ETV Bharat / sukhibhava

ಕೋವಿಡ್‌ ರೂಪಾಂತರಿ ಸೌಮ್ಯ ಲಕ್ಷಣ ಹೊಂದಿದೆ, ಗಾಬರಿ ಅಗತ್ಯವಿಲ್ಲ: ನೀತಿ ಆಯೋಗ ಸದಸ್ಯ ವಿ.ಕೆ.ಪೌಲ್​ - jn1 ಸೋಂಕು ಸೌಮ್ಯ ಲಕ್ಷಣ

ಕೊರೊನಾ ರೂಪಾಂತರಿ ತಳಿ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಆದರೆ, ಸೋಂಕು ಸೌಮ್ಯ ಲಕ್ಷಣ ಹೊಂದಿದ್ದು, ಗಾಬರಿಪಡುವ ಅಗತ್ಯವಿಲ್ಲ ಎಂದು ನೀತಿ ಆಯೋಗ ತಿಳಿಸಿದೆ.

covid-case-surge-niti-ayog-member-vk-paul-say-no-need-to-panic

author img

By ETV Bharat Karnataka Team

Published : Dec 20, 2023, 3:36 PM IST

ನವದೆಹಲಿ: ದೇಶದಲ್ಲಿ ಕೋವಿಡ್ ರೂಪಾಂತರಿ ತಳಿ ಜೆಎನ್​.1 ಪತ್ತೆ ಮತ್ತು ಸೋಂಕು ಪ್ರಕರಣಗಳು ಏರಿಕೆ ಕಂಡಿರುವ ಕುರಿತು ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ. ಸಾಂಕ್ರಾಮಿಕ ರೋಗದ ಕುರಿತು ಸಂಪೂರ್ಣ ಜಾಗೃತಿ ಮತ್ತು ಸಹಕಾರದ ಅಗತ್ಯವನ್ನು ಅವರು ಇದೇ ವೇಳೆ ಒತ್ತಿ ಹೇಳಿದರು.

ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್​ ಮಾತನಾಡಿ, ಜೆಎನ್​.1 ಎಂಬ ಹೊಸ ತಳಿ ಕೋವಿಡ್​ ಪ್ರಕರಣಗಳ ಏರಿಕೆಗೆ ಕಾರಣವಾಗುತ್ತಿದೆ. ಈ ತಳಿ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಆದರೆ, ಸೋಂಕು ಸೌಮ್ಯ ಲಕ್ಷಣ ಹೊಂದಿದ್ದು, ಗಾಬರಿಪಡುವ ಅಗತ್ಯ ಇಲ್ಲ ಎಂದರು.

ಇತ್ತೀಚಿನ ಮಾಹಿತಿ ಪ್ರಕಾರ, ಹೊಸ ಕೋವಿಡ್​​ ತಳಿಯು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ. ಪ್ರಸ್ತುತ, ದೇಶಾದ್ಯಂತ 2,300 ಸಕ್ರಿಯ ಪ್ರಕರಣಗಳಿದ್ದು, ಕಳೆದು ಹತ್ತು ದಿನಗಳಿಂದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕಳೆದ 2 ವಾರದಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಇವರು ಇತರೆ ಗಂಭೀರ ಆರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದರು ಎಂದು ತಿಳಿಸಿದರು.

ಕೋವಿಡ್​ ಎದುರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮೂರು ವಿಚಾರ ಕುರಿತು ಎಚ್ಚರದಿಂದ ಹೆಚ್ಚಿನ ನಿಗಾ ವಹಿಸಬೇಕು. ಸೋಂಕಿನ ಕುರಿತು ಕಣ್ಗಾವಲು ಹೆಚ್ಚಿಸಬೇಕು. ಆಸ್ಪತ್ರೆಗಳ ಲಭ್ಯತೆ, ಸಿದ್ಧತೆ ಕುರಿತು ಪರಿಶೀಲನೆ ನಡೆಸಬೇಕು. ಒಟ್ಟಾರೆ ಸಿದ್ಧತೆಯ ಕುರಿತು ಹೆಚ್ಚುವರಿಯಾಗಿ ಮಾಕ್​ ಡ್ರಿಲ್​ ನಡೆಸಬೇಕು. ಕಡೆಯದಾಗಿ ತಪ್ಪು ಮಾಹಿತಿ ಹರಡಬಾರದು ಎಂದರು.

ಕೋವಿಡ್​ ಸಂಪೂರ್ಣವಾಗಿ ಹೋಗಿಲ್ಲ ಎಂಬುದನ್ನು ನಾವು ಮರೆಯಬಾರದು. ಸರ್ಕಾರ ಎಲ್ಲವನ್ನು ನಿಭಾಯಿಸಲು ಸಿದ್ಧವಾಗಿದೆ. ತಳಿಗಳ ಸಂಬಂಧ ಮತ್ತು ಕಣ್ಗಾವಲಿನಲ್ಲಿ ನಿರಂತರ ಗಮನಹರಿಸಿ. ಎಲ್ಲಾ ರಾಜ್ಯಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸುವಂತೆ ಮತ್ತು ಜನರಲ್ಲಿ ಮಾರ್ಗಸೂಚಿ ಅನುಸರಿಸುವಂತೆ ಮನವಿ ಮಾಡಲಾಗಿದೆ ಎಂದರು.(ಎಎನ್​ಐ)

ಇದನ್ನೂ ಓದಿ: ಕೊರೊನಾ ಸೋಂಕು ತಗುಲಿದ್ದ ವೃದ್ಧ ಸಾವು: ಟೆಸ್ಟಿಂಗ್ ಹೆಚ್ಚಳಕ್ಕೆ ಸೂಚನೆ ಕೊಟ್ಟ ಆರೋಗ್ಯ ಸಚಿವರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.