ನವದೆಹಲಿ: ಭಾರತದಲ್ಲಿ 2019ರಲ್ಲಿ 12 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣ ಮತ್ತು 9.3 ಲಕ್ಷ ಸಾವು ದಾಖಲಾಗಿದ್ದು, ಏಷ್ಯಾದಲ್ಲಿ ಎರಡನೇ ಅಧಿಕ ಕ್ಯಾನ್ಸರ್ ಪ್ರಕರಣಗಳನ್ನು ಹೊಂದಿರುವ ದೇಶವಾಗಿದೆ ಎಂದು ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್ ಸೌತ್ಈಸ್ಟ್ ಏಷ್ಯಾ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಈ ಹೊಸ ಅಧ್ಯಯನದಲ್ಲಿ, ಏಷ್ಯಾ ಖಂಡದಲ್ಲಿ ಭಾರತ, ಜಪಾನ್ ಮತ್ತು ಚೀನಾದಲ್ಲಿ ಹೆಚ್ಚಿನ ಹೊಸ ಕ್ಯಾನ್ಸರ್ ಪ್ರಕರಣಗಳ ಉದಯ ಮತ್ತು ಸಾವುಗಳು ದಾಖಲಾಗುತ್ತಿವೆ. ಇಲ್ಲಿನ ಜನರ ಆರೋಗ್ಯದ ಮೇಲೆ ಕ್ಯಾನ್ಸರ್ ಗಮನಾರ್ಹ ಸಾರ್ವಜನಿಕ ಆರೋಗ್ಯ ಅಪಾಯವನ್ನು ಹೊಂದಿದೆ. ಈ ಮೂರು ದೇಶಗಳ ಒಟ್ಟಾರೆ ಅಂಕಿ ಅಂಶದಲ್ಲಿ 2019ರಲ್ಲಿ 94 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದರೆ, 56 ಲಕ್ಷ ಸಾವು ದಾಖಲಾಗಿವೆ.
ಇದರಲ್ಲಿ ಚೀನಾದಲ್ಲೂ ಸಹ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಚೀನಾದಲ್ಲಿ 48 ಲಕ್ಷ ಹೊಸ ಕ್ಯಾನ್ಸರ್ ಕೇಸ್ಗಳು ಕಾಣಿಸಿಕೊಂಡಿದ್ದರೆ, 27 ಲಕ್ಷ ಸಾವು ಸಂಭವಿಸಿವೆ. ಜಪಾನ್ನಲ್ಲಿ 9 ಲಕ್ಷ ಹೊಸ ಕ್ಯಾನ್ಸರ್ ಮತ್ತು 4.4 ಲಕ್ಷ ಸಾವು ದಾಖಲಾಗಿವೆ. ಈ ಅಂತಾರಾಷ್ಟ್ರೀಯ ಸಂಶೋಧನಾ ತಂಡದಲ್ಲಿ ಕುರುಕ್ಷೇತ್ರದ ಎನ್ಐಟಿ ಮತ್ತು ಜೋಧಪುರ ಮತ್ತು ಬಟಿಂಡಾದ ಏಮ್ಸ್ ಕೂಡ ಅಧ್ಯಯನದಲ್ಲಿ ಭಾಗಿಯಾಗಿದೆ.
