ETV Bharat / sukhibhava

'ಹೆಚ್ಚು ಫಿಟ್​ ಆಗಿರುವ ಪುರುಷರಲ್ಲಿ ಹೃದ್ರೋಗದ ಅಪಾಯ ಕಡಿಮೆ'

ಹೆಚ್ಚು ಫಿಟ್​ ಆಗಿರುವುದರಿಂದ ಅಧಿಕ ರಕ್ತದೊತ್ತಡ ಹೊಂದಿರುವ ಪುರುಷರಲ್ಲಿ ಹೃದಯ ರಕ್ತನಾಳದ ಕಾಯಿಲೆಯಿಂದ ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು ಎಂಬ ಅಂಶ ಅಧ್ಯಾಯನದಿಂದ ಹೊರಬಿದ್ದಿದೆ.

high blood pressure
ಹೃದ್ರೋಗ
author img

By

Published : Mar 25, 2023, 10:02 AM IST

Updated : Mar 25, 2023, 11:57 AM IST

ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಅತಿಯಾದ ಕೆಲಸದ ಒತ್ತಡ, ದೈಹಿಕ ಚಟುವಟಿಕೆ ಇಲ್ಲದಿರುವುದು, ಅಸಮತೋಲಿತ ಜೀವನಶೈಲಿಯಿಂದಾಗಿ ಅಧಿಕ ರಕ್ತದೊತ್ತಡ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಆದ್ರೆ, ಇದೀಗ ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿ, ESC ಜರ್ನಲ್‌ನಲ್ಲಿ ಪ್ರಕಟವಾದ 29 ವರ್ಷಗಳ ಅಧ್ಯಯನದ ವರದಿ ಪ್ರಕಾರ," ಹೆಚ್ಚು ಫಿಟ್​ನೆಸ್ ಆಗಿರುವುದರಿಂದ ಅಧಿಕ ರಕ್ತದೊತ್ತಡ ಹೊಂದಿರುವ ಪುರುಷರಲ್ಲಿ ಹೃದಯ ರಕ್ತನಾಳದ ಕಾಯಿಲೆಯಿಂದ ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು" ಎಂಬ ಅಂಶ ಬಹಿರಂಗವಾಗಿದೆ.

"ಇದು ಹೃದ್ರೋಗದ ಕಾಯಿಲೆಯಿಂದ ಸಾಯುವ ಅಪಾಯದ ಕುರಿತು ಫಿಟ್‌ನೆಸ್ ಮತ್ತು ರಕ್ತದೊತ್ತಡದ ಜಂಟಿ ಪರಿಣಾಮಗಳನ್ನು ಮೌಲ್ಯಮಾಪನ ಮಾಡುವ ಮೊದಲ ಅಧ್ಯಯನವಾಗಿದೆ. ಫಿಟ್ ಆಗಿರುವುದು ಅಧಿಕ ರಕ್ತದೊತ್ತಡದ ಕೆಲವು ಋಣಾತ್ಮಕ ಪರಿಣಾಮಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತದೆ" ಅಂತ ಪೂರ್ವ ಫಿನ್‌ಲ್ಯಾಂಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಜರಿ ಲೌಕಾನೆನ್ ಹೇಳಿದ್ದಾರೆ.

ಪ್ರಪಂಚಾದ್ಯಂತ 30 ರಿಂದ 79 ವರ್ಷ ವಯಸ್ಸಿನ ಸುಮಾರು 1.3 ಶತಕೋಟಿ ವಯಸ್ಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅಧಿಕ ರಕ್ತದೊತ್ತಡವು ಹೃದಯಾಘಾತ ಮತ್ತು ಪಾರ್ಶ್ವವಾಯುಗೆ ಪ್ರಮುಖ ಕಾರಣವಾಗಿದೆ ಎಂದು ಹಿಂದಿನ ಅಧ್ಯಯನಗಳು ತಿಳಿಸಿವೆ. ಈ ಅಧ್ಯಯನ ರಕ್ತದೊತ್ತಡ, ಫಿಟ್‌ನೆಸ್ ಮತ್ತು ಹೃದಯರಕ್ತನಾಳದ ಕಾಯಿಲೆಯಿಂದ ಸಾವಿನ ಅಪಾಯದ ನಡುವಿನ ಪರಸ್ಪರ ಕ್ರಿಯೆ ಕುರಿತು ಪರಿಶೀಲಿಸಿದೆ. ಇದಕ್ಕೆ ಪೂರ್ವ ಫಿನ್‌ಲ್ಯಾಂಡ್‌ನಲ್ಲಿ ವಾಸಿಸುವ 42 ರಿಂದ 61 ವರ್ಷ ವಯಸ್ಸಿನ 2,280 ಪುರುಷರನ್ನು ಬಳಸಿಕೊಳ್ಳಲಾಗಿದೆ.

