ETV Bharat / sukhibhava

ಮಕ್ಕಳಲ್ಲಿ ದೈಹಿಕ ಚಟುವಟಿಕೆ ನಿಷ್ಕ್ರಿಯತೆ.. ಎಚ್ಚೆತ್ತುಕೊಳ್ಳದಿದ್ದರೆ ಹೊಸ ರೋಗಗಳಿಗೆ ಆಹ್ವಾನ

author img

By

Published : Jan 30, 2023, 4:41 PM IST

ಮಕ್ಕಳು, ಹದಿಹರೆಯವದರಲ್ಲಿ ನಿಷ್ಕ್ರಿಯಗೊಳ್ಳುತ್ತಿರುವ ದೈಹಿಕ ಚಟುವಟಿಕೆ - ವಿದೇಶಿ ವಿವಿಯಿಂದ ನಡೆದ ಅಧ್ಯಯನ - ಕಳವಳಕಾರಿ ಮಾಹಿತಿ ಬಹಿರಂಗ

World Health Organisation
ಕ್ರೀಡೆಯಲ್ಲಿ ತೊಡಗಿರುವ ಮಕ್ಕಳು

ಬ್ರಿಟಿಷ್ ಕೊಲಂಬಿಯಾ (ಕೆನಡಾ): ದೈಹಿಕ ಚಟುವಟಿಕೆ ನಿಷ್ಕ್ರಿಯತೆಯಿಂದ ಪ್ರಪಂಚದಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗಿವೆ. ಈ ರೀತಿಯ ಸಾವಿನ ಪ್ರಕರಣಗಳು ನಾಲ್ಕನೇ ಪ್ರಮುಖ ಕಾರಣವಾಗಿರುವುದು ದುರಂತ. ದೀರ್ಘಕಾಲದ ಅನಾರೋಗ್ಯ ಹಾಗೂ ಅಂಗವೈಕಲ್ಯವೂ ಕೂಡ ಇದೇ ಸಾಲಿನಲ್ಲಿ ಬರುತ್ತದೆ ಎಂಬುದು ಅಧ್ಯಯನ ವರದಿಯಿಂದ ತಿಳಿದುಬಂದಿದೆ. ಜನರು ದೈಹಿಕವಾಗಿ ಹೆಚ್ಚು ಕ್ರಿಯಾಶೀಲರಾಗಿರದಿದ್ದರೆ, 2030ರ ವೇಳೆಗೆ ಪ್ರಪಂಚದ ಅರ್ಧ ಶತಕೋಟಿ ಹೊಸ ಪ್ರಮುಖ ದೀರ್ಘಕಾಲದ ಕಾಯಿಲೆಗಳು ಬರಲಿವೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ನಿಯಮಿತ ದೈಹಿಕ ಚಟುವಟಿಕೆಯು ಅನೇಕ ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ದೈಹಿಕವಾಗಿ ಸಕ್ರಿಯವಾಗಿರಬೇಕಾದರೆ, ವಾಕಿಂಗ್, ಸೈಕ್ಲಿಂಗ್ ಮತ್ತು ವಿವಿಧ ಕ್ರೀಡೆಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ.

ವಿಶ್ವ ಆರೋಗ್ಯ ಸಂಸ್ಥೆ: ಮಕ್ಕಳು ಮತ್ತು ಹದಿಹರೆಯದವರು (5ರಿಂದ 17ವರ್ಷದೊಳಗಿನವರು) ದಿನಕ್ಕೆ ಸರಾಸರಿ 60 ನಿಮಿಷಗಳವರೆಗೆ ದೈಹಿಕ ಚಟುವಟಿಕೆಯಲ್ಲಿ(ವ್ಯಾಯಾಮ) ತೊಡಗಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್​​ಓ) ಶಿಫಾರಸು ಮಾಡುತ್ತದೆ. ಏರೋಬಿಕ್ ಚಟುವಟಿಕೆಗಳನ್ನು ಮಾಡಿದ್ರೆ ಇನ್ನೂ ಒಳ್ಳೆಯದು. ಜೊತೆಗೆ ವಾರದಲ್ಲಿ ಕನಿಷ್ಠ ಮೂರು ದಿನವಾದರೂ ಸ್ನಾಯು ಮತ್ತು ಮೂಳೆಗಳನ್ನು ಬಲಪಡಿಸಲು ಪೂರಕವಾದ ವ್ಯಾಯಾಮಗಳನ್ನು ಮಾಡಬೇಕು. ಮಕ್ಕಳು ಮನರಂಜನೆ ಕಾರ್ಯಕ್ರಮ ವೀಕ್ಷಿಸಲು ಎರಡು ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಮೀಸಲಿಡಬಾರದು ಎಂದು ಡಬ್ಲ್ಯೂಹೆಚ್​​ಓ ಹೇಳಿದೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದು ಈ ಶಿಫಾರಸುಗಳ ಮುಖ್ಯ ಗುರಿಯಾಗಿದೆ.

