ನವದೆಹಲಿ: ಡಿಸೆಂಬರ್ 28 ಮತ್ತು 29ರಂದು ಅಸ್ಸೋಂ, ಆಂಧ್ರಪ್ರದೇಶ, ಪಂಜಾಬ್ ಮತ್ತು ಗುಜರಾತ್‌ನಲ್ಲಿ ನಡೆಸಿದ್ದ ಲಸಿಕೆ ತಾಲೀಮು ಯಶಸ್ಸಿಯಾದ ನಂತರ, ಕೇಂದ್ರವು ಈಗ ಉಳಿದ ಭಾಗಗಳಿಗೆ ವಿಸ್ತರಿಸಲು ಯೋಜಿಸಿದೆ.
ಇತರ ರಾಜ್ಯಗಳಿಗೆ ವಿಸ್ತರಣೆಯಿಂದ ತುರ್ತು ಬಳಕೆಗಾಗಿ ಲಸಿಕೆ ನೀಡಲು ಅನುಮೋದಿಸಿದ ನಂತರ ಯಾವುದೇ ತೊಂದರೆ ಇಲ್ಲದಂತೆ ಸಾಗಲಿದೆ. ಎಲ್ಲಾ ರಾಜ್ಯ ರಾಜಧಾನಿಗಳು ಜನವರಿ 2ರಂದು ಕನಿಷ್ಠ ಮೂರು ಲಸಿಕೆ ತಾಲೀಮು ನಡೆಸಲಿವೆ. ಕನಿಷ್ಠ ಸೌಲಭ್ಯ ಹೊಂದಿರುವ ರಾಜ್ಯಗಳು ಹಾಗೂ ಅವುಗಳ ಜಿಲ್ಲೆಗಳು ಸಹ ಇದರಲ್ಲಿ ಒಳಗೊಂಡಿವೆ.
ಲಸಿಕೆಯ ಡ್ರೈ ಕಸರತ್ತು ಚಾಲನೆಯಲ್ಲಿ ಲಸಿಕೆಗಳನ್ನು ಸ್ಟೋರೇಜ್ನಿಂದ ಬಳಕೆದಾರರಿಗೆ ಸಾಗಿಸಲು, ಅಭ್ಯರ್ಥಿಗಳಿಗೆ ನೀಡುವ, ಕೋ-ವಿನ್ ಅಪ್ಲಿಕೇಷನ್‌ನಲ್ಲಿ ಡೇಟಾ ನೀಡುವ ಸಂಪೂರ್ಣ ಪ್ರಕ್ರಿಯೆ ಒಳಗೊಂಡಿರುತ್ತದೆ.
ಉದಾಹರಣೆಗೆ, ಗುಜರಾತ್ ಡ್ರೈ ಕವಾಯತಿನಲ್ಲಿ 475 ಫಲಾನುಭವಿಗಳು ನಕಲಿ ಕಾರ್ಯವಿಧಾನಕ್ಕೆ ಒಳಗಾದರು. ಇದರಡಿ ಯೋಜಿತ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷವಿದೆಯೇ ಎಂಬುದು ಗುರುತಿಸಲಾಗುತ್ತದೆ. ಬೂತ್‌ನಲ್ಲಿ ಜನಸಂದಣಿ ನಿರ್ವಹಣೆ, ಸಾಮಾಜಿಕ ಅಂತರ ಮಾರ್ಗಸೂಚಿ ಅಣಕು ಕಸರತ್ತು ಅಭ್ಯಾಸ ಮಾಡಲಾಗುತ್ತಿದೆ.
ಇದನ್ನೂ ಓದಿ: ಕೃಷಿ ಕಾನೂನುಗಳ ವಿರುದ್ಧ ಸರ್ವಾನುಮತದ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ
ಗುಜರಾತ್‌ನಲ್ಲಿ ಗಾಂಧಿನಗರ ಮತ್ತು ರಾಜ್‌ಕೋಟ್ ಜಿಲ್ಲೆಗಳಲ್ಲಿ ಸ್ಥಾಪಿಸಲಾದ 19 ಬೂತ್‌ಗಳಲ್ಲಿ ಡ್ರೈ ಕಸರತ್ತು ನಡೆಸಲಾಯಿತು. ಪಂಜಾಬ್‌ನಲ್ಲಿ ಲುಧಿಯಾನ ಮತ್ತು ಶಾಹೀದ್ ಭಗತ್ ಸಿಂಗ್ ನಗರ ಆಯ್ಕೆ ಮಾಡಲಾಯಿತು. ನಲ್ಬಾರಿ ಮತ್ತು ಸೋನಿತ್‌ಪುರ ಅಸ್ಸಾಂನ ಎರಡು ಜಿಲ್ಲೆಗಳಾಗಿದ್ದು, ಅಲ್ಲಿ ಈಗಾಗಲೇ ಅಣಕು ಡ್ರಿಲ್ ನಡೆದಿದೆ. ಎರಡು ದಿನಗಳ ಚುಚಮದ್ದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯನ್ನು ಆಯ್ಕೆ ಮಾಡಲಾಯಿತು. ಎಲ್ಲಾ ಕಡೆ ಈ ಪ್ರಯೋಗಿಕ ಹಂತ ಯಶಸ್ವಿಯಾಗಿದೆ.