ETV Bharat / sukhibhava

ಹೆಚ್ಚು ಮದ್ಯ ಸೇವನೆಯಿಂದ ಪುರುಷ, ಮಹಿಳೆಯರಲ್ಲಿ ಫಲವತ್ತತೆ ಕೊರತೆ: ಅಧ್ಯಯನ

author img

By

Published : Apr 14, 2023, 3:23 PM IST

ಅಧಿಕ ಆಲ್ಕೋಹಾಲ್​ ಸೇವನೆ ಅನೇಕ ಗಂಭೀರ ಆರೋಗ್ಯ ಪರಿಣಾಮಗಳನ್ನು ಹೊಂದಿದೆ.

Excessive alcohol consumption causes fertility problems in men and women; study

ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಹೊಸ ವಿಷಯವಲ್ಲ. ಮದ್ಯದಿಂದ ದೇಹದ ಆಂತರಿಕ ಅಂಗಾಂಗಗಳು ಮಾತ್ರವಲ್ಲ, ಪುರುಷ ಮತ್ತು ಮಹಿಳೆಯರ ಫಲವತ್ತತೆ ಮೇಲೆ ಪರಿಣಾಮ ಬೀರಲಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಅಷ್ಟೇ ಅಲ್ಲ, ಅನೇಕರಲ್ಲಿ ಇದು ಗರ್ಭಪಾತಕ್ಕೂ ಕಾರಣವಾಗಬಹುದು ಎಂದು ಎಚ್ಚರಿಸಿದೆ. ಚಂಡೀಗಢದ ಡಾ.ವಂದನ ನರುಲಾ ಅಧ್ಯಯನ ನಡೆಸಿದ್ದು, ಇದರಲ್ಲಿ ಶೇ 35ರಷ್ಟು ಪ್ರಕರಣದಗಳಲ್ಲಿ ಗಂಡು ಮತ್ತು ಹೆಣ್ಣಿನ ಫಲವತ್ತತೆ ಸಮಸ್ಯೆಗೆ ಪ್ರಮುಖ ಕಾರಣ ಮದ್ಯ ಸೇವನೆ ಎಂದು ತಿಳಿದು ಬಂದಿದೆ.

ಇತ್ತೀಚಿನ ದಿನಗಳಲ್ಲಿ ಪ್ರಪಂಚಾದ್ಯಂತ ಮದ್ಯ ಸೇವನೆ ಹೆಚ್ಚುತ್ತಿದೆ. ಅಧಿಕ ಆಲ್ಕೋಹಾಲ್​ ಸೇವನೆ ಅನೇಕ ಗಂಭೀರ ಆರೋಗ್ಯ ಪರಿಣಾಮಗಳನ್ನು ಹೊಂದಿದೆ. ಅಧ್ಯಯನದ ಅನುಸಾರ ಹೆಚ್ಚಿನ ಮದ್ಯ ಸೇವನೆ ವೀರ್ಯಾಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾರದಲ್ಲಿ 14 ಅಥವಾ ಅದಕ್ಕಿಂತ ಹೆಚ್ಚಿನ ಮದ್ಯ ಸೇವನೆ ಟೆಸ್ಟೊಸ್ಟ್ರೊನ್​ ಮಟ್ಟ ಮತ್ತು ವೀರ್ಯಾಣುಗಳ ಸಂಖ್ಯೆಯನ್ನು ಕಡಿತಗೊಳಿಸುತ್ತದೆ. ಮದ್ಯ ಫಲವತ್ತತೆಯ ಸಂಖ್ಯೆ, ಆಕಾರ ಮತ್ತು ವೀರ್ಯಾಣುಗಳ ಮೇಳೆ ಹೆಚ್ಚಿನ ಪರಿಣಾಮ ಹೊಂದಿದೆ.

ಗರ್ಭಧಾರಣೆ ಮೇಲೆ ಪರಿಣಾಮ: ಈ ಬಗ್ಗೆ ಹೆಚ್ಚಿನ ಅರಿವಿಲ್ಲದ ದಂಪತಿ ಅಧಿಕ ಪ್ರಮಾಣದ ಮದ್ಯ ಸೇವಿಸಿ, ಗರ್ಭ ಧರಿಸುವ ಯತ್ನ ನಡೆಸುವುದು ಅಪಾಯಕಾರಿ. ಇತ್ತೀಚೆಗೆ ದಂಪತಿ ಅತಿ ಹೆಚ್ಚಿನ ಮದ್ಯ ಸೇವನೆ ಹೇಗೆ ತಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಗರ್ಭ ಧರಿಸಲು ಅವರು ನಿರಂತರ ಪ್ರಯತ್ನ ನಡೆಸುತ್ತಿದ್ದರು. ಕಡೆಗೆ ಗರ್ಭ ಧರಿಸಿದಾಗ ಪದೇ ಪದೇ ಗರ್ಭಪಾತಗಳಾಗಿದ್ದವು.

