ಮಾನ್ಸೂನ್ನಲ್ಲಿ ಬದಲಾದ ಹವಾಮಾನ ಮತ್ತು ಮಳೆಯಿಂದಾಗಿ ನೀರಿನ ಸೋಂಕು ಹೆಚ್ಚುತ್ತದೆ. ಇದರಿಂದ ವಿವಿಧ ಸೋಂಕುಗಳು ಕೂಡಾ ಹೆಚ್ಚುತ್ತವೆ. ದೇಹದ ಜೀರ್ಣವ್ಯವಸ್ಥೆ ಸೂಕ್ಷ್ಮವಾಗುತ್ತದೆ. ಈ ಸೋಂಕುಗಳು ಜೀರ್ಣ ವ್ಯವಸ್ಥೆಯ ಆರೋಗ್ಯದ ಪರಿಣಾಮ ಬೀರಲು ಪ್ರಮುಖ ಕಾರಣ ಕರುಳಿನ ಮೈಕ್ರೋಬಯೋಟಾ. ನೀರಿನ ರೋಗಗಳು ಮತ್ತು ಸೋಂಕುಗಳ ಸಾಮಾನ್ಯವಾಗಿ ಮಳೆಗಾಲದಲ್ಲಿ ಜಾಸ್ತಿ. ಈ ಹಿನ್ನೆಲೆಯಲ್ಲಿ ಕರುಳಿನ ಆರೋಗ್ಯದ ರಕ್ಷಣೆ ಕುರಿತು ಎಚ್ಚರಿಕೆ ವಹಿಸಬೇಕಾಗುತ್ತದೆ. ಇದರಿಂದ ಕರುಳು ಸಂಬಂಧಿತ ಸಮಸ್ಯೆಗಳನ್ನು ತಪ್ಪಿಸಬಹುದು. ಫಿಟ್ನೆಸ್ ಮಟ್ಟವನ್ನು ಕೂಡಾ ಕಾಯ್ದುಕೊಳ್ಳಬಹುದು.
ಮೈಕ್ರೋಬಯೋಟಾ ಎಂದರೇನು?: ಹೊಟ್ಟೆಯೊಳಗೆ ಏನೋ ಸರಿಯಿಲ್ಲದಂತಹ ಭಾವನೆ ಮೂಡುತ್ತದೆ. ಇದನ್ನು ವ್ಯಕ್ತಪಡಿಸುವುದು ಕಷ್ಟ. ಇದಕ್ಕೆ ಕಾರಣವೇನು ಎಂಬುದರ ಮೂಲವನ್ನು ಅರಿತು ಕ್ರಮ ತೆಗೆದುಕೊಳ್ಳಬೇಕಿದೆ. ಕರುಳಿನ ಸಮಸ್ಯೆಗೆ ಚಿಕಿತ್ಸೆ ನೀಡುವುದು ತಾತ್ಕಾಲಿಕ ಪರಿಹಾರ ನೀಡಿದರೂ, ಅದರಿಂದ ಏನಾಗುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯವಾಗಿಲ್ಲ. ಆದರೆ, ಕರುಳಿನಲ್ಲಿ ಏನಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಯುವುದು ಅಗತ್ಯ. ಇದಕ್ಕಾಗಿ ಬಾಗ್ಸ್ಪೀಕ್ಸ್ ಎಂಬ ಪರೀಕ್ಷಾ ಕಿಟ್ಗಳು ಭಾರತದಲ್ಲಿ ಲಭ್ಯವಿದ್ದು, ಇದು ಕರುಳಿನ ವಿಶ್ಲೇಷಣೆ ಮಾಡುತ್ತದೆ.
ಕರುಳಿನ ಆರೋಗ್ಯಕ್ಕೆ ಅನುಕೂಲಕರವಾದ ಆಹಾರ ಸೇವಿಸಿ: ಕರುಳಿನಲ್ಲಿ ವಿಶಿಷ್ಟವಾದ ಮೈಕ್ರೋಫ್ಲೋರಾಗಳು ಜೀವಿಸುತ್ತಿರುತ್ತವೆ. ನಾವು ಸೇವಿಸುವ ಆಹಾರಗಳು ಇಂತಹ ಮೈಕ್ರೋಅರ್ಗಾನಿಸಮ್ ನಿವಾರಣೆಗೆ ಸಹಾಯ ಮಾಡುವ ಪ್ರೋಬಾಯಟಿಕ್ ಆಹಾರಗಳನ್ನು ಸೇವಿಸಬೇಕು. ಅವುಗಳೆಂದರೆ, ಮೊಸರು, ಯೋಗರ್ಟ್ನಂತಹ ಆಹಾರಗಳು. ಇದಕ್ಕೆ ಹೆಚ್ಚು ಸಹಾಯ ಮಾಡುತ್ತದೆ. ಮೈಕ್ರೋಬಯೋಟಾ ಹೆಚ್ಚಾದರೆ ಅದು ಕೆಟ್ಟ ಮೈಕ್ರೋಆರ್ಗನಿಸಮ್ ತಡೆಯುತ್ತದೆ.
