ನವದೆಹಲಿ: ಭಾರತದಲ್ಲಿ ಸಾಮಾನ್ಯ ಕ್ಯಾನ್ಸರ್ ಎಂದು ಪರಿಗಣಿಸುವ ಸ್ತನ ಕ್ಯಾನ್ಸರ್ನ ಐದು ವರ್ಷದ ಉಳಿಯುವಿಕೆ ದರವು ಶೇ 66.4ರಷ್ಟಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್) ತಿಳಿಸಿದೆ. ದೇಶದಲ್ಲಿ ಸ್ತನ ಕ್ಯಾನ್ಸರ್ ಎಂಬುದು ಸಾಮಾನ್ಯ ಕ್ಯಾನ್ಸರ್ ಆಗಿದ್ದು, 2022ರಲ್ಲಿ 2,16,108 ಪ್ರಕರಣಗಳು ದಾಖಲಾಗಿವೆ.
1990ರಿಂದ 2016ರವರೆಗೆ ಮಹಿಳೆಯರ ಸ್ತನ ಕ್ಯಾನ್ಸರ್ನ ವಯೋಪ್ರಮಾಣಿತ ಘಟನೆಗಳ ದರ ಶೇ.39.1ರಷ್ಟು ಹೆಚ್ಚಾಗಿದೆ. ಈ ದರ ಕಳೆದ 26 ವರ್ಷಗಳಿಂದ ಪ್ರತಿ ರಾಜ್ಯದಲ್ಲೂ ಕಾಣಬಹುದು ಎಂದು ಅಧ್ಯಯನ ಹೇಳಿದೆ. ಇಂಟರ್ನ್ಯಾಷನಲ್ ಇಂಟರ್ಡಿಸಿಪ್ಲಿನರಿ ಜರ್ನಲ್ ಆಫ್ ಅಮೆರಿಕನ್ ಕ್ಯಾನ್ಸರ್ ಸೊಸೈಟಿಯಲ್ಲಿ ಅಧ್ಯಯನ ವರದಿ ಪ್ರಕಟಿಸಲಾಗಿದೆ.
ಇದರಲ್ಲಿ 11 ಭೌಗೋಳಿಕ ಪ್ರದೇಶದ ಉಳಿಯುವಿಕೆ ದರವನ್ನು ತೋರಿಸಲಾಗಿದೆ. ಮಿಜೋರಾಂನಲ್ಲಿ ಸ್ತನ ಕ್ಯಾನ್ಸರ್ ಉಳಿಯುವಿಕೆ ದರ ಶೇ 74.9ರಷ್ಟಿದ್ದರೆ, ಅಹಮದಬಾದ್ ನಗರದಲ್ಲಿ ಶೇ 72.7, ಕೊಲ್ಲಂನಲ್ಲಿ ಶೇ 71.5 ಮತ್ತು ತಿರುವನಂತಪುರಂನಲ್ಲಿ ಶೇ.69.1ರಷ್ಟಿದೆ. ಈ ರಾಜ್ಯಗಳ ಉಳಿಯುವಿಕೆ ದರ ರಾಷ್ಟ್ರಮಟ್ಟದಲ್ಲಿನ ಸರಾಸರಿ ದರಕ್ಕಿಂತ ಜಾಸ್ತಿ ಇದೆ.
ಅರುಣಾಚಲ ಪ್ರದೇಶದ ಫಾಸಿಘಾಟ್ನಲ್ಲಿ ಅತಿ ಕಡಿಮೆ ಶೇ 41.9ರಷ್ಟು, ಮಣಿಪುರ ಮತ್ತು ತ್ರಿಪುರಾದಲ್ಲಿ ಅತಿ ಕಡಿಮೆ ಉಳಿಯುವಿಕೆ ದರವಿದೆ. ಇದು ರಾಷ್ಟ್ರೀಯ ಉಳಿಯುವಿಕೆ ದರಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಐದು ವರ್ಷದ ಫಾಲೋ ಅಪ್ ಅವಧಿಯಲ್ಲಿ ಫಾಸಿಘಾಟ್ನಲ್ಲಿ ಸಾವಿನ ದರ (ಶೇ.53.6) ಹೆಚ್ಚಿದೆ. ಈ ಸಾಯುವಿಕೆ ದರ ಮಿಜೋರಾಂನಲ್ಲಿ ಕಡಿಮೆ.
ಸಮಗ್ರ ನಿಯಂತ್ರಣ ಕಾರ್ಯಕ್ರಮ: ಸ್ತನ ಕ್ಯಾನ್ಸರ್ನ ಉಳಿಯುವಿಕೆ ದರವು ಭಾರತದಲ್ಲಿ ಅಲ್ಪಮಟ್ಟದ ಅಭಿವೃದ್ಧಿ ಕಾಣುತ್ತಿದೆ. ಆದರೂ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದಾಗ ತುಂಬಾ ಹಿಂದುಳಿದಿದೆ. ಸಮಗ್ರ ಕ್ಯಾನ್ಸರ್ ನಿಯಂತ್ರಣದ ತಂತ್ರಾಂಶವನ್ನು ದೇಶದೆಲ್ಲೆಡೆ ವ್ಯಾಪಕವಾಗಿ ಅಳವಡಿಸಬೇಕಿದೆ ಎಂದು ಐಸಿಎಂಆರ್ನ ರಾಷ್ಟ್ರೀಯ ರೋಗ ಮಾಹಿತಿ ಮತ್ತು ಸಂಶೋಧನಾ ತಂಡದ ಕೃಷ್ಣನ್ ಸತೀಶ್ ಕುಮಾರ್ ಮಾಹಿತಿ ನೀಡಿದರು.
