ನವದೆಹಲಿ: ಹೃದಯ ವೈಫಲ್ಯ ರೋಗ ನಿರ್ಣಯದ ಪ್ರಕರಣಗಳ ಸಂಖ್ಯೆ ವಾರ್ಷಿಕವಾಗಿ 1.68ರಷ್ಟು ಏರಿಕೆ ಕಾಣುತ್ತಿದ್ದು, 2022ರಲ್ಲಿ 13.76ಮಿಲಿಯನ್ ಇರುವ ಈ ಅಂಕಿ ಸಂಖ್ಯೆ 2032ರ ಹೊತ್ತಿಗೆ 16.06 ಮಿಲಿಯನ್ ತಲುಪಲಿದೆ ಎಂದು ವರದಿ ತಿಳಿಸಿದೆ.
ಗ್ಲೋಬಲ್ ಡೇಟಾ ಮಂಡಿಸಿದ ವರದಿಯಲ್ಲಿ ಹೃದಯಾಘಾತ ಪ್ರಕರಣಗಳು ವಿಶೇಷವಾಗಿ ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್, ಯುಕೆ ಮತ್ತು ಜಪಾನ್ನಲ್ಲಿ ಹೆಚ್ಚಾಗುತ್ತಿರುವುದು ಕಂಡು ಬಂದಿದೆ.
ವರದಿ ತಿಳಿಸುವಂತೆ 2032ರಲ್ಲಿ ಅಮೆರಿಯದಲ್ಲಿ ಅತಿ ಹೆಚ್ಚು ಮಂದಿಯಲ್ಲಿ ಹೃದಯ ವೈಫಲ್ಯ ರೋಗ ನಿರ್ಣಯದ ಪ್ರಕರಣಗಳು ಪತ್ತೆಗಳ ಸಂಖ್ಯೆ 7.35 ಮಿಲಿಯನ್ ತಲುಪಲಿದೆ. ಇದೇ ವೇಳೆ ಈ ಪ್ರಕರಣಗಳ ಸಂಖ್ಯೆ ಸ್ಪೇನ್ನಲ್ಲಿ ಕಡಿಮೆ ಇದ್ದು, ಇಲ್ಲಿ 0.77 ಮಿಲಿಯನ್ ಪ್ರಕರಣಗಳು ಕಾಣಬಹುದು.
ಈ ಪ್ರಕರಣಗಳಿಂದ ಪುರುಷರು ಮತ್ತು ಮಹಿಳೆಯರಿಬ್ಬರು ಹೃದಯಾಘಾತಕ್ಕೆ ಒಳಗಾಗಬಹುದು. ಆದಾಗ್ಯೂ ಪುರಷರಲ್ಲಿ ಈ ಪ್ರಕರಣ ಹೆಚ್ಚಿದ್ದು, ಹಿರಿಯ ನಾಗರಿಕರಲ್ಲಿ ಕೂಡ ಅಧಿಕ ಪ್ರಮಾಣದಲ್ಲಿ ಕಂಡು ಬರಲಿದೆ ಎಂದು ಗ್ಲೋಬಲ್ ಡೇಟಾದ ಫಾರ್ಮಾ ಎಪಿಡೆಮಿಲೊಜಿ ತಂಡದ ಅಸೋಸಿಯೇಟ್ ಪ್ರಾಜೆಕ್ಟ್ ಮ್ಯಾನೇಜರ್ ಅಂತರ ಭಟ್ಟಾಚಾರ್ಯ ತಿಳಿಸಿದ್ದಾರೆ.
ಏಳು ದೇಶಗಳಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರು ಸುಮಾರು 85 ಪ್ರತಿಶತದಷ್ಟು ಹೃದಯ ವೈಫಲ್ಯದ ರೋಗನಿರ್ಣಯದ ಪ್ರಕರಣಗಳನ್ನು ಹೊಂದಿದ್ದಾರೆ. 19 ರಿಂದ 59 ವರ್ಷದ ವಯಸ್ಸಿನ ಯುವ ವಯಸ್ಕರಲ್ಲಿ ಸುಮಾರು 14 ಪ್ರತಿಶತದಷ್ಟು ಪ್ರಕರಣಗಳಿವೆ.
