ನ್ಯೂಯಾರ್ಕ್: ಕೋವಿಡ್ 19ನ ಸಾರ್ಸ್ ಕೋವ್ 2 ವೈರಸ್ ಇನ್ಫ್ಲುಯೆನ್ಸ ರೀತಿ ಋತುಮಾನದ ಜ್ವರವಾಗಲಿದ್ದು, ಬೇಸಿಗೆಗಿಂತ ಚಳಿಗಾಲದಲ್ಲಿ ಹೆಚ್ಚು ಸಕ್ರಿಯವಾಗಿರಲಿದೆ ಎಂದು ಅಧ್ಯಯನ ಎಚ್ಚರಿಸಿದೆ. ಕೋವಿಡ್ ಸ್ಥಳೀಯ ಸಾಂಕ್ರಾಮಿಕ ಸೋಂಕು ಆಗಿದ್ದು, ಪ್ರತಿ ವರ್ಷ ಇದರ ಅಲೆ ಜನರನ್ನು ಕಾಡಲಿದೆ. ಭವಿಷ್ಯದಲ್ಲಿ ಇದರ ಉಲ್ಬಣದ ಕುರಿತು ಕೊಂಚ ಗಮನಹರಿಸಿ ನಿರ್ಧಾರ ನಡೆಸುವುದು ಸಾರ್ವಜನಿಕ ಆರೋಗ್ಯ ನೀತಿ ನಿರೂಪಕರಿಗೆ ಬಿಟ್ಟಿದ್ದು ಎಂದು ಅಮೆರಿಕದ ಯೆಲ್ ಯುನಿವರ್ಸಿಟಿಯ ಪ್ರೊ.ಜೆಫ್ರೆ ಟೌನ್ಸೆಂಡ್ ತಿಳಿಸಿದ್ದಾರೆ. ಕಡಿಮೆ ತಾಪಮಾನ, ಚಳಿಗಾಲ ಹಾಗು ವಸಂತಕಾಲದ ಆರಂಭದಲ್ಲಿ ಈ ಸೋಂಕಿನ ಅಪಾಯ ಜಾಸ್ತಿ ಎಂದು ಅವರು ಹೇಳಿದರು.
ಈ ಅಧ್ಯಯನ ವರದಿಯನ್ನು ಎಂಬಯೋ ಪತ್ರಿಕೆಯಲ್ಲಿ (mBio) ಪ್ರಕಟಿಸಲಾಗಿದೆ. ಈ ಅವಧಿಗಳಲ್ಲಿ ಕೋವಿಡ್ರೋಗಿಗಳ ಸಂಖ್ಯೆ ಏರಿಕೆಯಾಗುವ ಹಿನ್ನೆಲೆೆಯಲ್ಲಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ಸಿದ್ಧತೆ ನಡೆಸಲು ಸಹಾಯವಾಗುತ್ತದೆ. ಕೋವಿಡ್ ಕುರಿತು ಭವಿಷ್ಯದ ಜ್ಞಾನಗಳು ಕೂಡ ಪ್ರಮುಖವಾಗಿದೆ. ಉಸಿರಾಟದ ಸೋಂಕುಗಳಾದ ಇನ್ಫ್ಲುಯೆನ್ಸ ಮತ್ತು ರೆಸ್ಪಿರೆಟರಿ ಸಿನ್ಸಿಟಿಯಲ್ ವೈರಸ್ ಈ ಅವಧಿಯಲ್ಲಿ ಹೆಚ್ಚು ಕ್ರಿಯಶೀಲವಾಗಬಹುದು. ಇದು ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚಿನ ಹೊರೆಗೂ ಕೂಡ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
ಭವಿಷ್ಯದ ಋತುಮಾನದ ವೈರಸ್ನಂತೆ ಸಾರ್ಸ್ ಕೋವ್ 2 ಸಕ್ರಿಯವಾಗಿ ಪ್ರಸಾರವಾಗುತ್ತದೆ. ಐತಿಹಾಸಿಕ ಕೋವಿಡ್ ವೈರಸ್ ದತ್ತಾಂಶವನ್ನು ಯುರೋಪ್, ಪೂರ್ವ ಏಷ್ಯಾ ಮತ್ತು ಉತ್ತರ ಅಮೆರಿಕದ ಸ್ಥಳಗಳಲ್ಲಿನ ಶೀತದ ಕೋವಿಡ್ ವೈರಸ್ ಸೋಂಕಿನೊಂದಿಗೆ ದತ್ತಾಂಶವನ್ನು ವಿಶ್ಲೇಷಿಸಲಾಗಿದೆ. 1985ರಿಂದ 2020ರವರೆಗಿನ ಸಾವಿರಾರು ಜನರ ವೈರಲ್ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ನಡೆಸಲಾಗಿದೆ.
ಈ ಅಂಕಿಅಂಶಗಳ ವಿಧಾನದಿಂದ ಸಂಶೋಧಕರು ಸಾರ್ಸ್ ಕೋವ್ 2 ಚಳಿಗಾಲದ ಮಾಸದಲ್ಲಿ ಮತ್ತು ಕಡಿಮೆ ತಾಪಮಾನ ಪ್ರದೇಶದಲ್ಲಿ ಹೆಚ್ಚುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಈ ನಿರ್ದಿಷ್ಟ ಸಮಯವು ಸ್ಥಳದಿಂದ ಸ್ಥಳಕ್ಕೆ ಬೇರೆಯಾಗುತ್ತದೆ. ಕೋವಿಡ್ ಇದೀಗ ಸ್ಥಳೀಯ ರೋಗವಾಗಿದೆ.
ಏನಿದು ಸ್ಥಳೀಯ ರೋಗ?: ಜನಸಂಖ್ಯೆಯಲ್ಲಿ ಈ ಸೋಂಕು ಇರುತ್ತದೆ. ನಮ್ಮ ಪ್ರತಿರೋಧಕತೆಯು ಈ ಸೋಂಕಿಗೆ ಹಲವು ಬಾರಿ ಒಡ್ಡಿಕೊಂಡಿರುತ್ತದೆ. ಯಾವುದೇ ಮಧ್ಯಸ್ಥಿಕೆ ಇಲ್ಲದೇ ಇದನ್ನು ಕೊಂಡೊಯ್ಯತ್ತೇವೆ. ಪ್ರತಿ ವರ್ಷ ಅದೇ ಮಾರ್ಗದಲ್ಲಿ ಇದು ಹರಡುತ್ತದೆ. ಇದು ಎಲ್ಲಿವರೆಗೆ ಇರುತ್ತದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ. (ಐಎಎನ್ಎಸ್)
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಐದನೇ ಪೊಲೀಯೋ ಪ್ರಕರಣ ದಾಖಲು