ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಮಟ್ಟ ತೀವ್ರವಾಗಿದೆ. ಇಂದು ಬೆಳಿಗ್ಗೆ ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ) ಇನ್ನೂ ಹೆಚ್ಚಿನ ಕಳಪೆ ವರ್ಗದಲ್ಲಿ ದಾಖಲಾಯಿತು. ಎಸ್ಎಎಫ್ಎಆರ್ ದತ್ತಾಂಶದ ಪ್ರಕಾರ, ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 370 ದಾಖಲಾಗಿದೆ.
-
Visuals from India Gate as air quality in Delhi plunges to 'very poor' category.#DelhiAirPollution #DelhiAirQuality pic.twitter.com/EcGQ2zTbnx
— Press Trust of India (@PTI_News) November 15, 2023 " class="align-text-top noRightClick twitterSection" data="
">Visuals from India Gate as air quality in Delhi plunges to 'very poor' category.#DelhiAirPollution #DelhiAirQuality pic.twitter.com/EcGQ2zTbnx
— Press Trust of India (@PTI_News) November 15, 2023Visuals from India Gate as air quality in Delhi plunges to 'very poor' category.#DelhiAirPollution #DelhiAirQuality pic.twitter.com/EcGQ2zTbnx
— Press Trust of India (@PTI_News) November 15, 2023
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದತ್ತಾಂಶದ ಅನುಸಾರ, ಆರ್.ಕೆ.ಪುರಂನಲ್ಲಿ ವಾಯು ಗುಣಮಟ್ಟ 420 ಇದ್ದರೆ, ಹೊಸ ಮೋತಿ ಬಾಗ್ನಲ್ಲಿ 404 ಇದೆ. ಐಜಿಐ ವಿಮಾನ ನಿಲ್ದಾಣ ಪ್ರದೇಶ ಮತ್ತು ನೆಹರು ನಗರದಲ್ಲೂ ಕಳಪೆ ಮಟ್ಟದಲ್ಲಿದ್ದು, 433 ದಾಖಲಾಗಿದೆ.
ದೀಪಾವಳಿಯ ರಾತ್ರಿ ಪಟಾಕಿಗಳ ಮಾಲಿನ್ಯದಿಂದಾಗಿ ನಗರ ಸಂಪೂರ್ಣವಾಗಿ ದಟ್ಟ ಹೊಗೆಯಿಂದ ಆವರಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಜನರು ಪಟಾಕಿ ಸಿಡಿಸಿದ್ದು, ಮಾಲಿನ್ಯ ಮತ್ತಷ್ಟು ಹೆಚ್ಚಾಗಿ, ಮಬ್ಬು ಆವರಿಸಿತು.
-
Overall #AirQuality dips to ‘very poor’ category in Delhi and NCR, visuals from Lodhi road#DelhiPollution #AQI pic.twitter.com/mgLNltXcSR
— DD News (@DDNewslive) November 15, 2023 " class="align-text-top noRightClick twitterSection" data="
">Overall #AirQuality dips to ‘very poor’ category in Delhi and NCR, visuals from Lodhi road#DelhiPollution #AQI pic.twitter.com/mgLNltXcSR
— DD News (@DDNewslive) November 15, 2023Overall #AirQuality dips to ‘very poor’ category in Delhi and NCR, visuals from Lodhi road#DelhiPollution #AQI pic.twitter.com/mgLNltXcSR
— DD News (@DDNewslive) November 15, 2023
ಹಿಂದಿನ ವರ್ಷಕ್ಕಿಂತಲೂ ಕಳಪೆ: ಕಳೆದ ವರ್ಷಕ್ಕೆ ಹೋಲಿಸಿದಾಗ ಈ ಬಾರಿ ದೇಶದ (ದೀಪಾವಳಿ ಸಂದರ್ಭದಲ್ಲಿ) 11ರ ಪೈಕಿ 9 ನಗರಗಳ ರಾಜಧಾನಿಗಳು ಹೆಚ್ಚು ಮಾಲಿನ್ಯದಿಂದ ಕೂಡಿದ್ದವು ಎಂದು ವರದಿಯಾಗಿದೆ. ರಾಷ್ಟ್ರೀಯ ಶುದ್ದ ವಾಯು ಕಾರ್ಯಕ್ರಮ (ಎನ್ಸಿಎಪಿ) ವಿಶ್ಲೇಷಿಸಿರುವಂತೆ, ದೇಶದ 11 ರಾಜಧಾನಿಗಳಲ್ಲಿ ವಾಯು ಗುಣಮಟ್ಟ ಪಿಎಂ 2.5 ಆಗಿದೆ. ಇದರಲ್ಲಿ ನವದೆಹಲಿಯಲ್ಲಿ ಅತಿ ಹೆಚ್ಚು ಮಾಲಿನ್ಯ ನವೆಂಬರ್ 13ರ ಮಧ್ಯಾಹ್ನ 1.30ಕ್ಕೆ ದಾಖಲಾಗಿದೆ.
