ETV Bharat / sukhibhava

ಕೋವಿಡ್​ನಿಂದ ದಡಾರ, ಮೆದುಳಿನ ಅಸ್ವಸ್ಥತೆಯ ಅಪಾಯ ಹೆಚ್ಚು: ತಜ್ಞರು

ಕೋವಿಡ್​ ಅಡ್ಡ ಪರಿಣಾಮಗಳು ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಈ ಸಾಂಕ್ರಾಮಿಕದಿಂದಾಗಿ ಎಸ್​ಎಸ್​ಇಪಿ ಅಪಾಯ ಹೆಚ್ಚಾಗುವಂತೆ ಮಾಡಿದೆ ಎಂದು ತಜ್ಞರು ಹೇಳಿದ್ದಾರೆ.

Covid has increased risk of measles, brain disorder
ಕೋವಿಡ್​ನಿಂದ ದಡಾರ, ಮೆದುಳಿನ ಅಸ್ವಸ್ಥತೆಯ ಅಪಾಯ ಹೆಚ್ಚು
author img

By ETV Bharat Karnataka Team

Published : Dec 25, 2023, 10:29 AM IST

ಲಖನೌ: ಕೋವಿಡ್ ಸಾಂಕ್ರಾಮಿಕದಿಂದ ದಡಾರ ಮತ್ತು ಸಬಾಕ್ಯೂಟ್ ಸ್ಕ್ಲೆರೋಸಿಂಗ್ ಪ್ಯಾನೆನ್ಸ್‌ಫಾಲಿಟಿಸ್ -ಎಸ್‌ಎಸ್‌ಪಿಇ ಅಪಾಯ ಹೆಚ್ಚುವಂತೆ ಮಾಡಿದೆ. ಬಹುಶಃ ದಡಾರ ಲಸಿಕೆಯನ್ನು 2020 ಮತ್ತು 2022 ರ ನಡುವೆ ಮುಂದೂಡಲಾಗಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ -ಕೆಜಿಎಂಯುದ ನರವಿಜ್ಞಾನ ವಿಭಾಗವು ಶನಿವಾರ ಆಯೋಜಿಸಿದ್ದ ಎಸ್‌ಎಸ್‌ಪಿಇ ಕುರಿತ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ನರವಿಜ್ಞಾನ ವಿಭಾಗದ ಮುಖ್ಯಸ್ಥ ಗಾರ್ಗ್, “ಎಸ್‌ಎಸ್‌ಪಿಇ ಅಪರೂಪದ ಹಾಗೂ ಪ್ರಗತಿಶೀಲ ಮೆದುಳಿನ ಕಾಯಿಲೆಯಾಗಿದ್ದು, ಇದು ಪ್ರಾಥಮಿಕವಾಗಿ ದಡಾರ ಹೊಂದಿರುವ ಮಕ್ಕಳು ಮತ್ತು ಯುವ ವಯಸ್ಕರಲ್ಲಿ (ಶೈಶವಾವಸ್ಥೆಯಲ್ಲಿ) ಕಂಡು ಬರುತ್ತಿದ್ದು, ಹೆಚ್ಚಿನ ಪರಿಣಾಮ ಬೀರುತ್ತದೆ‘‘ ಎಂದು ಹೇಳಿದ್ದಾರೆ.

"ದಡಾರ ಲಸಿಕೆಗಳ ಲಭ್ಯತೆಯ ಹೊರತಾಗಿಯೂ, ಕಡಿಮೆ ವ್ಯಾಕ್ಸಿನೇಷನ್ ಅಥವಾ ಆರೋಗ್ಯ ರಕ್ಷಣೆಗೆ ಸೀಮಿತ ಪ್ರವೇಶವನ್ನು ಹೊಂದಿರುವ ಪ್ರದೇಶಗಳಲ್ಲಿ SSPE ಗಂಭೀರ ಪರಿಣಾಮ ಹೊಂದಿದೆ ಎಂದು ಅವರು ಹೇಳಿದ್ದಾರೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ, ಎಸ್‌ಎಸ್‌ಪಿಇ ಪ್ರಕರಣಗಳ ಸಂಖ್ಯೆಯಲ್ಲಿ ಭಾರತವು ಯೆಮೆನ್ ನಂತರದ ಎರಡನೇ ಸ್ಥಾನದಲ್ಲಿದೆ. ಇದು ಕಳವಳಕಾರಿಯಾದ ಅಂಶವಾಗಿದೆ. ಸಾಂಕ್ರಾಮಿಕದ ಸಮಯದಲ್ಲಿ ದಡಾರ ಲಸಿಕೆ ಹಾಕುವುದು ಕೆಲಕಾಲ ನಿಂತಿತ್ತು. ಇದು ದಡಾರದ ಅಪಾಯವನ್ನು ಹೆಚ್ಚಿಸಿದೆ ಎಂದು ತಜ್ಞರು ಹೇಳಿದ್ದಾರೆ.

ದೇಶದಲ್ಲಿ ಮತ್ತೆ 656 ಕೋವಿಡ್​ ಪ್ರಕರಣ ದಾಖಲು: ಮತ್ತೊಂದು ಕಡೆ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 656 ಹೊಸ ಕೋವಿಡ್​ ಪ್ರಕರಣಗಳು ದಾಖಲಾಗಿವೆ. ಕೊರೊನಾದಿಂದ ಭಾನುವಾರ ಒಂದು ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ - ಅಂಶಗಳು ಹೇಳಿವೆ.

ಕೇಂದ್ರ ಆರೋಗ್ಯ ಇಲಾಖೆ ಡೇಟಾ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಒಟ್ಟು 656 ಹೊಸ ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಒಟ್ಟು 3,742 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಸಚಿವಾಲಯ ತಿಳಿಸಿದೆ. ಕೇರಳದಲ್ಲಿ ಗರಿಷ್ಠ 128 ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕದಲ್ಲಿ 96 ಹೊಸ ಸೋಂಕುಗಳು ದಾಖಲಾಗಿವೆ. ಕಳೆದ ಕೆಲವು ವಾರಗಳಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ.

ಕೋವಿಡ್​ನ ಹೊಸ ರೂಪಾಂತರದ ಪ್ರಕರಣಗಳು ಭಾರತದಲ್ಲಿ ಮಾತ್ರವಲ್ಲದೇ ಸಿಂಗಾಪುರ ಮತ್ತು ಇಂಗ್ಲೆಂಡ್‌ನಂತಹ ಇತರ ದೇಶಗಳಲ್ಲಿಯೂ ಕಂಡುಬಂದಿವೆ.( ಐಎಎನ್​ಎಸ್​)

ಇದನ್ನು ಓದಿ: ಒಂದೇ ತಿಂಗಳಲ್ಲಿ ಜಾಗತಿಕವಾಗಿ ಶೇ. 52ರಷ್ಟು ಕೋವಿಡ್​ ಹೆಚ್ಚಳ: ವಿಶ್ವ ಆರೋಗ್ಯ ಸಂಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.