ETV Bharat / sukhibhava

ಮಾನವ ಕುಲದ ಉಳಿವಿಗೆ ಅತಿಹೆಚ್ಚು ಕೊಡುಗೆ ನೀಡಿದ ಐದು ಔಷಧಿಗಳು ಯಾವವು ಗೊತ್ತೇ?

ಆಸ್ಟ್ರೇಲಿಯಾದ ರೋಗಶಾಸ್ತ್ರಜ್ಞ ಹೊವಾರ್ಡ್ ಫ್ಲೋರಿ ಮತ್ತು ಅವರ ತಂಡವು ಪೆನ್ಸಿಲಿನ್ ಅನ್ನು ಸ್ಥಿರಗೊಳಿಸಿತು ಮತ್ತು ಮೊದಲ ಮಾನವ ಪ್ರಯೋಗಗಳನ್ನು ನಡೆಸಿತು. ಅಮೆರಿಕದ ಹಣಕಾಸಿನ ನೆರವಿನೊಂದಿಗೆ, ಪೆನ್ಸಿಲಿನ್ ಅನ್ನು ಸಾಮೂಹಿಕವಾಗಿ ಉತ್ಪಾದಿಸಲಾಯಿತು. ಇದು ಎರಡನೇ ಮಹಾಯುದ್ಧದ ದಿಕ್ಕನ್ನೇ ಬದಲಾಯಿಸಿದ ಔಷಧಿಯಾಗಿತ್ತು.

five medicines have contributed the most to the survival of mankind

author img

By

Published : Aug 18, 2022, 2:03 PM IST

ಮೆಲ್ಬೋರ್ನ್: ಮನುಕುಲದ ಇತಿಹಾಸದಲ್ಲಿ ಹಲವಾರು ಔಷಧಿಗಳು ಜನ ಜಾನುವಾರುಗಳ ಜೀವ ಕಾಪಾಡಿವೆ. ಆದರೂ ವಿಶ್ವದ ಮಾನವ ಕುಲದ ಇತಿಹಾಸದಲ್ಲಿ ಅತಿ ಹೆಚ್ಚು ಪರಿಣಾಮ ಬೀರಿದ ಐದು ಔಷಧಿಗಳನ್ನು ನಾವಿಲ್ಲಿ ಹೆಸರಿಸಬಹುದು. ಇವು ನಾವು ಅಂದುಕೊಂಡಿದ್ದಂತೆ ಅಥವಾ ಇನ್ನಾವುದೋ ರೀತಿಯಲ್ಲಿ ಪರಿಣಾಮ ಬೀರಿದ್ದಂತೂ ಸತ್ಯ. ಇವತ್ತು ಎಲ್ಲವನ್ನೂ ಗುಣಪಡಿಸುವ ಔಷಧಿ ಇನ್ನಾವತ್ತೋ ರೋಗಗಳನ್ನು ತರಬಲ್ಲದು. ಅದೇನೇ ಇರಲಿ.. ಐತಿಹಾಸಿಕವಾಗಿ ಅತಿ ಹೆಚ್ಚು ಪರಿಣಾಮ ಬೀರಿದ ಐದು ಔಷಧಿಗಳ ಬಗ್ಗೆ ತುಂಬಾ ಇಂಟರೆಸ್ಟಿಂಗ್ ಆಗಿರುವ ಮಾಹಿತಿ ಇಲ್ಲಿದೆ.

ಅನಸ್ತೇಶಿಯಾ (ಅರಿವಳಿಕೆ): 1700 ರ ದಶಕದ ಉತ್ತರಾರ್ಧದಲ್ಲಿ ಇಂಗ್ಲಿಷ್ ರಸಾಯನಶಾಸ್ತ್ರಜ್ಞ ಜೋಸೆಫ್ ಪ್ರೀಸ್ಲಿ ಎಂಬುವರು ಫ್ಲೋಜಿಸ್ಟಿಕೇಟೆಡ್ ನೈಟ್ರಸ್ ಏರ್ (ನೈಟ್ರಸ್ ಆಕ್ಸೈಡ್) ಎಂಬ ಅನಿಲವನ್ನು ತಯಾರಿಸಿದರು. ಇಂಗ್ಲಿಷ್ ರಸಾಯನಶಾಸ್ತ್ರಜ್ಞ ಹಂಫ್ರಿ ಡೇವಿ ಇದನ್ನು ಶಸ್ತ್ರಚಿಕಿತ್ಸೆಯಲ್ಲಿ ನೋವು ನಿವಾರಕವಾಗಿ ಬಳಸಬಹುದು ಎಂದು ಭಾವಿಸಿದ್ದರು.

