ETV Bharat / sukhibhava

ಕೋವಿಡ್ ಸಾಂಕ್ರಾಮಿಕತೆಯ ಸಮಯದಲ್ಲಿ ಹೆಣ್ಣು ಮಕ್ಕಳಲ್ಲಿ ತಿನ್ನುವ ಅಸ್ವಸ್ಥತೆ ಏರಿಕೆ​ - ಗಂಭೀರ ಅಪಾಯಗಳಿಗೂ ಕಾರಣ

ಕೋವಿಡ್​ ಸಾಂಕ್ರಾಮಿಕತೆ ಹಲವು ಸಮಸ್ಯೆಗಳಿಗೆ ಕಾರಣವಾಗಿತ್ತು. ಅದರಲ್ಲೂ ಮಕ್ಕಳಲ್ಲಿ ತಿನ್ನುವ ಅಸ್ವಸ್ಥತೆ ಉಂಟಾಗಿತ್ತು ಎಂಬ ವಿಚಾರದ ಬಗ್ಗೆ ದಿ ಲ್ಯಾನ್ಸೆಟ್​ ಚೈಲ್ಡ್​ ಆ್ಯಂಡ್​ ಅಡೊಲ್ಸೆಂಟ್​ ಹೆಲ್ತ್ ನಿಯತಕಾಲಿಕೆಯಲ್ಲಿ ಸಂಶೋಧಾತ್ಮಕ ವರದಿ ಪ್ರಕಟಿಸಲಾಗಿದೆ.

Eating disorders rise among teens during pandemic; Lancet

author img

By

Published : Jun 21, 2023, 3:28 PM IST

ಲಂಡನ್​: ತಿನ್ನುವ ಅಸ್ವಸ್ಥತೆಯೂ ಆರೋಗ್ಯದ ಪ್ರಮುಖ ಸಮಸ್ಯೆ. ಈ ಅನಾರೋಗ್ಯ ಗಂಭೀರ ಅಪಾಯಗಳಿಗೂ ಕಾರಣವಾಗುತ್ತದೆ. ಇಂತಹ ಅಸ್ವಸ್ಥತೆ ಹಾಗೂ ಸ್ವಯಂಹಾನಿ ಪ್ರಕ್ರಿಯೆಗಳು ಕೋವಿಡ್-​ 19 ಸಾಂಕ್ರಾಮಿಕತೆಯ ಬಳಿಕ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ಬ್ರಿಟನ್​ನಲ್ಲಿ 2010ರಿಂದ 2022ರವರೆಗೆ ನಡೆಸಿದ 10ರಿಂದ 24 ವರ್ಷದ 9 ಮಿಲಿಯನ್​ ರೋಗಿಗಳ ಎಲೆಕ್ಟ್ರಾನಿಕ್​ ಆರೋಗ್ಯ ದತ್ತಾಂಶದ ಆಧಾರದ ಮೇಲೆ ಅಧ್ಯಯನ ನಡೆಸಲಾಗಿದೆ. ಮಾರ್ಚ್​ 2020ರಲ್ಲಿ 13ರಿಂದ 16ರವರೆಗೆ ತಿನ್ನುವ ಅಸ್ವಸ್ಥತೆ ಶೇ 42ರಷ್ಟು ಹೆಚ್ಚಾಗಿದೆ. 17 ಮತ್ತು 19 ವರ್ಷದವರಲ್ಲಿ ಶೇ 32ರಷ್ಟು ತಿನ್ನುವ ಅಭ್ಯಾಸ ಹೆಚ್ಚಾಗಿದೆ.

13ರಿಂದ 16 ವರ್ಷದ ಯುವತಿಯರಲ್ಲಿ ಸ್ವಯಂ ಹಾನಿ ಸಂಭವ ಹೆಚ್ಚಿದೆ. ಇವರಲ್ಲಿ ಶೇ 38ರಷ್ಟು ತಿನ್ನುವ ಅಸ್ವಸ್ಥತೆ ಹೆಚ್ಚಿದೆ. ಇದಕ್ಕೆ ತದ್ವಿರುದ್ಧವಾಗಿ ಇತರೆ ವಯಸ್ಸಿನ ಗುಂಪಿನಲ್ಲಿ ಈ ರೀತಿ ಸ್ವಯಂ ಹಾನಿ ಘಟನೆಗಳು ಹೆಚ್ಚಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಪುರುಷರಲ್ಲಿ ಈ ರೀತಿಯ ಹೆಚ್ಚು ತಿನ್ನುವಿಕೆ ದರ ಕಂಡು ಬಂದಿಲ್ಲ.