ಪರೀಕ್ಷೆ ನಡೆಸಿದಾಗ ಗಂಡನ ವೀರ್ಯಾಣು ಸಂಖ್ಯೆ ಕಡಿಮೆ ಇರುವುದು ಪತ್ತೆಯಾಗಿದೆ. ಇದರ ಗುಣಮಟ್ಟವೂ ಕಳಪೆಯಾಗಿತ್ತು. ಇದಕ್ಕೆ ಕಾರಣ ಮದ್ಯ ಸೇವನೆ. ಆದಾಗ್ಯೂ, ವೈದ್ಯಕೀಯ ತಜ್ಞರನ್ನು ಸಮಾಲೋಚಿಸಿ, ಆಲ್ಕೋಹಾಲ್​ ಸೇವನೆ ಪ್ರಮಾಣ ಕಡಿಮೆ ಮಾಡುವಂತೆ ಆತನಿಗೆ ತಿಳಿಹೇಳಲಾಗಿತ್ತು. ಇದರಿಂದ ಅವರ ವೀರ್ಯಾಣ ಸಂಖ್ಯೆ ಹೆಚ್ಚುವುದರ ಜೊತೆ ಗುಣಮಟ್ಟ ಸುಧಾರಿಸಿತು. ಇದರಿಂದ ಕಡೆಗೆ ಅವರು ಮಗುವನ್ನು ಹೊಂದಬೇಕು ಎಂಬ ಆಸೆ ಪೂರೈಸಿತು.

ಮದ್ಯ ಗಂಡು ಮತ್ತು ಹೆಣ್ಣು ಇಬ್ಬರ ಫಲವತ್ತತೆ ಮೇಲೆ ಪರಿಣಾಮ ಬೀರಲಿದೆ ಎಂದು ಅಧ್ಯಯನ ತಿಳಿಸಿದೆ. ವಾರದಲ್ಲಿ 40 ಯುನಿಟ್​ಗಿಂತಲೂ ಹೆಚ್ಚು ಮದ್ಯ ಸೇವನೆ ಮಾಡುವ ಪುರುಷರ ಫಲವತ್ತತೆ ವಾರದಲ್ಲಿ 1-5 ಯುನಿಟ್​ ಮದ್ಯ ಸೇವನೆ ಮಾಡುವ ಪುರುಷರ ಉತ್ಪಾದನಾ ಮಟ್ಟಕ್ಕಿಂತ ಕಡಿಮೆ ಇರುತ್ತದೆ. ಅದು ಹಾರ್ಮೋನ್​ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಮದ್ಯವೂ ಅಂಡಾಣು ಮತ್ತು ವೀರ್ಯಾಣುಗಳ ಅಭಿವೃದ್ಧಿಗೆ ತೊಡಕಾಗುತ್ತದೆ.

ಡಾ.ವಂದನಾ ಹೇಳುವಂತೆ, ಅನೇಕ ಅಧ್ಯಯನ ನಡೆದಿದೆ. ದಂಪತಿ ನಮ್ಮನ್ನು ಸಂಪರ್ಕಿಸಿದಾಗ ನಾವು ಅವರ ಆರೋಗ್ಯ ಇತಿಹಾಸ ನೋಡುತ್ತೇವೆ. ಇದರಲ್ಲಿ ಶೇ 40ರಿಂದ 50ರಷ್ಟು ರೋಗಿಗಳು ವೀರ್ಯಾಣು ಕೊರತೆ ಮತ್ತು ಅನಿಮಿಯತ ವೀರ್ಯಾಣ ಆಕಾರವನ್ನು ಹೊಂದಿರುತ್ತಾರೆ. ಕಳೆದ 14 ವರ್ಷದಲ್ಲಿ ಜಾಗತಿಕವಾಗಿ ವೀರ್ಯಾಣು ಸಂಖ್ಯೆಗಳ ಕೊರತೆಯ ಪ್ರಕರಣಗಳು ಹೆಚ್ಚುತ್ತಿದೆ. ಪ್ರತಿದಿನ ಮದ್ಯ ಸೇವನೆ ಮಾಡುವುದರಿಂದ ವೀರ್ಯಾಣುಗಳ ಗುಣಮಟ್ಟ ನಾಶವಾಗುತ್ತಿದೆ. ಈ ಕುರಿತು ಜಾಗೃತಿ ಅವಶ್ಯಕವಾಗಿದೆ.

ಇದನ್ನೂ ಓದಿ: ರಾಷ್ಟ್ರೀಯ ಸುರಕ್ಷಾ ತಾಯ್ತನ ದಿನ 2023: ತಾಯಂದಿರ ಆರೋಗ್ಯ ಆರೈಕೆ ಸೇವೆಗೆ ನೀಡಬೇಕಿದೆ ಒತ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.