ನವದೆಹಲಿ: ಕೋವಿಡ್ ಸೋಂಕು ಮತ್ತು ಅದರ ಉಪತಳಿಗಳ ಪತ್ತೆಗೆ ಆರ್ಟಿಪಿಸಿಆರ್ ಪರೀಕ್ಷೆ ಮೊರೆ ಹೋಗಲಾಗುತ್ತಿತ್ತು. ಸೋಂಕಿತರ ಮೂಗು ಮತ್ತು ಗಂಟಲಿನ ಸ್ವಾಬ್ ಪರೀಕ್ಷೆಯನ್ನು ಮಾಡುವಾಗ ಕಿರಿಕಿರಿ ಅನುಭವ ಆಗುತ್ತಿತ್ತು. ಇದೀಗ ಅದಕ್ಕೆ ಪರ್ಯಾಯ ಪರೀಕ್ಷೆಯನ್ನು ಕಂಡು ಹಿಡಿಯಲಾಗಿದ್ದು, ಇದರ ವೆಚ್ಚ ಕಡಿಮೆಯಾಗಿದ್ದು, ಮತ್ತು ಸೋಂಕು ಪತ್ತೆ ಪ್ರಕ್ರಿಯೆ ಕೂಡ ಸುಲಭದಾಯಕವಾಗಿದೆ. ಅದುವೆ ನ್ಯೂಟರಲ್ ಫ್ಲೂ ಇಮ್ಯುನೊಅಸ್ಲೇ (ಇಎಲ್ಐಎಸ್ಎ). ಈ ವಿಧಾನದ ಮೂಲಕವೂ ತೀವ್ರತರವಾದ ಸಾರ್ಸ್- ಕೋವ್-2 ಸೋಂಕನ್ನು ಪತ್ತೆ ಮಾಡಬಹುದಾಗಿದೆ ಇದಕ್ಕೆ ಆರ್ಟಿಪಿಸಿಆರ್ನಂತೆ ಕೌಶಲ್ಯಯುತ ಸಿಬ್ಬಂದಿಗಳ ಅಗತ್ಯವಿಲ್ಲ. ಸುಲಭದಾಯಕವಾಗಿದೆ
ಏನಿದು ಪರ್ಯಾಯ ವಿಧಾನ: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಅನುಸಾರ, ಇದು ಸಾರ್ಸ್-ಕೋವ್-2ನ ಆರ್ಬಿಡಿ ಆ್ಯಂಟಿಜೆನ್ ಪ್ರತಿಜನಕವನ್ನು ಸೋಂಕಿನ ಆರಂಭದಲ್ಲಿ ಪತ್ತೆ ಹಚ್ಚುತ್ತದೆ. ಆರ್ಟಿಪಿಸಿಆರ್ ನಂತೆ ಇಎಲ್ಐಎಸ್ಎ ಗುಣಮಟ್ಟದ ಸೋಂಕಿನ ಪರೀಕ್ಷೆ ಪ್ರಕ್ರಿಯೆಯಾಗಿದೆ. ಆರ್ಟಿ ಪಿಸಿಆರ್ ಕೌಶಲ್ಯಾಧರಿದ ತರಬೇತುದಾರರು ಸುಧಾರಿತ ಸಾಧನಗಳು ಇದಕ್ಕೆ ಬೇಕಿದ್ದು, ಸ್ಥಳದಲ್ಲೇ ಇದನ್ನು ಪತ್ತೆ ಮಾಡುವುದು ಅಸಾಧ್ಯ ವಾಗಿತ್ತು. ಈ ಸವಾಲುಗಳಿಂದ ಇದೀಗ ಹೊರ ಬಂದಿದ್ದು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಬಯೋಟೆಕ್ನಾಲಜಿ- ಡಿಬಿಟಿ ಮತ್ತು ಗಾಂಧಿ ಮೆಡಿಕಲ್ ಕಾಲೇಜ್ ರುಬೊಸ್ಟೊ ವಿಧಾನವನ್ನು ಪತ್ತೆ ಮಾಡಿದೆ. ಇದು ಕೂಡ ಆರಂಭಿಕ ಹಂತದ ಸಾರ್ಸ್ ಕೋವ್-2 ಸೋಂಕನ್ನು ಪತ್ತೆ ಮಾಡಲಿದೆ.
