ETV Bharat / sukhibhava

ಅತಿಯಾದ ಆ್ಯಂಟಿಬಯೋಟಿಕ್​ ಬಳಕೆಯಿಂದ ಗಂಭೀರ ಅಡ್ಡ ಪರಿಣಾಮ!

ಆ್ಯಂಟಿಬಯೋಟಿಕ್​​ ಬಳಕೆ ವೈರಸ್‌ಗಳು ಅಥವಾ ಬ್ಯಾಕ್ಟೀರಿಯಾಗಳಿಂದ ಸೋಂಕಿಗೆ ಒಳಗಾಗುವ ರೋಗಿಗಳಲ್ಲಿ ಗಂಭೀರ ಅಪಾಯದ ಸಾಧ್ಯತೆ ಹೆಚ್ಚಿಸುತ್ತದೆ.

http://10.10.50.85:6060/reg-lowres/06-July-2023/tablet_0607newsroom_1688620024_477.jpg

author img

By

Published : Jul 6, 2023, 11:51 AM IST

ಲಂಡನ್​: ಕೋವಿಡ್​​ 19 ಸಾಂಕ್ರಾಮಿಕಕ್ಕೂ ಮುಂಚಿನಿಂದಲೂ ಆಗಾಗ್ಗೆ ಆ್ಯಂಟಿಬಯೋಟಿಕ್​ ಮಾತ್ರೆಗಳನ್ನು ಬಳಕೆ ಮಾಡುವವರಲ್ಲಿ ಸಾವು ಸೇರಿದಂತೆ ಸೋಂಕಿನ ಅಪಾಯವು ಗಮನಾರ್ಹ ಮಟ್ಟದಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನ ಎಚ್ಚರಿಕೆ ನೀಡಿದೆ. ಜರ್ನಲ್​ ಇಕ್ಲಿನಿಕಲ್​ ಮೆಡಿಸಿನ್​​ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ. ಇದರಲ್ಲಿ ಆ್ಯಂಟಿಬಯೋಟಿಕ್​ ಮಾತ್ರೆಗಳನ್ನು ಅತಿ ಹೆಚ್ಚು ಬಳಕೆ ಮಾಡುವ ಜನರಿಗೆ ಸೂಚನೆ ನೀಡಲಾಗಿದೆ.

ಮಂಚೆಸ್ಟರ್​​ ಯುನಿವರ್ಸಿಟಿಯ ಸಂಶೋಧಕರು, ಕಳೆದ ಮೂರು ವರ್ಷಗಳಲ್ಲಿ ಆಗಾಗ್ಗೆ ಆ್ಯಂಟಿಬಯೋಟಿಕ್ ಬಳಕೆ ಮಾಡುವ ರೋಗಿಗಳು ಆಸ್ಪತ್ರೆಯ ದಾಖಲಾಗುವ ಮತ್ತು 30 ದಿನಗಳ ಸಾವು ಸೇರಿದಂತೆ ತೀವ್ರವಾದ ಕೋವಿಡ್ ಫಲಿತಾಂಶಗಳನ್ನು ಅನುಭವಿಸುವ ಹೆಚ್ಚಿನ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕೋವಿಡ್​ ರೋಗಿಗಳ ಮೇಲೆ ಅಧ್ಯಯನ: ಕೋವಿಡ್​ ಸಂಬಂಧಿ ಸಾವು ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಆ್ಯಂಟಿಬಯೋಟಿಕ್​ ಬಳಕೆ ಪ್ರಮಾಣ ಶೇ 1.34 ರಷ್ಟು ಹೆಚ್ಚಿದೆ. ಸೋಂಕಿಗಿಂತ ಮುಂಚಿನ ವರ್ಷಗಳಲ್ಲೇ ಅಧಿಕ ಆ್ಯಂಟಿಬಯೋಟಿಕ್​ ಸೇವನೆ ಇತಿಹಾಸ ಹೊಂದಿರುವವರು ಶೇ 1.8ರಷ್ಟು ಅಪಾಯ ಹೊಂದಿರುತ್ತಾರೆ.

ಈ ಅಧ್ಯಯನ ಸಂಬಂಧ ತಂಡವು ಇತ್ತೀಚಿಗೆ ಕೋವಿಡ್​ ಸೋಂಕಿಗೆ ಒಳಗಾದ 0.67 ಮಿಲಿಯನ್​ ರೋಗಿಗಳ ಮಾದರಿ ಪಡೆದಿದೆ. ಇದರಲ್ಲಿ 98,420 ರೋಗಿಗಳು ಆಸ್ಪತ್ರೆಗೆ ದಾಖಲಾದರೆ, 22,660 ಆಸ್ಪತ್ರೆಗೆ ದಾಖಲಾದ ರೋಗಿಗಳು ಸಾವನ್ನಪ್ಪಿದ್ದಾರೆ. 55 ವಿಶಿಷ್ಟ ಆ್ಯಂಟಿಬಯೋಟಿಕ್​ ಅನ್ನು ಅವರಿಗೆ ಶಿಫಾರಸು ಮಾಡಲಾಗಿದೆ.

