ETV Bharat / sukhibhava

ಕ್ಯಾನ್ಸರ್​ ಚಿಕಿತ್ಸೆಗೆ ವಿಟಮಿನ್​ ಡಿ ಪರಿಣಾಮ ಬೀರಬಲ್ಲದು: ಅಧ್ಯಯನ

ವಿಟಮಿನ್​ ಡಿ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಕಾಪಾಡುವುದು ಸೇರಿದಂತೆ ದೇಹದ ಮೇಲೆ ಇನ್ನಿತರ ಪರಿಣಾಮವನ್ನು ಬೀರುತ್ತದೆ.

Effect of vitamin D in cancer treatment; study

author img

By

Published : Apr 25, 2023, 11:48 AM IST

ಲಂಡನ್​: ಕ್ಯಾನ್ಸರ್ ವಿರೋಧಿ ಇಮ್ಯೂನೊಥೆರಪಿ ಅದರಲ್ಲೂ ವಿಶೇಷವಾಗಿ ಸುಧಾರಿತ ಚರ್ಮ ಕಾನ್ಸರ್​ನಲ್ಲಿ ವಿರುದ್ಧ ಹೋರಾಡಲು ವಿಟಮಿನ್​ ಡಿ ಮಟ್ಟ ಪ್ರಮುಖ ಪಾತ್ರವಹಿಸುತ್ತದೆ ಎಂದು ಅಧ್ಯಯನ ಒಂದು ತಿಳಿಸಿದೆ. ಪೀರ್​ ರಿವ್ಯೂಡ್​ ಕ್ಯಾನ್ಸರ್​ ಜರ್ನಲ್​ನಲ್ಲಿ ಈ ಕುರಿತು ವರದಿಯನ್ನು ಪ್ರಕಟಿಸಲಾಗಿದೆ. ಇಮ್ಯೂನೊಥೆರಪಿ ಔಷಧಗಳನ್ನು ಪಡೆಯಲು ಸಾಮಾನ್ಯ ವಿಟಮಿನ್​ ಡಿ ಮಟ್ಟ ನಿರ್ವಹಣೆ ಮಾಡುವುದು ಅಗತ್ಯವಾಗಿದೆ ಎಂದು ಆ ವರದಿಯಲ್ಲಿ ಹೇಳಲಾಗಿದೆ.

ವಿಟಮಿನ್​ ಡಿ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಕಾಪಾಡುವುದು ಸೇರಿದಂತೆ ದೇಹದ ಮೇಲೆ ಇನ್ನಿತರ ಪರಿಣಾಮವನ್ನು ಬೀರುತ್ತದೆ. ವಿಟಮಿನ್​ ಡಿ ಇಮ್ಯೂನೊ ಚೆಕ್​ಪಾಯ್ಡ್​​ ಇನ್ಹಬಿಟರ್​ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಲು ತಂಡವು ಸುಧಾರುತ ಮೆಲನೊಮ ಜೊತೆ 200 ರೋಗಿಗಳ ರಕ್ತಗಳ ಪರೀಕ್ಷೆಯನ್ನು 12 ವಾರಗಳ ಕಾಲ ಇಮ್ಯೂನೊಥೆರಪಿ ಚಿಕಿತ್ಸೆಗಿಂತ ಮುಂಚೆ ಮತ್ತು ನಂತರ ನಡೆಸಲಾಗಿತ್ತು.

ಪ್ರತಿರಕ್ಷಣಾ ಚೆಕ್‌ಪಾಯಿಂಟ್ ಇನ್ಹಿಬಿಟರ್‌ಗಳಿಗೆ ಅನುಕೂಲಕರವಾದ ಪ್ರತಿಕ್ರಿಯೆ ದರವನ್ನು ತಂಡ ಗುರುತಿಸಿದೆ. ಅಧ್ಯಯನ ಗುಂಪಿನಲ್ಲಿನ 56.0 ಪ್ರತಿಶತ ರೋಗಿಗಳಲ್ಲಿ ಸಾಮಾನ್ಯ ಬೇಸ್‌ಲೈನ್ ವಿಟಮಿನ್ ಡಿ ಮಟ್ಟಗಳು ಅಥವಾ ವಿಟಮಿನ್ ಡಿ ಪೂರೈಕೆಯೊಂದಿಗೆ ಪಡೆದ ಸಾಮಾನ್ಯ ಮಟ್ಟಗಳಲ್ಲಿ ಕಂಡು ಬಂದಿದೆ. ಪ್ರಗತಿ ಮುಕ್ತ ಬದುಕುಳಿಯುವಿಕೆ ಚಿಕಿತ್ಸೆಯ ಪ್ರಾರಂಭದಿಂದ ಕ್ಯಾನ್ಸರ್ ಪ್ರಗತಿಯವರೆಗಿನ ಸಮಯ - ಈ ಗುಂಪುಗಳಲ್ಲಿ ಕ್ರಮವಾಗಿ 11.25 ಮತ್ತು 5.75 ತಿಂಗಳುಗಳ ಕಾಲ ಈ ಅಧ್ಯಯನ ನಡೆಸಲಾಗಿದೆ.

