ನ್ಯೂಯಾರ್ಕ್: ಚಿಕನ್ ಗುನ್ಯಾ ಸೋಂಕಿನ ವಿರುದ್ಧ ಹೋರಾಡಲು ಫ್ರೆಂಚ್ ಬಯೋಟೆಕ್ ವಲ್ನೆವಾ ಉತ್ಪಾದಿಸಿರುವ ಲಸಿಕೆ ಸುರಕ್ಷಿತವಾಗಿದೆ. ಜೊತೆಗೆ ಇದು ಪ್ರತಿ ರಕ್ಷಣೆ ಉತ್ಪಾದನೆಯನ್ನು ಮಾಡುತ್ತದೆ ಎಂದು ಲ್ಯಾನ್ಸೆಟ್ ತಿಳಿಸಿದೆ. ಮೂರನೇ ಹಂತದ ರ್ಯಾಂಡಮೈಸ್ ನಿಯಂತ್ರಣದ ಪರೀಕ್ಷೆ ಕುರಿತು ಇದು ತಿಳಿಸಿದೆ
ಸಿಂಗಲ್ ಡೋಸ್ ಲಸಿಕೆ ವಿಎಲ್ಎ 1553 ಆರಂಭದಲ್ಲಿ ಪ್ರತಿಕಾಯವನ್ನು ಹೆಚ್ಚಿಸುತ್ತದೆ. ರೋಗಿಗಳಲ್ಲಿ ಶೇ 99ರಷ್ಟು ರೋಗದ ವಿರುದ್ಧ ರಕ್ಷಣೆ ಮಾಡುತ್ತದೆ. ಯಾವುದೇ ವಯಸ್ಸಿನವರಲ್ಲೂ ಲಸಿಕೆ ಪಡೆದ ಬಳಿಕ ಅವರ ಪ್ರತಿಕಾಯದಲ್ಲಿ ಇಳಿಕೆ ಕಂಡು ಬಂದಿಲ್ಲ.
ಲಸಿಕೆ ನೀಡಿದ 28ದಿನಗಳಲ್ಲಿ ಪ್ರತಿರಕ್ಷಣಾ ಮಟ್ಟ ಕಡಿಮೆಯಾಗಿದೆ. ಲಸಿಕೆ ನೀಡಿದ ಆರು ತಿಂಗಳ ಬಳಿಕ ಸೆರೊಪ್ರೊಟೆಕ್ಷನ್ ಶೇ 96ರಷ್ಟು ಹೆಚ್ಚಾಗಿದೆ. ಚಿಕನ್ಗುನ್ಯಾ ವಿರುದ್ಧದ ಮೊದಲ ಲಸಿಕೆ ಇದಾಗಿದೆ. ಸ್ಥಳೀಯ ಪ್ರದೇಶದಲ್ಲಿ ವಾಸಿಸುವ ಮತ್ತು ಪ್ರವಾಸಿಗ ಅಥವಾ ಇನ್ನಿತರ ಅಪಾಯದ ಹೊಂದಿರುವ ಜನರಿಗೆ ಇದು ಪ್ರಯೋಜನ ನೀಡಲಿದೆ ಎಂದು ಅಧ್ಯಯನದ ಪ್ರಮುಖ ಲೇಖಕರಾದ ಮಾರ್ಟಿನಾ ಸ್ಕಚೆಂಡರ್ ತಿಳಿಸಿದ್ದಾರೆ.
ಲಸಿಕೆ ನೀಡಿದ ಬಳಿಕ ಪ್ರತಿಕಾಯದ ಮಟ್ಟದಲ್ಲಿ ನಮ್ಮ ಫಲಿತಾಂಶವೂ ಭರವಸೆದಾಯಕವಾಗಿದೆ. ಇದು ಚಿಕನ್ಗುನ್ಯಾ ಪ್ರದೇಶಗಳಲ್ಲಿ ಪ್ರಮುಖವಾಗಿ ಕಾರ್ಯ ನಿರ್ವಹಿಸಲಿದೆ. ಚಿಕನ್ ಗುನ್ಯಾ ರೋಗದ ತೀವ್ರತೆ ಮತ್ತು ಸಾವಿನ ಅಪಾಯದಲ್ಲಿ ವಯಸ್ಸು ಕೂಡ ಪ್ರಮುಖವಾಗಿದೆ. ಬಲವಾದ ಪ್ರತಿಕಾಯವೂ ಹಿರಿಯ ವಯಸ್ಸಿನ ಭಾಗಿದಾರರಲ್ಲಿ ವಿಶೇಷವಾಗಿ ಲಾಭದಾಯಕವಾಗಿದೆ ಎಂದಿದ್ದಾರೆ.