ಸ್ತನ ಕ್ಯಾನ್ಸರ್ ಆರಂಭಿಕ ಪತ್ತೆ ಕಾರ್ಯಕ್ರಮಗಳು, ಜಾಗೃತಿ, ವೆಚ್ಚದಾಯಕ ಸ್ಕ್ರೀನಿಂಗ್ ಜೊತೆಗೆ ಕೈಗೆಟಕುವ ದರದಲ್ಲಿ ಬಹುಸುಧಾರಿತ ಚಿಕಿತ್ಸೆ ಸೇರಿದಂತೆ ಹಲವು ಸಂಗತಿಗಳು ಇದರ ಉಳಿಯುವಿಕೆ ದರ ಹೆಚ್ಚು ಮಾಡುವಲ್ಲಿ ಪ್ರಮುಖವಾಗಿವೆ. ಈ ಅಧ್ಯಯನದಲ್ಲಿ 2012ರಿಂದ 2015ರವರೆಗೆ 11 ಪ್ರದೇಶದಲ್ಲಿ 17,331 ಸ್ತನ ರೋಗಿಗಳನ್ನು ಪತ್ತೆ ಮಾಡಿ ಅಧ್ಯಯನ ಮಾಡಲಾಗಿದೆ. ಇವರ ಆರೋಗ್ಯದ ಕುರಿತು 2021ರ ಜೂನ್ 30ರವರೆಗೆ ಫಾಲೋ ಅಪ್ ಮಾಡಲಾಗಿದೆ. ರೋಗಿಯಲ್ಲಿ ರೋಗ ಪತ್ತೆಯ ದಿನದಿಂದ ಅವರ ಸಾವಿನವರೆಗೂ ಉಳಿಯುವಿಕೆ ದರವನ್ನು ಲೆಕ್ಕ ಹಾಕಲಾಗಿದೆ.
ಸ್ಥಳೀಯ ಹಂತದಲ್ಲೇ ಕ್ಯಾನ್ಸರ್ ಪತ್ತೆಯಾದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅವರ ಉಳಿಯುವಿಕೆ ದರ ಶೇ 4.4ರಷ್ಟು ಹೆಚ್ಚಿದೆ. ಇದರ ಜೊತೆಗೆ 65 ವರ್ಷದವರಿಗೆ ಹೋಲಿಕೆ ಮಾಡಿದಾಗ 15-39 ವಯೋಮಾನದವರ ಉಳಿಯುವಿಕೆ ದರ ಹೆಚ್ಚಿದೆ.
ಅಮೆರಿಕಕ್ಕೆ ಹೋಲಿಸಿದಾಗ ಸ್ಥಳೀಯ, ಸ್ಥಳೀಯ ಪ್ರಾದೇಶಿಕ ಮತ್ತು ದೂರದ ಮೆಟಾಸ್ಪೇಸ್ಗಳ ಉಳಿಯುವಿಕೆ ದರ ಕಡಿಮೆ. ಭಾರತದಲ್ಲಿ ಬಹುತೇಕ ರೋಗಿಗಳಲ್ಲಿ ಸ್ತನ ಕ್ಯಾನ್ಸರ್ ಸ್ಥಳೀಯ ಪ್ರಾದೇಶಿಕ ಹಂತದಲ್ಲಿ (ಶೇ.57) ಪತ್ತೆಯಾಗುತ್ತದೆ. ಆದರೆ, ಅಮೆರಿಕದಲ್ಲಿ ಈ ರೋಗವು ಸ್ಥಳೀಯ ಹಂತದಲ್ಲಿ ಶೇ.63ರಷ್ಟು ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸಮಗ್ರ ಕ್ಯಾನ್ಸರ್ ನಿಯಂತ್ರಣ ತಂತ್ರಾಂಶವನ್ನು ದೇಶದೆಲ್ಲೆಡೆ ವ್ಯಾಪಕವಾಗಿ ಜಾರಿಗೆ ತರುವುದು ಅವಶ್ಯಕ ಎಂದು ಅಧ್ಯಯನ ತಂಡ ಸಲಹೆ ನೀಡಿದೆ. (ಐಎಎನ್ಎಸ್)
ಇದನ್ನೂ ಓದಿ: ಸ್ತನ ಕ್ಯಾನ್ಸರ್ನ ಅಂತಿಮ ಹಂತದಲ್ಲಿ ಶೇ 60ರಷ್ಟು ಮಹಿಳೆಯರು; ಬೇಕಿದೆ ಜಾಗೃತಿ