ETV Bharat / sukhibhava

ಗ್ರಾಹಕರು ಶಾಪಿಂಗ್​ ವೇಳೆ ಆರೋಗ್ಯಕ್ಕಿಂತ ಬೆಲೆಯಲ್ಲೇ ಜಾಸ್ತಿ ರಾಜಿ ಆಗೋದು: ಅಧ್ಯಯನ - ಬಹುತೇಕ ಮಂದಿ ಇದಕ್ಕೆ ತದ್ವಿರುದ್ಧ

ಆಹಾರದ ಶಾಪಿಂಗ್​ ಹೋದಾಗ ಬಹುತೇಕ ಗ್ರಾಹಕರು ಆರೋಗ್ಯಕ್ಕಿಂತ ಹೆಚ್ಚಾಗಿ ಕಡಿಮೆ ದರದ ವಸ್ತುಗಳನ್ನು ಕೊಳ್ಳುತ್ತಾರೆ ಎಂಬುದು ಅಧ್ಯಯನದಲ್ಲಿ ಬಯಲಾಗಿದೆ.

Consumers tend to compromise on price rather than health while shopping

author img

By

Published : Jun 12, 2023, 11:38 AM IST

ಲಂಡನ್​: ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂಬ ಮಾತಿದೆ. ಆದರೆ, ಬಹುತೇಕ ಮಂದಿ ಇದಕ್ಕೆ ತದ್ವಿರುದ್ಧವಾಗಿರುತ್ತಾರೆ. ಬೆಲೆ ಮತ್ತು ಆರೋಗ್ಯ ವಿಚಾರದಲ್ಲಿ ಆಯ್ಕೆ ಅವಕಾಶ ಸಿಕ್ಕೆ ಬಹುತೇಕರು ಆರಿಸಿಕೊಳ್ಳುವುದು ಕಡಿಮೆ ದರವನ್ನೇ ಎಂದು ಅಧ್ಯಯನ ತಿಳಿಸಿದೆ. ಆಹಾರದ ಶಾಪಿಂಗ್​ ಹೋದಾಗ ಬಹುತೇಕ ಗ್ರಾಹಕರು ಆರೋಗ್ಯಕ್ಕಿಂತ ಹೆಚ್ಚಾಗಿ ಕಡಿಮೆ ದರದ ವಸ್ತುಗಳನ್ನು ಕೊಳ್ಳುತ್ತಾರೆ ಎಂದು ತಿಳಿಸಲಾಗಿದೆ.

ಮಾರ್ಕೆಟಿಂಗ್​ ಸೈನ್ಸ್​ ಜರ್ನಲ್​ನಲ್ಲಿ ಈ ಕುರಿತು ವರದಿ ಪ್ರಕಟಿಸಲಾಗಿದೆ. ಗ್ರಾಹಕರಿಗೆ ಆರೋಗ್ಯಕರ ಆಹಾರ ಖರೀದಿಸಲು ತಾತ್ಕಾಲಿಕ ಪ್ರೋತ್ಸಾಹ ನೀಡಿದಾಗ, ಅವರು ಆ ಆರೋಗ್ಯಕರ ಆಹಾರವನ್ನು ಆಯ್ಕೆ ಮಾಡುತ್ತಾರೆ. ಅದೇ ರಿಯಾಯ್ತಿ ದರದಲ್ಲಿ ಆಹಾರ ಆಯ್ಕೆ ನೀಡಿದಾಗ ಅವರು ದುಬಾರಿ ವಸ್ತುಗಳ ಬದಲಾಗಿ ಕಡಿಮೆ ಆರೋಗ್ಯಕರ ವಸ್ತುಗಳನ್ನು ಖರೀದಿಸಲು ಮುಂದಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ವೋಚರ್​ ನೀಡಿದಾಗ ಆಯ್ಕೆ: ಅಮೆರಿಕದ ಮಹಿಳೆ, ಶಿಶುಗಳು ಮತ್ತು ಮಕ್ಕಳಿಗಾಗಿ (ಡಬ್ಲ್ಯೂಐಸಿ) ವಿಶೇಷ ಪೂಕರ ಪೋಷಕಾಂಶದ ಆಧಾರದ ಮೇಲೆ ನಡೆದ ಸಂಶೋಧನೆಯಲ್ಲಿ, ಡಬ್ಲ್ಯೂಐಸಿ ಮಕ್ಕಳು ಮತ್ತು ಅವರ ಐದು ವರ್ಷದೆ ಮಕ್ಕಳಿಗೆ ನಿರ್ಧಿಷ್ಟ ಆಹಾರದ ವೋಚರ್​ ನೀಡಿದೆ. 2009ರಲ್ಲಿ ನೀತಿ ಸುಧಾರಣೆಯು, ಆಹಾರ ಚೀಟಿಗಳ ಸಂಯೋಜನೆಯನ್ನು ಬದಲಾಯಿಸಿತು. ಆರೋಗ್ಯಕರ ಉತ್ಪನ್ನಗಳ ಖರೀದಿಯನ್ನು ಉತ್ತೇಜಿಸಲು ವೋಚರ್‌ಗಳನ್ನು ಪರಿಚಯಿಸಿತು.