ವಿಎಲ್ಎ 1553-301 ಲಸಿಕೆಯ ಪರೀಕ್ಷೆಯನ್ನು ಅಮೆರಿಕದಲ್ಲಿ ಮಾಡಲಾಗಿದೆ. ಹೊರತು ಚಿಕನ್ ಗುನ್ಯಾ ಇರುವ ಪ್ರದೇಶಗಳಲ್ಲಿ ಪ್ರಯೋಗ ನಡೆಸಲಾಗಿಲ್ಲ. ಈ ಲಸಿಕೆ ಇತರೆ ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ ಎಂಬುದನ್ನು ಸಂಶೋಧಕರು ಪತ್ತೆ ಮಾಡಿಲ್ಲ. ಇದರ ಹೊರತಾಗಿ, ಅಧ್ಯಯನವೂ ಪ್ರತಿರಕ್ಷಣಾ ಪ್ರತಿಕ್ರಿಯೆ ಮಟ್ಟದಲ್ಲಿ ಪರೀಕ್ಷೆ ನಡೆಸಲಾಗಿದೆ. ಇದು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಚಿಕನ್ ಗುನ್ಯಾ ಸೊಳ್ಳೆ ಸಂಬಂಧಿತ ರೋಗವಾಗಿದ್ದು, ಚಿಕನ್ಗುನ್ಯಾ ವೈರಸ್ನಿಂದ ಬರುತ್ತದೆ. ಇದು ಆಫ್ರಿಕಾ, ಏಷ್ಯಾ ಮತ್ತು ಅಮೆರಿಕ ಪ್ರದೆಶದಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಈ ವೈರಸ್‌ನ ಸೊಳ್ಳೆ ಕಚ್ಚಿದಾಗ ರೋಗಿಗಳಲ್ಲಿ ನಾಲ್ಕರಿಂದ ಏಂಟು ದಿನಗಳ ಜ್ವರಕ್ಕೆ ಕಂಡು ಬರುತ್ತದೆ. ಜೊತೆಗೆ ಸೊಳ್ಳೆ, ಆಯಾಸ, ವಾಕರಿಕೆ, ಸ್ನಾಯು ಮತ್ತು ಕೀಲು ನೋವುಗಳು ಕಾಣಿಸಿಕೊಳ್ಳುತ್ತದೆ.
ಪ್ರಸ್ತುತ, ಈ ರೋಗ ತಡೆಗೆ ಯಾವುದೇ ಲಸಿಕೆಗಳು ಲಭ್ಯವಿಲ್ಲ. ಜೊತೆಗೆ ಇದಕ್ಕೆ ಪರಿಣಾಮಕಾರಿಯಾದ ಪ್ರತಿಕಾಯ ಚಿಕಿತ್ಸೆಗಳು ಇಲ್ಲ. ಈ ಅಧ್ಯಯನಕ್ಕಾಗಿ ಅಮೆರಿಕದಲ್ಲಿ 4,115 ಆರೋಗ್ಯವಂತ ವಯಸ್ಕರನ್ನು ಒಳಪಡಿಸಲಾಗಿದೆ. ವಿಎಲ್ಎ1553 ಸಾಮಾನ್ಯವಾಗಿ ಎಲ್ಲಾ ವಯೋಮಾನದವರು ಪಡೆಯಬಹುದಾಗಿದೆ. ಲಸಿಕೆ ನೀಡಿದಲ್ಲಿ ಸಾಮಾನ್ಯವಾಗಿ ತಲೆ ನೋವು, ಸುಸ್ತು, ಸ್ನಾಯು ನೋವು, ಕೀಲು ನೋವಿನಂತಹ ಸಾಮಾನ್ಯ ಅಡ್ಡ ಪರಿಣಾಮ ಕಾಣುತ್ತದೆ.
ಇನ್ನು ವಿಎಲ್ಎ 1553 ಲಸಿಕೆ ಪಡೆದವರಲ್ಲಿ ಗರ್ಭಪಾತದ ದರ ನಿರೀಕ್ಷೆಗಿಂತ ಹೆಚ್ಚಾಗಿ ಕಂಡು ಬಂದಿದೆ. ಆದಾಗ್ಯೂ, ಸಣ್ಣ ಮಾದರಿ ಗಾತ್ರದಲ್ಲಿನ ನೈಸರ್ಗಿಕ ವ್ಯತ್ಯಾಸದಿಂದಾಗಿ ಇದು ಸಂಭವಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಲಸಿಕೆಯನ್ನು ಲೈವ್ ವೈರಸ್‌ನ ದುರ್ಬಲ ಆವೃತ್ತಿಯಿಂದ ತಯಾರಿಸಲಾಗುತ್ತದೆ, ಆದ್ದರಿಂದ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿರುವ ಜನರಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಈ ಲಸಿಕೆ ಕೆಲವು ಮಿತಿ ಹೊಂದಿದೆ ಎಂದು ಸಂಶೋಧಕರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಹವಾಮಾನ ಬದಲಾವಣೆ.. ಸೊಳ್ಳೆಗಳಿಂದ ಹರಡುವ ರೋಗಗಳ ಅಪಾಯದ ಬಗ್ಗೆ ತಜ್ಞರ ಎಚ್ಚರಿಕೆ