ಈ ಅಧ್ಯಯನದಲ್ಲಿ ಭಾಗವಹಿಸಿದರವನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಲಾಗಿದೆ: 1) ಸಾಮಾನ್ಯ ರಕ್ತದೊತ್ತಡ ಮತ್ತು ಹೆಚ್ಚಿನ ಫಿಟ್‌ನೆಸ್ . 2) ಸಾಮಾನ್ಯ ರಕ್ತದೊತ್ತಡ ಮತ್ತು ಕಡಿಮೆ ಫಿಟ್ನೆಸ್. 3) ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿನ ಫಿಟ್ನೆಸ್. 4) ಅಧಿಕ ರಕ್ತದೊತ್ತಡ ಮತ್ತು ಕಡಿಮೆ ಫಿಟ್ನೆಸ್.

ಅಧಿಕ ರಕ್ತದೊತ್ತಡ ಮತ್ತು ಕಡಿಮೆ ಫಿಟ್‌ನೆಸ್ ಹೊಂದಿರುವ ಪುರುಷರು ಸಾಮಾನ್ಯ ರಕ್ತದೊತ್ತಡ ಮತ್ತು ಹೆಚ್ಚಿನ ಫಿಟ್‌ನೆಸ್ ಹೊಂದಿರುವವರಿಗೆ ಹೋಲಿಸಿದರೆ ಹೃದಯರಕ್ತನಾಳದ ಸಾವಿನ ಅಪಾಯ 2 ಪಟ್ಟು ಅಧಿಕವಿದೆ. ಅಧಿಕ ರಕ್ತದೊತ್ತಡ ಹೊಂದಿರುವ ಪುರುಷರು ಹೆಚ್ಚಿನ ಫಿಟ್‌ನೆಸ್ ಮಟ್ಟವನ್ನು ಹೊಂದಿರುವಾಗ ಅವರ ಹೃದಯರಕ್ತನಾಳದ ಅಪಾಯ ಸಹ ಮುಂದುವರಿಯುತ್ತದೆ. ಇದು ಸಾಮಾನ್ಯ ರಕ್ತದೊತ್ತಡ ಮತ್ತು ಹೆಚ್ಚಿನ ಫಿಟ್‌ನೆಸ್‌ ಹೊಂದಿರುವವರಿಗಿಂತ 55% ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸಕಾರಾತ್ಮಕ ಶಕ್ತಿಯಿಂದ ಎಲ್ಲವನ್ನೂ ಗೆಲ್ಲಲೂ ಸಾಧ್ಯ...

"ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಗುರಿಯಾಗಿ ಉಳಿಯಬೇಕು. ಅಧಿಕ ರಕ್ತದೊತ್ತಡ ಹೊಂದಿರುವ ಪುರುಷರು ನಿಯಮಿತ ದೈಹಿಕ ಚಟುವಟಿಕೆಯೊಂದಿಗೆ ತಮ್ಮ ಫಿಟ್ನೆಸ್ ಮಟ್ಟವನ್ನು ಸುಧಾರಿಸಿಕೊಳ್ಳುವ ಗುರಿ ಹೊಂದಿರಬೇಕು ಎಂದು ನಮ್ಮ ಅಧ್ಯಯನ ಸೂಚಿಸುತ್ತದೆ" ಎಂದು ಪ್ರೊಫೆಸರ್ ಲೌಕಾನೆನ್ ತಿಳಿಸಿದ್ದಾರೆ.

ESC ಮಾರ್ಗಸೂಚಿಗಳು: ಎಲ್ಲಾ ವಯಸ್ಸಿನ ವಯಸ್ಕರು ವಾರಕ್ಕೆ ಕನಿಷ್ಠ 150 ರಿಂದ 300 ನಿಮಿಷಗಳ ಮಧ್ಯಮ-ತೀವ್ರತೆಯ ವ್ಯಾಯಾಮ ಅಥವಾ ವಾರಕ್ಕೆ 75 ರಿಂದ 150 ನಿಮಿಷಗಳವರೆಗೆ ತೀವ್ರವಾದ ಏರೋಬಿಕ್ ನಂತಹ ದೈಹಿಕ ಚಟುವಟಿಕೆ ಮಾಡಲು ಪ್ರಯತ್ನಿಸಬೇಕೆಂದು ESC ಮಾರ್ಗಸೂಚಿಗಳು ಶಿಫಾರಸು ಮಾಡಿವೆ.

Last Updated : Mar 25, 2023, 11:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.