ನವದೆಹಲಿ: ಭಾರತದಲ್ಲಿನ ಕಳಪೆ ವಾಯು ಗುಣಮಟ್ಟ ಶಿಶು ಮತ್ತು ಮಕ್ಕಳಲ್ಲಿ ಅರಿವಿನ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ. ಬ್ರಿಟನ್ನ ಈಸ್ಟ್ ಆಗ್ಲಿಯಾ ಯುನಿವರ್ಸಿಟಿ ಈ ಸಂಬಂಧ ಅಧ್ಯಯನ ನಡೆಸಿದೆ. ಈ ಅಧ್ಯಯನ ತಂಡ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಸಮುದಾಯ ಸಬಲೀಕರಣದ ಕಾರ್ಯ ನಡೆಸಿದ್ದು, ವಾಯು ಗುಣಮಟ್ಟ ಹೇಗೆ ಮಕ್ಕಳ ಅರಿವಿನ ಕೊರತೆಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿದೆ.
ಉತ್ತರ ಪ್ರದೇಶದಲ್ಲಿ ಅಧ್ಯುಯನ: ಭಾರತದ ಕಳಪೆ ವಾಯು ಗುಣಮಟ್ಟಕ್ಕೆ ಹೆಚ್ಚಿನ ಪರಿಣಾಮಕ್ಕೆ ಒಳಗಾಗುತ್ತಿರುವ ಪ್ರದೇಶ ಉತ್ತರ ಪ್ರದೇಶವಾಗಿದ್ದು, ಈ ಉತ್ತರ ಪ್ರದೇಶದ ಶಿವ್ಗ್ರಾಮ್ನ ಗ್ರಾಮಾಂತರ ಸಮುದಾದಯದ ವಿವಿಧ ಸಾಮಾಜಿಕ - ಆರ್ಥಿಕ ಹಿನ್ನಲೆಯುಳ್ಳ ಕುಟುಂಬದೊಂದಿಗೆ ಇವರು ಕಾರ್ಯ ನಿರ್ವಹಿಸಿದ್ದಾರೆ. ಈ ಅಧ್ಯಯನದಲ್ಲಿ ಮೊದಲ ಬಾರಿಗೆ ಕಳಪೆ ವಾಯು ಗುಣಮಟ್ಟ ಮತ್ತು ದುರ್ಬಲ ದೃಷ್ಟಿ ಅರಿವಿನ ನಡುವೆ ಸಂಬಂಧ ಹೊಂದಿದೆ ಎಂದು ತೋರಿಸಿದೆ ಎಂದು ಯುಇಎ ಸ್ಕೂಲ್ ಆಫ್ ಸೈಕಾಲಜಿಯ ಪ್ರಮುಖ ಸಂಶೋಧಕ ಪ್ರೊ ಜಾನ್ ಸ್ಪೆನ್ಸರ್ ತಿಳಿಸಿದ್ದಾರೆ.
ಮನೆಯ ಗಾಳಿಗುಣಮಟ್ಟದ ಅಧ್ಯಯನ: ಗಾಳಿಯ ಸಣ್ಣ ನಿರ್ಧಿಷ್ಟ ಕಣಗಳು ಉಸಿರಾಡದ ಮೂಲಕ ದೇಹ ಹೊಕ್ಕಿ ಇದು ನೇರವಾಗಿ ಮಿದುಳಿನ ಮೇಲೆ ಪರಿಣಾಮ ಹೊಂದಬಹುದು. ಈ ಸಂಬಂಧ ಗಾಳಿಯ ಹೊರಸೂಸುವಿಕೆಯ ಮಟ್ಟ ಮತ್ತು ಗಾಳಿಯ ಗುಣಮಟ್ಟವನ್ನು ಅಳೆಯಲು ತಂಡವು ಮಕ್ಕಳ ಮನೆಗಳಲ್ಲಿ ಗಾಳಿಯ ಗುಣಮಟ್ಟದ ಮಾಪನ ನಡೆಸಿದೆ. ಇದರ ಜೊತೆಗೆ ಸಾಮಾಜಿಕ ಆರ್ಥಿಕ ಕುಟುಂಬ ಸ್ಥಿತಿಯ ನಿಯಂತ್ರಣವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಈ ವೇಳೆ ಸಗಣಿಯ ಬೆರಣಿಗಳನ್ನು ಅಡುಗೆಯಲ್ಲಿ ಬಳಕೆ ಮಾಡುವ ಮನೆಗಳಲ್ಲಿ ದುರ್ಬಲ ವಾಯುಗುಣಮಟ್ಟ ಪತ್ತೆ ಮಾಡಲಾಗಿದೆ. ಈ ಹಿನ್ನಲೆ ಮನೆಯಲ್ಲಿ ಅಡುಗೆ ವೇಳೆ ಹೊರಸೂಸುವ ವಾಯುಗುಣಮಟ್ಟವನ್ನು ತಗ್ಗಿಸುವುದು ಪ್ರಮುಖವಾಗಿದೆ ಎಂದಿದ್ದಾರೆ.
