ETV Bharat / sukhibhava

Sexual abuse : ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಲು ಬೇಕಿದೆ ಅಗತ್ಯ ಕ್ರಮ.. - ಲೈಂಗಿಕ ದೌರ್ಜನ್ಯದ ಪ್ರಕರಣಗಳು ಏರಿಕೆ

ಲೈಂಗಿಕ ದೌರ್ಜನ್ಯದ ವಿರುದ್ಧ ಮಕ್ಕಳನ್ನು ರಕ್ಷಣೆ ಮಾಡಲು ಈ ಬಗ್ಗೆ ಅವರಿಗೆ ಮುಕ್ತವಾಗಿ ತಿಳಿ ಹೇಳುವ ಪ್ರಯತ್ನವನ್ನು ನಡೆಸಬೇಕಿದೆ.

Educate children about  sexual abuse
Educate children about sexual abuse
author img

By ETV Bharat Karnataka Team

Published : Sep 13, 2023, 12:19 PM IST

ನವದೆಹಲಿ: ದೇಶದಲ್ಲಿ ಚಿಕ್ಕ ಮಕ್ಕಳು ಮತ್ತು ಹದಿಹರೆಯದ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಏರಿಕೆಯಾಗುತ್ತಿದ್ದು, ಮಕ್ಕಳಿಗೆ ಈ ಬಗ್ಗೆ ಎಚ್ಚರಿಕೆ, ಜಾಗ್ರತೆಯಿಂದ ವರ್ತಿಸುವಂತೆ ಮತ್ತು ಕೆಟ್ಟ ಸ್ಪರ್ಶಗಳ ಕುರಿತು ತಿಳಿಸುವ ಅಗತ್ಯ ಇದೆ. ಮಕ್ಕಳಿಗೆ ಹೇಗೆ ನಾವು ರಸ್ತೆ ದಾಟುವುದು, ಬಿಸಿ ಪಾತ್ರೆಗಳನ್ನು ಮುಟ್ಟುವುದು ಎಂಬುದನ್ನು ಕಲಿಸುವಂತೆ ಈ ಬಗ್ಗೆ ಕೂಡ ಜ್ಞಾನ ನೀಡುವುದು ಅಗತ್ಯವಾಗಿದೆ. ದುರದೃಷ್ಟವಶಾತ್​​, ಅನೇಕ ಕುಟುಂಬಗಳು ಈ ವಿಚಾರವನ್ನು ಮುಕ್ತವಾಗಿ ಮಕ್ಕಳೊಂದಿಗೆ ಮಾತನಾಡುವುದಿಲ್ಲ. ನಮ್ಮ ಸಮಾಜ ಲೈಂಗಿಕತೆ, ಕಿರುಕುಳ, ಸುರಕ್ಷತೆ ಕುರಿತು ಚರ್ಚೆ ಮಾಡುವುದನ್ನು ಒಂದು ರೀತಿಯ ನಿಷೇಧದಂತೆ ಪರಿಗಣಿಸುತ್ತದೆ.

ಮಕ್ಕಳನ್ನು ಲೈಂಗಿಕ ದೌರ್ಜನ್ಯದಂತಹ ಘಟನೆಗಳಿಂದ ರಕ್ಷಿಸುವುದು ಪೋಷಕರ ಉಪಕ್ರಮಗಳಿಂದ ಸಾಧ್ಯವಿದೆ. ಈ ಬಗ್ಗೆ ಮಾತುಕತೆಯು ಮಕ್ಕಳ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದಾಗಿ ಮಹತ್ವದ್ದಾಗಿದೆ. ಇದು ಮಕ್ಕಳಿಗೆ ಅಹಿತಕರ ಸಂದರ್ಭದಲ್ಲೂ ಕೂಡ ಅವರ ಬೆನ್ನ ಹಿಂದೆ ಪೋಷಕರು ಇದ್ದಾರೆ ಎಂಬ ಭರವಸೆಯನ್ನು ನೀಡುತ್ತದೆ. ಸರ್ಕಾರ ಕೂಡ ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳಗಳಿಂದ ರಕ್ಷಿಸಿ, ಅವರ ಯೋಗಕ್ಷೇಮ ಕಾಪಾಡುವ ದೃಷ್ಟಿಯಿಂದ ಪೋಕ್ಸೋ ಕಾಯ್ದೆ 2012 ಅನ್ನು ಜಾರಿಗೆ ತಂದಿದೆ.

ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವುದು ಮತ್ತು ಅವರಲ್ಲಿ ಜಾಗೃತಿ ಮೂಡಿಸುವುದು ಅವಶ್ಯ ಎಂಬುದಕ್ಕೆ ಇಲ್ಲಿ ಬಲವಾದ ಕಾರಣಗಳು ಇಲ್ಲಿವೆ..

