ಲಂಡನ್: ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೂ ದೀರ್ಘಕಾಲ ಒಂದೇ ಕಾಲ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಅಪಾಯವನ್ನು ಹೆಚ್ಚಿಸುತ್ತದೆ. ಪ್ರತಿ ಅರ್ಧ ಗಂಟೆಗೊಮ್ಮೆ ಮೂರು ನಿಮಿಷಗಳ ಒಂದು ನಡಿಗೆಯು ಟೈಪ್-1 ಡಯಾಬೀಟಿಸ್ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಣೆ ಮಾಡಲು ಸಹಾಯ ಆಗುತ್ತದೆ ಎಂದು ಸಂಶೋಧನೆ ತಿಳಿಸಿದೆ. ಟೈಪ್ 1 ಡಯಾಬಿಟಿಸ್ ದೀರ್ಘಕಾಲಿಕ ಪರಿಸ್ಥಿತಿ ಹೊಂದಿದ್ದು, ಇದು ದೇಹದಲ್ಲಿ ಕಡಿಮೆ ಅಥವಾ ಶೂನ್ಯ ಇನ್ಸುಲಿನ್ ಉತ್ಪಾದನೆ ಮಾಡುತ್ತದೆ. ಕುಳಿತುಕೊಳ್ಳುವ ಸಮಯದಿಂದ ತೆಗೆದುಕೊಳ್ಳುವ ಈ ಸಣ್ಣ ಬ್ರೇಕ್ ಅನ್ನು ಆ್ಯಕ್ಟಿವ್ ಸ್ನಾಕಿಂಗ್ ಎಂದು ಕರೆಯಲಾಗುವುದು. ಇದು ವೆಚ್ಚ ರಹಿತವಾದ ಕಡಿಮೆ ರಕ್ತದ ಸಕ್ಕರೆ ಮಟ್ಟವನ್ನು ನಿರ್ವಹಣೆಗೆ ಸಹಾಯ ಮಾಡುತ್ತದೆ. ಈ ಅಭ್ಯಾಸ ಭವಿಷ್ಯದ ತೊಂದರೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯವಾಗುತ್ತದೆ.
ಟೈಪ್ 1 ಡಯಾಬಿಟಿಸ್ ಜನರಲ್ಲಿ ರಕ್ತದ ಸಕ್ಕರೆ ಮಟ್ಟ ನಿರ್ವಹಣೆ ಜೊತೆಗೆ ದೈಹಿಕ ಕ್ರಿಯಾಶೀಲತೆ ನಿರ್ವಹಣೆ ಕೂಡ ಅಗತ್ಯ. ಆದರೆ ಪ್ರತಿನಿತ್ಯ ಚಟುವಟಿಕೆಯಲ್ಲಿ ಈ ವ್ಯಾಯಾಮವನ್ನು ರೂಢಿಸಿಕೊಳ್ಳುವುದು ಸವಾಲು ಆಗಲಿದೆ. ಅಲ್ಲದೇ, ನಿಯಮಿತವಾಗಿ ವ್ಯಾಯಮ ಮಾಡುತ್ತಿರುವ ಜನರು ಕೂಡ ದೀರ್ಘಕಾಲ ಒಂದೇ ಕಡೆ ಕುಳಿತುಕಕೊಳ್ಳುವುದೂ ಉತ್ತಮವಲ್ಲ ಎಂದು ಡಾ ಎಲಿಜಬೆತ್ ರಾಬರ್ಟ್ಸನ್ ತಿಳಿಸಿದ್ದಾರೆ.
ರಾಬರ್ಟ್ಸನ್ ಈ ಕುರಿತು ಸರಳ ಸಲಹೆ ನೀಡಿದ್ದು, ನಿರ್ದಿಷ್ಟ ಬದಲಾವಣೆಗೆ ಒತ್ತು ನೀಡಿದ್ದಾರೆ. ಅಂದರೆ, ಫೋನ್ನಲ್ಲಿ ಮಾತನಾಡುವಾಗ ಕುಳಿತುಕೊಳ್ಳುವ ಬದಲು ನಡೆದಾಡುವುದು ಉತ್ತಮ. ಇದು ಕೂಡ ದೀರ್ಘಾವಧಿ ಬ್ರೇಕ್ ನೀಡುತ್ತದೆ ಎಂದಿದ್ದಾರೆ. ಹಿಂದಿನ ಸಂಶೋಧನೆಯಲ್ಲಿ ಕೂಡ ಟೈಪ್ 2 ಡಯಾಬಿಟಿಸ್ ಹೊಂದಿರುವ ಜನರಲ್ಲಿ ರಕ್ತದ ಸಕ್ಕರೆ ಮಟ್ಟ ನಿರ್ವಹಣೆ ಮತ್ತು ಅಪಾಯವನ್ನು ಕಡಿಮೆ ಮಾಡಲು ದೀರ್ಘಾವಧಿ ಕುಳಿತುಕೊಳ್ಳುವುದರಿಂದ ಸಣ್ಣ ವಿರಾಮ, ನಿಯಮಿತ ನಡೆಗೆ ಸಹಾಯ ಮಾಡುತ್ತದೆ ಎಂದು ತೋರಿಸಿದೆ. ಕ್ರಿಯಾಶೀಲವಾಗಿರುವುರಿಂದ ಗ್ಲೂಕೋಸ್ ಪ್ರಮಾಣವನ್ನು ಹೆಚ್ಚಿಸುತ್ತದೆ. ದೇಹವು ಇನ್ಸುಲಿನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡುತ್ತದೆ.
