇವೆಲ್ಲ ಸಾಮಾನ್ಯ ತಿಳಿವಳಿಕೆ ಮೇಲೆ ನೀಡಿದ ಸಲಹೆಗಳಾಗಿದ್ದು,ಹೆಚ್ಚಿನ ಮಾಹಿತಿಗೆ ತಜ್ಞವೈದ್ಯರನ್ನು ಸಂಪರ್ಕಿಸಿ)

ಇದನ್ನೂ ಓದಿ: ದಿನಕ್ಕೆ ಕನಿಷ್ಠ 4 ಸಾವಿರ ಹೆಜ್ಜೆ ಹಾಕಿ... ಸಾವನ್ನು ತಡೆ ಗಟ್ಟಿ..!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.