ವಾಷಿಂಗ್ಟನ್: ಚಿಕ್ಕವಯಸ್ಸಿನಲ್ಲಿ ಬಡತನ, ಆಹಾರದ ಆಯ್ಕೆಗಳ ಕೊರತೆ ಅನುಭವಿಸಿದ ಮಕ್ಕಳು ಸುಸ್ಥಿತಿಯ ಮಕ್ಕಳಿಗೆ ಹೋಲಿಸಿದಾಗ, ಕೊರತೆಯಿಂದ ಬಳಲಿದ ಮಕ್ಕಳು ಮುಂದಿನ ಜೀವನದಲ್ಲಿ ಚಟಗಳ ದಾಸರಾಗುವ ಸಾಧ್ಯತೆ ಹೆಚ್ಚು. ಇದರಿಂದ ಇವರು ಅನಾರೋಗ್ಯಕರ ಆಹಾರದ ಮೇಲೆ ಹೆಚ್ಚಿನ ವ್ಯಯ ಮಾಡುತ್ತಾರೆ. ಇದು ಮುಂದಿನ ಜೀವನದಲ್ಲಿ ಇದು ಚಟವಾಗಿ ಮುಂದುವರೆಯುವ ಸಾಧ್ಯತೆ ಇದೆ ಎಂಬುದನ್ನು ಸಂಶೋಧನೆ ಬಯಲು ಮಾಡಿದೆ.
ಆಸ್ಟನ್ ವಿಶ್ವವಿದ್ಯಾಲಯದ ಮನೋ ವಿಜ್ಞಾನ ಶಾಲೆಯಲ್ಲಿ ನಡೆದ ಸಂಶೋಧನೆ ಅನುಸಾರ. ಕೊರತೆ ಅನುಭವಿಸಿದ ಮಕ್ಕಳಲ್ಲಿನ ಈ ಹಠಾತ್ ವರ್ತನೆ ಮುಂದಿನ ಜೀವನದಲ್ಲಿ ಚಟಕ್ಕೆ ಗುರಿಯಾಗಿಲಿದೆ. ಇದು ಜೀವನ ನಿರ್ವಹಣೆ ಬಿಕ್ಕಟ್ಟು ಮತ್ತು ಬೊಜ್ಜಿನಂತಹ ಸಮಸ್ಯೆಗೂ ಕಾರಣವಾಗುತ್ತದೆ ಎಂಬುದನ್ನು ಆರು ವರ್ಷಗಳ ಕಾಲ ನಡೆದ ಅಧ್ಯಯನದಲ್ಲಿ ಬಯಲಾಗಿದೆ.
ಕೊರತೆ ಅನುಭವಿಸದ ಮಕ್ಕಳಿಗೆ ಹೋಲಿಕೆ ಮಾಡಿ ನೋಡಿದಾಗ ಆಹಾರ ಆಯ್ಕೆ ಕೊರತೆ, ಬಡ ಮಕ್ಕಳು ತಕ್ಷಣಕ್ಕೆ ಆಯ್ಕೆಗಳನ್ನು ಮಾಡಿಕೊಳ್ಳುತ್ತಾರೆ. ಈ ಸಂಬಂಧ 8 ವರ್ಷ ವಯೋಮಾನದ ಸುಮಾರು 146 ಮಕ್ಕಳನ್ನು ಅಧ್ಯಯನಕ್ಕೆ ಗುರಿಪಡಿಸಲಾಗಿದೆ. ಇಂಗ್ಲೇಡ್ನಲ್ಲಿ ವಾಸಿಸುವ ಕೆಲ ಬಡ ಮಕ್ಕಳು ಹಾಗೂ ಉನ್ನತ ಸ್ಥಿತಿಯ ಮಕ್ಕಳ ಮೇಲೆ ಈ ಸಂಶೋಧನೆ ನಡೆಸಲಾಗಿದೆ.
ಮಕ್ಕಳಿಗೆ ಅಲ್ಪ ಮತ್ತು ದೊಡ್ಡ ಪ್ರಮಾಣದ ಹಣ ನೀಡಲಾಯಿತು. ಈ ವೇಳೆ ಅಲ್ಪ ಮೊತ್ತದ ಹಣವನ್ನು(ಜಿಪಿಬಿ1) ಈಗಲೇ ಕೊಡುವುದಾಗಿ ದೊಡ್ಡ ಮೊತ್ತದ ಹಣಕ್ಕೆ (ಜಿಪಿಬಿ10) ವಾರ ಅಥವಾ ಅದಕ್ಕಿಂತ ಹೆಚ್ಚಿನ ಸಮಯದವರೆಗೆ ಕಾಯಬೇಕಾಗಿ ತಿಳಿಸಲಾಯಿತು. ಅಲ್ಲದೇ ಈ ಹಣವನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ತಿಳಿಸಲಾಯಿತು.
ಹಠಾತ್ ಪ್ರವೃತ್ತಿಯ ವ್ಯಕ್ತಿ ಈಗ ಜಿಪಿಬಿ1 ಗೆ ಆದ್ಯತೆ ನೀಡಬಹುದು. ಏಕೆಂದರೆ ಆರು ತಿಂಗಳಲ್ಲಿ ಜಿಪಿಬಿ10 ಮೌಲ್ಯವು ಇದೀಗ GBP1 ಗಿಂತ ಕಡಿಮೆ ರಿಯಾಯಿತಿಯಾಗಿದೆ. ಹಠಾತ್ ಪ್ರವೃತ್ತಿಯ ಮಕ್ಕಳು ಜಿಪಿಬಿ 10ಕ್ಕೆ ಆರು ತಿಂಗಳು ಕಾಯಲು ಮುಂದಾಗಬಹುದು. ಆದರೆ ಜಿಪಿಬಿ 15 ಕ್ಕಾಗಿ ವರ್ಷಗಳ ಕಾಲ ಕಾಯಲು ಸಿದ್ಧರಿರಲಿಲ್ಲ.
