ETV Bharat / sukhibhava

ಅಸ್ತಮ ನಿವಾರಣೆಗೆ ಮೀನಿನ ಪ್ರಸಾದ; ಮುತ್ತಿನ ನಗರಿಯಲ್ಲಿ ಬಥಿನಿ ಪ್ರಸಾದ ವಿತರಣೆಗೆ ಸಕಲ ಸಿದ್ಧತೆ - ಮೃಗಶಿರ ಕಾರ್ತಿಕ ಹಬ್ಬ

ಬಥಿನಿ ಕುಟುಂಬ ನೀಡುವ ನಾಟಿ ಮಿಶ್ರಿತ ಮೀನು ಸೇವನೆಯಿಂದ ಅಸ್ತಮ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕಾಗಿ ದೇಶ ವಿದೇಶದ ಜನರು ಕೂಡ ಮುಗಿ ಬೀಳುತ್ತಾರೆ.

fish-prasadam-for-asthma-relief-all-set-up-for-distribution-of-bathini-prasadam

author img

By

Published : Jun 8, 2023, 12:56 PM IST

Updated : Jun 8, 2023, 1:59 PM IST

ಹೈದರಾಬಾದ್​: ಅಸ್ತಮಾ ರೋಗ ನಿವಾರಣೆಗೆ ಇಲ್ಲಿ ನೀಡಲಾಗುವ ಪ್ರಸಿದ್ಧ ಮೀನಿನ ಪ್ರಸಾದ ದೇಶ ವಿದೇಶಗಳಲ್ಲಿ ಖ್ಯಾತಿ ಹೊಂದಿದೆ. ಪ್ರತಿವರ್ಷ ಮೃಗಶಿರಕಾರ್ತಿಕದಂದು ಇಲ್ಲಿ ಮೀನಿನ ಪ್ರಸಾದವನ್ನು ನೀಡಲಾಗುತ್ತದೆ. ಅದರಂತೆ ನಾಳೆ ಮುತ್ತಿನನಗರಿಯಲ್ಲಿ ಈ ಪ್ರಸಾದ ವಿತರಣೆ ನಡೆಯಲಿದ್ದು, ಮೃಗಶಿರ ಕಾರ್ತಿಕ ಹಬ್ಬದಂದು ಬಥಿನಿ ಕುಟುಂಬ ನೀಡುವ ಪ್ರಸಾದಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ. ಸುಮಾರು 5 ಲಕ್ಷ ಜನರಿಗೆ ಈ ಪ್ರಸಾದ ವಿನಿಮಯ ಆಗಲಿದೆ.

ಇಲ್ಲಿನ ಬಥಿನಿ ಕುಟುಂಬ ನೀಡುವ ನಾಟಿ ಮಿಶ್ರಿತ ಮೀನು ಸೇವನೆಯಿಂದ ಅಸ್ತಮ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕಾಗಿ ದೇಶ ವಿದೇಶದ ಜನರು ಕೂಡ ಮುಗಿ ಬೀಳುತ್ತಾರೆ. ಇದೀಗ ಕೋವಿಡ್​ ಬಳಿಕ ಮೂರು ವರ್ಷದ ನಂತರ ಬಥಿನಿ ಕುಟುಂಬ ಪ್ರತಿ ವರ್ಷದಂತೆ ಮೀನಿನ ಪ್ರಸಾದ ನೀಡಲು ಮುಂದಾಗಿದೆ. ಇದಕ್ಕೆ ಜನರು ಮುಗಿ ಬೀಳುವ ಹಿನ್ನೆಲೆ ಯಾವುದೇ ತೊಂದರೆಗಳು ಎದುರಾಗದಂತೆ ಸಚಿವ ತಲಸನಿ ಶ್ರೀನಿವಾಸ್​ ಯಾದವ್​ ಮತ್ತು ಜಿಲ್ಲಾಧಿಕಾರಿ ಅಮೊಯ್​ ಕುಮಾರ್​ ಹಾಗೂ ಸರ್ಕಾರದ ಕೆಲ ಇಲಾಖೆಗಳಿಂದ ವ್ಯವಸ್ಥೆಯನ್ನು ಮಾಡಲಾಗಿದೆ.

