ETV Bharat / sukhibhava

ಮೊದಲ ಡೇಟಿಂಗ್​ನಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಮೊದಲ ಡೇಟಿಂಗ್ ಯಾರಿಗೆ ಆದರೂ ಬಹಳ ಮುಖ್ಯ. ಆರಂಭಿಕ ಸಂವಹನದ ಸಮಯದಲ್ಲಿ ಒಬ್ಬ ವ್ಯಕ್ತಿಯು ಯಾವ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾನೆ ಎಂಬುದರ ಮೇಲೆ ಸಂಗಾತಿಯ ಒಪ್ಪಿಗೆ, ತಿರಸ್ಕಾರ ಇರುತ್ತದೆ.

ಮೊದಲ ಡೇಟಿಂಗ್​ನಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
ಮೊದಲ ಡೇಟಿಂಗ್​ನಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
author img

By

Published : May 2, 2022, 7:10 PM IST

ಈಗಂತೂ ವಿವಾಹಕ್ಕೂ ಮುನ್ನ ಡೇಟಿಂಗ್ ಸಾಮಾನ್ಯವಾಗಿದೆ. ಆದರೆ, ಇದರಲ್ಲಿ ಕೆಲವರಿಗೆ ಗೆಲುವಾಗಬಹುದು, ಇನ್ನೂ ಕೆಲವರಿಗೆ ಸೋಲಾಗಬಹುದು. ಇದಕ್ಕೆ ಕಾರಣ ಸಂಗಾತಿ ಜೊತೆಗೆ ಕಳೆದ ಕ್ಷಣಗಳು. ಹೀಗಾಗಿ ಸಂಗಾತಿಯನ್ನು ಮೊದಲ ಬಾರಿಗೆ ಭೇಟಿಯಾಗುವಾಗ ಮನಸ್ಸಲ್ಲಿ ಏನೇನೋ ಆತಂಕ, ದುಗುಡ, ದುಮ್ಮಾನವೆಲ್ಲವೂ ಇರುತ್ತದೆ. ಹಾಗಾದರೆ ನೀವು ಡೇಟಿಂಗ್​ನಲ್ಲಿ ಯಶಸ್ಸು ಪಡೆಯಬೇಕು ಎಂದರೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಈ ನಿಯಮಗಳನ್ನು ಅನುಸರಿಸುವುದರಿಂದ ನಿಮ್ಮ ಸಂಗಾತಿ ಮತ್ತೇ ನಿಮ್ಮನ್ನು ಭೇಟಿ ಮಾಡಲು ಹಾತೊರೆಯುತ್ತಿರುತ್ತಾರೆ.

ಈ ಸಲಹೆಗಳನ್ನು ಗಮನಿಸಿ:

ತಡವಾಗಿ ಬರುವುದು: ಸಮಯ ತುಂಬಾ ಅವಶ್ಯಕ. ಅದರಲ್ಲೂ ಸಂಗಾತಿ ಆಗಬೇಕಾದವರನ್ನು ಕಾಯಿಸುವುದು ನಾವು ಅವರಿಂದ ದೂರ ಆದಂತೆಯೇ ಸರಿ. ಸಮಯಕ್ಕೆ ಸರಿಯಾಗಿ ಆಗಮಿಸದಿರುವುದು ನೀವು ಅವರ ಸಮಯ ಗೌರವಿಸುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ರವಾನೆ ಮಾಡುತ್ತದೆ. ನೀವು ತಡವಾಗಿ ಭೇಟಿಯಾದರೂ ಪರವಾಗಿಲ್ಲ ಅದರ ಬಗ್ಗೆ ಅವರಿಗೆ ಮಾಹಿತಿ ಇರಲಿ.

ಫೋನ್ ನಿರಂತರವಾಗಿ ಬಳಸುವುದು: ಡೇಟಿಂಗ್​ನಲ್ಲಿ ಮಾಡುವ ಸಾಮಾನ್ಯ ತಪ್ಪು ಎಂದರೆ ಫೋನ್‌ಗಳನ್ನು ತುಂಬಾನೆ ಹೆಚ್ಚಾಗಿ ಬಳಕೆ ಮಾಡುವುದು. ಇದರಿಂದ ಸಂಗಾತಿ ಸಮಯವನ್ನು ಗೌರವಿಸುವುದಿಲ್ಲ ಎಂಬ ಸಂಕೇತವನ್ನು ಇದು ತಿಳಿಸುತ್ತದೆ. ಇದಕ್ಕೂ ಮೊದಲು ನೀವು ಪ್ರಮುಖ ಕರೆ ಅಥವಾ ಇ-ಮೇಲ್‌ಗಾಗಿ ಏನಾದರೂ ಕಾಯುತ್ತಿದ್ದರೆ ಅದರ ಬಗ್ಗೆ ಅವರಿಗೆ ತಿಳಿಸುವುದನ್ನು ಮರೆಯಬೇಡಿ.