ಆ್ಯಂಟಿಬಯೋಟಿಕ್​​ ಬಳಕೆಯು ವೈರಸ್‌ಗಳು ಅಥವಾ ಬ್ಯಾಕ್ಟೀರಿಯಾಗಳಿಂದ ಸೋಂಕಿಗೆ ಒಳಗಾಗುವ ರೋಗಿಗಳಲ್ಲಿ ಗಂಭೀರ ಅಪಾಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದು ಸೋಂಕಿನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಹೆಚ್ಚಿಸುತ್ತದೆ ಎಂದು ಮ್ಯಾಂಚೆಸ್ಟರ್​​ ಯುನಿವರ್ಸಿಟಿಯ ಪ್ರೊ. ಜೆರ್ಡ್​​ ವಾನ್​ ಸ್ಟಾ ತಿಳಿಸಿದ್ದಾರೆ.

ಕರುಳಿನ ಸೂಕ್ಷ್ಮಾಣುಗಳ ಮೇಲೆ ಪರಿಣಾಮ: ಆ್ಯಂಟಿ ಬಯೋಟಿಕ್​ ಚಿಕಿತ್ಸೆಯೂ ಕರುಳಿನ ಸೂಕ್ಷ್ಮಜೀವಿ, ಚಯಾಪಚಯ ಮತ್ತು ಪ್ರತಿರೋಧಕ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಬಹುತೇಕ ಪರಿಸ್ಥಿತಿಗಳನ್ನು ಆ್ಯಂಟಿಬಯೋಟಿಕ್​ ಕೋರ್ಸ್​ ನಿಲ್ಲಿಸಿದ ಬಳಿಕ ಕರುಳಿನ ಸೂಕ್ಷ್ಮಜೀವಿಗಳ ಚೇತರಿಕೆ ಕಂಡುಬಂದಿದೆ. ಆಗಾಗ್ಗೆ ಆ್ಯಂಟಿಬಯೋಟಿಕ್​ ಬಳಕೆ ಮಾಡುವುದರಿಂದ ಕರುಳಿನ ಸೂಕ್ಷ್ಮ ಜೀವಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದಿದ್ದಾರೆ.

ಮರುಕಳಿಸುವ ಪ್ರತಿಜೀವಕ ಮಾನ್ಯತೆ ಸೋಂಕು-ಸಂಬಂಧಿತ ತೊಡಕುಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ ಎಂದು ಸೂಚಿಸಲು ಕಡಿಮೆ ಪುರಾವೆಗಳಿವೆ ಎಂದು ಡಾ. ವಿಕ್ಟೋರಿಯಾ ಪಾಲಿನ್​ ತಿಳಿಸಿದ್ದಾರೆ. ಇದು ಅಸುರಕ್ಷಿತ ಎಂಬುದಕ್ಕೆ ಅನೇಕ ಸಾಕ್ಷ್ಯಗಳಿವೆ. ಇದೇ ಕಾರಣಕ್ಕೆ ದೀರ್ಘಕಾಲದ ಆ್ಯಂಟಿ ಬಯೋಟಿಕ್​ ಬಳಕೆ ಪರಿಣಾಮಗಳು ಪ್ರತಿಕೂಲಕರವಾಗಿರುವುದಿಲ್ಲ. ಇವು ಗಂಭೀರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಇವುಗಳ ಬಳಕೆಯ ಬಗ್ಗೆ ಅರಿವು ಹೊಂದಿರಬೇಕು ಎಂದು ಅವರು ಇದೇ ವೇಳೆ ಸಲಹೆ ನೀಡಿದ್ದಾರೆ. ಪದೇ ಪದೇ ಈ ರೀತಿಯ ಆ್ಯಂಟಿಬಯೋಟಿಕ್​ ಮಾತ್ರೆಗಳನ್ನು ಶಿಫಾರಸು ಮಾಡುವುದನ್ನು ಪ್ರೋತ್ಸಾಹಿಸುವುದಿಲ್ಲ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Rising Alarm: ಕೋವಿಡ್​ ಬಳಿಕ ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹ ಪ್ರಕರಣ; ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.