ಸುಪ್ರೀಂ ಕೋರ್ಟ್ ಪಟಾಕಿ ಹೊಡೆಯಲು ನಿಷೇಧ ಹೇರಿರುವ ನಡುವೆಯೂ ರಾಷ್ಟ್ರ ರಾಜಧಾನಿ ಮತ್ತು ದೇಶದ ಪ್ರಮುಖ ನಗರದಲ್ಲಿ ಪಟಾಕಿ ಸಿಡಿಸುವಿಕೆಯಿಂದ ವಾಯು ಗುಣಮಟ್ಟ ಹೆಚ್ಚಾಗಿದ್ದು, ಇದೊಂದು ಎಚ್ಚರಿಕೆ ಗಂಟೆ ಎಂದು ಪರಿಸರಪ್ರೇಮಿಗಳು ಹೇಳಿದ್ದಾರೆ.
ಈ ನಡುವೆ ದೆಹಲಿ ಕಾರ್ಮಿಕ ಸಚಿವ ರಾಜ್ ಕುಮಾರ್ ಆನಂದ್ ಅವರು ಜೊಂಟಿ ಗಡಿ ಪ್ರದೇಶದಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವ ಕ್ರಮಗಳ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕಂಜಾವಾಲಾ ಪ್ರದೇಶದಲ್ಲಿ ಮಾಲಿನ್ಯ ನಿಯಂತ್ರಣ ಕ್ರಮಗಳ ಅನುಷ್ಠಾನದ ಬಗ್ಗೆ ಕೂಡ ಪರಿಶೀಲನೆ ನಡೆಸಿದರು.
-
#WATCH | As Delhi air quality dips, Delhi Environment Minister Gopal Rai flags off special water sprinkler campaign from Delhi Secretariat pic.twitter.com/xT5SfDNrPP
— ANI (@ANI) November 14, 2023 " class="align-text-top noRightClick twitterSection" data="
">#WATCH | As Delhi air quality dips, Delhi Environment Minister Gopal Rai flags off special water sprinkler campaign from Delhi Secretariat pic.twitter.com/xT5SfDNrPP
— ANI (@ANI) November 14, 2023#WATCH | As Delhi air quality dips, Delhi Environment Minister Gopal Rai flags off special water sprinkler campaign from Delhi Secretariat pic.twitter.com/xT5SfDNrPP
— ANI (@ANI) November 14, 2023
ದೀಪಾವಳಿ ಬಳಿಕ ದೆಹಲಿಯಲ್ಲಿ ವಾಯು ಗುಣಮಟ್ಟ ಏರಿಕೆ ಕಂಡಿದೆ. ನಗರದಲ್ಲಿ ಮಾಲಿನ್ಯ ಮಟ್ಟವನ್ನು ತಗ್ಗಿಸಬೇಕಿದೆ. ನಮ್ಮ ಸರ್ಕಾರ ಇದಕ್ಕಾಗಿ ನಿರಂತರ ಕೆಲಸ ಮಾಡುತ್ತಿದೆ ಎಂದು ರಾಜ್ ಕುಮಾರ್ ಆನಂದ್ ಎಎನ್ಐಗೆ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಕೃತಕ ಬೆಳಕಿಗೆ ಹೆಚ್ಚು ಒಗ್ಗಿಕೊಳ್ಳಬೇಡಿ... ಖಿನ್ನತೆಗೆ ಇದೇ ಪ್ರಮುಖ ಕಾರಣವಂತೆ!