ಮೆಲ್ಬೋರ್ನ್: ಖಿನ್ನತೆ ನಿಯಂತ್ರಣದಲ್ಲಿ ದೈಹಿಕ ಚಟುವಟಿಕೆಗಳು ಪ್ರಮುಖ ಪಾತ್ರವಹಿಸುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಸಂಶೋಧಕರ ತಂಡ ಸಂಶೋಧನೆ ನಡೆಸಿದೆ. ಇದರ ಅನುಸಾರ ಔಷಧಗಳಿಗಿಂತ ವ್ಯಾಯಾಮಗಳು ಒಂದೂವರೆ ಪಟ್ಟು ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಕುರಿತು ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ ಮೆಡಿಸಿನ್ನಲ್ಲೂ ಪ್ರಕಟವಾಗಿದೆ.
ಈ ಸಂಬಂಧ 97 ಅಧ್ಯಯನ, 1039 ಪ್ರಯೋಗ ನಡೆಸಿದ್ದು, 1, 28, 119 ಭಾಗಿದಾರರ ಮೇಲೆ ಅಧ್ಯಯನ ಕೈಗೊಳ್ಳಲಾಗಿದೆ. ಈ ವೇಳೆ, ವ್ಯಾಯಾಮದಂತಹ ದೈಹಿಕ ಚಟುವಟಿಕೆಯಲ್ಲಿ ಹೆಚ್ಚು ತೊಡಗಿದವರಲ್ಲಿ ದುಃಖ, ಆತಂಕ ಮತ್ತು ಖಿನ್ನತೆಗಳು ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ನಡೆಸಲಾಗಿದೆ. ಈ ಸಂಬಂಧ 12 ವಾರಗಳ ಕಾಲ ಭಾಗಿದಾರರ ಅಧ್ಯಯನ ನಡೆಸಲಾಗಿದೆ. ಇವರ ಮಾನಸಿಕ ಆರೋಗ್ಯ ಸುಧಾರಣೆ ಮಾಡುವಲ್ಲಿ ದೈಹಿಕ ಚಟುವಟಿಕೆಗಳು ಅತ್ಯಂತ ಪ್ರಮುಖ ಪಾತ್ರವಹಿಸಿರುವುದು ತಿಳಿದು ಬಂದಿದೆ.
ಅದರಲ್ಲೂ ಖಿನ್ನತೆ, ಗರ್ಭಿಣಿ ಮತ್ತು ಹೆರಿಗೆ ಬಳಿಕ ಮಹಿಳೆಯರಲ್ಲಿ ಕಾಡುವ ಮಾನಸಿಕ ಸಮಸ್ಯೆ, ಇನ್ನಿತರ ರೋಗಗಳಿಗೆ ಒಳಗಾಗಿ ಮಾನಸಿಕವಾಗಿ ಕುಗ್ಗಿರುವವರಲ್ಲಿ ವ್ಯಾಯಾಮ ಅಥವಾ ಇನ್ನಿತರ ದೈಹಿಕ ಚಟುವಟಿಕೆ ಹೆಚ್ಚಿನ ಪ್ರಯೋಜನ ನೀಡಿದೆ.
ಕ್ಷೀಣಿಸುತ್ತಿದೆ ಮಾನಸಿಕ ಆರೋಗ್ಯ: ವಿಶ್ವ ಸಂಸ್ಥೆಯ ಪ್ರಕಾರ, ಜಗತ್ತಿನಲ್ಲಿ ಪ್ರತಿ ಎಂಟರಲ್ಲಿ ಒಬ್ಬರು ಅಮದರೆ 970 ಮಿಲಿಯನ್ ಮಂದಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಕಳಪೆ ಮಾನಸಿಕ ಆರೋಗ್ಯಕ್ಕಾಗಿ ಪ್ರತಿ ವರ್ಷ 2.5 ಅಮೆರಿಕನ್ ಡಾಲರ್ ಅನ್ನು ಜಗತ್ತಿನ ಆರ್ಥಿಕತೆ ಖರ್ಚು ಮಾಡುತ್ತಿದೆ. 2030ರ ವೇಳೆಗೆ ಇದರ ವೆಚ್ಚ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.