ಜಾಗತಿಕ ಕ್ರಿಯಾ ಯೋಜನೆ: ಕೋವಿಡ್​-19 ಸಾಂಕ್ರಾಮಿಕ ಕಾಯಿಲೆ ಬರುವುದಕ್ಕೂ ಮುನ್ನ, ಮಕ್ಕಳು ಮತ್ತು ಹದಿಹರೆಯದವರಲ್ಲಿ ದೈಹಿಕ ಚಟುವಟಿಕೆ ಕ್ರಿಯಾಶೀಲತೆ ತುಂಬಾ ಕುಸಿದಿತ್ತು. 2016ರಲ್ಲಿ ಪ್ರಪಂಚದಾದ್ಯಂತ 11ರಿಂದ 17ವರ್ಷದ ಹದಿಹರೆಯದವರಲ್ಲಿ ಶೇಕಡಾ 81ರಷ್ಟು ಜನರು ದೈಹಿಕವಾಗಿ ನಿಷ್ಕ್ರಿಯರಾಗಿದ್ದಾರೆ ಎಂದು ಪರಿಗಣಿಸಲ್ಪಟ್ಟಿದೆ. ಹುಡುಗರಿಗಿಂತ ಹುಡುಗಿಯರು ಕಡಿಮೆ ಕ್ರಿಯಾಶೀಲರಾಗಿದ್ದರು. ಕೋವಿಡ್​-19 ಸಾಂಕ್ರಾಮಿಕ ಕಾಯಿಲೆಯಂತೂ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ದೈಹಿಕ ನಿಷ್ಕ್ರಿಯತೆಯು ಜಾಗತಿಕ ಸಾರ್ವಜನಿಕ ಆರೋಗ್ಯದ ಆದ್ಯತೆಯಾಗಿದೆ. ಇದನ್ನು ಈಗ ಜಾಗತಿಕ ಕ್ರಿಯಾ ಯೋಜನೆಗಳ ಅಡಿಯಲ್ಲಿ ಸೇರಿಸಲಾಗಿದೆ.

ದೈಹಿಕ ನಿಷ್ಕ್ರಿಯತೆ ಪ್ರಮಾಣ: 2016 ವರ್ಷವನ್ನು ಆಧಾರವಾಗಿಟ್ಟುಕೊಂಡರೆ, ಡಬ್ಲೂಹೆಚ್​ಓ ದೈಹಿಕ ಚಟುವಟಿಕೆಯ ಮೇಲಿನ ಜಾಗತಿಕ ಕ್ರಿಯಾ ಯೋಜನೆಯನ್ನು ಹಾಕಿಕೊಂಡಿದೆ. 2030ರ ವೇಳೆಗೆ ಹದಿಹರೆಯದವರಲ್ಲಿ ದೈಹಿಕ ನಿಷ್ಕ್ರಿಯತೆಯ ಪ್ರಮಾಣವನ್ನು ಶೇಕಡಾ 15ರಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಗುರಿಯನ್ನು ಇಟ್ಟುಕೊಂಡಿದೆ. ಈ ಕಾರ್ಯಕ್ಕೆ ಕರೆಕೊಟ್ಟಿರುವುದು ಇತರೆ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಹಾಗೂ ಸರ್ಕಾರಗಳಿಗೆ ಪ್ರಗತಿ ಸಾಧಿಸಲು ಸಹಕಾರಿಯಾಗಿದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸುವುದು ಪ್ರಮುಖ ಉದ್ದೇಶವಾಗಿದೆ.

ಆಕ್ಟಿವ್ ಹೆಲ್ತಿ ಕಿಡ್ಸ್ ಗ್ಲೋಬಲ್ ಅಲೈಯನ್ಸ್: ಜಾಗತಿಕ ದೈಹಿಕ ನಿಷ್ಕ್ರಿಯತೆಯ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ, ಅಗತ್ಯ ಕಾರ್ಯಗಳನ್ನು ಅಂತಾರಾಷ್ಟ್ರೀಯವಾಗಿ ಕರೆ ನೀಡಿದ್ದು, ಪೂರಕವಾದ ದತ್ತಾಂಶಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಬೇಕಿದೆ. ಆಕ್ಟಿವ್ ಹೆಲ್ತಿ ಕಿಡ್ಸ್ ಗ್ಲೋಬಲ್ ಅಲೈಯನ್ಸ್ ಇತ್ತೀಚೆಗೆ ಒಂದು ಪ್ರಮುಖ ಅಧ್ಯಯನದ ವರದಿ ಪ್ರಕಟಿಸಿದೆ. ಈ ವರದಿಯು ಮಕ್ಕಳು ಮತ್ತು ಹದಿಹರೆಯದವರಲ್ಲಿ ದೈಹಿಕ ಚಟುವಟಿಕೆಯ ಸಮಗ್ರ ಮೌಲ್ಯಮಾಪನ ಮಾಡುವುದರ ಬಗ್ಗೆ ಮಾಹಿತಿ ನೀಡುತ್ತದೆ. ಅಕ್ಟೋಬರ್ 2022ರಲ್ಲಿ ಪ್ರಕಟಿಸಲಾದ ಅಧ್ಯಯನವು ಕೋವಿಡ್​-19 ಸಾಂಕ್ರಾಮಿಕ ರೋಗದ ಆರಂಭದ ಸಮಯದಲ್ಲಿ ಸಂಗ್ರಹಿಸಲಾದ ಅಂಕಿ - ಅಂಶಗಳನ್ನು ಒಳಗೊಂಡಿದೆ. ಪ್ರಪಂಚದಾದ್ಯಂತ ಮಕ್ಕಳು ಮತ್ತು ಹದಿಹರೆಯದವರಿಗೆ 10 ಸಾಮಾನ್ಯ ದೈಹಿಕ ಚಟುವಟಿಕೆ ಆಧರಿಸಿ ಈ 682 ತಜ್ಞರು ಮೌಲ್ಯಮಾಪನ ಮಾಡಿದ್ದಾರೆ.

