ನವದೆಹಲಿ: ವೃದ್ಧರು ಡಿಜಿಟಲ್ ಒಗಟಿನ ಆಟಗಳನ್ನು ಆಡುವುದರಿಂದ ಅವರಲ್ಲಿ 20ರ ಹರೆಯದವರಂತೆ ನೆನಪಿನ ಶಕ್ತಿ ಹೊಂದುತ್ತಾರೆ ಎಂದು ಹೊಸ ಅಧ್ಯಯನ ತಿಳಿಸಿದೆ. ಯಾರ್ಕ್ ವಿಶ್ವವಿದ್ಯಾಲಯ ಸಂಶೋಧಕರ ತಂಡ ಈ ಅಧ್ಯಯನವನ್ನು ನಡೆಸಿದೆ. ಅಧ್ಯಯನದಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಡಿಜಿಟಲ್ ಒಗಟಿನ ಆಟ ಆಡುವಾಗ ಅವರಲ್ಲಿ ಉಂಟಾಗುವ ಗೊಂದಲಗಳನ್ನು ನಿರ್ಲಕ್ಷಿಸುವ ಸಾಮರ್ಥ್ಯವನ್ನು ಈ ಆಟಗಳಿಂದ ಹೊಂದುತ್ತಾರೆ ಎಂದು ಅಧ್ಯಯನ ತಿಳಿಸಿದೆ.
ಆದರೆ, ಈ ಆಟದ ಕೌಶಲ್ಯಗಳನ್ನು ಆಡುವುದರಿಂದ ವಯಸ್ಸಾದವರಲ್ಲಿ ಏಕಾಗ್ರತೆ ಸೇರಿದಂತೆ ಸ್ಮರಣೆಯಲ್ಲಿ ಹೆಚ್ಚಿನ ಸುಧಾರಣೆ ಕಂಡಿಲ್ಲ ಎಂಬುದನ್ನೂ ಕಂಡುಕೊಳ್ಳಲಾಗಿದೆ. ವ್ಯಕ್ತಿ ವಯಸ್ಸಾದಂತೆ ಅವರ ನೆನಪಿನ ಶಕ್ತಿ ಕ್ಷೀಣಿಸುತ್ತದೆ. ಆದರೆ, ಈ ಆಟಗಳು ಅವರಲ್ಲಿ 20 ರಿಂದ 30 ವರ್ಷದವರಲ್ಲಿ ನೆನಪಿನ ಶಕ್ತಿಯನ್ನು ಆಟವಾಡುವಾಗ ತರಲು ಸಹಾಯ ಮಾಡುತ್ತದೆ ಎಂದು ತಿಳಿಸಲಾಗಿದೆ.
ಅನೇಕ ಸಂಶೋಧನೆಗಳು ಇಂತಹ ಆ್ಯಕ್ಷನ್ ಗೇಮ್ ಚಟುವಟಿಕೆಗಳನ್ನು ಕೇಂದ್ರೀಕರಿಸಿದೆ. ಏಕೆಂದರೆ ಇದರಲ್ಲಿ ತ್ವರಿತವಾಗಿ ಪ್ರತಿಕ್ರಿಯೆ ಲಭ್ಯವಾಗುತ್ತದೆ. ಹಾಗೂ ಗುರಿಗಳನ್ನು ಗಮನದಲ್ಲಿಟ್ಟುಕೊಳ್ಳುವುದಕ್ಕೆ, ಲಕ್ಷ್ಯ, ಸ್ಮರಣೆ ಸಹಾಯ ಮಾಡುತ್ತದೆ. ಆದರೆ, ನಮ್ಮ ಹೊಸ ವಿಶ್ಲೇಷಣೆಯು ಕ್ರಿಯಾಶೀಲ ಅಂಶಗಳು ಕಿರಿಯ ವಯಸ್ಕರರಿಗೆ ಗಮನಾರ್ಹ ಪ್ರಯೋಜನಗಳನ್ನು ನೀಡುವುದಿಲ್ಲ ಎಂದು ತೋರಿಸಲಾಗಿದೆ.
ಈ ಅಧ್ಯನಯವೂ ಹೆಲಿಯೊನ್ ಜರ್ನಲ್ ಪ್ರಕಟಿಸಲಾಗಿದೆ. ವಯಸ್ಕರು ಮತ್ತು ವೃದ್ಧರು ನಿಜ ಜೀವನದ ಸಾಮಾನ್ಯ ಆಟವನ್ನು ಆಡುವುದನ್ನು ಈ ಅಧ್ಯಯನ ಒಳಗೊಂಡಿದೆ. ಡಿಜಿಟಲ್ ಪ್ರಯೋಗದ ಮೂಲಕ ವ್ಯಾಪಕ ಶ್ರೇಣಿಯ ಆಟವನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ ಭಾಗಿದಾರರು ವಿಚಲಿತರಾಗುವ ಹಿನ್ನೆಲೆ ಚಿತ್ರವನ್ನು ನೆನಪಿಟ್ಟುಕೊಳ್ಳುವ ಅಗತ್ಯವಿದೆ.
ಪಝಲ್ ಆಟಗಳು ವಯಸ್ಕರ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಅದರ ಸಾಮರ್ಥ್ಯವನ್ನು ಹೆಚ್ಚಿಸುವ ಫಲಿತಾಂಶ ಅಚ್ಚರಿ ಮೂಡಿಸಿದೆ. ವೃದ್ಧರಲ್ಲಿ ನೆನಪಿನ ಶಕ್ತಿ 20 ವರ್ಷದವರಂತೆ ಇದೆ ಎಂಬುದಾಗಿ ಅಧ್ಯಯನದ ಲೇಖಕ ಡಾ ಜೋ ಕಟ್ಟಿಂಗ್ ತಿಳಿಸಿದ್ದಾರೆ.
ವೃದ್ಧರಲ್ಲಿ ನೆನಪಿನ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅವರು ಒಗಟುಗಳ ಆಟವನ್ನು ಆಡುವುದರಿಂದ ಅವರ ಗಮನವನ್ನು ಕೇಂದ್ರಿಕರಿಸಬಹುದು ಎಂದಿದ್ದಾರೆ.
ಭವಿಷ್ಯದ ಅಧ್ಯಯನವೂ ಆಟಗಾರನ ವಯಸ್ಸಿಗೆ ಅನುಗುಣವಾಗಿ ಆಟಗಳ ಪ್ರಕಾರಗಳ ಪರಿಣಾಮಗಳ ನಡುವಿನ ವ್ಯತ್ಯಾಸವನ್ನು ತೀರಿಸಬಹುದು. ಜೊತೆಗೆ ವಯಸ್ಸಾದಂತೆ ಮಿದುಳು ಹೇಗೆ ಮಾಹಿತಿಯನ್ನು ಸಂಗ್ರಹಿಸಬಹುದು ಎಂಬುದು ನೋಡಲು ಸಾಧ್ಯ ಎಂದಿದ್ದಾರೆ ಸಂಶೋಧಕರು.
ಇದನ್ನೂ ಓದಿ: ಸೂಪರ್ಫುಡ್ ಏಲಕ್ಕಿ ಚಯಾಪಚಯ ಕ್ರಿಯೆ ವೃದ್ದಿಸಿ, ಕೊಬ್ಬು ಕರಗಿಸುವಲ್ಲಿ ಸಹಕಾರಿ!