1990 ರಿಂದ 2019ರ ವರೆಗೆ 49 ಏಷ್ಯಾ ದೇಶಗಳಲ್ಲಿ 29 ಕ್ಯಾನ್ಸರ್ ಮಾದರಿಗಳನ್ನು ನಾವು ವಿಶ್ಲೇಷಣೆ ಮಾಡಿದ್ದೇವೆ. ಇದಕ್ಕಾಗಿ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್, ಗಾಯ ಮತ್ತು ಅಪಾಯದ ಅಂಶಗಳು 2019 ಅನ್ನು ಅಂದಾಜಿಸಲಾಗಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಏಷ್ಯಾದಲ್ಲಿ ಕ್ಯಾನ್ಸರ್ ಸಮಸ್ಯೆ ಪ್ರಮುಖವಾಗಿದೆ. ಅದರಲ್ಲಿ ಟಿಬಿಎಲ್ನಿಂದಾಗಿ 13 ಲಕ್ಷ ಪ್ರಕರಣ ದಾಖಲಾಗಿದ್ದು, 12 ಲಕ್ಷ ಸಾವು ಕಂಡಿದೆ. ಇದು ಆಗ್ಗಿಂದಾಗೇ ಬಹುತೇಕ ಪುರುಷರು ಮತ್ತು ಮಹಿಳೆಯರಲ್ಲಿ ಮೂರನೇ ಕ್ಯಾನ್ಸರ್ ಆಗಿ ಕಂಡು ಬಂದಿದೆ.
ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಮುಖವಾಗಿದ್ದು, ಏಷ್ಯಾನ್ ದೇಶದಲ್ಲಿ ಮೊದಲ ಐದು ಕ್ಯಾನ್ಸರ್ನಲ್ಲಿ ಇದು ಕೂಡ ಸ್ಥಾನ ಪಡೆದಿದೆ. 2006ರಲ್ಲಿ ಹ್ಯೂಮನ್ ಪಪಿಲೊಮವೈರಸ್ (ಎಚ್ಪಿವಿ) ಲಸಿಕೆಯನ್ನು ಕಂಡು ಹಿಡಿಯಲಾಗಿದ್ದು, ಎಚ್ಪಿವಿ ಸಂಬಂಧಿ ಸಾವು ಮತ್ತು ರೋಗದ ನಿಯಂತ್ರಣದಲ್ಲಿ ಇದು ಪರಿಣಾಮಕಾರಿಯಾಗಿದೆ.
ಕ್ಯಾನ್ಸರ್ನಲ್ಲಿ ಟಿಬಿಎಲ್, ಸ್ತನ, ಕೊಲೊನ್ ಮತ್ತು ರೆಕ್ಟಮ್ ಕ್ಯಾನ್ಸರ್, ಹೊಟ್ಟೆ ಮತ್ತು ನಾನ್ ಮೆಲನಿಮಾ ಚರ್ಮ ಕ್ಯಾನ್ಸರ್ ಪ್ರಮುಖ ಐದು ಕ್ಯಾನ್ಸರ್ ರೂಪಗಳಾಗಿವೆ. ಇದರ ಜೊತೆಗೆ ಲುಕೇಮಿಯಾ, ಪ್ರೊಸ್ಟೇಟ್, ಲಿವರ್, ಪ್ಯಾನ್ಕ್ರಿಯೆಟಿಕ್ ಕ್ಯಾನ್ಸರ್ ಹೆಚ್ಚು ಜನರನ್ನು ಕಾಡುತ್ತಿದೆ ಎಂದು ವರದಿ ತಿಳಿಸಿದೆ.
ಧೂಮಪಾನ, ಆಲ್ಕೋಹಾಲ್ ಸೇವನೆ ಮತ್ತು ಮಾಲಿನ್ಯದಲ್ಲಿನ ಸೂಕ್ಷ್ಮ ಕಣಗಳು ಕ್ಯಾನ್ಸರ್ ಅಭಿವೃದ್ಧಿಯಲ್ಲಿ ಅಪಾಯದಲ್ಲಿ ಶೇ 34ರಷ್ಟು ಪ್ರಾಬಲ್ಯವನ್ನು ಹೊಂದಿದೆ. ಏಷ್ಯಾದಲ್ಲಿ ವಾಯು ಮಾಲಿನ್ಯದ ಹೆಚ್ಚಳವೂ ಹೆಚ್ಚಿನ ಕ್ಯಾನ್ಸರ್ ಹೊರೆಯನ್ನು ನೀಡಿದೆ.