ಇದೇ ವೇಳೆ ಸಂಶೋಧಕರು, ಜಾಗತಿಕ ಪ್ರಯತ್ನದ ಮೂಲಕ ವಾಯು ಗುಣಮಟ್ಟವನ್ನು ಸುಧಾರಿಸುವುದು ಶಿಶುಗಳ ಅರಿವಿನ ಸಾಮರ್ಥ್ಯಕ್ಕೆ ಪ್ರಯೋಜನ ನೀಡಬಹುದು ಎಂದು ತಿಳಿಸಿದ್ದಾರೆ. ಮಕ್ಕಳಲ್ಲಿನ ಸುಧಾರಿತ ಅರಿವು ದೀರ್ಘಾವದಿಯಲ್ಲಿ ಸುಧಾರಿತ ಆರ್ಥಿಕ ಉತ್ಪಾದಕತೆಗೆ ಕಾರಣವಾಗಬಹುದು. ಜೊತೆಗೆ ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲಿನ ಹೊರೆ ಕಡಿಮೆ ಮಾಡುತ್ತದೆ ಎಂದಿದ್ದಾರೆ.
ಈ ಅಧ್ಯಯನ ಇ ಲೈಫ್ ಜರ್ನಲ್ನಲ್ಲಿ ಪ್ರಕಟವಾಗಿದೆ. ಈ ಅಧ್ಯಯನವನ್ನು ಅಕ್ಟೋಬರ್ 2017 ರಿಂದ ಜೂನ್ 2019 ರವರೆಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಅರಿವಿನ ಕಾರ್ಯವನ್ನು ಬಳಸಿಕೊಂಡು 215 ಶಿಶುಗಳ ದೃಶ್ಯ ಕಾರ್ಯ ಸ್ಮರಣೆ ಮತ್ತು ದೃಶ್ಯ ಸಂಸ್ಕರಣೆಯ ವೇಗವನ್ನು ಮೌಲ್ಯಮಾಪನ ಮಾಡಲಾಗಿದೆ. ಮೆದುಳಿನ ಬೆಳವಣಿಗೆಯು ಉತ್ತುಂಗದಲ್ಲಿರುವಾಗ ಮತ್ತು ಮೆದುಳು ವಿಷಕ್ಕೆ ವಿಶೇಷವಾಗಿ ಸೂಕ್ಷ್ಮವಾಗಿರುವಾಗ ಶಿಶುಗಳಲ್ಲಿನ ಕಳಪೆ ಗಾಳಿಯ ಗುಣಮಟ್ಟ ಮತ್ತು ಅರಿವಿನ ಸಮಸ್ಯೆಗಳ ನಡುವಿನ ಸಂಬಂಧವನ್ನು ತೋರಿಸಲು ಅಧ್ಯಯನಗಳು ವಿಫಲವಾಗಿವೆ ಎಂದು ಅಧ್ಯಯನ ತಂಡ ತಿಳಿಸಿದೆ.
ಇದನ್ನೂ ಓದಿ: ಅಡುಗೆ ಮಾಡುವಾಗ ಉಂಟಾಗುವ ಮಾಲಿನ್ಯದಿಂದ ಹೆಚ್ಚಿನ ಅಪಾಯ