ಈ ಆಯ್ಕೆ ಬದಲಾದಾಗ ಅವರ ಆರೋಗ್ಯಕರ ಆಯ್ಕೆಯಲ್ಲಿ ಇಳಿಕೆ ಕಂಡು ಬಂದಿತು ಎಂದು ಬ್ರಿಟನ್​ನ ನೈಟಿಂಗ್​ಹ್ಯಾಮ್​​ ಯುನಿವರ್ಸಿಟಿ ಪ್ರಮುಖ ಲೇಖಕರಾದ ಮ್ಯಾರಿಟ್​ ಹಿನ್ನೊಸರ್​ ತಿಳಿಸಿದ್ದಾರೆ. ಈ ಆರಂಭಿಕ ಕಾರ್ಯಕ್ರಮದಲ್ಲಿ ವೋಚರ್​​ ಅನ್ನು ಕೇವಲ ಗೋಧಿ ಬ್ರೆಡ್​ ಮತ್ತು ಕಡಿಮೆ ಕೊಬ್ಬಿನ ಹಾಲಿಗೆ ಸೀಮಿತಿ ಮಾಡಲಾಗಿತ್ತು. ಈ ಕೆಲವು ಆಯ್ಕೆಗಳು ಹೆಚ್ಚು ದುಬಾರಿಯಾಗಿರುವುದರಿಂದ, ಈ ಉತ್ಪನ್ನಗಳಿಗೆ ವೋಚರ್‌ಗಳು ಲಭ್ಯ ಇಲ್ಲದೇ ಇರುವುದರಿಂದ ಗ್ರಾಹಕರು ಬೆಲೆಯ ಆಧಾರದ ಮೇಲೆ ವಸ್ತುಗಳನ್ನು ಆಯ್ಕೆ ಮಾಡಲು ಮುಂದಾಗುತ್ತಾರೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಈ ಕಾರ್ಯಕ್ರಮದ ಸಂದರ್ಭದಲ್ಲಿ ವೋಚರ್‌ಗಳಲ್ಲಿನ ಉತ್ಪನ್ನಗಳಲ್ಲಿ ಬ್ರೆಡ್, ಹಾಲು, ಹಣ್ಣುಗಳು ಮತ್ತು ತರಕಾರಿಗಳು, ರಸ, ಮೊಟ್ಟೆಗಳು ಮತ್ತು ಏಕದಳ ಸೇರಿದಂತೆ ಎಲ್ಲ ಆಹಾರ ಪಡೆಯಬಹುದಿತ್ತು. ಯಾವುದೇ ವ್ಯತ್ಯಾಸವಿಲ್ಲದೇ ಅವರು ಆಹಾರ ಆಯ್ಕೆ ಮಾಡುವ ಸೌಲಭ್ಯ ಇರಲಿಲ್ಲ.

ವ್ಯತ್ಯಾಸ ಗಣನೆ: ಸೂಪರ್​ ಮಾರ್ಕೆಟ್​​ ಆಯ್ಕೆ ಮತ್ತು ಶಾಪಿಂಗ್ ನಡವಳಿಕೆಗಳೆರಡೂ ಖರೀದಿಗಳ ಆರೋಗ್ಯಕರತೆಗೆ ಸಂಬಂಧಿಸಿವೆ ಆದರೂ, ಸಾಮಾಜಿಕ ಆರ್ಥಿಕ ವ್ಯತ್ಯಾಸಗಳಿಗೆ ಎರಡೂ ಕೊಡುಗೆ ನೀಡುವುದಿಲ್ಲ. ಇದಲ್ಲದೇ, ಸೂಪರ್​ ಮಾರ್ಕೆಟ್​​ ಪರಿಸರಗಳ ನಡುವಿನ ವ್ಯತ್ಯಾಸಗಳು ಆಯ್ಕೆ ಮತ್ತು ಖರೀದಿಗಳ ಆರೋಗ್ಯದ ನಡುವಿನ ಸಂಬಂಧದಗಳನ್ನು ಹೊಂದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕಾರ್ಯಕ್ರಮವನ್ನು ಮುಗಿದ ಬಳಿಕ ಕಾರ್ಯಕ್ರಮದ ನಂತರದ ಸಾಧಾರಣ ಸಬ್ಸಿಡಿ, ಆರೋಗ್ಯಕರ ಆಹಾರ ಆಯ್ಕೆಗಳನ್ನು ಆರಿಸಿಕೊಳ್ಳಲು ಹಿಂದೇಟು ಹಾಕಿದರು. ಪೌಷ್ಠಿಕಾಂಶದಲ್ಲಿನ ಎಲ್ಲ ಅಂಶಗಳಂತೆ ಆಯ್ಕೆಯ ಸಂದರ್ಭವು ಗಮನಾರ್ಹವಾಗಿ ಹೆಚ್ಚು ಸಂಕೀರ್ಣವಾಗಿರುತ್ತದೆ.

ಇದನ್ನೂ ಓದಿ: long & healthy life; ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬಲ್ಲದು ಟೌರಿನ್: ಸಂಶೋಧನಾ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.