ಸಕಲ ಸಿದ್ಧತೆ: ಎರಡು ದಿನಗಳ ಈ ಕಾರ್ಯಕ್ರಮದಲ್ಲಿ 5 ಲಕ್ಷ ಜನರಿಗೆ 5 ಕ್ವಿಂಟಾಲ್​ ಪ್ರಸಾದ ವಿತರಣೆ ಆಗಲಿದೆ. ಮೀನುಗಾರಿಕೆ ಇಲಾಖೆ ಈಗಾಗಲೇ 2.5 ಲಕ್ಷ ಕೊರ್ರಮೀನು ಸಿದ್ಧಪಡಿಸಿದೆ. ಇಲ್ಲಿ ಸಸ್ಯಹಾರಿಗಳಿಗೂ ಬೆಲ್ಲದ ಮೂಲಕ ಮೀನಿನ ಪ್ರಸಾದ ನೀಡಲಾಗುವುದು. ಈ ಬಗ್ಗೆ ಮಾಹಿತಿ ನೀಡಿದ ಹರಿನಾಥ್​ ಗೌಡ ಮಗಳು ಅಲಕನಂದ ದೇವಿ, ಇಲ್ಲಿ ಸಣ್ಣ ಮಕ್ಕಳಿಂದ ನೂರು ವರ್ಷದವರೆಗೆ ಎಲ್ಲರಿಗೂ ಪ್ರಸಾದ ನೀಡಲಾಗುವುದು. ಗರ್ಭಿಣಿಯರು ಈ ಪ್ರಸಾದ ಸೇವಿಸಬಾರದು. ಖಾಲಿ ಹೊಟ್ಟೆಯಲ್ಲಿ ಅಥವಾ ಊಟಕ್ಕೆ ಮೂರು ಗಂಟೆ ಮೊದಲು ಇದನ್ನು ಸೇವಿಸಬೇಕು ಎಂದರು.

ವಸ್ತು ಪ್ರದರ್ಶನದ ಮೈದಾನದಲ್ಲಿ ಪ್ರಸಾದ ವಿತರಣೆ ನಡೆಯಲಿದ್ದು, ಇದಕ್ಕಾಗಿ 34 ಕೌಂಟರ್​ ಜೊತೆಗೆ 32 ಸಾಲುಗಳ ವ್ಯವಸ್ಥೆ ಜನರಿಗೆ ಮಾಡಲಾಗಿದ್ದು, ಅವರಿಗೆ ಅನುಕೂಲವಾಗುವಂತೆ ಸಾಕಷ್ಟು ಪ್ರಮಾಣದ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ. ವಿಕಲಚೇತನ, ಹಿರಿಯರು ಮತ್ತು ಮಹಿಳೆಯರಿಗೆ ವಿಶೇಷ ಸಾಲುಗಳನ್ನು ಮಾಡಲಾಗಿದೆ. ಈ ಮೈದಾನದಲ್ಲಿ ಎರಡು ದಿನ ಮೀನಿನ ಪ್ರಸಾದ ನೀಡಲಾಗುವುದು. ಬಳಿಕ ಬಥಿನಿ ಕುಟುಂಬದ ಮನೆಯದಲ್ಲಿ ಒಂದು ವಾರ ಕಾಲ ಪ್ರಸಾದ ವಿನಿಮಯ ಆಗಲಿದೆ.