ಅತಿಯಾಗಿ ಪಾನೀಯ ಸೇವನೆ : ಡೇಟಿಂಗ್​ ವೇಳೆ ಪಾನೀಯಗಳನ್ನು ಸೇವಿಸುವುದು ಉತ್ತಮವಾದರೂ ಸಹ ಮಿತಿ ಮೀರಬಾರದು. ಇದು ಸಮಯವನ್ನಯ ವ್ಯರ್ಥ ಮಾಡುತ್ತದೆ.

ಸಂಭಾಷಣೆ ಹಗುರವಾಗಿರಿಸಿಕೊಳ್ಳಿ: ನಿಮ್ಮ ಮೊದಲ ಡೇಟಿಂಗ್​ನ್ನು ಹಗುರವಾಗಿಸಿಕೊಳ್ಳಲು ಮತ್ತು ಮೋಜು ಮಾಡಲು ಇದು ಬಹಳ ಮುಖ್ಯ. ಕಠಿಣವಾದ ವಿಷಯಗಳ ಮೇಲೆ ಚರ್ಚೆ ಮಾಡಬೇಡಿ. ಇದರಿಂದ ಮೊದಲ ಡೇಟಿಂಗ್​ ನೀರಸಗೊಳ್ಳುತ್ತದೆ.

ಇದನ್ನೂ ಓದಿ: ಆಂಕ್ಸೈಟಿ ಎಂಬ ಕಾಯಿಲೆಯಿಂದ ಬಳಲುತ್ತಿರುವ ಅಮೀರ್​ ಪುತ್ರಿ ಇರಾ ಖಾನ್​: ಹೀಗಂದ್ರೆ ಏನು?

ಒತ್ತಾಯವಾಗಿ ನಗಿಸಲು ಪ್ರಯತ್ನಿಸಬೇಡಿ: ಕೆಲವರು ಸಹಜವಾಗಿಯೇ ತಮಾಷೆಯಾಗಿರುತ್ತಾರೆ. ಆದರೆ, ಬಲವಂತವಾಗಿಯಾದರೂ ಸರಿ ಹಾಸ್ಯದಿಂದ ಅವರನ್ನು ನಗಿಸಬೇಕು ಅಥವಾ ಅದು ಈ ಸಮಯದಲ್ಲಿ ಮುಖ್ಯವೆಂದು ಭಾವಿಸುವವರಲ್ಲಿ ನೀವೂ ಒಬ್ಬರಾಗಿದ್ದರೆ ಅದು ನೀವು ಮಾಡುತ್ತಿರುವ ತಪ್ಪು. ಆದ್ದರಿಂದ, ನಿಮಗೆ ಸಹಜವಾದ ಹಾಸ್ಯಪ್ರಜ್ಞೆ ಇಲ್ಲದಿದ್ದರೆ ದಯವಿಟ್ಟು ಅದರಿಂದ ದೂರ ಇದ್ದುಬಿಡಿ.

ಪ್ರಶ್ನೆಗಳು: ನಿಮ್ಮ ಡೇಟಿಂಗ್​ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಉತ್ತಮ ಅವಕಾಶವಾಗಿದೆ. ಅವರ ಆಸಕ್ತಿಯನ್ನು ಗೌರವಿಸುವುದಕ್ಕೆ ಇದು ಸೂಕ್ತ ಸಮಯ. ಆದರೆ, ಅದು ಮಿತಿಯಲ್ಲಿರಬೇಕು.

ವೈಯಕ್ತಿಕತೆಗೆ ಗೌರವ: ಡೇಟಿಂಗ್​ ವೇಳೆ ಕೆಲವರು ಅಪ್ಪುಗೆ ನೀಡುವವರಾಗಿದ್ದರೆ, ಇನ್ನೂ ಕೆಲವರು ಚುಂಬನ ನೀಡುತ್ತಾರೆ, ಇನ್ನೂ ಕೆಲವರು ಹಲೋ ಮತ್ತು ಹ್ಯಾಂಡ್‌ಶೇಕ್‌ನೊಂದಿಗೆ ವಿದಾಯ ಹೇಳಲು ಬಯಸುತ್ತಾರೆ. ಆದರೆ, ಯಾರೋ ಏನೋ ಮಾಡುತ್ತಾರೆ ಎನ್ನುವುದಕ್ಕಿಂತ ನಿಮ್ಮ ಸಂಗತಿಯ ಮನಸ್ಥಿತಿಯನ್ನು ಅರಿತು ಅವರ ಆಸೆ ಆಕಾಂಕ್ಷೆಗಳಿಗೆ ತಕ್ಕಂತೆ ನೀವು ನಡೆದುಕೊಳ್ಳಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.