ದೀರ್ಘಕಾಲದ ಕಾಯಿಲೆಗಳು ಕಾಡಲಿವೆ: ಮಕ್ಕಳು ಮತ್ತು ಹದಿಹರೆಯದವರಲ್ಲಿ ದೈಹಿಕ ಚಟುವಟಿಕೆಯು ಉತ್ತಮವಾಗಿಲ್ಲ ಎಂಬುದು ನಮ್ಮ ಅಧ್ಯಯನದಿಂದ ತಿಳಿದುಬಂದಿದೆ. ಜಾಗತಿಕವಾಗಿ ಸುಮಾರು ಮೂರನೇ ಒಂದು ಭಾಗದಷ್ಟು ಮಕ್ಕಳು ಮತ್ತು ಹದಿಹರೆಯದವರು ಸಾಕಷ್ಟು ದೈಹಿಕವಾಗಿ ಸಕ್ರಿಯರಾಗಿದ್ದರು. ಜೊತೆಗೆ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಮನರಂಜನೆಗೆ ಸಮಯ ಮೀಸಲಿಡಲು ಶಿಫಾರಸುಗಳನ್ನು ಮಾಡಿದೆ. ದೈಹಿಕ ಚಟುವಟಿಕೆಯ ಮಾರ್ಗಸೂಚಿಗಳನ್ನು ಪೂರೈಸದ ಮಕ್ಕಳು ಮತ್ತು ಹದಿಹರೆಯದವರಲ್ಲಿ ಋಣಾತ್ಮಕ ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ. ಇಳಿ ವಯಸ್ಸಿನಲ್ಲಿ ದೀರ್ಘಕಾಲದ ಕಾಯಿಲೆಗಳು ಕಾಡಲಿವೆ ಎಂದು ಈ ಸಂಶೋಧನೆ ಸೂಚಿಸಿದೆ.

ಕೋವಿಡ್ ಎಫೆಕ್ಟ್: ನಮ್ಮ ಅಧ್ಯಯನದಲ್ಲಿ ತೊಡಗಿರುವ ಹೆಚ್ಚಿನ ತಜ್ಞರು, ದೈಹಿಕ ನಿಷ್ಕ್ರಿಯತೆಯ ಬಿಕ್ಕಟ್ಟಿನಿಂದ ಸಾರ್ವಜನಿಕ ಆರೋಗ್ಯದ ಆಗುತ್ತಿರುವ ದುಷ್ಪರಿಣಾಮಗಳನ್ನು ಒಪ್ಪಿಕೊಳ್ಳುತ್ತಾರೆ. ಕೋವಿಡ್​-19 ಸಾಂಕ್ರಾಮಿಕ ಕಾಯಿಲೆಯಿಂದಲೂ ಮತ್ತಷ್ಟು ಹದಗೆಡಿಸಿತು. ಸಮೀಕ್ಷೆ ನಡೆಸಿದ ಶೇಕಡಾ 90ಕ್ಕಿಂತ ಹೆಚ್ಚು ತಜ್ಞರು, ಕೋವಿಡ್​-19 ರೋಗದಿಂದ ಮಕ್ಕಳ ನಡವಳಿಕೆ, ಸಂಘಟಿತ ಕ್ರೀಡೆ ಹಾಗೂ ದೈಹಿಕ ಚಟುವಟಿಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಹೊಸ ರಕ್ತ ಪರೀಕ್ಷೆ: ರೋಗನಿರ್ಣಯಕ್ಕೆ 3.5 ವರ್ಷಗಳ ಮೊದಲು ಆಲ್‌ಝೈಮರ್‌‌ ರೋಗ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.