ಬೆಂಗಳೂರು: ಜಗತ್ತಿನಲ್ಲಿ ಹಲವು ರಾಷ್ಟ್ರಗಳಲ್ಲಿ ಇದೀಗ ಮಂಕಿ ಪಾಕ್ಸ್ ಪ್ರಕರಣಗಳು ವರದಿಯಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಕಳೆದ ನವೆಂಬರ್ನಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ ಎಂದು ನ್ಯೂ ಸೌತ್ ವೇಲ್ಸ್ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಇದನ್ನು ಎನ್ಎಸ್ಡಬ್ಲ್ಯೂ ಹೆಲ್ತ್ ಕೂಡ ದೃಢಪಡಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ, ಈ ಪ್ರಕರಣವೂ ವಿದೇಶಿ ಪ್ರಯಾಣದ ಹಿನ್ನೆಲೆ ಹೊಂದಿಲ್ಲ ಬದಲಾಗಿ ಸ್ಥಳೀಯ ಪ್ರಸರಣ ಹೊಂದಿದೆ ಎಂದು ತಿಳಿಸಿದೆ.
ಈ ಕುರಿತು ತಿಳಿಸಿರುವ ಆಗ್ನೇಯ ಸಿಡ್ನಿ ಸಾರ್ವಜನಿಕ ಆರೋಗ್ಯ ಘಟಕ ನಿರ್ದೇಶಕ ವಿಕ್ಕಿ ಶೆಪರ್ಡ್, ಮೇ ಮತ್ತು ನವೆಂಬರ್ 2022ರ ನಡುವೆ ಎನ್ಎಸ್ಡಬ್ಲ್ಯೂನಲ್ಲಿ 56 ಮಂಕಿಪಾಕ್ಸ್ ಪ್ರಕರಣಗಳು ತಿಳಿಸಿದ್ದಾರೆ. ಮಂಕಿಪಾಕ್ಸ್ ಹೆಚ್ಚಿನ ಲಸಿಕೆ ನೀಡುವ ಮೂಲಕ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಬಹುದು ಎಂದು ತಿಳಿಸುತ್ತೇವೆ. ಮಂಗನ ಕಾಯಿಲೆ ತಡೆಗೆ ದೇಶದಲ್ಲಿ ಉಚಿತವಾಗಿ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೂ ಈ ಲಸಿಕೆಗಳು ಪರಿಣಾಮಕಾರಿಯಾಗಿಲ್ಲ ಎಂದು ಎನ್ಎಸ್ಡಬ್ಲ್ಯೂ ತಿಳಿಸಿದೆ. ಈ ರೋಗ ಲಕ್ಷಣ ಹೊಂದಿರುವ ಜನರು ತಕ್ಷಣಕ್ಕೆ ವೈದ್ಯರಿಗೆ ಕರೆ ಮಾಡಿ ವೈದ್ಯರ ಸಂಪರ್ಕಕ್ಕೆ ಒಳಗಾಗುವುದು ಉತ್ತಮ ಎಂದು ಕೂಡ ಸಲಹೆ ನೀಡಿದೆ.
ಪಾಕಿಸ್ತಾನದಲ್ಲೂ ಮಂಕಿಪಾಕ್ಸ್ ಪ್ರಕರಣ: ಆಸ್ಟ್ರೇಲಿಯದ ಬಳಿಕ ನೆರೆಯ ಪಾಕಿಸ್ತಾನದಲ್ಲೂ ಕೂಡ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಈ ಕುರಿತು ಪಾಕಿಸ್ತಾನದ ಆರೋಗ್ಯ ಸಚಿವಾಲಯ ಕೂಡ ಸ್ಪಷ್ಟಪಡಿಸಿತು.