ಜೀವನದ ಮೇಲೆ ಆಗುವ ಮಾನಸಿಕ ಮತ್ತು ದೈಹಿಕ ಆಘಾತ ತಪ್ಪಿಸುವುದು: ಮಕ್ಕಳ ಮೇಲಿನ ಲೈಂಗಿಕ ಕಿರುಕುಳದಿಂದ ಅವರು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಗಂಭೀರವಾಗಿ ಹಾನಿ ಉಂಟಾಗುತ್ತದೆ. ಇದರಿಂದ ಅವರಲ್ಲಿ ಆಘಾತವಾಗುತ್ತದೆ. ಆತಂಕ, ಖಿನ್ನತೆ, ಆಘಾತದ ನಂತರ ಒತ್ತಡ ಸಮಸ್ಯೆ (ಪಿಟಿಎಸ್​ಡಿ) ಮತ್ತು ಆತ್ಮಹತ್ಯೆಯಂತಹ ಯೋಚನೆಗಳು ಬರುತ್ತವೆ. ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ತಪ್ಪಿಸುವ ಮೂಲಕ ಅವರ ಮೇಲೆ ಉಂಟಾಗುವ ಆಘಾತವನ್ನು ತಪ್ಪಿಸಬಹುದು.

ಬಾಲ್ಯ ಕಾಪಾಡುವುದು: ಪ್ರತಿಯೊಂದು ಮಗುವಿಗೆ ಸುರಕ್ಷಿತ ಬಾಲ್ಯವನ್ನು ಹೊಂದುವ ಹಕ್ಕು ಇರುತ್ತದೆ. ಲೈಂಗಿಕ ಕಿರುಕುಳ ಅದರ ಮುಗ್ಧತೆಯನ್ನು ಮತ್ತು ಬೇರೆಯವರನ್ನು ನಂಬುವ ಸಾಮರ್ಥ್ಯವನ್ನು ಕಳೆದು ಹಾಕುತ್ತದೆ. ಮಗುವಿನ ಜೀವನದ ಈ ದುರ್ಬಲ ಹಂತದಲ್ಲಿ ಧನಾತ್ಮಕ ಮತ್ತು ಆರೋಗ್ಯಕರ ಅಭಿವೃದ್ಧಿಗೆ ಶ್ರಮಿಸಬೇಕಿದೆ.

ಸಬಲೀಕರಣ ಮತ್ತು ಸ್ವಾಭಿಮಾನ: ಲೈಂಗಿಕ ದೌರ್ಜನ್ಯ ಕುರಿತು ಅರಿವು ಮೂಡಿಸಿದಾಗ ಮಕ್ಕಳು ತಮ್ಮ ಹಕ್ಕು ಮತ್ತು ವೈಯಕ್ತಿಕ ಗಡಿಗಳ ಬಗ್ಗೆ ಜ್ಞಾನ ಹೊಂದಿ ಸ್ವಾಭಿಮಾನಿಗಳಾಗಲು ಸಾಧ್ಯ. ಜೊತೆಗೆ ಸೂಕ್ಷ್ಮತೆ ಅರಿಯುವ ಜೊತೆಗೆ ಅಹಿತರಕರ ಭಾವನೆಗಳನ್ನು ಹಿಮ್ಮೆಟ್ಟಿಸಲು ಕಲಿಯುತ್ತಾರೆ.

ಭವಿಷ್ಯದ ಕಿರುಕುಳವನ್ನು ತಡೆಗಟ್ಟುವಿಕೆ: ಮಕ್ಕಳಿಗೆ, ಪೋಷಕರಿಗೆ, ಆರೈಕೆದಾರರಿಗೆ ಮತ್ತು ಸಮುದಾಯಗಳಿಗೆ ಮಕ್ಕಳ ಮೇಲಿನ ಲೈಂಗಿಕ ಕಿರುಳ ಕುರಿತು ಶಿಕ್ಷಣ ನೀಡುವುದರಿಂದ ಅವರಿಗೆ ಭವಿಷ್ಯದಲ್ಲಿ ಇಂತಹ ಘಟನೆಗಳು ಉಂಟಾಗುವುದನ್ನು ತಡೆಯಬಹುದು. ಈ ಬಗ್ಗೆ ಜಾಗೃತಿ ಮೂಡಿಸುವುದರಿಂದ ಮಕ್ಕಳು ಲೈಂಗಿಕ ದೌರ್ಜನ್ಯವನ್ನು ಎದುರಿಸುವ ಸಹನೆಯನ್ನು ನಿರಾಕರಿಸಬಹುದು.