ಇದರ ಗುಣಾತ್ಮಕ ವಿಶ್ಲೇಷಣೆಗೆ ಸ್ಮಾರ್ಟ್ ಫೋನ್ ಅಪ್ಲಿಕೇಷನ್ (ಕಲರ್ ಗ್ರಾಬ್) ಅನ್ನು ಬಳಸಲಾಗಿದೆ. ನುರಿತ ತಜ್ಞರ ಅವಶ್ಯಕತೆ ಇಲ್ಲದೇ ಸೋಂಕನ್ನು ಇದರಲ್ಲಿ ಪತ್ತೆ ಮಾಡಬಹುದು. ವಿಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಂಸ್ಥೆಯಾದ ಎಸ್ಇಆರ್ಬಿ, ಆರ್ಬಿಡಿ ಪ್ರೊಟೀನ್ ಅಭಿವ್ಯಕ್ತಿಗೆ ಕಾರಣವಾದ ಜೀನ್ ಅನ್ನು ಕ್ಲೋನ್ ಮಾಡಿ ಪ್ರತಿಕಾಯ ಉತ್ಪಾದಿಸಲು ಮೊನೊಡಿಸ್ಪರ್ಸ್ ನ್ಯಾನೊ ಪರ್ಟಿಕಲ್ಸ್ ಅನ್ನು ಬಳಸಿದರು.
ಪರೀಕ್ಷೆ ಹೇಗೆ? ಈ ಫ್ಯಾಬ್ರಿಕೇಟ್ ಎಲ್ಎಫ್ಐಎ ಸ್ಯಾಂಡ್ವಿಚ್ ಫಾರ್ಮೆಟ್ನಲ್ಲಿ ಕೆಲಸ ಮಾಡಿದೆ. ಆರ್ಬಿಡಿ ಸರಳ ಪ್ರೊಸಿಡ್ಸ್ ಗೋಲ್ಡ್ ನ್ಯಾನೊಪಾರ್ಟಿಲ್ ಸಂಯೋಜಿತ ಆರ್ಬಿಡಿ ಪ್ರತಿಕಾಯದೊಂದಿಗೆ ಸಂಕೀರ್ಣವನ್ನು ರೂಪಿಸುತ್ತದೆ. ಈ ಹೊಸ ವಿಧಾನ ವಿಶ್ಲೇಷಣೆ ಮತ್ತು ವಿಧಾನ ಸರಳವಾದ ಸ್ಮಾರ್ಟ್ಫೋನ್ ಆಧಾರಿತ ಅಪ್ಲಿಕೇಷನ್ ಅನ್ನು ಬಳಸಿಕೊಂಡು ಪರೀಕ್ಷಾ ಸಾಲಿನ ಬ್ಯಾಂಡ್ ತೀವ್ರತೆ ವಿಶ್ಲೇಷಿಸುವುದನ್ನು ಒಳಗೊಂಡಿರುತ್ತದೆ. ಇದು ಯಾವುದೇ ಬಣ್ಣದ ಡೇಟಾವನ್ನು ಅದರ ಮೂರು ಪ್ರಾಥಮಿಕ ಬಣ್ಣ ಘಟಕಗಳಾಗಿ ವಿಭಜಿಸುತ್ತದೆ - ಕೆಂಪು, ಹಸಿರು ಮತ್ತು ನೀಲಿ. ಪ್ರತಿಯೊಂದು ಬಣ್ಣವೂ ಅದರ ಸಂಬಂಧಿಸಿದ ತೀವ್ರತೆಯನ್ನು ಸೂಚಿಸುತ್ತದೆ. ಈ ಅಧ್ಯಯನವನ್ನು ಜರ್ನಲ್ ಆಫ್ ಮೆಡಿಕಲ್ ವೈರೊಲಾಜಿಯಲ್ಲಿ ಪ್ರಕಟಿಸಲಾಗಿದೆ.
ಈ ಎಲ್ಎಫ್ಐಎ ಸ್ಟ್ರಿಪ್ ಪ್ರಯೋಜನಕಾರಿಯಾಗಿದ್ದು, ಸುಲಭವಾಗಿ ಎಲ್ಲಿಯಾದರೂ ಕೊಂಡೊಯ್ಯಬಹುದಾಗಿದೆ. ಜೊತೆ ಸ್ಥಳದಲ್ಲೇ ಇದನ್ನು ಪತ್ತೆ ಮಾಡಬಹುದು. ಅಲ್ಲದೇ ಆರ್ಟಿ-ಪಿಸಿಆರ್ ಪರೀಕ್ಷೆಗಿಂತಲೂ ಈ ಎಲ್ಎಫ್ಐಎ ವೆಚ್ಚ ಕಡಿಮೆಯಾಗಿದ್ದು, ಕೈಗೆಟುಕುವ ದರ ಹೊಂದಿದೆ.
ಇದನ್ನೂ ಓದಿ: ತ್ಯಾಜ್ಯದಿಂದ ಗಾರ್ಡನ್ನಲ್ಲಿ ತಲೆ ಎತ್ತಿದ ವಿವಿಧ ಕಲಾಕೃತಿಗಳು