ಆದರೆ ಅದರ ಬದಲಿಗೆ ಇದೊಂದು ಮನರಂಜನಾ ಔಷಧವಾಯಿತು. ಇದರ ನಂತರ 1834 ರಲ್ಲಿ ನಾವು ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆವು. ಆಗ ಫ್ರೆಂಚ್ ರಸಾಯನಶಾಸ್ತ್ರಜ್ಞ ಜೀನ್-ಬ್ಯಾಪ್ಟಿಸ್ಟ್ ಡುಮಾಸ್ ಇವರು ಹೊಸ ಅನಿಲವೊಂದನ್ನು ಕಂಡುಹಿಡಿದು ಅದಕ್ಕೆ ಕ್ಲೋರೊಫಾರ್ಮ್ ಎಂದು ಹೆಸರಿಸಿದರು.

ಸ್ಕಾಟಿಷ್ ವೈದ್ಯ ಜೇಮ್ಸ್ ಯಂಗ್ ಸಿಂಪ್ಸನ್ ಇದನ್ನು 1847 ರಲ್ಲಿ ಹೆರಿಗೆಯಲ್ಲಿ ಸಹಾಯ ಮಾಡಲು ಬಳಸಿದರು. ಶೀಘ್ರದಲ್ಲೇ ಈ ಅರಿವಳಿಕೆ ಮದ್ದು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಿತು. ಈ ಅರಿವಳಿಕೆಯನ್ನು ಕಂಡು ಹಿಡಿಯುವ ಮುನ್ನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಗಳು ಆಗಾಗ ನೋವಿನ ಆಘಾತದಿಂದ ಸಾಯುವುದು ಸಾಮಾನ್ಯವಾಗಿತ್ತು.

ಆದರೆ ಜನರನ್ನು ಪ್ರಜ್ಞಾಹೀನರನ್ನಾಗಿ ಮಾಡುವ ಯಾವುದೇ ಔಷಧ ಕೂಡ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ನರಮಂಡಲವನ್ನು ನಿಗ್ರಹಿಸುವ ಅಪಾಯಗಳ ಕಾರಣದಿಂದಾಗಿ ಆಧುನಿಕ ಅರಿವಳಿಕೆಗಳು ಇನ್ನೂ ಅಪಾಯಕಾರಿಯಾಗಿವೆ.

ಪೆನಿಸಿಲಿನ್: 1928 ರಲ್ಲಿ ಸ್ಕಾಟಿಷ್ ವೈದ್ಯ ಅಲೆಕ್ಸಾಂಡರ್ ಫ್ಲೆಮಿಂಗ್‌ ಆಕಸ್ಮಿಕವಾಗಿ ಔಷಧ ಸಂಶೋಧನೆ ಮಾಡಿದ್ದು ಇಂದಿಗೂ ನೆನಪಿಡುವ ಸಂಗತಿಯಾಗಿದೆ. ಫ್ಲೆಮಿಂಗ್ ರಜೆಯ ಮೇಲೆ ಹೊರಗಡೆ ಹೋಗುವ ಮುನ್ನ ಬ್ಯಾಕ್ಟೀರಿಯಂ ಸ್ಟ್ರೆಪ್ಟೋಕೊಕಸ್​ನ ಕೆಲ ಅಂಶಗಳನ್ನು ತಮ್ಮ ಪ್ರಯೋಗಾಲಯದ ಬೆಂಚ್​ ಮೇಲೆ ಬಿಟ್ಟು ಹೋಗಿದ್ದರು.