ಈ ಆಹಾರಗಳ ಸೇವನೆಗೆ ಒತ್ತು ನೀಡಿ: ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾ ಬೆಳವಣಿಗೆಯ ಮತ್ತೊಂದು ಕ್ರಮ ಎಂದರೆ ಹಸಿರು ಬಾಳೆಹಣ್ಣು ಮತ್ತು ಸೇಬು ಸೇವನೆ. ಇದರಲ್ಲಿ ಪೆಕ್ಟೈನ್ ಇದ್ದು ಪ್ರೋಬಾಯಾಟಿಕ್ ರೀತಿಯೇ ಪ್ರಯೋಜನ ನೀಡುತ್ತದೆ. ಜೊತೆಗೆ ಕೆಟ್ಟ ಬ್ಯಾಕ್ಟೀರಿಯಾಗಳ ತಡೆಗೆ ಸಹಾಯ ಮಾಡುತ್ತದೆ. ಫ್ಲಾಕ್ಸ್ ಸೀಡ್ಗಳು ಕೂಡ ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಬ್ರಾಕೋಲಿ ಸೇವನೆಯಿಂದಲೂ ಕರುಳಿನ ಆರೋಗ್ಯ ಉತ್ತಮಗೊಳ್ಳುತ್ತದೆ. ಕರುಳಿನ ಒಳಪದವರ ಮೇಲಿರುವ ಆರಿಲ್ ಹೈಡ್ರೋಕಾರ್ಬನ್ ರಿಸೆಪ್ಟರ್ ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ. ಬ್ರೊಕೊಲಿಯಲ್ಲಿರುವ ಆರಿಲ್ ಹೈಡ್ರೋಕಾರ್ಬನ್ ರಿಸೆಪ್ಟರ್ ಲಿಗಂಡ್ಸ್ ಅದನ್ನು ಬಂಧಿಸುತ್ತದೆ. ಈ ಬಂಧಿಸುವಿಕೆಯು ಕರುಳಿನ ಕೋಶಗಳ ಕಾರ್ಯಗಳ ಮೇಲೆ ಪರಿಣಾಮ ಬೀರುವ ವಿವಿಧ ಚಟುವಟಿಕೆಗಳನ್ನು ಪ್ರಾರಂಭಿಸುತ್ತದೆ.
ನೈರ್ಮಲ್ಯಕ್ಕೆ ಮಹತ್ವ ನೀಡಿ: ಮಾನ್ಸೂನ್ನಲ್ಲಿ ಶುಚಿತ್ವ ಅಥವಾ ಉತ್ತಮ ಆಹಾರ ಪದ್ದತಿ ಹೊಂದಿಲ್ಲದಿದ್ದರೆ, ಸಾಮಾನ್ಯವಾಗಿ ಹೊಟ್ಟೆ ಅಥವಾ ಜೀರ್ಣಕ್ರಿಯೆ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಈ ಹಿನ್ನೆಲೆಯಲ್ಲಿ ಶುದ್ದವಾದ ನೀರು, ಆಹಾರ ಸೇವನೆ ಮಾಡಬೇಕಿದೆ. ಸೇವಿಸುವ ಆಹಾರಗಗಳು ಕರುಳಿನ ಮೈಕ್ರೊಬ್ಲೊಮ್ಗೆ ಪೂರಕವಾಗಿರಬೇಕು. ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸುವುದು ಕೂಡ ಈ ಸಮಯದಲ್ಲಿ ಮುಖ್ಯವಾಗುತ್ತದೆ. ಜೊತೆಗೆ ಅಧಿಕ ಆಹಾರಗಳನ್ನು ಸೇವಿಸುವುದು ಕಡಿಮೆ ಮಾಡುವುದು ಅವಶ್ಯಕ.
ಇದನ್ನೂ ಓದಿ: ನಿಮ್ಮ ಎಸ್ಪ್ರೆಸೊ ಕಾಫಿ ನಿಮ್ಮ ಮೂಡ್ ಅಷ್ಟೇ ಅಲ್ಲ, ನರಗಳ ಸಮಸ್ಯೆಗೂ ಪ್ರಯೋಜನಕಾರಿ!