ಮಾರ್ಚ್​ 2020ರ ನಂತರ ಕೋವಿಡ್​ನಿಂದಾಗಿ ಆರ್ಥಿಕ ವ್ಯತ್ಯಾಸದ ಸ್ತರ ವಿಸ್ತರಿಸಿದೆ. ಬಡ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಲ್ಲಿ ತಿನ್ನುವ ಅಸ್ವಸ್ಥತೆಯೂ ನಿರೀಕ್ಷೆಗಿಂತಲೂ ಶೇ 52ರಷ್ಟು ಹೆಚ್ಚಿದೆ. ಕನಿಷ್ಟ ವಂಚಿತ ಪ್ರದೇಶಗಳಿಗಿಂತ ಶೇ 22ರಷ್ಟು ಹೆಚ್ಚಳ ಗಮನಿಸಬಹುದು. ಸ್ವಯಂ ಹಾನಿ ಮತ್ತು ತಿನ್ನುವ ಅಸ್ವಸ್ಥತೆಯು ಪ್ರಮುಖ ಎರಡು ಆರೋಗ್ಯ ಸಮಸ್ಯೆಯಾಗಿದ್ದು, ಇದು ಮಾನಸಿಕ ಅಸ್ವಸ್ಥತೆಯ ಸೂಚನೆಯ ಜೊತೆಗೆ ಅನೇಕ ಅಪಾಯದ ಅಂಶಗಳನ್ನೂ ಒಳಗೊಂಡಿದೆ.

ಅತಿ ಹೆಚ್ಚು ತಿನ್ನುವ ಅಸ್ವಸ್ಥತೆ ಮತ್ತು ಸ್ವಯಃ ಹಾನಿ ಹೆಣ್ಣು ಮಕ್ಕಳಲ್ಲಿ ಸಾಂಕ್ರಾಮಿಕತೆ ಸಮಯದಲ್ಲಿ ಹೆಚ್ಚಲು ಪ್ರಮುಖ ಕಾರಣ ಸಾಮಾಜಿಕ ಪ್ರತ್ಯೇಕೀಕರಣ, ಆತಂಕ, ದೈನಂದಿನ ದಿನಚರಿ ಬದಲಾವಣೆ ಮತ್ತು ಶಿಕ್ಷಣದ ಅಡೆತಡೆ ಎಂದು ಮಾಂಚೆಸ್ಟರ್​​ ವಿಶ್ವವಿದ್ಯಾಲಯದ ಪ್ರಮುಖ ಲೇಖಕ ಪರ್ಸ್​ ಮೊಕ್​ ತಿಳಿಸಿದ್ದಾರೆ.

ನಮ್ಮ ಅಧ್ಯಯನವು ವಿಸ್ತಾರವಾದುದು. ಆರೋಗ್ಯ ಸೇವೆಗಳಿಂದ ಚಿಕಿತ್ಸೆ ಪಡೆಯದ ಸ್ವಯಂ-ಹಾನಿಯ ಕಂತುಗಳನ್ನು ನಮ್ಮ ಡೇಟಾದಲ್ಲಿ ಸೆರೆಹಿಡಿಯಲಾಗಿಲ್ಲ. ಸ್ವಯಂ ಹಾನಿ ಘಟನೆಗಳು ನಾವು ಗಮನಿಸಿದ್ದಕ್ಕಿಂತ ಹೆಚ್ಚಿರಬಹುದು ಎಂದು ಅಧ್ಯಯನದ ಸಹ ಲೇಖಕ ಶೃತಿ ಗಾರ್ಗ್​​ ತಿಳಿಸಿದ್ದಾರೆ. ತಿನ್ನುವ ಸಮಸ್ಯೆ ಹೆಚ್ಚಳ ಪತ್ತೆ ಮತ್ತು ಸ್ವಯಂ ಹಾನಿ ಸಂಚಿಕೆಗಳು ಮಹಿಳೆ ಹದಿ ಹರೆಯದವರಲ್ಲಿ ಹೆಚ್ಚಿದ್ದು, ಇದರ ಸುಧಾರಣೆಗೆ ನಾವು ಸೇವೆ ಮತ್ತು ಸರಿಯಾದ ಸಮಯದ ತನಿಖೆಯನ್ನು ತುರ್ತಾಗಿ ನಡೆಸಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: ಹೆಚ್ಚೆಚ್ಚು ತಿನ್ನುವ ಕಾಯಿಲೆಯನ್ನು ಎಲೆಕ್ಟ್ರೋಲೈಟ್ಸ್​​ ಮೂಲಕ ಪತ್ತೆ ಮಾಡಬಹುದು; ಏನಿದು ಹೊಸ ಅಧ್ಯಯನ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.