ETV Bharat / sukhibhava

ಬೇಸಿಗೆಯಲ್ಲಿ ಕಣ್ಣುಗಳ ಬಗ್ಗೆ ಇರಲಿ ವಿಶೇಷ ಕಾಳಜಿ: ಇವುಗಳನ್ನು ತಪ್ಪದೆ ಪಾಲಿಸಿ..

ಬೇಸಿಗೆಯಲ್ಲಿ ಅಧಿಕ ತಾಪಮಾನದಿಂದ ಕಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಲು ಕೆಲವು ಮುನ್ನೆಚ್ಚರಿಕೆ ಅಗತ್ಯ.

Don't neglect summer eye care
Don't neglect summer eye care
author img

By

Published : May 26, 2023, 11:07 AM IST

ಬೇಸಿಗೆಯಲ್ಲಿ ತ್ವಚೆ ಮಾತ್ರವೇ ಅಷ್ಟೇ ಅಲ್ಲ ಕಣ್ಣುಗಳ ಆರೈಕೆ ಮಾಡುವುದು ಕೂಡಾ ಅಗತ್ಯ. ದೀರ್ಘಕಾಲದವರೆಗೆ ಬಿಸಿಲ ತಾಪಕ್ಕೆ, ಮಾಲಿನ್ಯ, ಧೂಳು ಕಣ್ಣಿನ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡುತ್ತದೆ. ಅನೇಕ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇದರಿಂದಾಗಿ ಕಾರ್ನಿಯಲ್​ ಬರ್ನಸ್​​, ರಿಟಿನಾಕ್ಕೆ ಹಾನಿ, ಕಾಂಜಕ್ವಿಟಿವಿಸ್​ ಹಾಗೂ ಕಾರ್ನಿಯಲ್ ಸೋಂಕುಗಳು ಸೇರಿದಂತೆ ಹಲವಾರು ಕಣ್ಣಿನ ಸಮಸ್ಯೆಗಳು ಉದ್ಭವವಾಗುತ್ತದೆ. ಅತಿಯಾದ ಯುವಿಗೆ ಒಡ್ಡಿಕೊಳ್ಳುವುದು, ಕ್ಲೋರಿನೇಟೆಡ್​ ನೀರಿನಿಂದ ಕಣ್ಣಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಮುಂಬೈನ ಡಾ.ಅಗರ್ವಾಲ್​ ಕಣ್ಣಿನ ಆಸ್ಪತ್ರೆಯ ಪ್ರಾದೇಶಿಕ ಮುಖ್ಯಸ್ಥೆ ಡಾ.ವಂದನಾ ಜೈನ್​ ಹೇಳುವ ಪ್ರಕಾರ, ಹೊರಾಂಗಣ ಚಟುವಟಿಕೆಯನ್ನು ಆಹ್ಲಾದಿಸಲು ಇರುವ ಅತ್ಯುತ್ತಮ ಸಮಯ ಎಂದರೆ ಬೇಸಿಗೆ. ಆದರೆ ನಮ್ಮ ಕಣ್ಣಿನ ಆರೈಕೆಯನ್ನು ಮರೆಯುತ್ತೇವೆ. ಬೇಸಿಗೆ ಕಣ್ಣಿಗೆ ಸಾಕಷ್ಟು ಸವಾಲನ್ನು ಹಾಕಬಹುದು. ಅಧಿಕವಾಗಿ ಯುವಿ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಕಾರ್ನಿಯನ್ ಬರ್ನ್ಸ್​​, ರೆಟಿನಲ್​ ಹಾನಿ ಸೇರಿದಂತೆ ಇನ್ನಿತರ ಕಣ್ಣಿನ ಸಮಸ್ಯೆಗಳು ಕಾಡಬಹುದು. ದೀರ್ಘಕಾಲ ಗಾಳಿ ವಾತಾವರಣಕ್ಕೆ ತೆರೆದುಕೊಳ್ಳುವುದರಿಂದ ಕಣ್ಣು ಶುಷ್ಕವಾಗಬಹುದು. ಬೇಸಿಗೆ ತಾಪಮಾನವೂ ಅನೇಕ ವೈರಲ್​ ಮತ್ತು ಅಲರ್ಜಿ ಉಂಟು ಮಾಡಿ ಕಣ್ಣಿನ ಅಸ್ವಸ್ಥತೆ ಮತ್ತು ಕಿರಿಕಿರಿ ಉಂಟು ಮಾಡಬಹುದು. ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆಗೆ ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಬಹುದು.