ಇದನ್ನು ಓದಿ: ಮುಖದ ಅಂದ ಹಾಳುಗೆಡುವ ನರಹುಲಿಗಳು; ಕಾರಣ, ಪರಿಹಾರ

ಸಹಜವಾಗಿ, ವಿಟಮಿನ್ ಡಿ ಕ್ಯಾನ್ಸರ್ ವಿರೋಧಿ ಔಷಧವಲ್ಲ. ಆದರೆ ಪ್ರತಿರಕ್ಷಣಾ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಗೆ ಅದರ ಸಾಮಾನ್ಯ ಸೀರಮ್ ಮಟ್ಟವು ಅಗತ್ಯವಾಗಿರುತ್ತದೆ. ಪ್ರತಿರಕ್ಷಣಾ ಚೆಕ್‌ಪಾಯಿಂಟ್ ಇನ್ಹಿಬಿಟರ್‌ಗಳಂತಹ ಕ್ಯಾನ್ಸರ್ ವಿರೋಧಿ ಔಷಧಗಳು ಪರಿಣಾಮ ಬೀರುವ ಪ್ರತಿಕ್ರಿಯೆ ಒಳಗೊಂಡಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಹೀಗಂತಾ ಅಧ್ಯಯನದ ಪ್ರಮುಖ ಲೇಖಕ ಲುಕಾಸ್ ತಿಳಿಸಿದ್ದಾರೆ.

ನಮ್ಮ ಅಭಿಪ್ರಾಯದಲ್ಲಿ, ಫಲಿತಾಂಶದ ಅನುಸಾರ ವಿಟಮಿನ್ ಡಿ ಮಟ್ಟಗಳ ಮೌಲ್ಯಮಾಪನ ಮತ್ತು ಅದರ ಪೂರಕವನ್ನು ಮೆಲನೋಮ ನಿರ್ವಹಣೆಯಲ್ಲಿ ಪರಿಗಣಿಸಬಹುದು. ಮೆಲನೋಮವು ಒಂದು ರೋಗವಾಗಿದ್ದು, ಇದರಲ್ಲಿ ಕ್ಯಾನ್ಸರ್​ನ ಮಾರಣಾಂತಿಕ ಜೀವಕೋಶಗಳು ಮೆಲನೋಸೈಟ್‌ಗಳಲ್ಲಿ ರೂಪಿಸುತ್ತವೆ. ಮೆಲನೋಮ ಚರ್ಮದ ಮೇಲೆ ಎಲ್ಲಿಯಾದರೂ ಸಂಭವಿಸಬಹುದು. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮತ್ತು ಆರೋಗ್ಯ ಇತಿಹಾಸವು ಮೆಲನೋಮಾದ ಅಪಾಯದ ಮೇಲೆ ಪರಿಣಾಮ ಬೀರಬಹುದು.

ಈ ಸಂಬಂಧ ಈ ಹಿಂದೆ ಪ್ರಕಟವಾದ ಅಧ್ಯಯನದಲ್ಲಿ, ವಿಟಮಿನ್ ಡಿ ಅನ್ನು ನಿಯಮಿತವಾಗಿ ತೆಗೆದುಕೊಳ್ಳುವ ಜನರಲ್ಲಿ ಸಾಮಾನ್ಯವಾಗಿ ಮೆಲನೋಮವನ್ನು ಹೊಂದುವ ಸಾಧ್ಯತೆ ಕಡಿಮೆ ಎಂದು ತೋರಿಸಿದೆ. ಅವರು ಭವಿಷ್ಯದಲ್ಲಿ ಮೆಲನೋಮವನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಕಡಿಮೆ ಎಂದು ಚರ್ಮಶಾಸ್ತ್ರಜ್ಞರು ಪರಿಗಣಿಸಿದ್ದಾರೆ. ಹೀಗಾಗಿ ವಿಟಮಿನ್​ ಡಿ ಕ್ಯಾನ್ಸರ್​​​​​​​ ರೋಗ ಗುಣಪಡಿಸಲುವಲ್ಲಿ ಸಹಕಾರಿ ಆಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಅಡುಗೆ ಮಾಡುವಾಗ ಉಂಟಾಗುವ ಮಾಲಿನ್ಯದಿಂದ ಹೆಚ್ಚಿನ ಅಪಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.