ಏಷ್ಯಾದಲ್ಲಿ ವಾಯು ಮಾಲಿನ್ಯ ಹೆಚ್ಚಳಕ್ಕೆ ಪ್ರಾಥಮಿಕ ಕಾರಣವೂ ಉದ್ಯಮದ ಜೊತೆಗೆ ನಗರೀಕರಣವಾಗಿದೆ. ಗ್ರಾಮದಿಂದ ನಗರದ ವಲಸೆ ಹೆಚ್ಚಾಗಿದ್ದು, ಮೋಟಾರ್ ವೆಹಿಕಲ್ ಬಳಕೆ ಹೆಚ್ಚಿದೆ.
ಅಲ್ಲದೇ ಖೈನಿ, ಗುಟ್ಕಾ, ಎಲೆ ಅಡಿಕೆ ಮತ್ತು ಪಾನ್ ಮಸಾಲವೂ ಕೂಡ ಸಾರ್ವಜನಿಕ ಆರೋಗ್ಯ ಕಾಳಜಿಯನ್ನು ಹೆಚ್ಚಿಸುತ್ತದೆ. ಭಾರತ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಇದರ ಸೇವನೆ ಹೆಚ್ಚಿದ್ದು, ಇದರಿಂದ ಜಾಗತಿಕ ಸಾವಿನ ಸಂಖ್ಯೆ 28.1ರಷ್ಟು ಇದೆ. ಇದರಿಂದ ತುಟಿ ಮತ್ತು ಬಾಯಿಯ ಕ್ಯಾವಿಟಿ ಕ್ಯಾನ್ಸರ್ ಪ್ರಮಾಣ 2019ರಲ್ಲಿ ಶೇ 28.1ರಷ್ಟಿದೆ.
ಧೂಮಪಾನ ರಹಿತ ತಂಬಾಕಿನಿಂದ ಶೇ 50ರಷ್ಟು ಬಾಯಿಯ ಕ್ಯಾನ್ಸರ್ ಹೊರೆ ಹೆಚ್ಚಿದೆ. ಭಾರತ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಇದರ ಬೆಳವಣಿಗೆ ಹೆಚ್ಚಿದೆ.
ಕ್ಯಾನ್ಸರ್ ಪತ್ತೆ ಮತ್ತು ಸುಧಾರಣೆ ರೋಗಿಗಳ ಬದುಕುಳಿಯುವಿಕೆ ಸೌಲಭ್ಯ ಇಲ್ಲ ಅಥವಾ ಇದು ದುಬಾರಿಯಾಗಿದೆ ಎಂದು ಸಂಶೋಧನೆ ತಿಳಿಸಿದೆ. ಏಷ್ಯಾದ ಕಡಿಮೆ ಮತ್ತು ಮಧ್ಯಮ ದೇಶದಲ್ಲಿ ಅಲಭ್ಯತೆ ವಿಶೇವಾಗಿ ಗ್ರಾಮದಲ್ಲಿನ ಇದರ ಪತ್ತೆ ಚಿಕಿತ್ಸೆ ತಡವಾಗಿ ಆಗಿದ್ದು, ಇದು ಕಡಿಮೆ ಉಳಿಕೆಯ ದರವನ್ನು ಹೊಂದಿದೆ. ಈ ಹಿನ್ನೆಲೆ ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸೆ ಸಮಯಕ್ಕೆ ಸರಿಯಾಗಿ ಲಭ್ಯವಾಗಬೇಕಿದೆ. ವೆಚ್ಚದ ಪರಿಣಾಮಕಾರಿತ್ವ ಅಥವಾ ಪಾಲಿಸಿಯ ಆದ್ಯತೆಯಾಗಬೇಕಿದೆ ಎಂದು ಸಂಶೋಧನೆ ತಿಳಿಸಿದೆ.
ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಗೆ AI ಸಹಕಾರಿ ; ಡಾ ನೊರಿ ದತ್ತಾತ್ರೇಯುಡು ಅಭಿಮತ