ಯುವಿಯಿಂದ ರಕ್ಷಣೆಗೆ ಸನ್​ಗ್ಲಾಸ್​ ಬಳಕೆ : ಬೇಸಿಗೆಯಲ್ಲಿ ಸೂರ್ಯನಿಂದ ರಕ್ಷಿಸಲು ಸನ್​ಗ್ಲಾಸ್​ ಬಳಸುವುದು ಅವಶ್ಯಕ. ಈ ಕನ್ನಡಕಗಳು ಕಣ್ಣನ್ನು ಸಂಪೂರ್ಣವಾಗಿ ಮುಚ್ಚುವಂತೆ ಇರಲಿ. ಇದರಿಂದ ಕಣ್ಣಿನ ಬದಿಯಿಂದ ಉಂಟಾಗುವ ಹಾನಿ ತಡೆಯಬಹುದು.

ದೊಡ್ಡ ಹ್ಯಾಟ್​ ಬಳಕೆ: ಸನ್​ಗ್ಲಾಸ್​ ಜೊತೆಗೆ ಅಗಲವಾದ ಟೋಪಿಗಳನ್ನು ಧರಿಸಿ, ಇದು ಮುಖದ ತ್ವಚೆಗೆ ಕಣ್ಣಿನ ರಕ್ಷಣೆ ನೀಡುತ್ತದೆ.

ಹೈಡ್ರೇಟ್​ ಆಗಿರಿ: ತ್ವಚೆಗೆ ಮಾತ್ರ ನೀರು ಮುಖ್ಯವಲ್ಲ. ಒಟ್ಟಾರೆ ದೇಹಕ್ಕೆ ನೀರು ಪ್ರಯೋಜನ ನೀಡಲಿದ್ದು, ಇದರಿಂದ ಕಣ್ಣು ಕೂಡ ಶುಷ್ಕತೆ ಅನುಭವಿಸುವುದಿಲ್ಲ. ಕನಿಷ್ಠ ದಿನಕ್ಕೆ 2 ಲೀಟರ್​ ನೀರು ಕುಡಿಯುವುದು ಅವಶ್ಯ.

ಸನ್​ಸ್ಕ್ರೀನ್​ ಬಳಕೆ: ತ್ವಚೆಯ ರಕ್ಷಣೆಗೆ ಬಳಸುವ ಸನ್​ಸ್ಕ್ರೀನ್​ಗಳು ಕಣ್ಣಿಗೆ ಹೋಗದಂತೆ ನೋಡಿಕೊಳ್ಳಿ. ಇದರಿಂದ ಕಣ್ಣಿನ ಅಸ್ವಸ್ಥತೆ ಉಂಟಾಗುತ್ತದೆ.

ಮಧ್ಯಾಹ್ನದ ಬಿಸಿಲಿಗೆ ಹೋಗದಿರಿ: ಬೆಳಗ್ಗೆ 11 ರಿಂದ 3 ಗಂಟೆವರೆಗೆ ಸೂರ್ಯನ ತಾಪ ಹೆಚ್ಚಿರುತ್ತದೆ. ಈ ಸಮಯದಲ್ಲಿ ಒಳಗೆ ಇರುವುದು ಉತ್ತಮ. ಒಂದು ವೇಳೆ ಹೋಗುವ ಅನಿವಾರ್ಯತೆ ಇದ್ದರೆ ಸನ್​ಗ್ಲಾಸ್, ಹ್ಯಾಟ್​ ಬಳಕೆ ಕಡ್ಡಾಯವಾಗಿ ಇರಲಿ.

ಈ ಸರಳ ಕಣ್ಣಿನ ಕಾಳಜಿಯ ಸಲಹೆಗಳನ್ನು ಅನುಕರಿಸುವ ಮೂಲಕ ಬೇಸಿಗೆಯನ್ನು ಯಾವುದೇ ಕಣ್ಣಿನ ಸಮಸ್ಯೆಯಿಲ್ಲದೇ ಆಹ್ವಾದಿಸಬಹುದು. ಸಮಸ್ಯೆ ಆಗುವ ಮುನ್ನವೇ ಮುನ್ನೆಚ್ಚರಿಕೆ ನಡೆಸುವುದು ಯಾವಾಗಲೂ ಉತ್ತಮ. ಇದರ ಹೊರತಾಗಿ ನಿಯಮಿತವಾಗಿ ಕಣ್ಣಿನ ಪರೀಕ್ಷೆಗೆ ಒಳಗಾಗುವುದರಿಂದ ಸಮಸ್ಯೆ ತಡೆಗಟ್ಟಬಹುದು.

ಇದನ್ನೂ ಓದಿ: ರಣ ಬಿಸಿಲಿನಿಂದ ತ್ವಚೆ ಆರೈಕೆ ಮಾಡುವ ಮುನ್ನ ಈ ಅಂಶ ನೆನಪಿರಲಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.