ETV Bharat / sukhibhava

ಕೋವಿಡ್ ಅಥವಾ ಲಸಿಕೆ ಮೈಗ್ರೇನ್‌ ಹೆಚ್ಚಿಸಿತೇ?

author img

By ETV Bharat Karnataka Team

Published : Oct 4, 2023, 5:45 PM IST

ಕೋವಿಡ್ ಸೋಂಕು ತಗಲುವ ಅಥವಾ ಅದಕ್ಕೆ ಲಸಿಕೆ ಪಡೆಯುವ ಒಂದು ತಿಂಗಳ ಮೊದಲು ಮತ್ತು ನಂತರದ ಅವಧಿಯಲ್ಲಿ ಬೇರೆ ರೋಗಿಗಳಿಗೆ ಹೋಲಿಕೆ ಮಾಡಿದಾಗ ಕೆಲವು ರೋಗಿಗಳ ಮೈಗ್ರೇನ್​ ಉಲ್ಬಣಗೊಂಡಿರುವುದು ಕಂಡುಬಂದಿದೆ.

Could Covid-19 or the vaccine make migraines worse?

ಕೋವಿಡ್​​ 19 ಮತ್ತು ಅದರ ಪ್ರತಿರಕ್ಷಣಾ ಲಸಿಕೆಗಳು ಮೈಗ್ರೇನ್​ (ತೀವ್ರ ಸ್ವರೂಪದ ತಲೆನೋವು) ತೀವ್ರತೆಯ ಮೇಲೆ ಕೊಂಚವಾದರೂ ಪರಿಣಾಮ ಬೀರಿದೆ ಎಂದು ಹೊಸ ಅಧ್ಯಯನ ಹೇಳಿದೆ. ಈ ಕುರಿತ ಸಂಶೋಧನಾತ್ಮಕ ವರದಿಯನ್ನು ಯುರೋಪಿಯನ್​ ಜರ್ನಲ್​ ಆಫ್​ ನ್ಯೋರೋಲಾಜಿಯಲ್ಲಿ ಪ್ರಕಟಿಸಲಾಗಿದೆ.

ಸ್ಪಾನಿಷ್​ ತಲೆನೋವಿನ ಕ್ಲಿನಿಕ್​ನಲ್ಲಿ 550 ಮಂದಿ ವಯಸ್ಕರು ಮೈಗ್ರೇನ್​ ಸಂಬಂಧಿತ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ ಶೇ 44.7ರಷ್ಟು ಮಂದಿಗೆ ಒಮ್ಮೆಯಾದರೂ ಕೋವಿಡ್​ ಸೋಂಕು ತಗುಲಿದೆ. ಶೇ 83.3ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. ಕೋವಿಡ್​ ಬಳಿಕ ತಮ್ಮ ಮೈಗ್ರೇನ್​ ಮತ್ತಷ್ಟು ಹೆಚ್ಚಾಯಿತು ಎಂದು ಶೇ 24.7ರಷ್ಟು ಮಂದಿ ತಿಳಿಸಿದರೆ, ಶೇ 11.4 ಮಂದಿ ಲಸಿಕೆ ಪಡೆದ ನಂತರ ಮೈಗ್ರೇನ್​ ಪರಿಣಾಮ ಉಲ್ಬಣಿಸಿತು ಎಂದಿದ್ದಾರೆ.