ಏನಿದು ಮಂಕಿ ಪಾಕ್ಸ್, ಲಕ್ಷಣ ಹೇಗಿದೆ: ಮಂಕಿಪಾಕ್ಸ್ ಸಿಡುಬಿನಂತೆಯೇ ವೈರಸ್ ಲಕ್ಷಣ ಗೊಂದಿದೆ. ಇದು ಸೌಮ್ಯ ಲಕ್ಷಣ ಹೊಂದಿರುತ್ತದೆ. ಈ ಮಂಕಿ ಪಾಕ್ಸ್ ಪತ್ತೆಯಾದವರಲ್ಲಿ ಜ್ವರ, ಮೈಕೈ ನೋವು, ಶೀತ ಮತ್ತು ಆಯಾಸ ಹೊಂದಿರುತ್ತಾರೆ. ಹೆಚ್ಚು ತೀವ್ರವಾದ ಕಾಯಿಲೆ ಹೊಂದಿರುವ ಈ ರೋಗ ಐದರಿಂದ ಮೂರು ವಾರಗಳಲ್ಲಿ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಕೈ ಮೇಲೆ ದದ್ದು, ಹುಣ್ಣುಗಳು ಕಾಣಿಸಿಕೊಳ್ಳುತ್ತದೆ. ಈ ರೋಗದಿಂದ ಚೇತರಿಸಿಕೊಳ್ಳಲು ಎರಡರಿಂದ ನಾಲ್ಕು ವಾರ ಬೇಕಿದೆ. ಈ ಮಂಕಿಪಾಕ್ಸ್ 10ರಲ್ಲಿ ಒಬ್ಬರಿಗೆ ಮಾರಕವಾಗಬಹುದು. ಸದ್ಯ ಈ ರೋಗಕ್ಕೆ ಸಿಡುಬಿನ ಲಸಿಕೆ ನೀಡಲಾಗುತ್ತಿದ್ದು, ಇದಕ್ಕೆ ಆಂಟಿ ವೈರಲ್ ಔಷಧ ಅಭಿವೃದ್ಧಿ ಪಡಿಸಲಾಗುತ್ತಿದೆ. ಯಾವುದೇ ಚಿಕಿತ್ಸೆ ಇಲ್ಲದೆಯೂ ಈ ಸೋಂಕು ಸರಿಹೋಗುತ್ತದೆ. ಆದರೆ, ವಯಸ್ಸಾದವರು, ಕ್ಯಾನ್ಸರ್ ರೋಗಿಗಳಿಗೆ ಇದು ಮಾರಕವಾಗುವ ಸಾಧ್ಯತೆ ಇರುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮಂಕಿಪಾಕ್ಸ್ ಒಂದು ವೈರಲ್ ಝೂನೋಸಿಸ್ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್) ಆಗಿದ್ದು, ಈ ಹಿಂದೆ ಸಿಡುಬು ರೋಗಿಗಳಲ್ಲಿ ಕಂಡುಬಂದಿದ್ದ ರೋಗಲಕ್ಷಣಗಳನ್ನು ಹೋಲುತ್ತದೆ. ಆದರೂ ಇದು ವೈದ್ಯಕೀಯವಾಗಿ ಕಡಿಮೆ ತೀವ್ರವಾಗಿರುತ್ತದೆ. 1980 ರಲ್ಲಿ ಸಿಡುಬು ನಿರ್ಮೂಲನೆಗೊಂಡಿದ್ದು ಹಾಗೂ ಅದರ ನಂತರ ಸಿಡುಬು ಲಸಿಕೆಯನ್ನು ನಿಲ್ಲಿಸಿದ ನಂತರ ಮಂಕಿಪಾಕ್ಸ್ ಪ್ರಮುಖವಾದ ಆರ್ಥೋಪಾಕ್ಸ್ ವೈರಸ್ ಆಗಿ ಹೊರಹೊಮ್ಮಿದೆ.
ಇದನ್ನೂ ಓದಿ: ಕೋವಿಡ್ 19 ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ಲ; ಡಬ್ಲ್ಯೂಎಚ್ಒ