ನ್ಯೂಯಾರ್ಕ್ : ಬೋಸ್ಟನ್ ಮಕ್ಕಳ ಆಸ್ಪತ್ರೆ (Boston Children's Hospital) ಯ ಸಂಶೋಧಕರು 2020 ಮಾರ್ಚ್‌ನಿಂದ ಮೇವರೆಗೆ ಇಟಲಿಯಲ್ಲಿ ದಾಖಲಾದ 551 ಜನ ಕೋವಿಡ್ -19 ರೋಗಿಗಳ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಈ ಪೈಕಿ ಅರ್ಧದಷ್ಟು (ಶೇ.46) ರಷ್ಟು ರೋಗಿಗಳಲ್ಲಿ ಈ ಹಿಂದೆ ಮಧುಮೇಹದ ಇದ್ದ ಬಗ್ಗೆ ಮಾಹಿತಿ ದೊರೆತಿಲ್ಲವಾದರೂ, ಅವರಲ್ಲಿ ಹೊಸ ಬಗೆಯ ಹೈಪರ್ಗ್ಲೆಸೇಮಿಯಾ (Hyperglycemia) ಅಥವಾ ಹೈ ಬ್ಲಡ್ ಶುಗರ್ (High blood sugar) ಪತ್ತೆಯಾಗಿದೆ.
ಈ ಪೈಕಿ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ, ಹೊಸ ಹೈಪರ್ಗ್ಲೆಸೇಮಿಯಾ ಇರುವ ಕೋವಿಡ್ ರೋಗಿಗಳ ಪೈಕಿ ಶೇ. 35 ರಷ್ಟು ಜನರು ಕನಿಷ್ಠ 6 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದಾರೆ ಎಂದು ಅಧ್ಯಯನ ತಂಡದ ಮುಖ್ಯಸ್ಥ ಪಾವೊಲೊ ಫಿಯೋರಿನಾ ಹೇಳಿದ್ದಾರೆ.
ಇತರ ಸಮಸ್ಯೆಗಳಿಗೆ ರೋಗಗಳಿಗೆ ಹೋಲಿಸಿದರೆ, ಹೈಪರ್ಗ್ಲೆಸೇಮಿಯಾ ಇದ್ದ ಕೋವಿಡ್ ರೋಗಿಗಳ ಮೇಲೆ ಹೆಚ್ಚಿನ ನಿಗಾ ಇಡುವ ಅನಿವಾರ್ಯತೆ ಇತ್ತು. ಯಾಕೆಂದರೆ ಸೋಂಕಿತರು ದೀರ್ಘ ಸಮಯ ಆಸ್ಪತ್ರೆಗೆ ದಾಖಲಾಗಬೇಕಾಯಿತು, ಕೆಟ್ಟ ಕ್ಲಿನಿಕಲ್ ಲಕ್ಷಣಗಳು, ಆಮ್ಲಜನಕದ ಹೆಚ್ಚಿನ ಅಗತ್ಯತೆ, ತೀವ್ರ ನಿಗಾ ಘಟಕದ ಚಿಕಿತ್ಸೆಯ ಹೆಚ್ಚಿನ ಅಗತ್ಯ ಈ ಸೋಂಕಿತರಿಗೆ ಇತ್ತು ಎಂದು ಫಿಯೋರಿನಾ ತಿಳಿಸಿದ್ದಾರೆ.
ನೇಚರ್ ಮೆಟಾಬಾಲಿಸಂ ಪತ್ರಿಕೆಯಲ್ಲಿ ಈ ಅಧ್ಯಯನ ವರದಿ ಪ್ರಕಟಿಸಲಾಗಿದೆ. ಹೈಪರ್ಗ್ಲೆಸೇಮಿಕ್ ರೋಗಿಗಳು ಅಸಹಜ ಹಾರ್ಮೋನುಗಳ ಮಟ್ಟವನ್ನು ಹೊಂದಿದ್ದರು ಎಂದು ಅಧ್ಯಯನ ತಂಡವು ಹೇಳಿದೆ. ಅಂತಹ ರೋಗಿಗಳಲ್ಲಿ ಹೈಪರ್ಗ್ಲೆಸೇಮಿಕ್ ಮಟ್ಟ ಹೆಚ್ಚಿತ್ತು. ಅದು ಇನ್ಸುಲಿನ್ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತದೆ ಎಂದು ಪಾವೊಲೊ ಫಿಯೋರಿನಾ ತಿಳಿಸಿದ್ದಾರೆ.