ಆದರೆ, ಟೈಪ್ 2 ಡಯಾಬಿಟಿಸ್ ಇದೇ ರೀತಿಯ ಪ್ರಯೋಜನ ಹೊಂದಿದ್ಯಾ ಎಂಬುದರ ಬಗ್ಗೆ ಇದುವರೆಗೆ ತಿಳಿದುಬಂದಿಲ್ಲ. ಇದನ್ನು ಅರ್ಥೈಸಿಕೊಳ್ಳಲು 23 ಭಾಗಿದಾರರನ್ನು ನೇಮಕ ಮಾಡಲಾಗಿದೆ. ಒಂದು ಸೆಷನ್ನಲ್ಲಿ ಅವರಿಗೆ ಏಳು ಗಂಟೆಗಳ ಕಾಲ ಒಂದೇ ಕಡೆ ಕುಳಿತುಕೊಳ್ಳುವಂತೆ ತಿಳಿಸಲಾಗಿದೆ. ಮತ್ತೊಂದು ಸೆಷನ್ನಲ್ಲಿ ಗುಂಪಿನ ಜನರಿಗೆ ಪ್ರತಿ ಅರ್ಧಗಂಟೆಗೆ ಮೂರು ನಿಮಿಷದ ಸಣ್ಣ ನಡಿಗೆ ರೂಢಿಸಲಾಗಿದೆ.
ಪ್ರತಿ ಕುಳಿತುಕೊಳ್ಳುವ ಅವಧಿಯ ಬಳಿಕ 48 ಗಂಟೆಗಳಲ್ಲಿ ಭಾಗಿದಾರರ ರಕ್ತದಲ್ಲಿನ ಸಕ್ಕರೆ ಮಟ್ಟದ ಸಿಜಿಎಂ ಅನ್ನು ಟ್ರ್ಯಾಕ್ ಮಾಡಲಾಗಿದೆ. ನಿಯಮಿತ ನಡಿಗೆ ಅವರ ರಕ್ತದ ಸಕ್ಕರೆ ಮಟ್ಟದ ಸರಾಸರಿಯನ್ನು ಕಡಿಮೆ ಮಾಡಿದೆ. ದೀರ್ಘ ಅವಧಿ ಕುಳಿತವರಲ್ಲಿ ಈ ರಕ್ತದ ಸಕ್ಕರೆ ಮಟ್ಟ ಇಳಿಕೆ ಕಂಡಿಲ್ಲ.
ದೀರ್ಘಾವಧಿಯ ಕುಳಿತುಕೊಳ್ಳುವಿಕೆಯಿಂದ ಬ್ರೇಕ್ ಪಡೆದು ಸಣ್ಣ ಪ್ರಮಾಣದ ಕ್ರಿಯಾಶೀಲತೆ ತೊಡಗುವುದನ್ನು ದೈನಂದಿನ ವ್ಯಾಯಾಮ ಮಾಡುವವರು, ಮಾಡದೇ ಇರುವವರು ರೂಢಿಸಿಕೊಳ್ಳಬೇಕು. ಕೆಲವು ಮಂದಿಯಲ್ಲಿ ಆಕ್ಟಿವ್ ಸ್ನಾಕಿಂಗ್ ನಿಯಮಿತ ಚಟುವಟಿಕೆ ಅಥವಾ ವ್ಯಾಯಾಮಕ್ಕಿಂತ ಹೆಚ್ಚು ಲಾಭ ತರಲಿದೆ. ಇದು ದೇಹದ ರಕ್ತದ ಗ್ಲುಕೋಸ್ ಮಟ್ಟ ನಿರ್ವಹಣೆಗೆ ಸರಳ ಮತ್ತು ಸ್ವೀಕಾರಾರ್ಹ ಚಟುವಟಿಕೆ ಇದಾಗಿದೆ ಎಂದು ಡಾ ಮಥ್ಯೈ ಕ್ಯಾಂಪ್ಬೆಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿನ ಕಳಪೆ ವಾಯು ಗುಣಮಟ್ಟದಿಂದ ಶಿಶುಗಳಲ್ಲಿ ಅರಿವಿನ ಸಮಸ್ಯೆ