ಪವಿತ್ರ ಮೀನು: ಮೃಗಶಿರ ಕಾರ್ತಿಕ ಹಬ್ಬ ಸಾಮಾನ್ಯವಾಗಿ ಜೂನ್​ನಲ್ಲಿ ಬರುತ್ತದೆ. ಹೈದರಾಬಾದ್​ನ ಬಥಿನಿ ಗ್ರಾಮದ ಶ್ರೀ ಕುರ್ಮಾಮ್​ ದೇಗುಲದಲ್ಲಿ ಅನೇಕ ಭಕ್ತರು ಆಗಮಿಸುತ್ತಾರೆ. ಈ ಹಬ್ಬದ ಪ್ರಮುಖ ವಿಶೇಷತೆ ಎಂದರೆ ಬಥನಿ ಮೀನಿನ ಪ್ರಸಾದ​. ಈ ಪ್ರಸಾದವನ್ನು ಮುರ್ರೆಲ್​ ಅಥವಾ ಹಾವು ಮೀನು ಎಂದು ಕರೆಯುವ ಮೀನಿನಿಂದ ಮಾಡಲಾಗುವುದು. ಈ ಮೀನನ್ನು ಹತ್ತಿರದ ಟ್ಯಾಂಕ್‌ಗಳು ಮತ್ತು ಕೊಳಗಳಿಂದ ಹಿಡಿಯಲಾಗುತ್ತದೆ. ಇದು ಆಸ್ತಮಾ ಮತ್ತು ಉಸಿರಾಟದ ಸಮಸ್ಯೆಗಳನ್ನು ಗುಣಪಡಿಸುವ ಮತ್ತು ತಡೆಗಟ್ಟುವ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಮುರ್ರೆಲ್ ಮೀನು ವಿಷ್ಣುವಿನ ಕೂರ್ಮ ಅವತಾರದಿಂದ ಆಶೀರ್ವದಿಸಲ್ಪಟ್ಟಿದೆ ಎಂಬ ನಂಬಿಕೆ ಇದೆ. ಇದೇ ಈ ಹಿನ್ನೆಲೆ ಇದನ್ನು ಪವಿತ್ರ ಎಂದು ನಂಬಲಾಗಿದೆ. ​

ಇನ್ನು, ಈ ಮೀನುಗಳನ್ನು ಹಿಡಿದ ತಕ್ಷಣಕ್ಕೆ ದೇಗುಲಕ್ಕೆ ತಂದು ಪ್ರಸಾದವಾಗಿ ನೀಡಲಾಗುವುದು. ಈ ಹಿನ್ನೆಲೆ ಈ ಮೀನುಗಳು ಶುಚಿಯಾಗಿ ಇದ್ದು, ಗಿಡಮೂಲಿಕೆಯನ್ನು ನೆನಸಲಾಗುವುದು. ಬಳಿಕ ಇದನ್ನು ಅರ್ಚಕರಿಗೆ ನೀಡಿ ಅವರು, ಭಕ್ತರ ಹಣೆಗೆ ಮುಟ್ಟಿಸಿ ಈ ಮೀನನ್ನು ಪ್ರಸಾದವಾಗಿ ನೀಡುತ್ತಾರೆ.

ಈ ಮೀನನ್ನು ಸೇವಿಸುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೇ ಭವಿಷ್ಯದಲ್ಲಿ ಯಾವುದೇ ಅನಾರೋಗ್ಯದಿಂದ ರಕ್ಷಣೆ ಸಿಗಲಿದೆ ಎಂಬ ನಂಬಿಕೆ ಇದೆ. ಪ್ರಸಾದವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದೇಶ ವಿದೇಶದ ಜನರು ಇದನ್ನು ಸ್ವೀಕರಿಸಲು ಹಬ್ಬದ ಸಮಯದಲ್ಲಿ ಇಲ್ಲಿಗೆ ಬರುತ್ತಾರೆ. ಇನ್ನು ಈ ಪ್ರಸಾದ ರೋಗ ನಿವಾರಣೆಯಲ್ಲಿನ ಪಾತ್ರ ಮತ್ತು ಸಾಮರ್ಥ್ಯದ ಬಗ್ಗೆ ಕೂಡ ಹೆಚ್ಚು ಚರ್ಚಿತವಾಗಿದೆ. ಇದನ್ನು ಬೆಂಬಲಿಸುವ ಮತ್ತು ಟೀಕಿಸುವ ಎರಡು ಗುಂಪುಗಳು ಇವೆ. ಮೃಗಶಿರ ಕಾರ್ತಿಕ ಉತ್ಸವದಲ್ಲಿ ಪ್ರಸಾದ ವಿತರಣೆಯು ಹೈದರಾಬಾದ್‌ನಲ್ಲಿ ಮಹತ್ವದ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮವಾಗಿ ಬಹು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಇದನ್ನೂ ಓದಿ: ವಿಶ್ವ ಸಾಗರ ದಿನ: ಸಮುದ್ರಗಳ ಮಾಲಿನ್ಯದ ಬಗ್ಗೆ ಅರಿವು ಮೂಡಿಸುವ ಯತ್ನ ಆಗಬೇಕಿದೆ

Last Updated : Jun 8, 2023, 1:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.