ರಕ್ಷಣಾತ್ಮಕ ವ್ಯವಸ್ಥೆ: ಲೈಂಗಿಕ ದೌರ್ಜನ್ಯದ ಜಾಗೃತಿ ಮೂಡಿಸುವುದರಿಂದ ರಕ್ಷಣಾತ್ಮಕ ನಿಯಮ, ಶಾಸನ ಮತ್ತು ವ್ಯವಸ್ಥೆಗಳನ್ನು ಸುಧಾರಿಸಬಹುದು. ವೃತ್ತಿಪರರು ಮಕ್ಕಳೊಂದಿಗೆ ಕೆಲಸ ಮಾಡಿದಾಗ ಅಂದರೆ ಶಿಕ್ಷಕರು, ಆರೈಕೆದಾರರು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಬಗ್ಗೆ ಅವರಲ್ಲಿ ದೌರ್ಜನ್ಯದ ಚಿಹ್ನೆಗಳ ಬಗ್ಗೆ ತಿಳಿಸಿ ಮತ್ತು ಅದಕ್ಕೆ ಸರಿಯಾದ ರೀತಿಯಲ್ಲಿ ವರ್ತಿಸುವಂತೆ ಜಾಗೃತಿ ಮೂಡಿಸಬಹುದು.

ಬಹಿರಂಗ ಪಡಿಸುವುದು ಮತ್ತು ಸಹಾಯ ಪಡೆಯುವುದಕ್ಕೆ ಪ್ರೋತ್ಸಾಹ: ಮಕ್ಕಳನ್ನು ಘಟನೆ ಕುರಿತು ತಿಳಿಸುವಂತೆ ಅವರಿಗೆ ಬೇಕಾದ ಸಹಾಯ ಕೇಳುವಂತೆ ಅವರಿಗೆ ಮಾಹಿತಿ ಮತ್ತು ಸಬಲೀಕರಣಗೊಳಿಸಬೇಕು. ಜಾಗೃತಿ ಹೆಚ್ಚಿಸುವ ಮೂಲಕ ಮತ್ತು ಸಂವಹನ ನಡೆಸುವ ಮೂಲಕ ಭವಿಷ್ಯದಲ್ಲಿ ಆಗುವ ಹಾನಿಯನ್ನು ತಪ್ಪಿಸಬಹುದು.

ಸಾಮಾಜಿಕ ಕಟ್ಟುಪಾಡುಗಳಿಂದ ಹೊರಬರಬೇಕಿದೆ: ಮಕ್ಕಳಲ್ಲಿ ಲೈಂಗಿಕ ಕಿರುಕುಳದ ಕುರಿತು ಜಾಗೃತಿ ಮೂಡಿಸುವ ಮೂಲಕ ಇದು ಮುಕ್ತ ಚರ್ಚೆ ವಿಷಯವಲ್ಲ ಎಂಬ ಸಾಮಾಜಿಕ ಕಟ್ಟುಪಾಡಿನಿಂದ ಹೊರ ಬರಬೇಕಿದೆ. ಇದು ಸಂತ್ರಸ್ತರಿಗೆ ಒಂದು ಹೆಜ್ಜೆ ಮುಂದೆ ಬರಲು, ನ್ಯಾಯ ಪಡೆಯಲು ಮತ್ತು ಅಗತ್ಯವಾದ ಬೆಂಬಲ ಪಡೆಯಲು ಸಹಾಯ ಮಾಡುತ್ತದೆ.

ಮಕ್ಕಳ ಜಾಗೃತಿ ಮೂಡಿಸಲು ಪೋಷಕರು, ಶಾಲೆಗಳು ಸಮುದಾಯ ಸಂಸ್ಥೆಗಳು, ಸರ್ಕಾರ ಮತ್ತು ಎನ್​ಜಿಒಗಳು ಸಹಕರಿಸಬೇಕಿದೆ. ಸಮಗ್ರ ಲೈಂಗಿಕ ಶಿಕ್ಷಣ ಕಾರ್ಯಕ್ರಮ ಜಾರಿಗೆ ತರಬೇಕಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಪತ್ತೆ ಮಾಡಿ, ಈ ಬಗ್ಗೆ ಜಾಗೃತಿ ಮೂಡಿಸಿ, ವರದಿ ಮಾಡುವ ವ್ಯವಸ್ಥೆ ನಿರ್ಮಾಣ ಮಾಡಬೇಕಿದೆ.

ಇದನ್ನೂ ಓದಿ.. ದೇಶದಲ್ಲಿ 10ರಲ್ಲಿ 6 ಮಂದಿ ಹದಿಹರೆಯದ ಹೆಣ್ಣುಮಕ್ಕಳನ್ನು ಕಾಡುತ್ತಿದೆ ರಕ್ತಹೀನತೆ; ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.