18 ವರ್ಷ ಮತ್ತು ಅದರೊಳಗಿನ ವಯಸ್ಸಿನವರ ಹೃದಯಾಘಾತದ ಪ್ರಕರಣಗಳು 0.37 ರಷ್ಟಿದೆ. ನಿರ್ದಿಷ್ಟ ರೋಗ ನಿರ್ಣಯದ ಪ್ರಚಲಿತ ಪ್ರಕರಣಗಳಿಗೆ ಗ್ಲೋಬಲ್ ಡೇಟಾ ತಿಳಿಸಿದೆ.
2022ರಲ್ಲಿ ಏಳು ದೇಶಗಳಲ್ಲಿನ ಹೃದಯ ವೈಫಲ್ಯ ರೋಗ ನಿರ್ಣಯದ ಪ್ರಕರಣಗಳ ಸಂಖ್ಯೆ ಶೇ 47ರಷ್ಟಿದೆ. ಪ್ರತಿಯೊಬ್ಬ ವ್ಯಕ್ತಿಯು ಆಸ್ಪತ್ರೆ ನಿರ್ವಹಣೆ ಅವಶ್ಯಕತೆಯನ್ನು ಹೆಚ್ಚಿಸಬೇಕಿದೆ. ಚಿಕಿತ್ಸೆ, ಇದಕ್ಕೆ ಸಂಬಂಧಿಸಿದ ಕಾರಣ, ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ಚಿಕಿತ್ಸೆಯಿಂದ ಈ ಹೃದಯಾಘಾತದ ವೈಫಲ್ಯವನ್ನು ತಪ್ಪಿಸಬಹುದು ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ.
ಜೀವನಶೈಲಿ ಮಾರ್ಪಡಿಸಿಕೊಳ್ಳುವಿಕೆ ಮತ್ತು ಮೊದಲೇ ಪತ್ತೆ ಕೂಡ ಈ ಹೃದಯಾಘಾತವನ್ನು ಉತ್ತಮವಾಗಿ ನಿರ್ವಹಣೆ ಮಾಡಬಹುದಾಗಿದೆ. ಹೃದಯಾಘಾತ ಚಿಕಿತ್ಸೆಗೆ ಸಂಬಂಧಿಸಿದಂತೆ, ವೈದ್ಯರಲ್ಲಿ ಅರಿವು, ಮತ್ತು ಹೃದಯಾಘಾತದ ರೋಗಿಗಳಿಗೆ ಸೂಕ್ತ ನಿರ್ವಹಣೆಯನ್ನು ಪಡೆಯುವುದು. ಅಥವಾ ಹೃದಯ ರೋಗಿಗಳಲ್ಲಿ ಕ್ರಿಯಾತ್ಮಕ ಸ್ಥಿತಿ, ಜೀವನದ ಗುಣಮಟ್ಟ ಮತ್ತು ಬದುಕುಳಿಯುವಿಕೆಯನ್ನು ಸುಧಾರಿಸಲು ಮಾರ್ಗದರ್ಶಿ-ನಿರ್ದೇಶಿತ ವೈದ್ಯಕೀಯ ಚಿಕಿತ್ಸೆ ಹೆಚ್ಚಿದೆ ಎಂದು ತಿಳಿಸಿದರು. (ಐಎಎನ್ಎಸ್)
ಇದನ್ನೂ ಓದಿ: ಆತಂಕ ಮೂಡಿಸುತ್ತಿರುವ ಹೃದಯಾಘಾತ ಪ್ರಕರಣ; ಒಂದೇ ದಿನದಲ್ಲಿ ನಾಲ್ವರು ಯುವಕರ ಸಾವು