ETV Bharat / sukhibhava

ಒಂದೇ ದಿನ ವಿಪರೀತ ವ್ಯಾಯಾಮ ಮಾಡಿದ್ರೆ ಪ್ರಯೋಜನಕ್ಕಿಂತ ಅಪಾಯವೇ ಹೆಚ್ಚು!

ಹೆಚ್ಚೆಚ್ಚು ವ್ಯಾಯಾಮ ಮಾಡಿದರೆ, ಬೇಗ ತೂಕ ಕಳೆದುಕೊಳ್ಳಬಹುದು. ಆದರೆ, ಈ ರೀತಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಲದೇ, ಅಪಾಯವೇ ಅಧಿಕ ಅಂತಾರೆ ತಜ್ಞರು.

author img

By ETV Bharat Karnataka Team

Published : Nov 28, 2023, 3:14 PM IST

exercising-too-much-in-one-day-is-dangerous

ಹೈದರಾಬಾದ್​: ಆರೋಗ್ಯಕರ ಜೀವನ ಶೈಲಿಗೆ ವ್ಯಾಯಾಮ ಮಾಡುವುದು ಅಗತ್ಯವಾಗಿದೆ. ಅದರಲ್ಲೂ ಈಗಿನ ದಿನಗಳಲ್ಲಿ ಜನರು ವ್ಯಾಯಾಮ ಗಂಭೀರವಾಗಿ ಪರಿಗಣಿಸಿದ್ದು, ನಿತ್ಯದ ಜೀವನದ ಭಾಗವಾಗಿಸಿದ್ದಾರೆ. ಇದರಲ್ಲಿ ಮತ್ತೆ ಕೆಲವು ಮಂದಿ ತೂಕ ಕಳೆದುಕೊಂಡು, ನೀಳವಾಗಿ ಕಾಣಬೇಕು ಎಂಬ ಉದ್ದೇಶದಿಂದಲೂ ವ್ಯಾಯಾಮದ ಮೊರೆ ಹೋಗುವವರಿದ್ದಾರೆ. ಇವರಲ್ಲಿ ಇರುವ ದೊಡ್ಡ ತಪ್ಪು ಕಲ್ಪನೆ ಎಂದರೆ, ಅಧಿಕ ವ್ಯಾಯಾಮ ಮಾಡಿದರೆ, ಬೇಗ ತೂಕ ಕಳೆದುಕೊಳ್ಳಬಹುದು ಎಂಬುದು. ಆದರೆ, ಈ ರೀತಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಲದೇ, ಅಪಾಯಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.

ಒಂದೇ ದಿನ ಅತಿ ಹೆಚ್ಚು ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಒತ್ತಡದ ಹಾರ್ಮೋನ್​ ಉತ್ಪಾದನೆ ಹೆಚ್ಚಾಗುತ್ತದೆ. ಇದು ನಿದ್ರಾ ಹೀನತೆಗೆ ಕಾರಣವಾಗುತ್ತದೆ. ಮಾನಸಿಕ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ಅಷ್ಟೇ ಅಲ್ಲ, ದೀರ್ಘ ಕಾಲ ಈ ರೀತಿ ವ್ಯಾಯಾಮ ಮಾಡುವುದು ನಿಮ್ಮನ್ನು ಖಿನ್ನತೆಗೂ ದೂಡುವುದರಲ್ಲಿ ಯಾವುದೇ ಅಚ್ಚರಿ ಇಲ್ಲ ಎನ್ನುವುದು ತಜ್ಞರ ಅಭಿಮತವಾಗಿದೆ.

ಕೆಲವು ಮಂದಿ ಜಿಮ್​ಗೆ ಹೋಗಿ ತೂಕ ಕಳೆದುಕೊಳ್ಳುತ್ತಾರೆ. ಜಿಮ್​ಗೆ ಹೋದ ವಾರದಲ್ಲೇ ತೂಕ ಕಳೆದುಕೊಳ್ಳಬೇಕು ಎಂದು ಅವರು ಕೂಡ ಭಾರಿ ವ್ಯಾಯಾಮದಲ್ಲಿ ತೊಡಗುತ್ತಾರೆ. ಮಹಿಳೆಯರು ಈ ರೀತಿ ಮಾಡುವುದರಿಂದ ಅವರ ಮಾಸಿಕ ಋತು ಚಕ್ರದ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಈಸ್ಟ್ರೋಜನ್​ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಸ್ಥಿರಂದ್ರತೆಗೂ ಕಾರಣವಾಗಬಹುದು.

ಅಧಿಕವಾದ ವ್ಯಾಯಾಮವೂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ವ್ಯಾಯಾಮದಿಂದ ಸ್ನಾಯುವಿನ ಮೇಲೆ ಅಧಿಕ ಒತ್ತಡ ಬಿದ್ದು, ಅದು ಆಯಾಸಗೊಳ್ಳುವಂತೆ ಮಾಡುತ್ತದೆ. ಕೆಲವು ಸಲ ಇದರಿಂದ ಹೃದಯಾಘಾತ ಅಪಾಯವೂ ಆಗುವ ಸಾಧ್ಯತೆಗಳಿವೆ ಎನ್ನುತ್ತವೆ ಅಧ್ಯಯನಗಳು.

ಒಂದೇ ದಿನ ಹೆಚ್ಚು ವ್ಯಾಯಾಮ ಮಾಡುವುದರಿಂದ ಸ್ನಾಯು ಬಳಲಿಕೆ, ದೇಹದ ಮೇಲೆ ಬೀಳುವ ಒತ್ತಡದಿಂದ ಮುರಿತ ಅಥವಾ ಗಂಭೀರ ಗಾಯಗಳಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಅಲ್ಲದೇ ದೀರ್ಘ ಕಾಲ ವ್ಯಾಯಾಮವೂ ಅನೇಕ ಅಂಗಾಂಗಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿನ ಕಬ್ಬಿಣ ಅಂಶ ಕಡಿಮೆ ಮಾಡಿ ರಕ್ತ ಹೀನತೆಗೆ ಕಾರಣವಾಗುತ್ತದೆ.

ವ್ಯಾಯಾಮ ಎಂಬುದು ಕೊಬ್ಬು ಕರಗಿಸುವ ಕೆಲಸವಾಗಿ, ದೇಹಕ್ಕೆ ಹೊಸ ಉಲ್ಲಾಸ, ಚೈತನ್ಯವನ್ನು ನೀಡಬೇಕು. ಆದರೆ, ಇದನ್ನು ಕೆಲವರು ಓವರ್​ಟ್ರೈನಿಂಗ್​ ಸಿಡ್ರೋಮ್​ ಆಗಿ ರೂಪಿಸಿಕೊಳ್ಳುತ್ತಾರೆ. ಇದರಿಂದ ಅಪಾಯವೇ ಹೆಚ್ಚು ಎನ್ನುತ್ತಾರೆ ಆರೋಗ್ಯ ತಜ್ಞರು.

ಇದನ್ನೂ ಓದಿ: ರಾತ್ರಿ ನಿದ್ದೆ ಸರಿಯಿಲ್ಲದಿದ್ದರೂ ಬೆಳಗ್ಗೆ ಮೂಡ್​ ಚೆನ್ನಾಗಿರಬೇಕೆಂದರೆ ಜಸ್ಟ್​ 20 ನಿಮಿಷ ವ್ಯಾಯಾಮ ಮಾಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.