ಅಧ್ಯಯನದಲ್ಲಿ ಭಾಗಿಯಾದ ಶೇ 2.5ರಷ್ಟು ಮಂದಿ ಮೈಗ್ರೇನ್​ ಹದಗೆಡುತ್ತಿರುವ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ. ಇನ್ನು ಲಸಿಕೆ ಪಡೆದ ಶೇ 17.3ರಷ್ಟು ಜನರು ಮೈಗ್ರೇನ್​ ಹದಗೆಡುತ್ತಿರುವ ಬಗ್ಗೆ ಕಾಳಜಿವಹಿಸಿದ್ದಾರೆ. ಸಂಶೋಧಕರು ಇ-ಡೈರಿಯನ್ನು ಪರಿಶೀಲಿಸಿದಾಗ ತಲೆನೋವಿನ ಫ್ರಿಕ್ವೆನ್ಸಿಯಲ್ಲಿ ಮಹತ್ತರ ವ್ಯತ್ಯಾಸ ಕಂಡುಕೊಂಡಿದ್ದಾರೆ. ಸೋಂಕು ಅಥವಾ ಲಸಿಕೆ ಪಡೆಯುವ ಒಂದು ತಿಂಗಳು ಮೊದಲು ಮತ್ತು ನಂತರದಲ್ಲಿ ಬೇರೆ ರೋಗಿಗಳಿಗೆ ಹೋಲಿಸಿದ್ದು, ಈ ರೋಗಿಗಳ ಮೈಗ್ರೇನ್​ ಹದಗೆಟ್ಟಿರುವುದು ಗೊತ್ತಾಗಿದೆ.

ಕೋವಿಡ್​ ಸೋಂಕಿತರ ಹಿಂದಿನ ತಲೆನೋವಿನ ಫ್ರಿಕ್ವೇನ್ಸಿ ಮತ್ತು ಲಕ್ಷಣಗಳನ್ನು ಉದ್ದೇಶಪೂರ್ವಕವಾಗಿ ಮೈಗ್ರೇನ್​ ಹೆಚ್ಚಳದ ಫ್ರಿಕ್ವೆನ್ಸಿಯೊಂದಿಗೆ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ ಎಂದು ಲೇಖಕರು ತಿಳಿಸಿದ್ದಾರೆ. ನಮ್ಮ ಫಲಿತಾಂಶದಲ್ಲಿ ಕೋವಿಡ್​ ಮತ್ತು ಲಸಿಕೆಗಳಿ ಮೈಗ್ರೇನ್​ ಕೋರ್ಸಿನ ಮೇಲೆ ಅಲ್ಪ ಮಟ್ಟಿಗೆ ಪರಿಣಾಮ ಬೀರಿದೆ. ಇದು ಸೋಂಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಲಸಿಕೆಗಳು ಕಡಿಮೆ ಪ್ರಮಾಣದ ಕೆಟ್ಟ ಪರಿಣಾಮ ಹೊಂದಿವೆ. ಈ ಮಾಹಿತಿ ಮೈಗ್ರೇನ್​ ರೋಗಿಗಳಲ್ಲಿ ಚಿಂತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಏನಿದು ಮೈಗ್ರೇನ್​?: ಮೈಗ್ರೇನ್​ ಎಂಬುದು ನರ ವೈಜ್ಞಾನಿಕ ಸಮಸ್ಯೆ. ಈ ನೋವಿಗೆ ಸೂಕ್ತ, ನಿಖರ ಚಿಕಿತ್ಸೆಯಿಲ್ಲ. ವಿಪರೀತ ತಲೆ ನೋವು, ವಾಕರಿಕೆಯಂತಹ ಲಕ್ಷಣವನ್ನು ಇದು ಹೊಂದಿದೆ. ಮೈಗ್ರೇನ್​ಗೆ ನಿರ್ದಿಷ್ಟ ಕಾರಣವಿಲ್ಲ. ಆದರೆ, ಇದಕ್ಕೆ ಜೀವನಶೈಲಿ ಮತ್ತು ಆಹಾರ ಪದ್ದತಿಗಳು ಸೇರಿದಂತೆ ದೈಹಿಕ ನೋವು, ಒತ್ತಡಗಳು ಕೂಡ ಕಾರಣವಾಗುತ್ತವೆ. (ಎಎನ್​ಐ)

ಇದನ್ನೂ ಓದಿ: Migraine: ದೀರ್ಘಕಾಲದ ಮೈಗ್ರೇನ್​ಗೆ ಅಟೊಜೆಪೆಂಟ್​ ಔಷಧ ಸುರಕ್ಷಿತ ಮತ್ತು ಪರಿಣಾಮಕಾರಿ; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.