ETV Bharat / sukhibhava

ಶ್ವಾಸಕೋಶ ಸಂಬಂಧಿ ಅನಾರೋಗ್ಯ ಹೆಚ್ಚಳ; ದೆಹಲಿ ಸರ್ಕಾರದಿಂದ ಮುನ್ನೆಚ್ಚರಿಕೆ ಕ್ರಮ - ಉಸಿರಾಟದ ಕಾಯಿಲೆ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ

ಆಸ್ಪತ್ರೆಗಳ ಸಿದ್ದತೆ ಸಂಬಂದ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ನವೆಂಬರ್​ 13 ರಿಂದ 17ರವರೆಗೆ ಮಾಕ್​ ಡ್ರಿಲ್​ ನಡೆಸಲಾಗಿದೆ.

delhi Government ensure ample supply of antiviral drugs

author img

By ETV Bharat Karnataka Team

Published : Dec 22, 2023, 10:35 AM IST

ನವದೆಹಲಿ: ಕಳೆದ ತಿಂಗಳು ಚೀನಾದ ಮಕ್ಕಳಲ್ಲಿ ನ್ಯುಮೋನಿಯಾ ಸೇರಿದಂತೆ ಉಸಿರಾಟದ ಕಾಯಿಲೆ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡ ಹಿನ್ನೆಲೆ ರಾಜ್ಯದಲ್ಲಿ ಆಂಟಿವೈರಲ್ ಔಷಧಗಳ ಪೂರೈಕೆ ಖಚಿತಪಡಿಸಿಕೊಳ್ಳಲು ಪ್ರಮಾಣಿತ ಆಪರೇಟಿಂಗ್ ಕಾರ್ಯ ವಿಧಾನಗಳನ್ನು (ಎಸ್‌ಒಪಿ) ರೂಪಿಸಲು ತಜ್ಞರು ಬದ್ಧರಾಗಿದ್ದಾರೆ ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ತಿಳಿಸಿದ್ದಾರೆ.

ಚಳಿಗಾಲ ಮತ್ತು ಕಳಪೆ ಹವಾಮಾನ ಹಿನ್ನೆಲೆ ಮಕ್ಕಳ ಆರೋಗ್ಯ ಕಾಳಜಿ ಎದುರಿಸಲು ಸಮಗ್ರ ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಆಂಟಿವೈರಲ್ ಔಷಧಗಳ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳುತ್ತಾರೆ ಮತ್ತು ಕೋವಿಡ್ -19 ಗಾಗಿ ಪರಿಷ್ಕೃತ ಕಣ್ಗಾವಲನ್ನು ಅನುಷ್ಠಾನಗೊಳಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಗಳ ಸಿದ್ದತೆ ಸಂಬಂದ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ನವೆಂಬರ್​ 13 ರಿಂದ 17ರವರೆಗೆ ಮಾಕ್​ ಡ್ರಿಲ್​ ನಡೆಸಲಾಗಿದೆ. ಈ ವೇಳೆ, ಪರಿಸ್ಥಿತಿ ಎದುರಿಸಲು ಸಜ್ಜಾಗಿರುವ ಮಾನವ ಸಂಪನ್ಮೂಲ , ಲಾಜಿಸ್ಟಿಕ್ಸ್ ಮತ್ತು ವೈದ್ಯಕೀಯ ಆಮ್ಲಜನಕದ ಲಭ್ಯತೆಯನ್ನು ಮೌಲ್ಯಮಾಪನ ಮಾಡಲಾಗಿದೆ.

ಬುಧವಾರ ರಾಜ್ಯ ಮತ್ತು ಕೇಂದ್ರಾಡಳಿತದೊಂದಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಭೆಯು ಇನ್ಫ್ಲುಯೆನ್ಸ ತರಹದ ಅನಾರೋಗ್ಯ ಮತ್ತು ತೀವ್ರವಾದ ಉಸಿರಾಟದ ಸೋಂಕುಗಳನ್ನು ನಿಭಾಯಿಸಲು ಆರೋಗ್ಯ ಸೌಲಭ್ಯಗಳ ಸಿದ್ಧತೆಯನ್ನು ಪರಿಶೀಲಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್ ಸಂಬಂಧಿತ ಲ್ಯಾಬ್ ಪರೀಕ್ಷಾ ದತ್ತಾಂಶವನ್ನು ಹಂಚಿಕೊಳ್ಳುವಂತೆ ದೆಹಲಿ ಸರ್ಕಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ವಿನಂತಿಸಿದೆ. ಕೋವಿಡ್​​ ಹರಡುತ್ತಿರುವ ಹಿನ್ನೆಲೆ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಐಎಲ್​ಐ/ಎಸ್​ಎಆರ್​​ಐ ಮಾದರಿ ಸಂಗ್ರಹಿಸಲು ಸೂಚನೆ ನೀಡಿದೆ.

ಕೋವಿಡ್​ ಕುರಿತು ಸಮುದಾಯದ ಜಾಗೃತಿಯನ್ನು ಮೂಡಿಸಲು ತಿಳಿಸಲಾಗಿದೆ. ಅಲ್ಲದೇ ಕಳಪೆ ಹವಾಮಾನದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್​ ಧರಿಸುವುದು, ಕೋವಿಡ್​ ಮಾರ್ಗಸೂಚಿ ಅನುಸರಿಸುವಂತೆ ತಿಳಿಸಲಾಗಿದೆ. ಮಕ್ಕಳು ಮತ್ತು ಹಿರಿಯ ನಾಯಕರು ಕಳಪೆ ವಾಯು ಗುಣಮಟ್ಟದಿಂದ ಹೆಚ್ಚು ದುರ್ಬಲಗೊಳ್ಳುತ್ತಿದ್ದಾರೆ. ದೀರ್ಘಕಾಲ ಈ ರೀತಿಯ ವಾಯುಗುಣ ಮಟ್ಟಕ್ಕೆ ಯುವ ಜನತೆ ಒಡ್ಡಿಕೊಳ್ಳುವುದರಿಂದ ಅವರಲ್ಲಿ ಶ್ವಾಸಕೋಶದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಈಗಾಗಲೇ ಅನೇಕ ಸಮಸ್ಯೆ ಹೊಂದಿರುವ ಹಿರಿಯರಲ್ಲಿ ಮತ್ತಷ್ಟು ಆರೋಗ್ಯ ಬಿಗಡಾಯಿಸುತ್ತದೆ. ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದಂತಹ ಉಸಿರಾಟದ ಸೋಂಕುಗಳ ಹರಡುವಿಕೆ ಜನರಲ್ಲಿ ಆರೋಗ್ಯ ಭಾರ ಹೆಚ್ಚಿಸುತ್ತದೆ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಶ್ವಾಸಕೋಶ ರೋಗಿಗಳಿಗೆ ಬೀಟ್​ರೂಟ್​ ಜ್ಯೂಸ್​ನ ಪೂರಕಗಳು ಪ್ರಯೋಜನಕಾರಿ: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.