ಈ ಕುರಿತು ಮಾತನಾಡಿರುವ ಸಂಶೋಧಕ ಲೆಖಕ ಡಾ ಬೆನ್ ಸಿಂಗ್, ಮಾನಸಿಕೆ ಆರೋಗ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ಉತ್ತಮ ನಿರ್ವಹಣೆಗೆ ದೈಹಿಕ ಚಟುವಟಿಕೆಗೆ ಒತ್ತು ನೀಡಬೇಕಿದೆ ಎಂದಿದ್ದಾರೆ. ಮಾನಸಿಕ ಆರೋಗ್ಯದ ಸುಧಾರಣೆಗೆ ದೈಹಿಕ ಚಟುವಟಿಕೆ ಸಹಾಯ ಮಾಡುತ್ತದೆ. ಆಯ್ಕೆ ಚಿಕಿತ್ಸೆಯಾಗಿ ಇದನ್ನು ವ್ಯಾಪಾಕವಾಗಿ ಅಳವಡಿಸಿಲ್ಲ ಎಂದಿದ್ದಾರೆ.
ಸುಧಾರಣೆ ಪತ್ತೆ: ಈ ಸಂಬಂಧ ಎರಡು ಗುಂಪುಗಳ ನಡುವೆ ಅಧ್ಯಯನ ನಡೆಸಿದ್ದು, ಖಿನ್ನತೆ ಹೊಂದಿರುವ ನಿಯಂತ್ರಿತ ಗುಂಪಿನಲ್ಲಿ ಹೆಚ್ಚಿನ ಸುಧಾರಣೆ ಕಂಡು ಬಂದಿಲ್ಲ. ವ್ಯಾಯಾಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಗುಂಪಿನಲ್ಲಿ ಖಿನ್ನತೆ ಮತ್ತು ಆತಂಕ ಸುಧಾರಣೆ ಕಂಡು ಬಂದಿದೆ. ಕ್ಲಿಷ್ಟಕರ ವ್ಯಾಯಾಮದ ಹೊರತಾಗಿ ನಡಿಗೆ, ಪೈಲೆಟ್ಸ್, ಸುಧಾರಿತ ವ್ಯಾಯಾಮ, ಯೋಗ ಹೆಚ್ಚಿನ ಪರಿಣಾಮ ಹೊಂದಿದೆ.
ಎಲ್ಲ ವಯೋಮಾನದವರ ಮಾನಸಿಕ ಆರೋಗ್ಯ, ಖಿನ್ನತೆ ಮತ್ತು ಆತಂಕಕ್ಕೆ ದೈಹಿಕ ಚಟುವಟಿಕೆಗಳು ಹೆಚ್ಚಿನ ಪರಿಣಾಮವನ್ನು ಹೊಂದಿದೆ. ಮಾನಸಿಕ ಆರೋಗ್ಯ ಅಸ್ವಸ್ಥತೆಗಳನ್ನು ನಿರ್ವಹಿಸುವಲ್ಲಿ . ಖಿನ್ನತೆ ಮತ್ತು ಆತಂಕವನ್ನು ನಿರ್ವಹಿಸುವಲ್ಲಿ ವ್ಯಾಯಾಮ ಮುಖ್ಯ ವಿಧಾನವಾಗಿ ಮತ್ತು ರಚನಾತ್ಮಕ ದೈಹಿಕ ಚಟುವಟಿಕೆಗಳ ಅಗತ್ಯ ಇದೆ ಎಂಬುದನ್ನು ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: ಆತ್ಮವಿಶ್ವಾಸ, ದೈಹಿಕ- ಮಾನಸಿಕ ಆರೋಗ್ಯ ಸುಧಾರಣೆಗೆ ನೃತ್ಯದ ಕೊಡುಗೆ ಅಪಾರ