ಕಡಿಮೆ ಆಯ್ಕೆ ಹೊಂದಿದ್ದ ಮಕ್ಕಳ ಹೆಚ್ಚಿನ ರಿಯಾಯಿತಿ ದರದ ಆಯ್ಕೆ ಹೊಂದಿರುತ್ತಾರೆ. ಇದು ಅವರ ವಯಸ್ಸು, ಬುದ್ಧಿವಂತಿಕೆ, ಆಯ್ಕೆ ಕೊರತೆಗೆ ಕಾರಣವಾಗಿರುವ ಅಂಶವಾಗಿದೆ ಎಂದು ಸಂಶೋಧನೆ ತಿಳಿಸಿದೆ. ತಕ್ಷಣದ ಫಲಿತಾಂಶಗಳಿಗೆ ಅವನ ಆದ್ಯತೆಯು ಸ್ಥಿರ ವ್ಯಕ್ತಿತ್ವದ ಲಕ್ಷಣವಾಗಿದ್ದು, ಅದು ವ್ಯಕ್ತಿಯ ಜೀವನದ ಉದ್ದಕ್ಕೂ ಸ್ಥಿರವಾಗಿರುತ್ತದೆ ಎಂದು ಅಧ್ಯಯನ ತಿಳಿಸಿದೆ
ಇದೇ ರೀತಿ 1000ಕ್ಕೂ ಹೆಚ್ಚು ಆಯ್ಕೆ ಕೊರತೆ ಹೊಂದಿರುವ ವಯಸ್ಕ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಮೊದಲಿನ ಫಲಿತಾಂಶದಂತೆ ಬೇಗ ಹೊರಬರುವ ಆರ್ಥಿಕತೆ ಮೇಲೆ ಅವರು ಹೆಚ್ಚು ಗಮನಹರಿಸಿದ್ದು ಕಂಡು ಬಂದಿತು.
ಇನ್ನು ಕೆಲಸದ ಆಯ್ಕೆಯಲ್ಲೂ ಈ ಸಂಶೋಧನೆ ನಡೆಸಿದಾಗ ಸೌಲಭ್ಯದ ಕೊರತೆ ಹೊಂದಿರುವವರು ವೃತ್ತಿಪರ ಉದ್ಯೋಗಕ್ಕೆ ದೀರ್ಘಾವಧಿ ಕಾಯದೇ, ತಾಂತ್ರಿಕ ಮತ್ತು ಸಾಮಾನ್ಯ ಕೆಲಸಗಳಾದ ಮೆಕಾನಿಕ್ ಅಥವಾ ಕ್ಲಿನಿನರ್ ನಂತ ಸಣ್ಣ ಆದಾಯದ ಕೆಲಸಗಳ ಆಯ್ಕೆ ಮಾಡುತ್ತಾರೆ. ಇದು ಬೊಜ್ಜಿನಂತಹ ವಿಷಯಗಳಲ್ಲೂ ಕಾಳಜಿ ಹೊಂದಿದ್ದು, ಸೌಲಭ್ಯಹೊಂದಿರುವ ಜನರಿಗೆ ಹೋಲಿಸಿದಾಗ ಬಡ ಪ್ರದೇಶದವರ ಆರೋಗ್ಯ ಉತ್ತಮವಾಗಿಲ್ಲದಿರುವುದು ಕಂಡು ಬಂದಿದೆ.
ಸೌಲಭ್ಯದ ಕೊರತೆ ಹೊಂದಿರುವ ಮಕ್ಕಳು ಅಲ್ಪಕಾಲದ ಕಾರ್ಯದ ಬಗ್ಗೆ ಸಮಾಧಾನ ಹೊಂದಿರುತ್ತಾರೆ. ಇದು ದೀರ್ಘಕಾಲದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇದು ಅತಿ ಹೆಚ್ಚು ಚಿಂತೆ ಮಾಡುವುದು. ಡ್ರಗ್ ಸೇವನೆ, ಧೂಮಪಾನೆ, ಜೂಜಿನಂತವುಗಳನ್ನು ಕೂಡ ಒಳಗೊಂಡಿದೆ. ಕೊರತೆಗಳು ಇಂತಹ ಹಠಾತ್ ವರ್ತನೆಗೆ ಕಾರಣವಾಗುವ ಅನೇಕ ಗುಣವನ್ನು ಹೊಂದಿದೆ. ಇದರಲ್ಲಿ ಅನುವಂಶಿಯತೆಯೂ ಕೂಡ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಹೆಚ್ಚೆಚ್ಚು ತಿನ್ನುವ ಕಾಯಿಲೆಯನ್ನು ಎಲೆಕ್ಟ್ರೋಲೈಟ್ಸ್ ಮೂಲಕ ಪತ್ತೆ ಮಾಡಬಹುದು; ಏನಿದು ಹೊಸ ಅಧ್ಯಯನ?