ETV Bharat / sukhibhava

30-40 ವರ್ಷದವರಿಗೆ ಕಾಡುವ ನಿದ್ರೆ ಸಮಸ್ಯೆಯಿಂದ ಸ್ಮರಣೆ ಮೇಲೆ ಪ್ರಭಾವ; ಅಧ್ಯಯನ

ಈ ಅಧ್ಯಯನವು ನಿದ್ರೆ ಮತ್ತು ಅರಿವಿನ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ನಿರ್ಣಾಯಕವಾಗಿದೆ.

Disrupted sleep in 30s 40s may up memory thinking problems later

author img

By ETV Bharat Karnataka Team

Published : Jan 4, 2024, 7:28 PM IST

ನ್ಯೂಯಾರ್ಕ್​: 30 ಮತ್ತು 40ರ ವಯೋಮಾನದವರಿಗೆ ನಿದ್ರೆಯಲ್ಲಿ ಉಂಟಾಗುವ ತೊಡಕು ದಶಕಗಳ ಬಳಿಕ ಅವರಲ್ಲಿ ಸ್ಮರಣಶಕ್ತಿ ಸಮಸ್ಯೆ ಮತ್ತು ಚಿಂತಿಸುವ ಬಾಧೆಗೆ ಕಾರಣವಾಗುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಈ ಅಧ್ಯಯನವನ್ನು ಜರ್ನಲ್​ ನ್ಯೂರೋಲಾಜಿಯಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ನಿದ್ರೆಯ ಗುಣಮಟ್ಟವೂ ಅರಿವಿನ ಕುಗ್ಗುವಿಕೆಗೆ ಕಾರಣ ಎಂದು ಪುರಾವೆ ನೀಡಿಲ್ಲ. ಬದಲಿಗೆ ಇದರ ಸಂಬಂಧ ಕುರಿತು ತಿಳಿಸಿದೆ.

ಆಲ್ಝೈಮರಾ ಲಕ್ಷಣಗಳು ಆರಂಭವಾಗುವ ಮೊದಲೇ ರೋಗ ನಮ್ಮ ಮೆದುಳಿನಲ್ಲಿ ಪ್ರಾರಂಭವಾಗುತ್ತದೆ ಎಂಬ ಲಕ್ಷಣವನ್ನು ನೀಡಲಾಗಿದೆ. ಆರಂಭದ ಜೀವನದಲ್ಲಿ ನಿದ್ರೆ ಮತ್ತು ಅರಿವಿನ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು ನಿರ್ಣಾಯಕವಾಗಿದೆ. ನಿದ್ರೆ ಸಮಸ್ಯೆಯ ಪಾತ್ರವನ್ನು ಅರ್ಥಮಾಡಿಕೊಳ್ಳುವ ಮೂಲಕ ರೋಗದ ಅಪಾಯದ ಅಂಶವನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಸ್ಯಾನ್​ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಯುಎ ಲೆಂಗ್​ ತಿಳಿಸಿದ್ದಾರೆ.

ನಮ್ಮ ಅಧ್ಯಯನವೂ ಗುಣಮಟ್ಟಕ್ಕಿಂತ ನಿದ್ರೆಯ ಪ್ರಮಾಣದ ಅಂಶದ ಮೇಲೆ ಗಮನಹರಿಸಿದೆ. ಇದು ಮಧ್ಯ ವಯಸ್ಸಿನವರ ಅರಿವಿನ ಆರೋಗ್ಯದಲ್ಲಿ ಪ್ರಮುಖವಾಗುತ್ತದೆ ಎಂದಿದ್ದಾರೆ.

11 ವರ್ಷಗಳ ಅಧ್ಯಯನ: ಈ ಅಧ್ಯಯನದಲ್ಲಿ ಸರಾಸರಿ 40ರ ವಯೋಮಾನದ 526 ಮಂದಿಯನ್ನು 11 ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ. ಸಂಶೋಧಕರು ನಿದ್ರೆಯ ಸಮಯ ಮತ್ತು ಗುಣಮಟ್ಟವನ್ನು ಗಮಿಸಿದ್ದಾರೆ. ಇದಕ್ಕಾಗಿ ಭಾಗಿದಾರರಿಗೆ ಮಣಿಕಟ್ಟಿನ ಆಕ್ಟಿವಿಟಿ ಮಾನಿಟರ್​ ಅನ್ನು ಕಟ್ಟಿ ವಿಶ್ಲೇಷಣೆ ಮಾಡಿದ್ದಾರೆ. ಈ ವೇಳೆ ಭಾಗಿದಾರರು ಸರಾಸರಿ ಆರು ಗಂಟೆ ನಿದ್ರಿಸಿದ್ದಾರೆ. ಇದೇ ವೇಳೆ ಭಾಗಿದಾರರು ಸ್ಮರಣೆ ಮತ್ತು ಚಿಂತೆಯ ಟಾಸ್ಕ್​​ ಸರಣಿಯನ್ನು ಪೂರ್ಣ ಮಾಡಿದ್ದಾರೆ.

ಸಂಶೋಧಕರು ನಿದ್ರೆಯ ವಿಘಟನೆ ಅಂದ್ರೆ ಪದೇ ಪದೇ ಎಚ್ಚರದಂತಹ ಅಂಶವನ್ನು ಮಾಪನ ಮಾಡಿದ್ದಾರೆ. ಅವರು ಚಲವಲನಕ್ಕೆ ವಿನಿಮಯಿಸುವ ಸಮಯ ಮತ್ತು ಒಂದು ನಿಮಿಷದಲ್ಲಿ ನಡೆಸದ ಚಲನವಲನ ಅಥವಾ ಕಡಿಮೆ ನಿದ್ರೆಯನ್ನು ಗಮನಿಸಿದ್ದಾರೆ.

ವಯಸ್ಸು, ಲಿಂಗ, ಜನಾಂಗ ಮತ್ತು ಶಿಕ್ಷಣಕ್ಕೆ ಸರಿಹೊಂದಿಸಿದ ನಂತರ, ಹೆಚ್ಚು ಅಡ್ಡಿಪಡಿಸಿದ ನಿದ್ರೆ ಹೊಂದಿರುವ ಜನರು ಕಡಿಮೆ ಅಡ್ಡಿಪಡಿಸಿದ ನಿದ್ರೆ ಹೊಂದಿರುವವರಿಗೆ ಹೋಲಿಸಿದರೆ ಕಳಪೆ ಅರಿವಿನ ಕಾರ್ಯಕ್ಷಮತೆಯನ್ನು ಹೊಂದಿರುವುದು ಎರಡುಪಟ್ಟು ಹೆಚ್ಚಿದೆ. ಕಡಿಮೆ ನಿದ್ರೆ ತೊಡಕನ್ನು ಹೊಂದಿರುವ ಗುಂಪಿಗೆ ಹೋಲಿಸಿದರೆ ಮಧ್ಯಮ ಗುಂಪಿನಲ್ಲಿರುವವರಿಗೆ ಮಧ್ಯಮ ವಯಸ್ಸಿನಲ್ಲಿ ಅರಿವಿನ ಕಾರ್ಯಕ್ಷಮತೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಸಂಶೋಧನೆ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಎಷ್ಟೇ ಒದ್ದಾಡಿದ್ರೂ ನಿದ್ರೆ ಬರ್ತಿಲ್ವಾ? ಇನ್ಸೋಮ್ನಿಯಾಗೆ ಇವು ಕಾರಣ ಎನ್ನುತ್ತಾರೆ ತಜ್ಞರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.