ಅವರು ಹಿಂತಿರುಗಿ ಬಂದಾಗ, ಕೆಲವು ವಾಯುಗಾಮಿ ಪೆನ್ಸಿಲಿಯಮ್ (ಶಿಲೀಂಧ್ರ ಮಾಲಿನ್ಯಕಾರಕ) ಸ್ಟ್ರೆಪ್ಟೋಕೊಕಸ್ ಬೆಳೆಯುವುದನ್ನು ನಿಲ್ಲಿಸಿರುವುದನ್ನು ಅವರು ಗಮನಿಸಿದರು. ಆಸ್ಟ್ರೇಲಿಯಾದ ರೋಗಶಾಸ್ತ್ರಜ್ಞ ಹೊವಾರ್ಡ್ ಫ್ಲೋರಿ ಮತ್ತು ಅವರ ತಂಡವು ಪೆನ್ಸಿಲಿನ್ ಅನ್ನು ಸ್ಥಿರಗೊಳಿಸಿತು ಮತ್ತು ಮೊದಲ ಮಾನವ ಪ್ರಯೋಗಗಳನ್ನು ನಡೆಸಿತು.

ಅಮೆರಿಕದ ಹಣಕಾಸಿನ ನೆರವಿನೊಂದಿಗೆ, ಪೆನ್ಸಿಲಿನ್ ಅನ್ನು ಸಾಮೂಹಿಕವಾಗಿ ಉತ್ಪಾದಿಸಲಾಯಿತು. ಇದು ಎರಡನೇ ಮಹಾಯುದ್ಧದ ದಿಕ್ಕನ್ನೇ ಬದಲಾಯಿಸಿದ ಔಷಧಿಯಾಗಿತ್ತು. ಸಾವಿರಾರು ಸೇವಾ ಸಿಬ್ಬಂದಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಯಿತು. ಆದಾಗ್ಯೂ, ಅವುಗಳ ವ್ಯಾಪಕ ಬಳಕೆಯಿಂದ ಬ್ಯಾಕ್ಟೀರಿಯಾ ಔಷಧ ನಿರೋಧಕ ತಳಿಗಳು ಬೆಳೆಯಲು ಕಾರಣವಾಗಿದೆ.

ನೈಟ್ರೊಗ್ಲಿಸರಿನ್: ನೈಟ್ರೊಗ್ಲಿಸರಿನ್ ಅನ್ನು 1847 ರಲ್ಲಿ ಕಂಡುಹಿಡಿಯಲಾಯಿತು ಮತ್ತು ಗನ್‌ಪೌಡರ್ ಬದಲಿಗೆ ಇದು ವಿಶ್ವದ ಅತ್ಯಂತ ಶಕ್ತಿಶಾಲಿ ಸ್ಫೋಟಕವಾಗಿ ಹೊಹೊಮ್ಮಿತು. ಹೃದಯ ಕಾಯಿಲೆಗೆ ಸಂಬಂಧಿಸಿದ ಅಂಜಿನಾ ಎಂಬ ಎದೆನೋವಿಗೆ ಚಿಕಿತ್ಸೆ ನೀಡಲು ಬಳಸಲಾದ ಮೊದಲ ಆಧುನಿಕ ಔಷಧ ಕೂಡ ಇದಾಗಿದೆ.

ಈ ರಾಸಾಯನಿಕವನ್ನು ತಯಾರಿಸುವ ಕಾರ್ಖಾನೆಯ ಕೆಲಸಗಾರರು ತಲೆನೋವು ಮತ್ತು ಮುಖ ಕೆಂಪು ಬಣ್ಣಕ್ಕೆ ತಿರುಗುವ ಸಮಸ್ಯೆಯನ್ನು ಎದುರಿಸಲಾರಂಭಿಸಿದರು. ನೈಟ್ರೋಗ್ಲಿಸರಿನ್ ವಾಸೋಡಿಲೇಟರ್ ಆಗಿರುವುದರಿಂದ ಅದು ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಲಂಡನ್ ವೈದ್ಯ ವಿಲಿಯಂ ಮರ್ರೆಲ್ ತನ್ನ ಮೇಲೆ ನೈಟ್ರೋಗ್ಲಿಸರಿನ್ ಅನ್ನು ತನ್ನ ಮೇಲೆ ಮತ್ತು ಹೃದಯ ರೋಗಿಗಳ ಮೇಲೆ ಪ್ರಯೋಗ ಮಾಡಿದನು. ಇದರಿಂದ ಬಹುತೇಕ ತಕ್ಷಣದ ಪರಿಹಾರ ಸಿಕ್ಕಿತು. ನೈಟ್ರೊಗ್ಲಿಸರಿನ್ ಆಂಜಿನಾ ಹೊಂದಿರುವ ಲಕ್ಷಾಂತರ ಜನರಿಗೆ ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯವಾಗಿಸಿತು.

ಗರ್ಭನಿರೋಧಕ ಮಾತ್ರೆ: 1951 ರಲ್ಲಿ ಅಮೆರಿಕದ ಜನನ ನಿಯಂತ್ರಣ ವಕೀಲರಾದ ಮಾರ್ಗರೆಟ್ ಸ್ಯಾಂಗರ್ ಅವರು ಪರಿಣಾಮಕಾರಿ ಹಾರ್ಮೋನ್ ಗರ್ಭನಿರೋಧಕವನ್ನು ಅಭಿವೃದ್ಧಿಪಡಿಸಲು ಸಂಶೋಧಕ ಗ್ರೆಗೊರಿ ಪಿಂಕಸ್ ಅವರನ್ನು ಕೇಳಿದರು. ಅಂಡೋತ್ಪತ್ತಿಯನ್ನು ನಿಲ್ಲಿಸಲು ಪ್ರೊಜೆಸ್ಟರಾನ್ ಸಹಾಯ ಮಾಡುತ್ತದೆ ಎಂದು ಪಿಂಕಸ್ ಕಂಡುಕೊಂಡರು ಮತ್ತು ಇದನ್ನು ಪ್ರಯೋಗ ಮಾತ್ರೆ ಅಭಿವೃದ್ಧಿಪಡಿಸಲು ಬಳಸಿದರು.

ಡೈಜೆಪಾಮ್ ನಿದ್ರೆ ಮಾತ್ರೆ: ಮೊದಲ ಬೆಂಜೊಡಿಯಜೆಪೈನ್, ಒಂದು ರೀತಿಯ ನರಮಂಡಲ ಶಾಂತಗೊಳಿಸುವ ಔಷಧಿಯನ್ನು 1955 ರಲ್ಲಿ ತಯಾರಿಸಲಾಯಿತು. ಡ್ರಗ್ ಕಂಪನಿ ಹಾಫ್‌ಮನ್ - ಲಾ ರೋಚೆ ಇದನ್ನು ಲೈಬ್ರಿಯಂ ಎಂಬ ಹೆಸರಿನಲ್ಲಿ ಮಾರಾಟ ಮಾಡಿತು. ಪೋಲಿಷ್-ಅಮೆರಿಕನ್ ರಸಾಯನಶಾಸ್ತ್ರಜ್ಞ ಲಿಯೋ ಸ್ಟರ್ನ್‌ಬಾಚ್ ಮತ್ತು ಅವರ ಸಂಶೋಧಕರ ತಂಡವು 1959 ರಲ್ಲಿ ಲೈಬ್ರಿಯಮ್ ಅನ್ನು ರಾಸಾಯನಿಕವಾಗಿ ಮಾರ್ಪಡಿಸಿದರು ಮತ್ತು ಹೆಚ್ಚು ಶಕ್ತಿಶಾಲಿ ಔಷಧವನ್ನು ಉತ್ಪಾದಿಸಿದರು. ಇದೇ ಡೈಜೆಪಾಮ್ ಆಗಿತ್ತು. ಇದನ್ನು 1963 ರಿಂದ ವ್ಯಾಲಿಯಮ್ ಎಂದು ಮಾರಾಟ ಮಾಡಲಾಯಿತು. ಇದನ್ನು 1987 ರಿಂದ ಪ್ರೊಜಾಕ್ ಎಂದು ಮಾರಾಟ ಮಾಡಲಾಯಿತು.

ಇದನ್ನು ಓದಿ:Exclusive: ಮಕ್ಕಳ ಮಾನಸಿಕ ಒತ್ತಡ ಮತ್ತು ಜಂಕ್​ ಫುಡ್ ಸೇವನೆಗಿದೆ ನಂಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.